Healthy Food: ಕಾಫಿಗೆ ಚಿಯಾ ಬೀಜ ಸೇರಿಸಿ ಕುಡಿದ್ನೋಡಿ

By Suvarna News  |  First Published Jun 20, 2023, 4:26 PM IST

ಪ್ರತಿ ದಿನ ಬೆಳಿಗ್ಗೆ ಕಾಫಿ ಕುಡಿಯೋ ಅಭ್ಯಾಸ ನಿಮಗಿದ್ದು, ಅದು ಆರೋಗ್ಯ ಹಾಳ್ಮಾಡ್ತಿದೆ ಎಂಬ ಭಯವಿದ್ರೆ ನಾಳೆಯಿಂದ ರೆಸಿಪಿ ಬದಲಿಸಿ. ಚಿಯಾ ಬೀಜ ಬೆರೆಸಿದ ಕಾಫಿಯನ್ನು ಒಂದೈದು ದಿನ ಕುಡಿದು ನೋಡಿ.
 


ಮಾಡರ್ನ್ ಲೈಫ್ ಸ್ಟೈಲ್ ನಲ್ಲಿ ಹಾಗೂ ಫಾಸ್ಟ್ ಫುಡ್ ಅಬ್ಬರದಲ್ಲಿ ಎಲ್ಲರ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಜಂಕ್ ಫುಡ್ ಗಳ ಕಾರಣದಿಂದಾಗಿ ದೇಹದ ತೂಕ ನಿಯಂತ್ರಿಸೋದು ಕಷ್ಟ. ನಮ್ಮ ಸುತ್ತಲಿರುವ ಅನೇಕ ನೈಸರ್ಗಿಕ ಉತ್ಪನ್ನಗಳಲ್ಲೇ ಉತ್ತಮ ಆರೋಗ್ಯದ ಸೂತ್ರ ಅಡಗಿದೆ. ಇದರಿಂದ ದೇಹದ ಆರೋಗ್ಯವೂ ಉತ್ತಮವಾಗಿರುತ್ತದೆ. ಅಂತಹ ಕೆಲವು ಉತ್ಪನ್ನಗಳಲ್ಲಿ ಚಿಯಾ ಬೀಜವೂ ಒಂದು.

ಅನೇಕ ಮಂದಿ ತೂಕ (Weight) ಇಳಿಕೆಗಾಗಿ ಚಿಯಾ (Chia) ಸೀಡ್ಸ್ (Seeds) ಅನ್ನು ಸೇವಿಸುತ್ತಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸುವವರು ತಮಗೆ ಅನುಕೂಲವಾಗುವ ರೀತಿಯಲ್ಲಿ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಾರೆ. ಕೆಲವರು ಚಿಯಾ ಸೀಡ್ಸ್ ಅನ್ನು ನೀರಿನಲ್ಲಿ ಹಾಕಿ ನಿಂಬೆಯ ರಸವನ್ನು ಸೇರಿಸಿ ಕುಡಿಯಲು ಇಷ್ಟಪಡುತ್ತಾರೆ. ಇನ್ಕೆಲವರು ಮೊಸರು ಮತ್ತು ಮಾವಿನ ಹಣ್ಣಿನ ಜೊತೆ ಚಿಯಾ ಬೀಜಗಳನ್ನು ಸೇವಿಸುತ್ತಾರೆ. ತೂಕ ಇಳಿಸುವಲ್ಲಿ ಮುಖ್ಯ ಪಾತ್ರವಹಿಸುವ ಚಿಯಾ ಬೀಜ ತಿನ್ನೋದ್ರಿಂದ ಏನೆಲ್ಲ ಪ್ರಯೋಜನವಿದೆ ಎನ್ನುವುದನ್ನು ನೋಡೋಣ.

Tap to resize

Latest Videos

ಅವಲಕ್ಕಿ ತಿನ್ನೋದರಿಂದ ಆಗೋ ಪ್ರಯೋಜನ ಒಂದೆರಡಲ್ಲ!

ಚಿಯಾ ಬೀಜದಲ್ಲಿದೆ ಇಷ್ಟೆಲ್ಲ ಪೋಷಕಾಂಶ : ಚಿಯಾ ಬೀಜದಲ್ಲಿ ಓಮೆಗಾ3 ಫ್ಯಾಟಿ ಎಸಿಡ್, ಫೈಬರ್, ಪ್ರೋಟೀನ್, ಎಂಟಿಆಕ್ಸಿಡೆಂಟ್, ಕ್ಯಾಲ್ಸಿಯಮ್ ಮತ್ತು ಮೆಗ್ನೀಶಿಯಮ್, ವಿಟಮಿನ್, ಮಿನರಲ್ಸ್ ಗಳ ಆಗರವಾಗಿದೆ. ಇದು ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ. ಚಿಯಾ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶವನ್ನು ನಿವಾರಿಸಬಹುದು. ಚಿಯಾ ಬೀಜಗಳಿಂದ ಸ್ಮೂಥಿ, ಜ್ಯೂಸ್, ಪಡ್ಡಿಂಗ್ ಮುಂತಾದವುಗಳನ್ನು ಮಾಡಬಹುದು. ಮುಂಜಾನೆ ಕಾಫಿ ಕುಡಿಯುವ ಅಭ್ಯಾಸ ಇರುವವರು ಕಾಫಿಯಲ್ಲಿ ಕೂಡ ಚಿಯಾ ಬೀಜವನ್ನು ಸೇರಿಸಿಕೊಳ್ಳಬಹುದು. ಇದರಿಂದ ದೇಹದ ತೂಕ ಬಹಳ ಬೇಗ ಇಳಿಕೆಯಾಗುತ್ತದೆ.

