ಫ್ರೈಡ್ ರೈಸ್ ಮಾಡ್ತಿರುವ ಪುಟ್ಟ ಬಾಲಕ: ವಿಡಿಯೋ ವೈರಲ್

Published : Mar 29, 2022, 09:50 AM IST
ಫ್ರೈಡ್ ರೈಸ್ ಮಾಡ್ತಿರುವ ಪುಟ್ಟ ಬಾಲಕ: ವಿಡಿಯೋ ವೈರಲ್

ಸಾರಾಂಶ

ಪುಟ್ಟ ಬಾಲಕನ ವಿಡಿಯೋ ವೈರಲ್‌ ಫ್ರೈಡ್ ರೈಸ್ ಮಾಡ್ತಿರೋ ಪುಟಾಣಿ ಬಾಲಕನ ಕೈಚಳಕಕ್ಕೆ ನೆಟ್ಟಿಗರು ಫಿದಾ

ಪುಟ್ಟ ಬಾಲಕನೋರ್ವ ಫ್ರೈಡ್ ರೈಸ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಟರ್ನೆಟ್ ಒಂದು ಮನರಂಜನೆಯ ಸ್ಥಳವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಎಷ್ಟರಮಟ್ಟಿಗೆ ಎಂದರೆ ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುತ್ತಾ ಎಲ್ಲಾ ರೀತಿಯ ವೀಡಿಯೊಗಳು ಮತ್ತು ವಿಷಯವನ್ನು ಗಂಟೆಗಳವರೆಗೆ ವೀಕ್ಷಿಸುತ್ತಲೇ ಇರುತ್ತೇವೆ. ಇದು ಯಾವುದಾದರೂ ತಮಾಷೆಯಾಗಿರಬಹುದು, ಯಾರೊಬ್ಬರ ವಿಶೇಷ ಕ್ಷಣಗಳು ಅಥವಾ ಜನರು ಮಾಡುವ ಸಾಹಸಗಳು ಆಗಿರಬಹುದು. ಹೀಗೆ ಈಗ ಅಂಬೆಗಾಲಿಡುವ ಪುಟ್ಟ ಬಾಲಕನೊರ್ವನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಇನ್ಸ್ಟಾಗ್ರಾಮ್‌ (Instagram) ಬಳಕೆದಾರ @sonikabhasin ಎಂಬುವವರು ಅಪ್‌ಲೋಡ್ ಮಾಡಿದ ಈ ವೀಡಿಯೊದಲ್ಲಿ, ಅಡುಗೆ ಮನೆಯ ಸ್ಟೌಗೆ ನಿಂತರು ಕೈಗೆಟುಕದಷ್ಟು ಪುಟ್ಟ ಬಾಲಕನೋರ್ವ ಸ್ಟೂಲ್‌ ಮೇಲೆ ನಿಂತು ರುಚಿಕರವಾದ ಫ್ರೈಡ್ ರೈಸ್ ಅನ್ನು ಮಾಡುತ್ತಿರುವುದನ್ನು ನೋಡಬಹುದು. ವೀಡಿಯೊದ ಆರಂಭದಲ್ಲಿ, ಮಗು ಸ್ಟೂಲ್ ಮೇಲೆ  ಸ್ಟೌ ಮೇಲೆ ಏನೋ ಅಡುಗೆ ಮಾಡುವಂತೆ ಕಾಣುತ್ತಾನೆ ನಂತರ, ಅವನ ತಾಯಿ ಅವನನ್ನು ಏನು ಅಡುಗೆ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ, ಅದಕ್ಕೆ ಅವನು "ಫ್ರೈಡ್ ರೈಸ್" ಎಂದು ಮುದ್ದಾಗಿ ಹೇಳುತ್ತಾನೆ. ನಂತರ ಅವರು ಫ್ರೈಡ್‌ರೈಸ್‌ಗೆ ಏನೆಲ್ಲಾ ಹಾಕುತ್ತಿದ್ದಿಯಾ ಎಂದು ಕೇಳುತ್ತಾರೆ. ಅದಕ್ಕೆ ಆತ ತರಕಾರಿಗಳನ್ನು ಉಲ್ಲೇಖಿಸಿ 'ಈರುಳ್ಳಿ, ಬೆಳ್ಳುಳ್ಳಿ, ಬೀನ್ಸ್ ಮತ್ತು ಕ್ಯಾಪ್ಸಿಕಂ ಎಂದು ಹೇಳುತ್ತಾನೆ. 

