ಪ್ರತಿಯೊಬ್ಬರಿಗೂ ವಿಶ್ರಾಂತಿ ಅಗತ್ಯ. ಮಳೆಯಲ್ಲಿ ಡಾನ್ಸ್ ಮಾಡ್ತಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಸದಾ ಗ್ರಾಹಕರನ್ನು ಮೆಚ್ಚಿಸೋದ್ರಲ್ಲೇ ಬ್ಯುಸಿಯಾಗಿರುವ ಫುಡ್ ಡೆಲವರಿ ಬಾಯ್ಸ್ ರಿಲ್ಯಾಕ್ಸ್ ಆಗೋದು ಹೇಗೆ ಎಂಬುದನ್ನು ವ್ಯಕ್ತಿಯೊಬ್ಬರು ತಮ್ಮ ಕಲ್ಪನೆಯಲ್ಲಿ ತೋರಿಸಿದ ಪೋಸ್ಟ್ ವೈರಲ್ ಆಗಿದೆ.
ಜೊಮಾಟೊ ಜಾಹೀರಾತುಗಳು ನಮ್ಮ ನಾಲಿಗೆ ರುಚಿ ಮೊಗ್ಗನ್ನು ಕೆರಳಿಸುತ್ವೆ ಅಂದ್ರೆ ಅತಿಶಯೋಕ್ತಿಯಲ್ಲ. ಖಾದ್ಯಗಳ ಫೋಟೋಗಳು, ಅದ್ರ ವಿಡಿಯೋಗಳು ಗ್ರಾಹಕರ ಬಾಯಲ್ಲಿ ನೀರು ತರಿಸುತ್ವೆ. ತಕ್ಷಣ ಕೈ ಮೊಬೈಲ್‌ಗೆ ಹೋಗೋದಲ್ಲದೆ, ಜೊಮಾಟೊ ಆ್ಯಪ್ ಮೂಲಕ ಗ್ರಾಹಕರು ತಮಗಿಷ್ಟವಾಗುವ ಆಹಾರವನ್ನು ಆರ್ಡರ್ ಮಾಡ್ತಾರೆ. ಗ್ರಾಹಕರ ಗಮನ ಸೆಳೆಯಲು ಪ್ರತಿಯೊಂದೂ ಕಂಪನಿಯೂ ಭಿನ್ನವಾದ ಜಾಹೀರಾತುಗಳನ್ನು ನೀಡುತ್ತದೆ. ಆದ್ರೆ ಕೆಲ ಜಾಹೀರಾತು ಗ್ರಾಹಕರನ್ನು ಸೆಳೆಯಲು ಸಂಪೂರ್ಣ ಯಶಸ್ವಿಯಾಗುತ್ತದೆ.
ಈಗ ಮಳೆಗಾಲ. ಒಂದು ಕಡೆ ಧೋ ಅಂತಾ ಮಳೆ ಬೀಳ್ತಿದ್ರೆ ಮನೆಯಲ್ಲಿ ಕುಳಿತ ನಮಗೆ ಬಿಸಿ ಬಿಸಿ ಬಜ್ಜಿ ತಿನ್ನುವ ಆಸೆ ಆಗುತ್ತೆ. ಆದ್ರೆ ಮನೆಯಲ್ಲಿ ಮಾಡಿಕೊಳ್ಳೋದು ಬೋರಿಂಗ್. ಹಾಗಾಗಿ ಜೊಮೊಟೊ (Zomato ) ದಲ್ಲಿ ಬಜ್ಜಿ ಏನೋ ಆರ್ಡರ್ ಮಾಡ್ತೇವೆ. ಆದ್ರೆ ಆ ಬಜ್ಜಿಯನ್ನು ನಮ್ಮ ಮನೆಗೆ ತಲುಪಿಸುವ ಡೆಲಿವರಿ ಬಾಯ್ ಕಥೆ ಏನಾಗ್ಬೇಡ. ಮಳೆಯಲ್ಲಿ ನೆನೆದುಕೊಂಡು, ಬಿಸಿ ಬಿಸಿ ಬಜ್ಜಿಯನ್ನು ಸರಿಯಾದ ಸಮಯಕ್ಕೆ ನಿಮಗೆ ತಲುಪಿಸೋದು ಸವಾಲಿನ ಕೆಲಸ. ಅವರಿಗೆ ಸಾಕಷ್ಟು ಟೆನ್ಷನ್ ಇದ್ದೇ ಇದೆ. ಆದ್ರೆ ಅವರ ಟೆನ್ಷನ್ ಕಡಿಮೆ ಮಾಡುವ, ನಿಮಗೆ ಮನರಂಜನೆ ನೀಡುವ ಫೋಟೋ ಒಂದು ಈಗ ಎಲ್ಲರ ಗಮನ ಸೆಳೆದಿದೆ.
