ರಾಗಿಮಣ್ಣಿ ರೆಸಿಪಿ; ವಿಡಿಯೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ 'ಕೆಂಡಸಂಪಿಗೆ' ನಟಿ, ಹಿಗ್ಗಾಮುಗ್ಗಾ ಟ್ರೋಲ್!

By Vinutha Perla  |  First Published Sep 28, 2023, 3:47 PM IST

ಕನ್ನಡ ಸೀರಿಯಲ್‌ ನಟಿ ಅಮೃತಾ ರಾಮಮೂರ್ತಿ, ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಹಾರ, ಫ್ಯಾಷನ್‌, ಆರೋಗ್ಯ ಹೀಗೆ ಹಲವು ವಿಚಾರದ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಳ್ತಿರ್ತಾರೆ. ಸದ್ಯ ಅವ್ರು ಹೆಲ್ದೀ ರಾಗಿ ಮಣ್ಣಿ ಮಾಡೋ ವಿಡಿಯೋ ಹಂಚಿಕೊಂಡಿದ್ದು, ಇದಕ್ಕೆ ಪಾಸಿಟಿವ್ ರೆಸ್ಪಾನ್ಸ್ ಬರೋ ಬದ್ಲು, ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. 


ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ.  'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸ್ತಿದ್ದ  ಅಮೃತಾ ರಾಮಮೂರ್ತಿ ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ. ಇದೀಗ ಅವರಿಬ್ಬರೂ ಧ್ರುತಿ ಎನ್ನುವ ಪುಟಾಣಿಯ ಪಾಲಕರೂ ಆಗಿದ್ದಾರೆ.  ಇವರು ಧಾರಾವಾಹಿಗಳ ಜೊತೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ಅಪ್​ಡೇಟ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. 

ಅದರಲ್ಲೂ ನಟಿ ಅಮೃತಾ ರಾಮಮೂರ್ತಿ ದಿನನಿತ್ಯದ ಜೀವನದಲ್ಲಿ ಉಪಯೋಗಕ್ಕೆ ಬರುವ ಹಲವಾರು ಟ್ರಿಕ್ಸ್‌, ಟಿಪ್ಸ್‌ಗಳನ್ನು ನೀಡುತ್ತಲೇ ಇರುತ್ತಾರೆ. ಆಹಾರ (Food), ಫ್ಯಾಷನ್‌, ಆರೋಗ್ಯ ಹೀಗೆ ಹಲವು ವಿಚಾರದ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ಅಪ್ಪಟ ರೇಷ್ಮೆ ಸೀರೆ ಗುರುತಿಸೋದು, ಕಾಪಾಡೋದು ಹೇಗೆಂದು ನಟಿ (Actress) ಅಮೃತಾ ರಾಮಮೂರ್ತಿ ತಿಳಿಸಿಕೊಟ್ಟಿದ್ದರು. ಈಗ ಪುಟ್ಟ ಮಕ್ಕಳಿಗೆ ತಿನ್ನಿಸೋ ರಾಗಿ ಮಣ್ಣಿ ಮಾಡೋದು ಹೇಗೆಂದು ತಮ್ಮ ತಾಯಿಯ (Mother) ಜೊತೆಗೆ ಬಂದು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

