Viral Post : ಹುಟ್ಟುಹಬ್ಬದಂದು ಗ್ರಾಹಕರಿಗೆ ಚಾಕೋಲೇಟ್ ಗಿಫ್ಟ್ ನೀಡಿದ ಜೊಮಾಟೊ ಹುಡುಗನಿಗೆ ಸಿಕ್ಕಿದ್ದೇನು?

Published : Jul 01, 2023, 02:43 PM IST
Viral Post : ಹುಟ್ಟುಹಬ್ಬದಂದು ಗ್ರಾಹಕರಿಗೆ ಚಾಕೋಲೇಟ್ ಗಿಫ್ಟ್ ನೀಡಿದ ಜೊಮಾಟೊ ಹುಡುಗನಿಗೆ ಸಿಕ್ಕಿದ್ದೇನು?

ಸಾರಾಂಶ

ಹುಟ್ಟುಹಬ್ಬದ ದಿನ ಗಿಫ್ಟ್ ಸಿಗೋದು ಮಾಮೂಲು. ಅದೇ ನಾವು ಗಿಫ್ಟ್ ನೀಡೋದು ಅಪರೂಪ. ಆದ್ರೆ ಜೊಮಾಟೊ ಡಿಲೆವರಿ ಬಾಯ್ ಒಬ್ಬ ಎಲ್ಲರು ಮೆಚ್ಚುವ ಕೆಲಸ ಮಾಡಿದ್ದಾನೆ. ಏನು ಗೊತ್ತಾ?  

ಜೊಮಾಟೋ ಡೆಲಿವರ್ ಬಾಯ್ಸ್ ಈಗಿನ ದಿನಗಳಲ್ಲಿ ನಾನಾ ವಿಷ್ಯಕ್ಕೆ ಸುದ್ದಿಯಲ್ಲಿರ್ತಾರೆ. ಈಗ ಮತ್ತೊಬ್ಬ ಡೆಲಿವರಿ ಬಾಯ್ ತನ್ನ ಅನನ್ಯ ಕೆಲಸದಿಂದ ಸುದ್ದಿ ಮಾಡಿದ್ದಾನೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಆತ ಎರಡು ಕೆಲವನ್ನು ಮಾಡಿದ್ದಾನೆ. ಗ್ರಾಹಕರಿಗೆ ಉಡುಗೊರೆ ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾನೆ.

ಜೊಮಾಟೊ (Zomato) ಡಿಲಿವರಿ ಬಾಯ್ ತನ್ನ ಹುಟ್ಟುಹಬ್ಬ (Birthday) ದ ದಿನ ಹೊಸ ಬಟ್ಟೆ ಖರೀದಿಸಿದ್ದಲ್ಲದೆ ಗ್ರಾಹಕರಿಗೆ ಚಾಕೋಲೇಟ್ (Chocolate) ಗಿಫ್ಟ್ (Gift) ನೀಡಿದ್ದಾನೆ.  ಡಿಲೆವರಿ ಬಾಯ್ ಹೆಸರು ಕಿರಣ್ ಆಪ್ಟೆ. ಆತನಿಗೆ 30 ವರ್ಷ ವಯಸ್ಸು.  ಫೇಸ್ಬುಕ್ ನಲ್ಲಿ ಆಪ್ಟೆ, ತನ್ನ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಂಡೆ ಎಂಬುದನ್ನು ಹೇಳಿದ್ದಾನೆ. ಎರಡು ಫೋಟೋಗಳನ್ನು ಆಪ್ಟೆ, ಫೇಸ್ಬುಕ್ ಗೆ ಪೋಸ್ಟ್ ಮಾಡಿದ್ದಾನೆ. ಇಂದು ನನ್ನ ಜನ್ಮದಿನ. ನಾನು ಹೊಸ ಟೀ ಶರ್ಟ್ ಖರೀದಿ ಮಾಡಿದೆ. ಹಾಗೆಯೇ ಜೊಮಾಟೊದಲ್ಲಿ ವಿತರಿಸಲಾದ ಪ್ರತಿ ಆರ್ಡರ್ ಜೊತೆ ಒಂದು ಚಾಕೋಲೇಟ್ ವಿತರಿಸಿದ್ದೇನೆ ಎಂದು ಬರೆದಿದ್ದಾನೆ. ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಜನರು ಉಡುಗೊರೆ ಪಡೆಯುತ್ತಾರೆ. ಆದ್ರೆ ಈತ ಹುಟ್ಟುಹಬ್ಬದ ದಿನ ಅಪರಿಚಿತರಿಗೆ ಉಡುಗೊರೆ ನೀಡಿದ್ದಾನೆ. ಜನರು ಈತನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ನೋಡ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯ ವೈರಲ್ ಆಗಿದೆ.