ಹೊಟ್ಟೆಗೆ ಬಹಳ ಒಳ್ಳೆಯದು ಈ ಚಿಯಾ ಬೀಜ : ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಇದು ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿಡುತ್ತದೆ. ಚಿಯಾ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಚಿಯಾ ಸೇವನೆ ಕರುಳು ಮತ್ತು ಜೀರ್ಣಾಂಗವ್ಯೂಹದ ಆರೋಗ್ಯವನ್ನು ಕೂಡ ಉತ್ತಮವಾಗಿರಿಸುತ್ತದೆ.

Healthy Food : ತೀವ್ರ ಹಿಂಸೆ ನೀಡುವ ಅಸಿಡಿಟಿಗೆ ಪುದೀನಾ ಮದ್ದು

ಎನರ್ಜಿ ಬೂಸ್ಟರ್ : ಚಿಯಾ ಬೀಜಗಳು ಶಕ್ತಿಯ ಮೂಲವಾಗಿದೆ. ಇದು ಪ್ರೋಟೀನ್, ಆರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್ ಗಳನ್ನು ಹೊಂದಿದೆ. ಇದರಿಂದ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ. ಅದರಿಂದ ಶರೀರ ಯಾವಾಗಲೂ ಶಕ್ತಿಯಿಂದ ಕೂಡಿರುತ್ತದೆ. ಅದರಲ್ಲೂ ಕಾಫಿಯ ಜೊತೆ ಚಿಯಾ ಬೀಜಗಳನ್ನು ಸೇರಿಸಿ ಕುಡಿಯೋದ್ರಿಂದ ಶರೀರದ ಶಕ್ತಿ ದುಪ್ಪಟ್ಟಾಗುತ್ತೆ. ದೇಹಕ್ಕೆ ಸಿಗುವ ನೈಸರ್ಗಿಕ ಶಕ್ತಿಯಿಂದಾಗಿ ನೀವು ಹೆಚ್ಚಿನ ಸಮಯದವರೆಗೆ ಎಕ್ಟಿವ್ ಆಗಿರಬಹುದು.
ಆರೋಗ್ಯವಂತ ಶರೀರವನ್ನು ಹೊಂದಿರುವವರು ಒಂದು ದಿನಕ್ಕೆ ಸುಮಾರು 20 ಗ್ರಾಂ ಚಿಯಾ ಬೀಜಗಳನ್ನು ಸೇವಿಸಬಹುದು. ಚಿಯಾ ಬೀಜವನ್ನು ಸೇವಿಸುವವರು ಜೀರ್ಣಕ್ರಿಯೆಯ ಸಮಸ್ಯೆಯಿಂದ ದೂರವಿರಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. 

ತೂಕ ಇಳಿಸಲು ಚಿಯಾ ಸೀಡ್ಸ್ ಬಳಸಿ : ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಇದೆ. ಫೈಬರ್ ಅಂಶ ಹೆಚ್ಚು ಇರುವುದರಿಂದ ಇದು ಹೆಚ್ಚು ಹೆಚ್ಚು ತಿನ್ನುವ ಬಯಕೆಯನ್ನು ನಿಯಂತ್ರಿಸುತ್ತದೆ. ಇದರಿಂದ ಬಹಳ ಬೇಗ ತೂಕ ಇಳಿಕೆ ಸಾಧ್ಯವಾಗುತ್ತದೆ. ಇದರಲ್ಲಿರುವ ಪ್ರೋಟೀನ್ ಯಾವಾಗಲೂ ಹೊಟ್ಟೆ ತುಂಬಿಕೊಂಡಿದೆ ಎನ್ನುವ ಅನುಭವವನ್ನು ನೀಡುತ್ತದೆ. ಈ ಕಾರಣದಿಂದಲೇ ಚಿಯಾ ಬೀಜದ ಸೇವನೆ ಆರಂಭಿಸಿದ ಕೆಲವೇ ದಿನಗಳಲ್ಲಿ ತೂಕ ಇಳಿಕೆಯಾಗುವುದನ್ನು ಕಾಣಬಹುದು.

ಆಹಾರದಲ್ಲಿನ ಏರುಪೇರಿನಿಂದಾಗಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿದೆ. ತೂಕ ಇಳಿಸಲು ಅನೇಕ ಮಂದಿ ಜಿಮ್ ಅಥವಾ ಕೆಲವು ವೇಟ್ ಲಾಸ್ ಮೆಡಿಸಿನ್ ಗಳ ಮೊರೆಹೋಗುತ್ತಾರೆ. ಅವುಗಳ ಬದಲು ನೈಸರ್ಗಿಕವಾಗಿ ಸಿಗುವ ಇಂತಹ ಪಾನೀಯಗಳ ಸೇವನೆಯಿಂದ ತೂಕ ಇಳಿಕೆಯಾಗುವುದರ ಜೊತೆಗೆ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತೆ.
 

click me!