ಹಲ್ಲಿ ಬಿದ್ದ ಆಹಾರ ವಿಷವಲ್ಲವೆಂದು ಹಲ್ಲಿಯ ಸಾಂಬರ್ ತಿಂದ ಸಂಶೋಧಕ ಗೌರಿಶಂಕರ್; ಬದುಕಿದ್ರಾ, ಸತ್ರಾ ನೀವೇ ನೋಡಿ!

ಉರಗ ತಜ್ಞ ಡಾ.ಪಿ.ಗೌರಿ ಶಂಕರ್, ಹಲ್ಲಿ ಬಿದ್ದ ಆಹಾರ ವಿಷಕಾರಕವಲ್ಲ ಎಂದು ಸಾಬೀತುಪಡಿಸಲು ಸ್ವತಃ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿದ್ದಾರೆ. ಇದಾದ ನಂತರ 3 ದಿನಗಳು ನಾಪತ್ತೆ ಆಗಿದ್ದು, ಅವರು ಬದುಕಿದ್ದಾರಾ? ಅಥವಾ ಸತ್ತಿದ್ದಾರಾ? ಎಂಬುದನ್ನು ನೀವೇ ನೋಡಿ...

dr-gowri-shankar-reveals-eating-food-fallen-on-lizard-is-safe-if-hygiene-maintained-sat

ಬೆಂಗಳೂರು (ಮಾ.23): ಸಾಮಾನ್ಯವಾಗಿ ನಮ್ಮ ಮನೆಗಳ ಗೋಡೆಗಳ ಮೇಲೆ ಹಾಗೂ ಮರಗಳಲ್ಲಿ ವಾಸ ಮಾಡುವ ಹಲ್ಲಿಗಳು ತುಂಬಾ ವಿಷಕಾರಕ ಎಂದು ಹೇಳುತ್ತೇವೆ. ಆದರೆ, ಇಲ್ಲೊಬ್ಬರು ಉರಗ ತಜ್ಞರಾಗಿರುವ ಡಾ.ಪಿ.ಗೌರಿ ಶಂಕರ್ ಅವರು (ಗೌರಿಕಾಳಿಂಗ) ಹಲ್ಲಿ ಬಿದ್ದ ಆಹಾರ ವಿಷಕಾರಕವಲ್ಲ ಎಂದು ಹೇಳಿದ್ದಾರೆ. ಇದನ್ನು ಸಾಬೀತು ಮಾಡುವುದಕ್ಕಾಗಿ ಹಲ್ಲಿ ಬಿದ್ದ ಆಹಾರವನ್ನು ಸ್ವತಃ ಸೇವನೆ ಮಾಡಿ ಚಾಲೆಂಜ್ ಹಾಕಿದ್ದರು. ನಂತರ ಮೂರು ದಿನಗಳ ಕಾಲ ನಾಪತ್ತೆ ಆಗಿದ್ದು..., ಸತ್ತರೇ ಅಥವಾ ಬದುಕಿದರೇ ಎಂಬುದನ್ನು ನೀವೇ ನೋಡಿ..

ಡಾ.ಪಿ. ಗೌರಿ ಶಂಕರ್ ಅವರು ಕಾಳಿಂಗ ಸರ್ಪದ ಮೇಲೆ ಪಿಹೆಚ್‌ಡಿ ಸಂಶೋಧನೆ ಮಾಡಿ, ಸರ್ಪವೊಂದಕ್ಕೆ ಕನ್ನಡದಲ್ಲೇ ವೈಜ್ಞಾನಿಕ ಹೆಸರು ಸಿಗುವಂತೆ ಮಾಡಿದ ಖ್ಯಾತಿ ಇವರದ್ದು. ಆದರೆ, ಇತ್ತೀಚೆಗೆ ವಿಡಿಯೋ ಒಂದನ್ನು ಮಾಡುವಾಗ ಮನೆಯ ಗೋಡೆ ಮೇಲಿದ್ದ ಹಲ್ಲಿಗಳನ್ನು ತೋರಿಸುತ್ತಾ, ಹಲ್ಲಿಗಳು ವಿಷಕಾರಿ ಅಲ್ಲ. ಅವು ಮನುಷ್ಯ ಸ್ನೇಹಿ ಆಗಿವೆ. ರಾಥ್ರಿ ವೇಳೆ ಲೈಟ್ ಅಥವಾ ದೀಪದ ಬೆಳಕಿಗೆ ಬಂದು ಕೂರುವ ಹುಳ, ಹುಪ್ಪಟೆಗಳನ್ನು ತಿಂದು ಜನರ ನೆಮ್ಮದಿ ನಿದ್ರೆಗೆ ಸಹಾಯಕ ಆಗಿವೆ. ಹಲ್ಲಿಗಳಿಂದ ಮನುಷ್ಯರಿಗೆ ಯಾವುದೇ ಹಾನಿಯಿಲ್ಲ ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಹಲ್ಲಿಗಳಿಗೆ ವಿಷಕಾರಿ ಎಂಬ ಪಟ್ಟ ಕಟ್ಟಬೇಡಿ ಎಂದು ಹೇಳಿದ್ದರು.