ಆಪ್ಟೆ ಪೋಸ್ಟನ್ನು ಜನರು ಜೊಮಾಟೊಗೆ ಟ್ಯಾಗ್ ಮಾಡಿದ್ದಾರೆ. ಆಪ್ಟೆ ಹುಟ್ಟುಹಬ್ಬವನ್ನು ಕಚೇರಿಯಲ್ಲಿ ಆಚರಿಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಅಲ್ಲದೆ ಜೊಮಾಟೊ, ಆಪ್ಟೆಗೆ ಉಡುಗೊರೆ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಪ್ರಾಮಾಣಿಕವಾಗಿ ನೀವು ನಿಮ್ಮ ಕೆಲಸವನ್ನು ಮಾಡಿದ್ದೀರಿ ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಜೊಮಾಟೊ ನೀಡಿದೆ ಸರ್ಪ್ರೈಸ್ ಗಿಫ್ಟ್ : ಒಂದ್ಕಡೆ ಫೇಸ್ಬುಕ್ ನಲ್ಲಿ ಆಪ್ಟೆಗೆ ಗಿಫ್ಟ್ ನೀಡುವಂತೆ ಬಳಕೆದಾರರು ಕಮೆಂಟ್ ಹಾಗ್ತಿದ್ದರೆ ಜೊಮಾಟೊ ತನ್ನ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್ ನೀಡಿದೆ. ಕೇಕನ್ನು ಜೊಮಾಟೊ, ಆಪ್ಟೆ ಮನೆಗೆ ಕಳುಹಿಸಿದ. ನಂತ್ರ ಕರೆ ಮಾಡಿ, ಬರ್ತ್ ಡೇ ಗಿಫ್ಟ್ ಎಂದಿದೆ. ಇದು ನನಗೆ ತುಂಬಾ ಖುಷಿ ನೀಡಿದೆ ಎಂದು ಕಿರಣ್ ಆಫ್ಟೆ ಮತ್ತೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾನೆ. ಅದ್ರಲ್ಲಿ ಜೊಮಾಟೊ ಕಳುಹಿಸಿದ ಕೇಕ್ ಫೋಟೋ ಕೂಡ ಇದೆ.

ಚಾಕೋಲೇಟ್ ಹಂಚುವ ಐಡಿಯಾ ಸಿಕ್ಕಿದ್ದೆಲ್ಲಿಂದ? : ಖುಷಿಯನ್ನು ಹಂಚಲು ನಿಮ್ಮ ಬಳಿ ಹೆಚ್ಚಿಗೆ ಹಣವಿರಬೇಕಾಗಿಲ್ಲ. ಇರೋದ್ರಲ್ಲಿಯೇ ನೀವು ಖುಷಿಯನ್ನು ಹಂಚಬಹುದು. ಇದಕ್ಕೆ ಕರಣ್ ಉದಾಹರಣೆ. ಕರಣ್ ಗೆ ಹುಟ್ಟುಹಬ್ಬದ ದಿನ ಚಾಕೋಲೇಟ್ ಹಂಚುವ ಐಡಿಯಾ ಸ್ಕೂಲಿನಿಂದ ಬಂದಂತೆ. ಶಾಲೆಯಲ್ಲಿ ಮಕ್ಕಳು ತಮ್ಮ ಹುಟ್ಟುಹಬ್ಬದ ದಿನ ಚಾಕೋಲೇಟ್ ಹಂಚುತ್ತಾರೆ. ಅದೇ ರೀತಿ ನಾನು ಕೂಡ ಚಾಕೋಲೇಟ್ ಹಂಚಿದೆ ಎನ್ನುತ್ತಾನೆ ಕರಣ್. ಕೆಲ ಗ್ರಾಹಕರು ಇದೇನು ಅಂತಾ ಕೇಳಿದ್ದರಂತೆ. ಅದಕ್ಕೆ ಕರಣ್, ಇಂದು ನನ್ನ ಹುಟ್ಟುಹಬ್ಬ ಎಂದಿದ್ದನಂತೆ. ಗ್ರಾಹಕರು ಆತನಿಗೆ ವಿಶ್ ಮಾಡಿದ್ದರಂತೆ.

ರಾತ್ರಿ ಡಿಲೆವರಿ ಬಾಯ್ ಕೆಲಸ, ಬೆಳಿಗ್ಗೆ ಟ್ರೆಡಿಂಗ್ : ಕರಣ್ ಆಪ್ಟೆ, ಜೊಮಾಟೊದಿಂದ ಏನನ್ನೂ ಕೇಳಿರಲಿಲ್ಲವಂತೆ. ನನ್ನ ಪೋಸ್ಟನ್ನು ಜೊಮಾಟೊಗೆ ಟ್ಯಾಗ್ ಮಾಡಲಾಗಿತ್ತು. ನಂತ್ರ ಜೊಮಾಟೊ ಟೀಂ ನನ್ನನ್ನು ಲಂಚ್ ಗೆ ಆಹ್ವಾನಿಸಿತ್ತು. ಕಳೆದ ನಾಲ್ಕು ವರ್ಷದಿಂದ ನಾನು ಈ ಕೆಲಸ ಮಾಡ್ತಿದ್ದೇನೆ. ಹಗಲು ಟ್ರೇಡಿಂಗ್ ಕೆಲಸ ಮಾಡಿದ್ರೆ ರಾತ್ರಿ ಡಿಲೆವರಿ ಬಾಯ್ ಕೆಲಸ ಮಾಡ್ತೇನೆ ಎನ್ನುತ್ತಾನೆ ಕರಣ್. ಅನೇಕ ದಿನಗಳಿಂದ ಬೇಸರದಲ್ಲಿದ್ದ ಕರಣ್ ಗೆ ಈ ಪೋಸ್ಟ್ ಹಾಗೂ ಜನರ ಪ್ರತಿಕ್ರಿಯೆ ಖುಷಿ ತಂದಿದೆಯಂತೆ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?