ಖಾರ, ಅಂಟುಂಡೆ ಬಾಣಂತಿಗೆ ಮದ್ದು, ಈ ಅಂಟುಂಡೆ ಮಾಡೋದು ಹೇಗೆ?

Published : Feb 28, 2023, 11:41 AM IST
ಖಾರ, ಅಂಟುಂಡೆ ಬಾಣಂತಿಗೆ ಮದ್ದು, ಈ ಅಂಟುಂಡೆ ಮಾಡೋದು ಹೇಗೆ?

ಸಾರಾಂಶ

ಮನೆಯಲ್ಲೇ ವಿವಿಧ ಬಗೆಯ ಸಿಹಿತಿಂಡಿಗಳನ್ನು ಮಾಡುವ ಆಸಕ್ತಿ ಹೊಂದಿದವರು ಡ್ರೈ ಫ್ರೂಟ್ಸ್‌ ನಿಂದ ಮಾಡುವ ಉಂಡೆಗಳನ್ನೂ ಮಾಡಿ ನೋಡಿ. ಡ್ರೈ ಫ್ರೂಟ್ಸ್‌ ನಿಂದ ಮಾಡುವ ಈ ಉಂಡೆಗಳು ಬಾಣಂತಿಯರಿಗೆ ಭಾರೀ ಉತ್ತಮ ಆಹಾರ.

ಮಡಿಲಲ್ಲಿ ಹಸುಗೂಸು, ಪದೇ ಪದೆ ಎದ್ದು ಹಾಲು ಕುಡಿಸಬೇಕು. ಇಡೀ ದಿನ ಅದೇ ದೊಡ್ಡ ಕೆಲಸ. ಸ್ನಾನ ಮುಂತಾದ ನಿತ್ಯಕರ್ಮಗಳನ್ನು ಮುಗಿಸುವಷ್ಟರಲ್ಲಿ ಸುಸ್ತೋ ಸುಸ್ತು. ಇದು ಬಾಣಂತಿಯರ ಸ್ಥಿತಿ. ಕೆಲವು ಕುಟುಂಬಗಳಲ್ಲಂತೂ ಬಾಣಂತಿಯರಿಗೆ ಆ ಮದ್ದು, ಈ ಮದ್ದು ಎಂದು ಏನಾದರೊಂದು ಔಷಧಗಳನ್ನು ನೀಡುತ್ತಿರುತ್ತಾರೆ. ಹಲವು ರೀತಿಯ ಮನೆಮದ್ದುಗಳು ಬಾಣಂತಿಯರ ಆರೋಗ್ಯಕ್ಕೆ ಭಾರೀ ಪೂರಕವಾಗಿರುತ್ತವೆ ಎನ್ನುವುದು ನಿಜ. ಆದರೆ, ಕೆಲವು ಹಳೆಯ ಕಾಲದ ಜನ ಬಾಣಂತಿಗೆ, ಮಗುವಿಗೆ ಶೀತವಾಗದಿರಲಿ ಎಂದು ದೇಹಕ್ಕೆ ಅತಿಯಾಗಿ ಉಷ್ಣವಾಗುವಂತಹ ಪಾನೀಯಗಳನ್ನು ನೀಡಿಬಿಡುತ್ತಾರೆ. ಅವುಗಳ ಸೇವನೆಯಿಂದ ಹಲವರಿಗೆ ಮೂಲವ್ಯಾಧಿ ಸೇರಿದಂತೆ ಮಲಬದ್ಧತೆಯಂತಹ ಸಮಸ್ಯೆಗಳು ಶುರುವಾಗುವುದೂ ಇದೆ. ಹೀಗಾಗಿ, ಅವುಗಳ ಸೇವನೆ ಬಗ್ಗೆ ಎಚ್ಚರಿಕೆ ಇರಲಿ, ದೇಹಕ್ಕೆ ಒಗ್ಗುತ್ತದೆ ಎಂದಾದರೆ ಮಾತ್ರ ಸೇವಿಸುವುದು ಉತ್ತಮ. ಹಾಗೆಯೇ, ಬಾಣಂತಿಯರಿಗೆ ದೇಹದಲ್ಲಿ ಕಸುವು ಮೂಡುವುದು ಅಗತ್ಯ. ಹೀಗಾಗಿಯೇ, ಅನೇಕ ರೀತಿಯ ಮನೆಮದ್ದುಗಳನ್ನು ಮಾಡಿಕೊಡುವುದು. ಎಲ್ಲರಿಗೂ ತಿಳಿದಿದೆ, ಒಣಹಣ್ಣುಗಳು ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ನೀಡುತ್ತವೆ. ಡ್ರೈಫ್ರೂಟ್ಸ್‌ ನಿಂದ ಮಾಡುವ ಬಾಣಂತಿ ಕಡೆಮದ್ದು ದೇಹಕ್ಕೆ ಅತ್ಯುತ್ತಮವಾಗಿದ್ದು, ಖಂಡಿತ ಎಲ್ಲ ಬಾಣಂತಿಯರೂ ಸೇವಿಸಬೇಕು. ಬರೀ ಅವರಷ್ಟೇ ಅಲ್ಲ, ದೇಹಕ್ಕೆ ಶಕ್ತಿ ಒದಗಲು ಎಲ್ಲರೂ ಇದನ್ನು ಖುಷಿಯಾಗಿ ಸೇವನೆ ಮಾಡಬಹುದು.

