24K ಚಿನ್ನದ ಕಾಫಿಯನ್ನು ನೋಡಿದ್ದೀರಾ ? ಇದ್ರ ಬೆಲೆ ಭರ್ತಿ 3190 ರೂ. !

By Suvarna News  |  First Published Mar 29, 2022, 9:48 AM IST

ಸಾಮಾನ್ಯವಾಗಿ ನೀವು ಎಷ್ಟು ರೂಪಾಯಿ ಕೊಟ್ಟು 1 ಕಪ್ ಕಾಫಿ (Coffee) ಕುಡಿದಿದ್ದೀರಿ. 30,  50 ಕೊಟ್ಟಿರಬಹುದು ಅಷ್ಟೇ ಅಲ್ವಾ. ಕಾಫಿ ಡೇ (Coffee Day)ಯಲ್ಲಾದ್ರೆ ನೂರರಿಂದ ಇನ್ನೂರರ ವರೆಗೆ ಇರುತ್ತೆ. ಆದ್ರೆ ಇಲ್ಲಿರೋ ಸ್ಪೆಷಲ್ ಕಾಫಿ ಬೆಲೆ ಇನ್ನೂರು ಮುನ್ನೂರು ಅಲ್ಲ. ಬಿಡಿ ಐನೂರು ಕೂಡಾ ಅಲ್ಲ. ಭರ್ತಿ 3190 ರೂ. ಯಪ್ಪಾ ಏನಪ್ಪಾ ಇದು ಚಿನ್ನದ ಕಾಫೀನಾ ಹೇಗೆ ಅಂತ ಹುಬ್ಬೇರಿಸ್ಬೇಡಿ. ವಿಷ್ಯ ಏನೂಂತ ತಿಳ್ಕೊಳ್ಳಿ.


ಕಾಫಿ ಜಗತ್ತಿನ ಎಲ್ಲೆಡೆ ಜನಪ್ರಿಯವಾಗಿರುವ ಪಾನೀಯ. ಹಲವರ ಫೇವರಿಟ್‌. ಖುಷಿಯಾದಾಗ, ಬೇಸರವಾದಾಗ, ಟೆನ್ಶನ್ ಆದಾಗ ಬೆಸ್ಟ್ ಪಾರ್ಟನರ್‌.  ಕಾಫಿ ಸೇವನೆಗೆ ಇಂಥದ್ದೇ ಸಮಯ, ಮೂಡ್ ಅನ್ನುವಂಥದ್ದೇನೂ ಇಲ್ಲ. ಯಾವಾಗ ಬೇಕಿದ್ದರೂ ಕುಡಿಯುತ್ತಾರೆ. ಕಾಫಿಯನ್ನು ವಿಶ್ವದ ಎಲ್ಲೆಡೆ ಸೇವಿಸಲಾಗುತ್ತದೆ. ಕಾಫಿ (Coffee) ಡಿಕಾಕ್ಷನ್ ಗೆ ಒಂದಿಷ್ಟು ಹಾಲು, ಸಕ್ಕರೆ ಬೆರೆಸಿಕೊಂಡು ಕುಡಿಯುವುದು (Drinking) ಸಾಮಾನ್ಯ ಪದ್ಧತಿ. ಇನ್ನು, ಕಾಫಿ ಡೇಗಳಿಗೆ ಹೋಗುವವರು ಕೆಪುಚಿನೋ (cappuccino) , ಬ್ಲಾಕ್ ಕಾಫಿ, ಕೋಲ್ಡ್ ಕಾಫಿ ಅದೂ ಇದೂ ಎಂದು ವಿಭಿನ್ನ ರೀತಿಯ ಕಾಫಿಗಳನ್ನು ಟೇಸ್ಟ್ ಮಾಡುತ್ತಾರೆ. ಅದಲ್ಲದೆಯೂ ಕೋಲ್ಟ್ ಕಾಫಿ, ಐಸ್ ಕ್ರೀಂ ಬೇರೆಯೇ ಇದೆ. ಆದರೆ ಇಲ್ಲೊಂದು ಸ್ಪೆಷಲ್‌ ಕಾಫಿಯಿದೆ. ಇದು ಅಂತಿಂಥಾ ಕಾಫಿಯಲ್ಲ, 24K ಗೋಲ್ಡ್‌ ಚಿನ್ನದ ಕಾಫಿ (24K Gold Coffee).

