ವಿಶ್ವ ಗೆದ್ದ ನಮ್ಮ ಆಹಾರ ಪದ್ಧತಿ, ಏಷ್ಯಾ 50 ಅತ್ಯುತ್ತಮ ಹೊಟೇಲ್ ಪಟ್ಟಿಯಲ್ಲಿ ಭಾರತದ ಹೆಸರು

ಭಾರತದ ಪಾಕ ಪದ್ಧತಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಮಧ್ಯೆ ಭಾರತೀಯರು ಹೆಮ್ಮೆ ಪಡುವ ಘಟನೆ ನಡೆದಿದೆ. ಅತ್ಯುತ್ತಮ ರೆಸ್ಟೋರೆಂಟ್ ಪಟ್ಟಿಯಲ್ಲಿ ಭಾರತೀಯ ರೆಸ್ಟೋರೆಂಟ್ ಗಳು ಜಾಗ ಪಡೆದಿವೆ. 
 

asias 50 best restaurants 2025

2025 ರ ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ (Restaurant)ಗಳ ಪ್ರತಿಷ್ಠಿತ ಪಟ್ಟಿಯಲ್ಲಿ ಭಾರತೀಯ ತಿನಿಸುಗಳು ಮತ್ತೊಮ್ಮೆ ತಮ್ಮ ಛಾಪು ಮೂಡಿಸಿವೆ.  ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ (Asias 50 Best Restaurants)ಗಳ ಪಟ್ಟಿಯಲ್ಲಿ ಭಾರತದ ಹೆಸರು ಕಾಣಿಸಿಕೊಂಡಿದೆ. ಭಾರತೀಯ ರುಚಿಗಳ ಮಾಂತ್ರಿಕತೆ ಪ್ರಪಂಚದಾದ್ಯಂತ ಕೆಲಸ ಮಾಡುತ್ತಿದೆ ಎಂಬುದನ್ನು ಭಾರತೀಯ ರೆಸ್ಟೋರೆಂಟ್‌ಗಳು ಸಾಬೀತುಪಡಿಸಿವೆ. ಎರಡು ಪ್ರಮುಖ ಭಾರತೀಯ ರೆಸ್ಟೋರೆಂಟ್‌ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.  ಮಾರ್ಚ್ 25 ರಂದು ಸಿಯೋಲ್‌ನಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ 2025 ರ ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳನ್ನು ಅನಾವರಣಗೊಳಿಸಲಾಗಿದೆ. ಇದು ಭಾರತೀಯ ಪಾಕ ಪ್ರಿಯರಿಗೆ ವಿಶೇಷ ಕ್ಷಣವಾಗಿದೆ. 

ಪಟ್ಟಿಯಲ್ಲಿರುವ ಭಾರತದ ಎರಡು ರೆಸ್ಟೋರೆಂಟ್ : ಮುಂಬೈನ ಮಾಸ್ಕ್ (Masque) ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂಬೈನ ಐಕಾನಿಕ್ ರೆಸ್ಟೋರೆಂಟ್ ಮಾಸ್ಕ್ ಮತ್ತೊಮ್ಮೆ ಅತ್ಯುತ್ತಮ ಭಾರತೀಯ ಪಾಕಪದ್ಧತಿಯನ್ನು ಪ್ರಸ್ತುತಪಡಿಸಿ, ಸೈ ಎನ್ನಿಸಿಕೊಂಡಿದೆ.  ಮಾಸ್ಕ್, ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ 19 ನೇ ಸ್ಥಾನದಲ್ಲಿದೆ. ಮಾಸ್ಕ್ ರೆಸ್ಟೋರೆಂಟನ್ನು ಅದಿತಿ ದುಗರ್ ಮತ್ತು ಬಾಣಸಿಗ ವರುಣ್ ಟೋಟ್ಲಾನಿ ನಡೆಸುತ್ತಿದ್ದಾರೆ. ಭಾರತೀಯ ಸ್ಟೈಲ್, ಸ್ಥಳೀಯ ಪದಾರ್ಥಗಳು ಮತ್ತು ರುಚಿಯ ಮೆನುವಿನೊಂದಿಗೆ ಮಾಸ್ಕ್ ಭಾರತೀಯ ಆಹಾರಕ್ಕೆ ಹೊಸ ತಿರುವು ನೀಡಿದೆ.

Latest Videos

ಭಾರತದ 10 ಫೇಮಸ್ ಸ್ವೀಟ್ಸ್ ಇಲ್ಲಿವೆ! ನಿಮಗೆ ಯಾವುದು ಇಷ್ಟ? ಇವೆಲ್ಲ ತಿಂದಿದ್ದೀರಾ?