Latest Videos

undefined

ಅಪ್ಪಟ ರೇಷ್ಮೆ ಸೀರೆ ಗುರುತಿಸೋದು, ಕಾಪಾಡೋದು ಹೇಗೆಂದು ತಿಳಿಸಿದ ನಟಿ ಅಮೃತಾ ರಾಮಮೂರ್ತಿ

ಹೆಲ್ದೀ ರಾಗಿಮಣ್ಣಿ ಮಾಡುವುದು ಹೇಗೆಂದು ಹೇಳಿಕೊಟ್ಟ ನಟಿ
ಬಾಣಂತಿಯರಿಗೆ, ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊಡೋ ಇದನ್ನು ರಾಗಿಮಣ್ಣಿ, ಸರಿಪುಡಿ ಎಂದು ಸಹ ಕರೆಯುತ್ತಾರೆ. ಆದರೆ ಇದರಲ್ಲಿ ಸರಿ ಪುಡಿಗಿಂತ ನ್ಯೂಟಿಷಿಯನ್ಸ್‌ ಜಾಸ್ತಿ ಇರುತ್ತೆ ಎಂದು ಅಮೃತಾ ರಾಮಮೂರ್ತಿ ಹೇಳಿದ್ದಾರೆ. ಈ ಒಂದು ರೆಸಿಪಿಗೆ 34ರಿಂದ 38 ಪದಾರ್ಥಗಳನ್ನು ಹಾಕಲಾಗುತ್ತದೆ. ಇದು ವಿವಿಧ ಧಾನ್ಯಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಧಾನ್ಯಗಳನ್ನು (Grains) ಮೀಡಿಯಂ ಫ್ಲೇಮ್‌ನಲ್ಲಿ ಪರಿಮಳ ಬರುವ ವರೆಗೆ ಹುರೀಬೇಕು ಎಂದು ಮಾಹಿತಿ ನೀಡಿದ್ದಾರೆ.

ಕಡಲೇಕಾಳು, ಹೆಸರು ಕಾಳು, ರಾಗಿ (Milet), ಗಸಗಸೆ, ಜೋಳ, ಸೂರ್ಯಕಾಂತಿ ಬೀಜ, ಬಾದಾಮಿ, ಗೋಡಂಬಿ, ಕರಿಮೆಣಸು, ಕಮಲದ ಬೀಜಗಳು ಮೊದಲಾದವುಗಳನ್ನು ಹುರಿದುಕೊಳ್ಳಬೇಕು. ಎಲ್ಲವನ್ನೂ ಹುರಿದುಕೊಳ್ಳೋಕೆ ಒಂದು ಗಂಟೆಗಿಂತ ಜಾಸ್ತಿ ಸಮಯ ಬೇಕಾಗುತ್ತೆ ಎಂದು ವೀಡಿಯೋದಲ್ಲಿ ಅಮೃತಾ ತಿಳಿಸುತ್ತಾರೆ. ಎಲ್ಲಾ ಹುರಿದ ಧಾನ್ಯಗಳನ್ನು ಮಿಲ್‌ಗೆ ಸಾಗಿಸಿ ಪುಡಿ ಮಾಡಿ ತರುತ್ತೇವೆ. ಮುಂದಿನ ವೀಡಿಯೋದಲ್ಲಿ ಈ ಪುಡಿಯಿಂದ ಮಣ್ಣಿ ಮಾಡೋದು ಹೇಗೆಂದು ಹೇಳಿ ಕೊಡೋದಾಗಿ ಅಮೃತಾ ರಾಮಮೂರ್ತಿ ತಿಳಿಸುತ್ತಾರೆ.

ಕಿರುತೆರೆಯ ಅಮೃತಾ- ರಾಘವೇಂದ್ರ ಪುತ್ರಿಯ ಮೊದಲ ಹೇರ್​ ಕಟ್​: ಹೇಗಿತ್ತು ರಿಯಾಕ್ಷನ್​?

ಅಮೃತಾ ರಾಮಮೂರ್ತಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರೋ ಈ ವೀಡಿಯೋ ತುಂಬಾ ಯೂಸ್‌ಫುಲ್‌ ಆಗಿದ್ರೂ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಎಲ್ಲಾ ಕಾಳನ್ನು ಹಾಕಿ ಹುರಿಯುತ್ತಾ ಹೋಗುತ್ತಿದ್ದಾರೆ. ಬದಲಿಗೆ ಯಾವ್ಯಾವ ಕಾಳು ಬಳಸುತ್ತಿದ್ದೀರಿ, ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೀರಿ ತಿಳಿಸಿ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಸಾಮಗ್ರಿಗಳ ಲಿಸ್ಟ್‌ ಶೇರ್‌ ಮಾಡಿ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು ಕಾಮೆಂಟಿಸಿ, 'ಬಳಸಿದ ಪದಾರ್ಥಗಳು ಮತ್ತು ಬಳಸಿದ ಪ್ರಮಾಣವನ್ನು ತಿಳಿಸಿ' ಎಂದು ಹೇಳಿದ್ದಾರೆ.

click me!