ಬಾಲಿವುಡ್ ಮತ್ತು ಬಿಗ್ ಬಾಸ್ (Big Boss) ಖ್ಯಾತಿಯ ನಟಿ ಸನಾ ಖಾನ್ ಅವರು ವಿಶ್ವದ ಅತ್ಯಂತ ಸೊಗಸಾದ 24 ಕ್ಯಾರೆಟ್ ಚಿನ್ನದ ಕಾಫಿಯನ್ನು ಸವಿಯುವ ಫೋಟೋವನ್ನು ಹಂಚಿಕೊಂಡಿದ್ದಾರೆ. ದುಬಾರಿ ಕಾಫಿಯನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

 
 
 
 
 
 
 
 
 
 
 
 
 
 
 

Latest Videos

undefined

A post shared by Saiyad Sana Khan (@sanakhaan21)

24 ಕ್ಯಾರೆಟ್ ಚಿನ್ನದ ಕಾಫಿ ಎಲ್ಲಿ ಲಭ್ಯವಿದೆ ?
ಹಿಂದಿ ಬಿಗ್‌ ಬಾಸ್‌ 3ನೇ ಸೀಸನ್‌ ಸ್ಪರ್ಧಿ ಸನಾ ಖಾನ್ (Sana Khan) ಸಂತೋಷಕರ ಮತ್ತು ಪ್ರಸಿದ್ಧವಾದ ಕಾಪಿ ಲುವಾಕ್ ಗೋಲ್ಡ್ ಕ್ಯಾಪುಸಿನೊವನ್ನು ಆನಂದಿಸಿದರು. ಇದು ನಿಜವಾದ 24 ಕ್ಯಾರೆಟ್ ಚಿನ್ನದ ಪದರಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ಈ ಆಕರ್ಷಕ ಕಾಫಿ ದುಬೈನ ಅಟ್ಮಾಸ್ಫಿಯರ್ ಲೌಂಜ್‌ನಲ್ಲಿ ಲಭ್ಯವಿದೆ. 

ಇವರು ಕಾಫಿ ಜತೆ ಮಿಕ್ಸ್ ಮಾಡೋದು ಹಾಲಲ್ಲ, ಆಲ್ಕೋಹಾಲ್!

ಈ ಗೋಲ್ಡ್ ಕಾಫಿಯ ವಿಶೇಷತೆ ಏನು?
ಚಿನ್ನದ ಕಾಫಿಯ ಪರಿಕಲ್ಪನೆಯು ದುಬೈಗೆ ಅಸಾಮಾನ್ಯವಾದುದಲ್ಲ, ಆದರೆ ಈ ಕಾಫಿಯ ವಿಶೇಷತೆಯೆಂದರೆ ನಿಜವಾದ ಚಿನ್ನದ ಪದರಗಳ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲ ಈ ಕಾಫಿಯ ಬೆಲೆ ಅಷ್ಟಿಷ್ಟಲ್ಲ. ಈ ಕ್ಲಾಸಿಕ್ ಕಾಫಿಯ ಬೆಲೆ 160 ದಿರ್ಹಮ್ ಅಂದರೆ ಅಂದಾಜು ರೂ. 3190. ಈ ಕಾಫಿಯನ್ನು ಆನಂದಿಸುತ್ತಿರುವ ಸನಾ ಖಾನ್ ತನ್ನ ಮನಮೋಹಕ ಚಿತ್ರವನ್ನು ಸಾಮಾಜಿಕ ಜಾಲತಾಣ (Social Media)ದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮತ್ತು ಅನುಯಾಯಿಗಳು ಕಾಫಿಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.