ಬಾಣಂತಿಗೆ ಡ್ರೈಫ್ರೂಟ್ಸ್‌ (Dry Fruits)
ಗೋಡಂಬಿ (Cashew), ಬಾದಾಮಿ (Badam), ಪಿಸ್ತಾ (Pista), ಬಾದಾಮ್‌ ಗಮ್‌ (Badam Gum), ಖರ್ಜೂರ (Dates) (ಬೀಜ ತೆಗೆದುಕೊಳ್ಳಿ), ಅಂಜೂರ, ಒಣಕೊಬ್ಬರಿ, ವಾಲ್‌ ನಟ್‌ (Walnut), ಒಣದ್ರಾಕ್ಷಿ (Raisins), ಗಸಗಸೆ, ತುಪ್ಪ (Ghee) ಎಲ್ಲವನ್ನೂ ಅರ್ಧ ಕಪ್‌ ತೆಗೆದುಕೊಳ್ಳಬೇಕು. ಕುಂಬಳಕಾಯಿ ಬೀಜ (Pumpkin Seed) ಸ್ವಲ್ಪ, ಸನ್‌ ಫ್ಲಾವರ್‌ (Sunflower) ಬೀಜ ಸ್ವಲ್ಪ ಸೇರಿಸಿ. 
ವಾಲ್‌ ನಟ್‌, ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯನ್ನು ಚೂರು ಚೂರು ಮಾಡಿಕೊಳ್ಳಬೇಕು. ತೀರ ಚಿಕ್ಕ ಪೀಸ್‌ ಮಾಡಬೇಡಿ.