Latest Videos

ಆದರೆ, ಈ ವಿಡಿಯೋಗೆ ಸವಾಲು ಹಾಕಿದ ನೆಟ್ಟಿಗರು ಹಾಗಾದರೆ ನೀವು ಹಲ್ಲಿ ತಿಂದು ತೋರಿಸಿ ಎಂದು ಕಾಮೆಂಟ್ ಮಾಡಿದ್ದರು. ಈ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದ್ದರು. ಇದೇ ವೇಳೆ ಪಶ್ಚಿಮ ಘಟ್ಟದ ಮನೆಯೊಂದರಲ್ಲಿ ಮಾಡಿದ ಅಡುಗೆಯಲ್ಲಿ ಹಲ್ಲಿ ಬಿದ್ದಿದ್ದು, ಹಲ್ಲಿ ಬಿದ್ದ ಆಹಾರ ಊಟ ಮಾಡ್ತೀರಾ? ಎಂದು ಮತ್ತೆ ಸವಾಲೆಸೆದರು. ಅವರು ಹೇಳಿದ್ದೇ ತಡ, ಅವರ ಮನೆಗೆ ಹೋಗಿ ವಿಡಿಯೋ ಮಾಡುತ್ತಾ ಹಲ್ಲಿ ಬಿದ್ದಿರುವ ಆಹಾರವನ್ನು ಊಟ ಮಾಡಿದ್ದಾರೆ. ಹಲ್ಲಿ ಬಿದ್ದ ಸಾಂಬಾರ್ ಅನ್ನು ತೋರಿಸಿ, ಅದರಲ್ಲಿದ್ದ ಹಲ್ಲಿಯನ್ನು ಊಟ ಮಾಡುವ ಕೈಯಲ್ಲಿಯೇ ತೋರಿಸುತ್ತಾರೆ. ನಂತರ, ಸಾಂಬಾರ್ ಜೊತೆಗೆ ಅನ್ನವನ್ನು ಮಿಶ್ರಣ ಮಾಡಿ ಊಟ ಮಾಡುತ್ತಾರೆ. ಆಗ ಊಟದ ರುಚಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲವೆಂದೂ ಹೇಳುತ್ತಾ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಊಟ ಮಾಡಿ, ನಾಳೆ ನಾನು ಬದುಕಿದ್ದೀನಾ ಇಲ್ಲವಾ ಎಂಬುದನ್ನು ವಿಡಿಯೋ ಮಾಡಿ ತಿಳಿಸುವುದಾಗಿ ಹೇಳಿ ದಿನ ನಾಪತ್ತೆ ಆಗುತ್ತಾರೆ.

ಇದನ್ನೂ ಓದಿ: ಹೆಬ್ಬಾವು ಹಿಡಿದು ಸ್ಕಿಪ್ಪಿಂಗ್ ಆಟವಾಡಿದ ಮಕ್ಕಳು! ಆಘಾತಕಾರಿ ದೃಶ್ಯ ವೈರಲ್ ಬೆನ್ನಲ್ಲೇ ತನಿಖೆಗೆ ಆದೇಶ!

ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿಕೊಂದಿದ್ದ ಗೌರಿಶಂಕರ್ ಅವರು, 'ಹಲ್ಲಿ ಬಿದ್ದ ಆಹಾರ ತಿಂದರೆ ಸಾಯುತ್ತೀವ? ಸಾಮಾನ್ಯವಾಗಿ ನಮ್ಮಲ್ಲಿ ಇರುವ ನಂಬಿಕೆ ಎಂದರೆ ಅಪ್ಪಿತಪ್ಪಿ ಹಲ್ಲಿಯೇನಾದರು ನಮ್ಮ ಆಹಾರದಲ್ಲಿ ಬಿದ್ದರೆ ಆ ಆಹಾರವು ತಿನ್ನಲು ಯೋಗ್ಯವಾದುದಲ್ಲ ಮತ್ತು ಅದು ವಿಷಕಾರಿ ಎಂದು.  ಆದರೆ ವಾಸ್ತವದಲ್ಲಿ ಅದು ಮಿಥ್ಯ. ಹಲ್ಲಿಗಳು ಸಾಮಾನ್ಯವಾಗಿ ವಿಷಕಾರಿಯಾಗಿರುವುದಿಲ್ಲ. ಆದರೆ ಅದರ ಸಾಲ್ಮೊನೆಲ್ಲ ಎಂಬ ವೈರಾಣು ಇರುತ್ತದೆ, ಆದರೆ ಆಹಾರವನ್ನು ಕುದಿಸುವುದರಿಂದ ಅದರಲ್ಲಿರುವ ವೈರಾಣುವು ಸಾಯುತ್ತವೆ ಹಾಗು ಆ ಆಹಾರವನ್ನು ಸೇವಿಸಬಹುದು' ಎಂದು ಬರೆದುಕೊಂಡಿದ್ದಾರೆ.