ಹಿಂದಿಯ ಮಾಜಿ ನಟಿ ಹಾಗೂ ಬಿಗ್‌ ಬಾಸ್‌ 3ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದಾಗ ಸನಾ ಖಾನ್‌ ಇಸ್ಲಾಂ ಪಂಡಿತ  ಅನಾಸ್‌ರನ್ನು ಮದುವೆಯಾಗಿದ್ದಾರೆ. ಪತಿ ಜೊತೆಗೆ ದುಬೈ (Dubai)ನಲ್ಲಿ ಸಮಯ ಕಳೆಯುವ ಫೋಟೋವನ್ನು ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಈ ಹಿಂದೆಯೂ ಸನಾ ಖಾನ್‌ ಪ್ರಪಂಚದ ಅತ್ಯಂತ ಎತ್ತರದ ಕಟ್ಟದ ಬುರ್ಜ್ ಖಲೀಫಾದಲ್ಲಿ ಕುಳಿತು ಕಾಫಿ ಹೀರುತ್ತಿರುವ ಫೋಟೋವನ್ನು  ಹಂಚಿಕೊಂಡಿದ್ದರು.

Healthy Breakfast: ಬೆಳಗ್ಗೆ ಎದ್ದಾಕ್ಷಣ ಈ ಆಹಾರ ತಿನ್ನೋದು ಒಳ್ಳೇದಲ್ಲ ನೋಡಿ

ಸನಾ ಖಾನ್ ಚಿನ್ನದ ಲೇಪವಿರುವ ಕಪ್‌ನಲ್ಲಿ ಕಾಫಿ ಕುಡಿಯುತ್ತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು. ಸುಂದರವಾದ ಜಾಗದಲ್ಲಿ ಬೆಳಗ್ಗಿನ ತಿಂಡಿ ತಿನ್ನಲು ಸನಾ ಗಂಡ ಅನಾಸ್ ಯೋಜನೆ ಮಾಡಿದ್ದರಂತೆ, ಇದು ಸನಾ ಖಾನ್‌ಗೆ ಸರ್ಪ್ರೈಸ್‌ ಉಡುಗೊರೆ ಎಂದು ಹೇಳಿಕೊಂಡಿದ್ದರು. ಬುರ್ಜ್ ಖಲೀಫಾದ ವೈಭೋಗಯುತ ಕೊಠಡಿಯಲ್ಲಿ ಕುಳಿತು ಸನಾ ಹಾಗೂ ಅನಾಸ್ ಕಾಫಿ ಕುಡಿದಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಸನಾ ಖಾನ್ ಅವರು 'ಬುರ್ಜ್ ಖಲೀಫಾದಲ್ಲಿ ಬೆಳಗಿನ ಜಾವದ ತಿಂಡಿ ತಿನ್ನಲು ಗಂಡ ಸರ್ಪ್ರೈಸ್ ನೀಡಿದಾಗ, ಚಿನ್ನದ ಲೇಪವಿರುವ ಕಾಫಿ ಕಪ್ ನಲ್ಲಿ ಕಾಫಿ ಕುಡಿಯುತ್ತಿದ್ದೇನೆ'  ಎಂದು ಬರೆದುಕೊಂಡಿದ್ದರು.

ಕೆಲವೇ ಕೆಲವು ಮಂದಿಯ ಸಾಕ್ಷಿಯಾಗಿ ಸನಾ ಖಾನ್ ಮದುವೆಯಾಗಿದ್ದರು. ಧರ್ಮದ ಕಾರಣಕ್ಕಾಗಿ ಸನಾ ಖಾನ್ ಅವರು ನಟನೆಗೆ ಗುಡ್‌ಬೈ ಹೇಳಿದ್ದರು. ಕನ್ನಡದಲ್ಲಿ 'ಗೋಲ್ಡನ್‌ ಸ್ಟಾರ್‌' ಗಣೇಶ್‌ ಅಭಿನಯದ 'ಕೂಲ್‌' ಸಿನಿಮಾದಲ್ಲಿ ಸನಾ ಖಾನ್‌ ನಟಿಸಿದ್ದರು. 

click me!