ಈ ಆಹಾರಗಳ ಬೆಲೆ ಕೇಳಿದ್ರೆ ತಿನ್ನೋದಾ? ಲಾಕರ್ ನಲ್ಲಿಡೋದ? ಅನ್ಸೋದು ಗ್ಯಾರಂಟಿ

ಸಿಹಿಯಾದ ಲಡ್ಡು ಮಾಡೋದ್‌ ಹೀಗೆ?
ಕಾವಲಿಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಬಾದಾಮ್‌ ಅಂಟನ್ನು ಚೆನ್ನಾಗಿ ಹಾಕಿ ಹುರಿಯಿರಿ (Fry). ಅದು ಅರಳಿ ಸಂಡಿಗೆ ರೀತಿಯಲ್ಲಿ ಆಗುತ್ತದೆ. ಇದು ಸರಿಯಾಗಿ ಹುರಿಯಬೇಕು. ಇಲ್ಲವಾದಲ್ಲಿ ಗಟ್ಟಿಯಾಗಿ, ಪುಡಿ (Powder)ಯಾಗುವುದಿಲ್ಲ. ಬಳಿಕ ಅದನ್ನು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಅದೇ ಕಾವಲಿಯಲ್ಲಿ ಉಳಿದಿರುವ ತುಪ್ಪಕ್ಕೆ ಗಸಗಸೆ ಹಾಕಿ ಹುರಿಯಿರಿ. ಚಟಪಟ ಅಂತ ಸಿಡಿಯೋವರೆಗೆ ಹುರಿಯಬೇಕು. ಬಳಿಕ ಅದಕ್ಕೇ ಕೊಬ್ಬರಿ ಹಾಕಿ ಹುರಿಯಿರಿ. ಕಂದು ಬಣ್ಣ (Brown Color) ಬರುವವರೆಗೂ ಹುರಿಯಬೇಕು. ಡ್ರೈಫ್ರೂಟ್ಸ್‌ ಪೀಸ್‌ (Dry Fruits Peace) ಗಳನ್ನು ಇದಕ್ಕೆ ಹಾಕಿ ಹುರಿಯಬೇಕು. ಕೊನೆಗೆ ಮತ್ತೆ ತುಪ್ಪ ಹಾಕಿ ಅಂಜೂರ ಮತ್ತು ಖರ್ಜೂರ ಹಾಕಿ ತುಪ್ಪದಲ್ಲಿ ಹುರಿಯಿರಿ. 

Healthy Food : ಪ್ರೋಟೀನ್ ಹೆಚ್ಚಿರುವ ಈ ಬೆಳಗ್ಗಿನ ತಿಂಡಿಗೆ ಇಡ್ಲಿ ಮಾಡೋದು ತುಂಬಾ ಸುಲಭ

ಬಾದಾಮ್‌ ಗಮ್‌ ಅನ್ನು ಸ್ವಲ್ಪ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿಗೂ ಹಾಕಬಹುದು, ಆದರೆ ಹೆಚ್ಚು ನುಣ್ಣಗೆ ಆಗಬಾರದು. ಎಲ್ಲವನ್ನೂ ಸರಿಯಾಗಿ ಮಿಕ್ಸ್‌ ಮಾಡಿ ಉಂಡೆ ಕಟ್ಟಬೇಕು. ಇದಕ್ಕೆ ಬೆಲ್ಲ (Jaggery) ಸೇರಿಸುವುದು ಇರುವುದಿಲ್ಲ. ಖರ್ಜೂರದ ಸಿಹಿಯೇ (Sweet) ಸಾಕಾಗುತ್ತದೆ. ತೀರ ಬೇಕು ಎನಿಸಿದರೆ ಸ್ವಲ್ಪವೇ ಸ್ವಲ್ಪ ಬೆಲ್ಲದ ಪಾಕವನ್ನು ಸೇರಿಸಿಕೊಳ್ಳಬಹುದು. ಕೈಗೆ ತುಪ್ಪ ಸವರಿಕೊಂಡು ಉಂಡೆಗಳನ್ನು ಕಟ್ಟಬೇಕು. ಇದು ಬಾಣಂತಿಯರಿಗೆ ಸೂಪರ್‌ ಫುಡ್. ಏಕೆಂದರೆ, ಎಲ್ಲ ರೀತಿಯ ಒಣ ಹಣ್ಣುಗಳು ಇದರಲ್ಲಿ ಸೇರಿವೆ. ದೇಹಕ್ಕೆ ಅಗತ್ಯವಿರುವ ಅನೇಕ ರೀತಿಯ ಪೌಷ್ಟಿಕಾಂಶಗಳು ಇದರಲ್ಲಿ ಇರುವುದರಿಂದ ಬಾಣಂತಿಯರು (Feeding Mothers) ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?