ಇದಾದ ನಂತರ 3 ದಿನಗಳ ಬಳಿಕ ವಿಡಿಯೋ ಪೋಸ್ಟ್ ಮಾಡಿಕೊಂಡ ಅವರು, 'ಮೊದಲಿಗೆ ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ನನಗೆ ಕರೆ ಮಾಡಿ ಹಾಗು ಸಂದೇಶ ಕಳುಹಿಸಿದ ಎಲ್ಲಾ ನನ್ನ ಮಿತ್ರರಿಗೆ ಹಾಗು ಹಿತೈಷಿಗಳಿಗೆ ನಾನು ಆಭಾರಿ. ಹಲ್ಲಿ ಅಥವಾ ಮತ್ಯಾವುದೇ ಜಂತು ಆಹಾರದಲ್ಲಿ ಬಿದ್ದರೆ ಅದು ವಿಷಕಾರಿಯಾಗಿ ಮನುಷ್ಯ ಸಾಯುವ ಪರಿಸ್ಥಿತಿಗೆ ಹೋಗುವಷ್ಟು ಅಪಾಯಕಾರಿಯಾಗಿರುವುದಿಲ್ಲ. ಹಾಗದರೆ ಆ ಆಹಾರಗಳನ್ನು ತಿಂದಾಗ ಏಕೆ ಅಸ್ವಸ್ತರಾಗುತ್ತಾರೆ ಎಂದು ನನ್ನನು ಕೇಳಿದರೆ, ಅದು ಮೊದಲಿಗೆ ನಾವು ಅನುಸರಿಸುವ ಅಶುಚಿತ್ವವಾದ ಕಾರ್ಯ ವೈಖರಿಗಳು. ಹೌದು ಅಡುಗೆ ಮಾಡುವ ಮೊದಲು ಶುಚಿತ್ವವನ್ನು ಕಾಪಾಡಿಕೊಂಡರೆ ನಾವು ಬೇರೆ ಪ್ರಾಣಿಗಳ ಮೇಲೆ ನಮ್ಮ ತಪ್ಪನ್ನು ಹೋರಿಸುವುದನ್ನು ತಡೆಯಬಹುದು' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನ: ಮಾಲೀಕನ ರಕ್ಷಣೆಗಾಗಿ 12 ಅಡಿ ಕಾಳಿಂಗ ಸರ್ಪದೊಂದಿಗೆ ಹೋರಾಡಿ ಪ್ರೀತಿಯ ನಾಯಿ ಸಾವು!

ಈ ಮೂಲಕ ಹಲ್ಲಿ ಬಿದ್ದ ಆಹಾರ ವಿಷಕಾರಿ ಆಗುವುದಿಲ್ಲ. ಆದರೆ, ಹಲ್ಲಿಯ ದೇಹದ ಮೇಲಿರುವ ಸಾಲ್ಮೊನೆಲ್ಲ ಎಂಬ ವೈರಾಣು ಸ್ವಲ್ಪ ವಿಷಕಾರಿ ಆಗಿದ್ದು, ಅರೆಬರೆ ಬೆಂದರೆ ಅಥವಾ ಸಾಂಬರ್‌ನಲ್ಲಿ ಬಿದ್ದು ಒದ್ದಾಡುತ್ತಿದ್ದರೆ ಅದನ್ನು ತಿನ್ನಬಾರದು. ಆಗ ಹಲ್ಲಿಯನ್ನು ಬೀಸಾಡಿ ಮತ್ತೊಮ್ಮೆ ಚೆನ್ನಾಗಿ ಬಿಸಿ ಮಾಡಿದರೆ ತಿನ್ನಬಹುದು. ಒಂದು ವೇಳೆ ಹಲ್ಲಿ ಬಿದ್ದು, ಸರಿಯಾಗಿ ಬೇಯಿಸದ ಆಹಾರ ತಿಂದರೆ ವಾಂತಿ-ಬೇಧಿ ಆಗಬಹುದೇ ವಿನಃ ಸಾಯುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

vuukle one pixel image
click me!