ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಇರುವೆ, ಯಪ್ಪಾ..ಯಾವಾಗ್ಲೂ ಇದೇ ಗೋಳಾ..

By Vinutha Perla  |  First Published Feb 28, 2023, 1:20 PM IST

ಕಳಪೆ ಗುಣಮಟ್ಟದ ಆಹಾರ ವಿತರಿಸಿ ಏರ್‌ ಇಂಡಿಯಾ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆಹಾರದಲ್ಲಿ ಹಲ್ಲಿ, ಜಿರಳೆ, ಕಲ್ಲು ಸಿಕ್ಕಿರೋದು ಹಲವಾರು ಬಾರಿ ಸಂಭವಿಸಿದೆ. ಇದು ಏರ್‌ ಇಂಡಿಯಾ ಎಕಾನಮಿ ಕ್ಲಾಸ್‌ಗಷ್ಟೇ ಸೀಮಿತವಾಗಿಲ್ಲ. ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್‌ನಲ್ಲಿ ಕೊಟ್ಟ ಆಹಾರದಲ್ಲಿ ಇರುವೆ ಸಿಕ್ಕಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. 


ನವದೆಹಲಿ: ವಿಮಾನದಲ್ಲಿ ಉದ್ಯಮಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ನಂತರ ಸಾಕಷ್ಟು ಸುದ್ದಿಯಲ್ಲಿರುವ ಏರ್ ಇಂಡಿಯಾ ಈಗ ಅದರಲ್ಲಿ ನೀಡಿರುವ ಆಹಾರಕ್ಕಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಹಿಂದೆ ಏರ್ ಇಂಡಿಯಾದ ವಿಮಾನದಲ್ಲಿ  ನೀಡಿದ ಆಹಾರದಲ್ಲಿ ಕಲ್ಲು ಸಿಕ್ಕಿದ ವಿಚಾರವನ್ನು ಮಹಿಳಾ ಪ್ರಯಾಣಿಕರೊಬ್ಬರು ಟ್ವಿಟ್ಟರ್‌ನಲ್ಲಿ  ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಏರ್‌ ಇಂಡಿಯಾದಲ್ಲಿ ವಿತರಿಸಿದ ಆಹಾರದಲ್ಲಿ ಆಗಾಗ ಜಿರಳೆ, ಕೀಟ, ಕಲ್ಲು ಏನಾದರೂ ಸಿಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಈ ರೀತಿಯ ಆಹಾರದ ವಿತರಣೆಯಾಗ್ತಿತ್ತು. ಆದ್ರೆ ಸದ್ಯ ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್‌ನಲ್ಲಿ ಕೊಟ್ಟ ಆಹಾರದಲ್ಲಿ ಇರುವೆ ಸಿಕ್ಕಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. 

ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್‌ನಲ್ಲಿ ವಿತರಿಸಿದ ಆಹಾರದಲ್ಲಿ ಇರುವೆ
ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ಪ್ಯಾಸೆಂಜರ್ ಆಹಾರ (Food)ದಲ್ಲಿ ವ್ಯಕ್ತಿಯೊಬ್ಬರಿಗೆ ಕೀಟ ಸಿಕ್ಕಿದೆ. ವ್ಯಕ್ತಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಏರ್ ಇಂಡಿಯಾ ಸಹ ಪ್ರತಿಕ್ರಿಯಿಸಿದೆ. ಮುಂಬೈನಿಂದ ಚೆನ್ನೈಗೆ ಬಿಸಿನೆಸ್ ಕ್ಲಾಸ್‌ನಲ್ಲಿ ಸಂಚರಿಸಿದ ವ್ಯಕ್ತಿಯೊಬ್ಬರು ಆಹಾರದಲ್ಲಿ ಕೀಟ (Insect) ಸಿಕ್ಕಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮಹಾವೀರ್ ಜೈನ್ ಎಂಬವರು ಅದರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 'ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್‌ನಲ್ಲಿ ಕೀಟಗಳನ್ನು ಸೇರಿಸಿದ ಆಹಾರವನ್ನು ಸರ್ವ್ ಮಾಡುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, 'ಪ್ರಯಾಣಿಕರಿಗೆ ವಿತರಿಸಲಾಗುವ ಆಹಾರದಲ್ಲಿ ನೈರ್ಮಲ್ಯವನ್ನು (Hygeine) ಖಚಿತಪಡಿಸಿಕೊಳ್ಳಲು ಸಂಸ್ಥೆ ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸುತ್ತದೆ' ಎಂದು ಹೇಳಿದೆ.