Viral Video : ಲೋಕಲ್ ಟ್ರೈನಲ್ಲಿ ಗೊಲ್ಗಪ್ಪ..! ಯಪ್ಪಾ.. ಇದಪ್ಪಾ ಬ್ಯುಸಿನೆಸ್ ತಲೆ
ಈಗಿನ ದಿನಗಳಲ್ಲಿ ಜೊಮಾಟೊ ಅನೇಕ ವಿಷ್ಯಕ್ಕೆ ಸುದ್ದಿಯಾಗ್ತಿರುತ್ತದೆ. ಅಪ್ಲಿಕೇಷನ್ (Application) ನಲ್ಲಿ ಬದಲಾವಣೆ, ಬೆಲೆ ಏರಿಕೆ, ಇಳಿಕೆ ಜೊತೆಗೆ ಜೊಮಾಟೊ ಡೆಲಿವರಿ ಬಾಯ್ ಗಳ ಕೆಲಸ ಕೂಡ ಸಾಮಾಜಿಕ ಜಾಲತಾಣದಲ್ಲಿ (Social Media) ಚರ್ಚೆಯ ವಿಷ್ಯವಾಗಿವೆ. ಡೆಲಿವರಿ ಬಾಯ್ಸ್ ಏನೆಲ್ಲ ಕಷ್ಟವನ್ನು ಎದುರಿಸ್ತಾರೆ ಎನ್ನುವ ಜೊತೆಗೆ ಅವರು ಹೇಗೆಲ್ಲ ಲೈಫ್ ಎಂಜಾಯ್ ಮಾಡಬಹುದು ಎಂಬುದು ಕೂಡ ಚರ್ಚೆಯಾಗುತ್ವೆ. ಲಿಂಕ್ ಡ್ ಇನ್ (Linked In) ಬಳಕೆದಾರರೊಬ್ಬರು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಜೊಮಾಟೊ ಡೆಲಿವರಿ ಬಾಯ್ ಮಳೆಯಲ್ಲಿ ಡಾನ್ಸ್ ಮಾಡುವ ಫೋಟೋ ಸೃಷ್ಟಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಜನರು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವಾಗ್ಲೂ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ಯಾ? ಈ ರೀತಿ ಮಾಡಿ ತಿನ್ನಿ
ಲಿಂಕ್ಡ್‌ಇನ್ ನಲ್ಲಿ ವೈರಲ್ : ಲಿಂಕ್ಡ್‌ಇನ್‌ನಲ್ಲಿ ಸೌರಭ್ ಧಾಭಾಯ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫುಡ್ ಡೆಲಿವರಿ ಬಾಯ್ ಮಳೆಯಲ್ಲಿ ಡಾನ್ಸ್ ಮಾಡೋದನ್ನು ಕಲ್ಪಿಸಿಕೊಂಡ ಅವರು ಅದಕ್ಕೆ ಫೋಟೋ ರೂಪ ನೀಡಿದ್ದಾರೆ. ರೇನ್ ಕೋಟ್ ಹಾಕಿಕೊಂಡಿರುವ ಕೆಂಪು ಬಣ್ಣದ ಬಟ್ಟೆ ಧರಿಸಿರುವ ಡೆಲಿವರಿ ಬಾಯ್, ಮಳೆಯಲ್ಲಿ ಡಾನ್ಸ್ ಮಾಡ್ತಿದ್ರೆ, ಜನರು ಅದನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ. ಸೌರಭ್ ಧಾಭಾಯ್ ಅವರು ಜೊಮಾಟೊ ಪಾಪ್-ಅಪ್ ಅನ್ನು ಸಹ ಇದ್ರಲ್ಲಿ ಸೇರಿಸಿದ್ದಾರೆ. ಉಪ್ಸ್…! ನಮ್ಮ ಡೆಲಿವರಿ ವ್ಯಾಲೆಟ್ ಗೆ ಸ್ವಲ್ಪ ತಡವಾಗಿದೆ. ಮುಂಬೈ ಮಳೆಯಲ್ಲಿ ನೃತ್ಯ ಮಾಡ್ತಾ ಡೆಲಿವರಿ ಬಾಯ್ ಸಿಕ್ಕಿಬಿದ್ದಿದ್ದಾರೆ. ಮಳೆಯಲ್ಲಿ ನೆನೆದ ಕಾರಣ ರುಚಿಯಲ್ಲಿ ಏರುಪೇರಾದ್ರೆ ಕ್ಷಮೆ ಇರಲಿ ಎಂದು ಶೀರ್ಷಿಕೆಯನ್ನೂ ಅವರು ಸೇರಿಸಿದ್ದಾರೆ.
ಈ ಫೋಟೋವನ್ನು ಸೃಷ್ಟಿ ಮಾಡಲು ಮಿಡ್‌ಜರ್ನಿ AI ಬಳಸಿರುವುದಾಗಿ ಸೌರಭ್ ಧಾಭಾಯಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರ ಮೆಚ್ಚುಗೆ : ಈ ಫೋಟೋ ವೈರಲ್ ಆಗಿದೆ. ಜನರು ಸೌರಭ್ ಧಾಭಾಯಿ ಕೆಲಸವನ್ನು ಮೆಚ್ಚಿದ್ದಾರೆ. ಇದನ್ನು ನಾವು ಮಾನವ ಬಳ್ಳಿಯನ್ನು ಸಂಪರ್ಕಿಸುವ ಅಭಿಯಾನ ಎಂದು ಕರೆಯುತ್ತೇವೆ. ನಮ್ಮಲ್ಲಿ ಇನ್ನೂ ಕೆಲವು ಮನುಷ್ಯರಯ ಇದ್ದಾರೆ ಎನ್ನುವುದೇ ಖುಷಿ. ಅಂತಹ ಆಲೋಚನೆಯನ್ನು ಹೊರತಂದ ತಂಡಕ್ಕೆ ಅಭಿನಂದನೆಗಳು ಎಂದು ಒಬ್ಬ ಬಳಕೆದಾರರು ಉತ್ಸಾಹದಿಂದ ಪೋಸ್ಟ್ ಮಾಡಿದ್ದಾರೆ. ಇದೊಂದು ಅಧ್ಬುತ ಫೋಸ್ಟ್ ಎಂದು ಕೆಲವರು ಹೇಳಿದ್ರೆ, ಜೊಮಾಟೋ ಇದಕ್ಕೆ ಪ್ರತಿಕ್ರಿಯೆ ನೀಡ್ಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ.