ಎಲ್ಲಿ ನಮ್ಮ ಉತ್ಪನ್ನವನ್ನು ಮಾರಾಟ ಮಾಡಿದ್ರೆ ಹೆಚ್ಚು ಲಾಭ ಪಡೆಯಬಹುದು ಎಂಬುದು ವ್ಯಾಪಾರಿಗೆ ಮೊದಲು ಗೊತ್ತಿರಬೇಕು. ಈ ಗುಟ್ಟು ಈತನಿಗೆ ಗೊತ್ತಾಗಿದೆ. ಹಾಗಾಗೇ ಎಲ್ಲ ಬಿಟ್ಟು ಲೋಕನ್ ಟ್ರೈನ್ ಕ್ಯಾಶ್ ಹಾಕಿದ್ದಾನೆ.
ಖಾರ – ಹುಳಿ ಮಿಶ್ರಿತ ಗೋಲ್ಗಪ್ಪಾ ಒಂದೊಂದೇ ಒಳಗೆ ಹೋಗ್ತಿದ್ರೆ ನಾಲಿಗೆ ಚುರಕ್ ಅನ್ನುತ್ತೆ. ಸ್ ಸ್ ಶಬ್ದ ಮಾಡ್ತಾನೆ ಜನರು ಒಂದಾದ್ಮೇಲೆ ಒಂದು ಗೋಲ್ಗಪ್ಪಾ ತಿನ್ನುತ್ತಾರೆ. ಗೊಲ್ಗಪ್ಪಾ ಪ್ರಿಯರ ಸಂಖ್ಯೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿದೆ. ಮಟಮಟ ಮಧ್ಯಾಹ್ನ ಗೊಲ್ಗಪ್ಪ ತಿನ್ನೋರಿದ್ದಾರೆ. ರಾತ್ರಿ ನಿದ್ರೆಯಲ್ಲಿ ಎಬ್ಬಿಸಿ ಗೊಲ್ಗಪ್ಪಾ ನೀಡಿದ್ರೂ ಜನರು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಗೊಲ್ಗಪ್ಪ ಮಜವೇ ಅಂತಹದ್ದು. ರಸ್ತೆ (Road) ಬದಿಯಲ್ಲಿ ಗೊಲ್ಗಪ್ಪ (Golgappa) ಸ್ಟಾಲ್ ಗಳನ್ನು ನಾವು ನೋಡ್ತೇವೆ. ಕಚೇರಿಯಿಂದ ಮನೆಗೆ ಬರುವಾಗ ಒಂದು ಪ್ಲೇಟ್ ತಿಂದು ಬಂದ್ರೆ ಅದೇನೋ ಮಜ. ಈಗಿನ ದಿನಗಳಲ್ಲಿ ಆನ್ಲೈನ್ ಮೂಲಕ ಮನೆಗೆ ತರಿಸಿಕೊಂಡು ಅದನ್ನು ತಿನ್ನುವ ಜನರಿದ್ದಾರೆ.
ಭಾರತ (India) ದಲ್ಲಿ ಅತಿ ಆರಾಮದಾಯ ಸಂಚಾರವೆಂದ್ರೆ ಅದು ರೈಲು ಸಂಚಾರ. ಅಗ್ಗದ ಪ್ರಯಾಣವೂ ಇದೇ ಆಗಿರುವ ಕಾರಣ, ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಕಷ್ಟಿದೆ. ಮುಂಬೈ ಸೇರಿದಂತೆ ಮಹಾನಗರಗಳ ಲೋಕಲ್ ಟ್ರೈನ್ ಸದಾ ತುಂಬಿ ತುಳುಕುತ್ತಿರುತ್ತದೆ. ಈ ಟ್ರೈನ್ ಗಳು ಅನೇಕರ ಜೀವನಕ್ಕೆ ದಾರಿ ಮಾಡಿಕೊಟ್ಟಿವೆ. ಟ್ರೈನ್ ನಲ್ಲಿ ಟೀ, ಕಾಫಿ ಸೇರಿದಂತೆ ವೆರೈಟಿ ತಿಂಡಿಗಳನ್ನು ಜನರು ಮಾರಾಟ ಮಾಡ್ತಾರೆ. ಇದ್ರ ಮೂಲಕವೇ ತಮ್ಮ ಜೀವನ ಸಾಗಿಸ್ತಾರೆ. ನೀವು ಮೈಸೂರು – ಬೆಂಗಳೂರು ಟ್ರೈನ್ ಹತ್ತಿದ್ರೆ ಇಡ್ಲಿ, ವಡಾ, ಬಿಸಿ ಬಿಸಿ ಮದ್ದೂರ್ ವಡಾ ವಾಸನೆ ಗಮ್ ಅನ್ನುತ್ತೆ. ಹಸಿವಿಲ್ಲವೆಂದ್ರೂ ತಾನಾಗೇ ಹಸಿವಾಗುತ್ತೆ. ಇಂಥ ರುಚಿ ಆಹಾರದ ಜೊತೆ ಗೊಲ್ಗಪ್ಪ ಸೇರಿದ್ರೆ ಹೇಗಿರಬೇಡ ಹೇಳಿ?
ನನ್ನ ಕೊನೆ ದಿನವೆಂದು ಖುಷಿಯಾಗಿರುವೆ; ಬ್ರೈನ್ ಪಾಪ್ ತಿಂದು ಸಾಯುವ ಭಯದಲ್ಲಿದ್ದ ನಿವೇದಿತಾ ಗೌಡ!
ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಟ್ರೈನ್ ನಲ್ಲಿ ಗೊಲ್ಗಪ್ಪಾ ಮಾರಾಟ ಮಾಡ್ತಿದ್ದಾನೆ. ರೈಲು ವೇಗವಾಗಿ ಓಡ್ತಿದ್ದು, ಆತ ಆರಾಮವಾಗಿ ನಿಂತು ಗೊಲ್ಗಪ್ಪಾ ಮಾರಾಟ ಮಾಡುತ್ತಿದ್ದಾನೆ. ಪ್ರಯಾಣಿಕರು ಬಂದು ಬಂದು ಗೊಲ್ಗಪ್ಪಾ ಸವಿ ಸವಿಯುತ್ತಿದ್ದಾರೆ.
ಜೂನ್ 21ರಂದು ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 14 ಸೆಕೆಂಡಿನ ಈ ವಿಡಿಯೋದಲ್ಲಿ ವ್ಯಕ್ತಿ ಗೊಲ್ಗಪ್ಪಾ ರೆಡಿ ಮಾಡ್ತಿರೋದನ್ನು ನೀವು ನೋಡ್ಬಹುದು. ಟ್ವಿಟರ್ ನಲ್ಲಿ ಈ ವಿಡಿಯೋ ಹಾಕಿದ ವ್ಯಕ್ತಿ, ನೀವು ನಿಮ್ಮ ವ್ಯಾಪಾರವನ್ನು ಸರಿಯಾದ ಮಾರ್ಗದಲ್ಲಿ ಇರಿಸಿದ್ರೆ ಎಂದು ಶೀರ್ಷಿಕೆ ಹಾಕಿದ್ದಾರೆ. ಸಾಗರ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವ್ಯಾಪಾರ ಮಾಡಲು ಬುದ್ಧಿವಂತಿಕೆ ಬೇಕು ಎಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸುತ್ತದೆ. ಬಾಲಿವುಡ್ ಸ್ಟಾರ್ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಜಡ್ಡಾದಲ್ಲಿ, ಅಮೀರ್ ಖಾನ್ ಟ್ರೈನ್ ನಲ್ಲಿ ಗೊಲ್ಗಪ್ಪಾ ತಿನ್ನುತ್ತಾರೆ. ಈ ಸಿನಿಮಾ ನೋಡಿ ಈತನಿಗೆ ಐಡಿಯಾ ಬಂದಿರುವ ಸಾಧ್ಯತೆಯಿದೆ.
Healthy Food : ಅಮೃತ ಸಮಾನ ಈ ಕಾಳಿನ ನೀರು, ಅಪ್ಪಿತಪ್ಪಿಯೂ ಚೆಲ್ಲಬೇಡಿ
ಟ್ವಿಟರ್ ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ ಈವರೆಗೆ 400ಕೆಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಜನರು ತರತರಹದ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಬಹುತೇಕ ಬಳಕೆದಾರರು ಜುಗಾಡ್ ಅಂತಾ ಕರೆದಿದ್ದಾರೆ. ಮತ್ತೆ ಕೆಲವರು ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಜಡ್ಡಾ ಸಿನಿಮಾವನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಇದನ್ನು ಇನೋವೇಟಿವ್ ಎಂದು ಕರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, ಟ್ರೈನ್ ನಲ್ಲಿ ಇದಕ್ಕೆ ಒಪ್ಪಿಗೆ ಇಲ್ಲ. ಆದ್ರೆ ಬೆಂಗಾಲಿಯಲ್ಲಿ ಎಲ್ಲವೂ ಸಾಧ್ಯವೆಂದು ಬರೆದಿದ್ದಾರೆ. ಮುಂದಿನ ಕೋಟ್ಯಾಧಿಪತಿ ಎಂದು ಇನ್ನೊಬ್ಬರು ಬರೆದ್ರೆ ಇಂಡಿಯಾದಲ್ಲಿ ಎಲ್ಲವೂ ಆಗ್ಬಹುದು ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ಆದ್ರೆ ಈ ವಿಡಿಯೋ ಯಾವ ರೈಲಿನದ್ದು ಎಂಬುದು ಸ್ಪಷ್ಟವಾಗಿಲ್ಲ.
When you put your business mind on the right track pic.twitter.com/Wg3sQmEgpQ
— Sagar (@sagarcasm)