ಅನಂತ್‌ ಅಂಬಾನಿ-ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮ, 51,000 ಗ್ರಾಮಸ್ಥರಿಗೆ 'ಅನ್ನಸೇವಾ'

By Vinutha PerlaFirst Published Feb 29, 2024, 9:48 AM IST
Highlights

ಮುಕೇಶ್ ಅಂಬಾನಿ-ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ. ನಿನ್ನೆ ಅನ್ನ ಸೇವೆಯೊಂದಿಗೆ ದಂಪತಿಗಳ ವಿವಾಹ ಪೂರ್ವ ಸಂಪ್ರದಾಯಗಳು ಪ್ರಾರಂಭವಾದವು.

ಮುಕೇಶ್ ಅಂಬಾನಿ-ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿ ಸಮಾರಂಭಗಳು ನಡೆಯುತ್ತಿದ್ದು ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ. ನಿನ್ನೆ ಅನ್ನ ಸೇವೆಯೊಂದಿಗೆ ದಂಪತಿಗಳ ವಿವಾಹ ಪೂರ್ವ ಸಂಪ್ರದಾಯಗಳು ಪ್ರಾರಂಭವಾದವು. ಗುಜರಾತ್‌ನ ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ, ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಅಂಬಾನಿ ಕುಟುಂಬದ ಇತರ ಸದಸ್ಯರು ಮತ್ತು ರಾಧಿಕಾ ಮರ್ಚೆಂಟ್ ಹಳ್ಳಿಗರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಬಡಿಸಿದರು.

ರಾಧಿಕಾ ಮರ್ಚೆಂಟ್  ಪೋಷಕರಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಕೂಡ ಅನ್ನ ಸೇವೆಯಲ್ಲಿ ಭಾಗವಹಿಸಿದ್ದರು. ಸುಮಾರು 51,000 ಸ್ಥಳೀಯ ನಿವಾಸಿಗಳಿಗೆ ಆಹಾರವನ್ನು ಬಡಿಸಲಾಯಿತು. ಈ ಸಂಪ್ರದಾಯವು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯುತ್ತದೆ. ಭೋಜನದ ನಂತರ ನೆರೆದಿದ್ದವರು ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಆನಂದಿಸಿದರು. ಪ್ರಸಿದ್ಧ ಗುಜರಾತಿ ಗಾಯಕ ಕೀರ್ತಿದನ್ ಗಧ್ವಿ ಅವರು ತಮ್ಮ ಗಾಯನದ ಮೂಲಕ ಜನರಿಗೆ ಮನೋರಂಜನೆ ನೀಡಿದರು.

ಅನಂತ್‌ -ರಾಧಿಕಾ ವಿವಾಹಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಗುಜರಾತ್‌ನಲ್ಲಿ 14 ದೇವಸ್ಥಾನ ನಿರ್ಮಾಣ!

ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಅಂಬಾನಿ ಕುಟುಂಬದ ಸಂಪ್ರದಾಯ
ಅಂಬಾನಿ ಕುಟುಂಬವು ತಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡುವುದನ್ನು ಮರೆಯುವುದಿಲ್ಲ. ಕೊರೋನಾ ವೈರಸ್‌ನಿಂದ ದೇಶವೇ ಕಂಗೆಟ್ಟಿದ್ದಾಗ ನೀತಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ದೊಡ್ಡ ಪ್ರಮಾಣದ ಆಹಾರ ವಿತರಣೆ ಕಾರ್ಯಕ್ರಮವನ್ನು ನಡೆಸಿತ್ತು. ಕುಟುಂಬದ ಸಂಪ್ರದಾಯವನ್ನು ಪಾಲಿಸುತ್ತಾ, ಅನಂತ್ ಅಂಬಾನಿ ತಮ್ಮ ಪೂರ್ವ ವಿವಾಹ ಕಾರ್ಯಕ್ರಮಗಳನ್ನು ಅನ್ನ ಸೇವೆಯೊಂದಿಗೆ ಪ್ರಾರಂಭಿಸಿದ್ದಾರೆ.

