
ಬಹುತೇಕರು ಕಹಿ ಆಹಾರವನ್ನು ಸೇವಿಸುವುದಿಲ್ಲ. ಏಕೆಂದರೆ ಇಂಥಾ ಆಹಾರ ಬಾಯಿಯನ್ನು ಕಹಿ ಮಾಡುತ್ತದೆ. ಹೀಗಾಗಿ ಎಷ್ಟೇ ಆರೋಗ್ಯವಂತರಾಗಿದ್ದರೂ ಇಂಥಾ ಆಹಾರವನ್ನು ಪಕ್ಕಕ್ಕಿಡುತ್ತಾರೆ. ಆದರೆ ಕಹಿ ಆಹಾರಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಅದಕ್ಕೇ ಕಹಿಯಾಗಿದ್ದರೂ.. ಇಂಥಾ ಆಹಾರಗಳನ್ನು ತಿನ್ನಲೇಬೇಕು. ಆ ಬಗ್ಗೆ ತಿಳಿಯೋಣ.
ಹಾಗಲಕಾಯಿ
ಕಹಿ ಆಹಾರ ಎಂದ ತಕ್ಷಣ ಎಲ್ಲರಿಗೆ ಮೊದಲಿಗೆ ನೆನಪಿಗೆ ಬರುವುದೇ ಹಾಗಲಕಾಯಿ. ಈ ಕಹಿ ತರಕಾರಿ ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಸಿಯಮ್, ಫೋಲೇಟ್, ಸತು, ರಂಜಕ, ಮ್ಯಾಂಗನೀಸ್, ಆಹಾರದ ಫೈಬರ್‌ಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಣ್ಣು ಮತ್ತು ಲಿವರ್ ಆರೋಗ್ಯವಾಗಿರುತ್ತದೆ. ಈ ತರಕಾರಿ ಮಧುಮೇಹವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಹಿಳೆಯರೇ ಎಚ್ಚರ..ಮಧುಮೇಹ ಮತ್ತು ಬಂಜೆತನಕ್ಕೆ ಇದೇ ಕಾರಣ!
ನೆಲ್ಲಿಕಾಯಿ
ನೆಲ್ಲಿಕಾಯಿ ಸ್ವಲ್ಪ ಕಹಿ ಮತ್ತು ಹುಳಿ ರುಚಿಯನ್ನು ಹೊಂದಿರುತ್ತದೆ. ಇದು ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.. ತ್ವಚೆಯೂ ಆರೋಗ್ಯಕರವಾಗಿರುತ್ತದೆ. ಕೂದಲಿನ ಆರೋಗ್ಯಕ್ಕೂ ನೆಲ್ಲಿಕಾಯಿ ಉಪಕಾರಿಯಾಗಿದೆ.
ಮೆಂತ್ಯ ಸೊಪ್ಪು
ಮೆಂತ್ಯ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯವು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಮಧುಮೇಹವನ್ನು ನಿಯಂತ್ರಿಸಲು ಮೆಂತ್ಯವನ್ನು ಬಳಸಬಹುದು. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.
ಅರಿಶಿನ
ಅರಿಶಿನವು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆಯಾಗಿದೆ. ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಹಾಲು ಕುಡಿದ್ರೆ ಕ್ಯಾನ್ಸರ್ ದೂರ, ಹೆಚ್ಚುತ್ತೆ ಇಮ್ಯೂನ್ ಸಿಸ್ಟಮ್, ಆರೋಗ್ಯಕ್ಕೆ ಜೈ ಎನ್ನಿ!
ಬೇವಿನ ಎಲೆಗಳು
ಬೇವಿನ ಸೊಪ್ಪಿನಲ್ಲಿಯೂ ಹಲವಾರು ಔಷಧೀಯ ಗುಣಗಳಿವೆ. ಈ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಪ್ಪಾಯಿ ಹಣ್ಣು
ಪಪ್ಪಾಯಿ ಕಾಯಿಯಾಗಿದ್ದರೆ ಕಹಿಯಾಗಿರುತ್ತದೆ. ಕೆಲವರಿಗೆ ಇದನ್ನು ತಿನ್ನಲೂ ಮನಸ್ಸಿಲ್ಲ. ಆದರೆ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಈ ಹಣ್ಣನ್ನು ತಿನ್ನುವುದರಿಂದ ಹಲವು ಕಾಯಿಲೆಗಳನ್ನು ದೂರವಿಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.