 

ನಂತರ ಸ್ವಲ್ಪ ಸಹಾಯದಿಂದ, ಅವರು ಬಾಣಲೆಗೆ ಅನ್ನವನ್ನು ಸೇರಿಸಿ ಮತ್ತು ಅದನ್ನು ಬೆರೆಸುತ್ತಾರೆ. ಈ ವೇಳೆ ಆತನ ತಾಯಿ(Mother) ಈಗ ನಾವು ಏನನ್ನು ಬರೆಸಿದೆವು ಎಂದು ಕೇಳುತ್ತಾರೆ. ಆಗ ಮಗು ಫ್ರೈಡ್‌ರೈಸ್‌ (Friedrice) ಎಂದು ಹೇಳುತ್ತಾನೆ. ನಂತರ ಒಮ್ಮೆ ಫ್ರೈಡ್‌ ರೈಸ್‌ ಬೆಂದ ನಂತರ ನಾನು ಸ್ವಲ್ಪ ಮೊಟ್ಟೆಗಳನ್ನು ಹಾಕುತ್ತೇನೆ ಎಂದು ಬಾಲಕ ಹೇಳುತ್ತಾನೆ. ನಂತರ ಫ್ರೈಡ್‌ರೈಸ್ ರೆಡಿಯಾಗುತ್ತದೆ. ಈ ಫ್ರೈಡ್ ರೈಸ್ ಅನ್ನು ಬಾಲಕನ ತಾಯಿ ಆತನಿಗೆ ಫ್ಲೇಟ್‌ನಲ್ಲಿ ಹಾಕಿ ಕೊಡುತ್ತಾರೆ. ನಂತರ ಯಾರು ಮಾಡಿದ್ದು, ಫ್ರೈಡ್‌ ರೈಸ್ ಎಂದು ಕೇಳುತ್ತಾರೆ. ಈ ವೇಳೆ ನಾನು ಎಂದು ಬಾಲಕ ಹೇಳುತ್ತಾನೆ. ಹೇಗಿದೆ ಎಂದು ಅಮ್ಮ ಆತನಲ್ಲಿ ಕೇಳಿದಾಗ ಬಾಲಕ ಯಮ್ಮಿ ಎನ್ನುತ್ತಾನೆ. 

ಟಿವಿಲಿ ಡೈನೋಸಾರ್‌ ನೋಡಿ ಶಾಕ್‌ ಆದ ಪುಟಾಣಿ: ವಿಡಿಯೋ

ಈ ವೀಡಿಯೊವನ್ನು ಪೋಸ್ಟ್ ಮಾಡಿದಾಗಿನಿಂದ, ಇದನ್ನು 2 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅತ್ಯಂತ ಪ್ರತಿಭಾವಂತ ಬಾಲಕ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವಾವ್‌ ಈತ ಸ್ವಾಭಿಮಾನಿ ನಿಮಗೆ ಅಭಿನಂದನೆಗಳು. ಈ ವಿಡಿಯೋ ತುಂಬಾ ಮುದ್ದಾಗಿದೆ ಬಾಲಕನೂ ಮುದ್ದಾಗಿದ್ದಾನೆ ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿದ್ದಾರೆ.

13 ಗಂಟೆಯಲ್ಲಿ ಲಂಕಾದಿಂದ ತಮಿಳುನಾಡಿನವರೆಗೆ ಈಜಿದ ಆಟಿಸಂನಿಂದ ಬಳಲುವ ಬಾಲಕಿ
ಬಾಲಕನ(Boy) ತಾಯಿ ಹಳೇ ಸಂಪ್ರದಾಯಗಳನ್ನು ಮುರಿಯುತ್ತಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕನ ತಾಯಿ ಹಳೆ ಸಂಪ್ರದಾಯಗಳನ್ನು ಮುರಿಯುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಸ್ಟೀರಿಯೊಟೈಪ್‌ಗಳನ್ನು ಮುರಿಯುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಅವರಿಗೆ ಮೊದಲು ಹ್ಯಾಟ್ಸ್ ಆಫ್, ಅಡುಗೆ ಮನೆ ಸ್ತ್ರೀಗೆ ಮೀಸಲು ಎಂಬುದನ್ನು ಮರೆತು ಹೆಚ್ಚಿನ ಗಂಡುಮಕ್ಕಳ ಪೋಷಕರು ಇದನ್ನು ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?