ವಿವಾಹಪೂರ್ವ ಕಾರ್ಯಕ್ರಮಗಳು ಸಾಂಪ್ರದಾಯಿಕ ಮತ್ತು ಅದ್ಧೂರಿಯಾಗಿ ನಡೆಯಲಿವೆ. ಈ ಸಂದರ್ಭದಲ್ಲಿ ಅತಿಥಿಗಳು ಗುಜರಾತ್‌ನ ಕಚ್ಛ್ ಮತ್ತು ಲಾಲ್‌ಪುರದ ಮಹಿಳಾ ಕುಶಲಕರ್ಮಿಗಳು ತಯಾರಿಸಿದ ಸಾಂಪ್ರದಾಯಿಕ ಸ್ಕಾರ್ಫ್‌ಗಳನ್ನು ಸ್ವೀಕರಿಸಲಿದ್ದಾರೆ. 

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ಗ್ರ್ಯಾಂಡ್ ವೆಡ್ಡಿಂಗ್‌; ಊಟದ ಮೆನುವಿನಲ್ಲಿ 2,500 ವೆರೈಟಿ ಫುಡ್!

ದೇಶ-ವಿದೇಶಗಳಿಂದ ಅತಿಥಿಗಳ ಆಗಮನ
ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ, ಭೂತಾನ್ ರಾಣಿ ಜೆಟ್ಸನ್ ಪೆಮಾ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಡೋಬ್ ಸಿಇಒ ಶಂತನು ನಾರಾಯಣ್ ಮತ್ತು ಸೌದಿ ಅರಾಮ್ಕೊ ಅಧ್ಯಕ್ಷ ಯಾಸಿರ್ ಅಲ್ ರುಮಯ್ಯನ್ ಮಾರ್ಚ್ 1ರಿಂದ 3ರ ವರೆಗೆ ನಡುವೆ ನಡೆಯುವ ಆಚರಣೆಗಳಿಗೆ ಆಹ್ವಾನಿತರಲ್ಲಿ ಸೇರಿದ್ದಾರೆ. ಅತಿಥಿ ಪಟ್ಟಿಯಲ್ಲಿ ಸ್ವೀಡನ್‌ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್, ಗೂಗಲ್ ಅಧ್ಯಕ್ಷ ಡೊನಾಲ್ಡ್ ಹ್ಯಾರಿಸನ್, ಬೊಲಿವಿಯಾ ಮಾಜಿ ಅಧ್ಯಕ್ಷ ಜಾರ್ಜ್ ಕ್ವಿರೋಗಾ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಮತ್ತು ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಕ್ಲಾಸ್ ಶ್ವಾಬ್ ಕೂಡ ಇದ್ದಾರೆ.

ಅಂಬಾನಿ ಕುಟುಂಬವು ಈಗಾಗಲೇ ಗುಜರಾತ್‌ನ ಜಾಮ್‌ನಗರದಲ್ಲಿರುವ ವಿಸ್ತಾರವಾದ ದೇವಾಲಯದ ಸಂಕೀರ್ಣದಲ್ಲಿ ಹೊಸ ದೇವಾಲಯಗಳನ್ನು ನಿರ್ಮಿಸಲು ಅನುಕೂಲ ಮಾಡಿಕೊಟ್ಟಿದೆ. ಸಂಕೀರ್ಣವಾದ ಕೆತ್ತಿದ ಕಂಬಗಳು, ದೇವರು ಮತ್ತು ದೇವತೆಗಳ ಶಿಲ್ಪಗಳು, ಫ್ರೆಸ್ಕೋ-ಶೈಲಿಯ ವರ್ಣಚಿತ್ರಗಳು ಮತ್ತು ತಲೆಮಾರುಗಳ ಕಲಾತ್ಮಕ ಪರಂಪರೆಯಿಂದ ಪ್ರೇರಿತವಾದ ವಾಸ್ತುಶೈಲಿಯನ್ನು ಒಳಗೊಂಡಿರುವ ದೇವಾಲಯದ ಸಂಕೀರ್ಣವು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಎತ್ತಿ ಹಿಡಿಯುತ್ತದೆ.

click me!