Tap to resize

Latest Videos

ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಕಲ್ಲು: ಫೋಟೋ ವೈರಲ್

ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪ್ರತಿಕ್ರಿಯಿಸಿದ ಏರ್ ಇಂಡಿಯಾ
'ಪ್ರೀತಿಯ ಜೈನ್‌, ನಮ್ಮೊಂದಿಗಿನ ಪ್ರಯಾಣದಲ್ಲಿ ನಿಮಗೆ ಅನಾನುಕೂಲವಾಗಿರುವುದಕ್ಕೆ ಕ್ಷಮೆಯಿರಲಿ. ಆಹಾರ ತಯಾರಿಕೆಯ ಪ್ರತಿಯೊಂದು ಹಂತದಲ್ಲೂ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಕಟ್ಟುನಿಟ್ಟಾಗಿ ಕ್ರಮಗಳನ್ನು ಅನುಸರಿಸುತ್ತೇವೆ. ಇನ್ನು ಮುಂದೆ ಇನ್ನೂ ಹೆಚ್ಚಿನ ಕಾಳಜಿ (Care) ವಹಿಸುತ್ತೇವೆ' ಎಂದು ಏರ್‌ ಇಂಡಿಯಾ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಮಾತ್ರವಲ್ಲ ಸಂಸ್ಥೆ ಮಹಾವೀರ್ ಜೈನ್‌ಗೆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಸೂಚಿಸಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದೆ.

ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ
ಅಂಥಹದ್ದೇ ಮತ್ತೊಂದು ಘಟನೆಯಲ್ಲಿ, ಚೆಫ್ ಸಂಜೀವ್ ಕಪೂರ್ ಅವರು ವಿಮಾನದಲ್ಲಿ ನೀಡಿದ ಆಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆಏರ್ ಇಂಡಿಯಾ ಸರ್ವ್ ಮಾಡಿದ ಆಹಾರದ ಫೋಟೋವನ್ನು ಹಂಚಿಕೊಂಡು, ಭಾರತೀಯರು ನಿಜವಾಗಿಯೂ ಬೆಳಗಿನ ಉಪಾಹಾರಕ್ಕಾಗಿ ಇದನ್ನು ತಿನ್ನಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. 'ಏರ್ ಇಂಡಿಯಾವನ್ನು ಎಚ್ಚರಗೊಳಿಸಿ.  ಕಲ್ಲಂಗಡಿ, ಸೌತೆಕಾಯಿ, ಟೊಮೇಟೊ ಮತ್ತು ತಣ್ಣಗಾದ ಚಿಕನ್ ಟಿಕ್ಕಾ. ಮೇಯೊ ಜೊತೆ ಎಲೆಕೋಸಿನ ಸಣ್ಣ ತುಂಡುಗಳನ್ನು ತುಂಬಿದ ಸ್ಯಾಂಡ್ವಿಚ್ (Sandwich). ಸ್ಪಂಜಿನ ಬಣ್ಣದ ಸ್ವೀಟ್ ಕ್ರೀಮ್  ಮತ್ತು ಹಳದಿ ಗೇಜ್ ಶುಗರ್ ಸಿರಪ್' ಎಂದು ಟ್ವಿಟರ್‌ನಲ್ಲಿ ಸಂಜೀವ್ ಕಪೂರ್ ಟ್ವೀಟ್ ಮಾಡಿದ್ದಾರೆ. 

Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ವಿಮಾನದ ಆಹಾರದಲ್ಲಿ ಹುಳು : ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್‌ನ ಪ್ರಯಾಣಿಕರೊಬ್ಬರು ತಮ್ಮ ಆಹಾರದಲ್ಲಿ ಹುಳು ಕಂಡುಬಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮುಂಬೈನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಅವರು ಆಹಾರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕ ಮಹಾವೀರ್ ಜೈನ್,  ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ. ನನ್ನ ವಿಮಾನ ಎಐ671 – ಮುಂಬೈನಿಂದ ಚೆನ್ನೈಗೆ ಸೀಟ್ ನಂಬರ್ 2ಸಿ’ ಎಂಬ ಶೀರ್ಷಿಕೆ ಅಡಿ ವಿಡಿಯೋ ಟ್ವೀಟ್ ಮಾಡಿದ್ದಾರೆ.

click me!