ಪಟ್ಟಿಯಲ್ಲಿರುವ ಎರಡನೇ ಹೊಟೇಲ್ ದೆಹಲಿಯ ಇಂಡಿಯನ್ ಆಕ್ಸೆಂಟ್ (Indian accent). 2025ರ ಏಷ್ಯಾದ 50 ಪ್ರತಿಷ್ಠಿತ ರೆಸ್ಟೋರೆಂಟ್ ಪಟ್ಟಿಯಲ್ಲಿ ಇಂಡಿಯನ್ ಆಕ್ಸೆಂಟ್ 46 ನೇ ಸ್ಥಾನದಲ್ಲಿದೆ. ಇದನ್ನು ಶಾಂತನು ಮೆಹ್ರೋತ್ರಾ ಮುನ್ನಡೆಸುತ್ತಿದ್ದಾರೆ. ಈ ರೆಸ್ಟೋರೆಂಟ್ ಕೂಡ ಭಾರತೀಯ ರುಚಿ ಮತ್ತು ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತ ಬಂದಿದ್ದು, ಗ್ರಾಹಕರನ್ನು ಮಾತ್ರವಲ್ಲ, ವಿಶ್ವವನ್ನೇ ಸೆಳೆದಿದೆ.

ಈ ವರ್ಷ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಬ್ಯಾಂಕಾಕ್‌ನಲ್ಲಿರುವ ಗಗನ್ ರೆಸ್ಟೋರೆಂಟ್ ಪಡೆದುಕೊಂಡಿದೆ.  ಗಗನ್ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದು,  ಮತ್ತೊಮ್ಮೆ ಏಷ್ಯಾದ ಟಾಪ್ 50 ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಮೊದಲ ಪಟ್ಟ ಗಿಟ್ಟಿಸಿಕೊಂಡಿದೆ. ಈ ರೆಸ್ಟೋರೆಂಟ್‌ ಮುಖ್ಯಸ್ಥ  ಗಗನ್ ಆನಂದ್. ಇವರು ಭಾರತೀಯ ಆಹಾರ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಇನ್ನು ಪಟ್ಟಿಯಲ್ಲಿ ದಿ ಚೇರ್ಮೆನ್ ಎರಡನೇ ಸ್ಥಾನದಲ್ಲಿದೆ. ಈ ಹೊಟೇಲ್ ಹಾಂಗ್ ಕಾಂಗ್ ನಲ್ಲಿದ್ದು,  ಮಾಲೀಕ ಡ್ಯಾನಿ ಯಿಪ್ ಇದ್ರ ಮುಖ್ಯ ಬಾಣಸಿಗ. 

ಇಲ್ಲಿ ಇನ್ನೊಂದು ವಿಶೇಷವೆಂದ್ರೆ  ಬೆಂಗಳೂರಿನ ಫಾರ್ಮಾಲೋರ್ ಗೆ,  ಓನ್ ಟು ವಾಚ್  ಪ್ರಶಸ್ತಿ ಸಿಕ್ಕಿದೆ. ಭಾರತದ ಆಹಾರ ಉದ್ಯಮವೂ ಬದಲಾಗುತ್ತಿದೆ ಮತ್ತು ಹೊಸ ಪೀಳಿಗೆಯ ಬಾಣಸಿಗರು ಭಾರತೀಯ ಪಾಕಪದ್ಧತಿಯನ್ನು ಆಧುನಿಕತೆಯೊಂದಿಗೆ ಪ್ರಸ್ತುತಪಡಿಸುತ್ತಿದ್ದಾರೆ ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. 

ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಕಬ್ಬಿಣಾಂಶವಿರುವ ಆಹಾರಗಳು

ಸುದ್ದಿ ಮಾಡಿದ ಭಾರತದ ರೆಸ್ಟೋರೆಂಟ್ : ಈ ಬಾರಿ ಒಟ್ಟು ಏಳು ಭಾರತೀಯ ರೆಸ್ಟೋರೆಂಟ್‌ಗಳನ್ನು ಭಾರತೀಯ ರೆಸ್ಟೋರೆಂಟ್‌ಗಳ ವಿಸ್ತೃತ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವುಗಳಲ್ಲಿ ನಾರ್ (ಕಸೌಲಿ), ಫಾರ್ಮಲೋರ್ (ಬೆಂಗಳೂರು), ಅಮೆರಿಕಾನೊ (ಮುಂಬೈ), ಇಂಜಾ (ನವದೆಹಲಿ), ದಿ ಟೇಬಲ್ (ಮುಂಬೈ), ದಮ್ ಪುಖ್ತ್ (ನವದೆಹಲಿ), ಮತ್ತು ದಿ ಬಾಂಬೆ ಕ್ಯಾಂಟೀನ್ (ಮುಂಬೈ) ಸೇರಿವೆ. ಈ ಪ್ರಶಸ್ತಿಗಳು ಭಾರತೀಯ ಪಾಕಪದ್ಧತಿಯ ಉತ್ತಮ ಗುಣಮಟ್ಟವನ್ನು ಪ್ರತಿಬಿಂಬಿಸುವುದಲ್ಲದೆ, ಭಾರತೀಯ ಬಾಣಸಿಗರು ಮತ್ತು ರೆಸ್ಟೋರೆಂಟ್‌ಗಳು ಭಾರತೀಯ ಸುವಾಸನೆಯನ್ನು ಪ್ರಪಂಚದಾದ್ಯಂತ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂಬುದನ್ನು ತೋರಿಸುತ್ತವೆ. ಇದು ಭಾರತೀಯ ಆಹಾರ ಸಂಸ್ಕೃತಿಗೆ ಹೆಮ್ಮೆಯ ಕ್ಷಣವಾಗಿದೆ. 

vuukle one pixel image
click me!