ಬೆಲ್ಲದ ಟೀ ಮಾಡುವಾಗ ಹಾಲು ಒಡೆಯತ್ತಾ? ವಿಡಿಯೋ ಮೂಲಕ ಸಿಂಪಲ್​ ಟ್ರಿಕ್ಸ್​ ಹೇಳಿದ ನಟಿ ಅದಿತಿ ಪ್ರಭುದೇವ

Published : Mar 01, 2025, 06:15 PM ISTUpdated : Mar 01, 2025, 06:55 PM IST
ಬೆಲ್ಲದ ಟೀ ಮಾಡುವಾಗ ಹಾಲು ಒಡೆಯತ್ತಾ? ವಿಡಿಯೋ ಮೂಲಕ ಸಿಂಪಲ್​ ಟ್ರಿಕ್ಸ್​ ಹೇಳಿದ ನಟಿ ಅದಿತಿ ಪ್ರಭುದೇವ

ಸಾರಾಂಶ

ನಟಿ ಅದಿತಿ ಪ್ರಭುದೇವ್ ಬೆಲ್ಲದ ಟೀ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ. ನೀರನ್ನು ಕುದಿಸಿ, ಶುಂಠಿ, ಹಾಲು ಸೇರಿಸಿ, ಕುದಿಯುವಾಗ ಬೆಲ್ಲ ಹಾಕಿ ಕಲಕಬೇಕು. ನಂತರ ಟೀ ಪುಡಿ ಸೇರಿಸಿ ಸೋಸಿದರೆ ಟೀ ಸಿದ್ಧ. ಹಾಲು ಒಡೆಯದಂತೆ ಮಾಡಲು ಕುದಿಯುವಾಗ ಕಲಕುತ್ತಿರಬೇಕು. ಶ್ರೀಗಂಧ ಎಂಬುವವರು ಏಲಕ್ಕಿ, ಶುಂಠಿ, ಟೀ ಪುಡಿ ಕುದಿಸಿ, ಹಾಲು ಸೇರಿಸಿ, ಇಳಿಸುವಾಗ ಬೆಲ್ಲ ಹಾಕುವ ವಿಧಾನ ತಿಳಿಸಿದ್ದಾರೆ. ಕೆಲವರು ಆಸಿಡಿಟಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ತಿಳಿಯುತ್ತಲೇ ಬೆಲ್ಲದ ಕಾಫಿ, ಟೀ ಯತ್ತ ಜನರ ಒಲವು ಹೆಚ್ಚಾಗಿದೆ. ಆದರೆ ಮನೆಯಲ್ಲಿ ಬೆಲ್ಲದ ಟೀ ಮಾಡುವಾಗ ಹಾಲು ಹಾಕಿದ ತಕ್ಷಣ ಅದು ಒಡೆದು ಹೋಗುತ್ತದೆ.  ಆದ್ದರಿಂದ ಹಾಲು ಒಡೆಯದೇ ಟೀ ಮಾಡುವುದು ಹೇಗೆ ಎನ್ನುವುದನ್ನು  ಹೇಳಿಕೊಟ್ಟಿದ್ದಾರೆ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಸ್ಯಾಂಡಲ್​ವುಡ್​ ಬೆಡಗಿ ಅದಿತಿ ಪ್ರಭುದೇವ ಈಗ ಹತ್ತು  ತಿಂಗಳ  ಮಗಳ ಅಮ್ಮ ಆಗಿದ್ದಾರೆ. ಕಳೆದ ಏಪ್ರಿಲ್​ 4ರಂದು ಇವರಿಗೆ ಮಗಳು ಹುಟ್ಟಿದ್ದು ಅದರ ನೇಸರ ಎಂದು ಹೆಸರು ಇಟ್ಟಿದ್ದಾರೆ. ಅದಿತಿ ಅವರು,   ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಮಗು ಎರಡೂವರೆ ತಿಂಗಳು ಇರುವಾಗಲೇ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದಾರೆ, ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ನಟಿ ಆ್ಯಕ್ಟೀವ್​ ಆಗಿದ್ದಾರೆ.

ಇದಾಗಲೇ ಬ್ಯೂಟಿ, ಆರೋಗ್ಯ, ಅಡುಗೆ ಸೇರಿದಂತೆ ಹಲವಾರು ರೀತಿಯ ಟಿಪ್ಸ್​ಗಳನ್ನು ನಟಿ ನೀಡುತ್ತಲೇ ಬಂದಿದ್ದಾರೆ. ಇದೀಗ ಅವರು ಬೆಲ್ಲದ ಟೀ ಮಾಡುವ ವಿಧಾನ ಹೇಳಿಕೊಟ್ಟಿರುವ ವಿಡಿಯೋ ವೈರಲ್​ ಆಗುತ್ತಿದೆ. ನಟಿ ಹೇಳಿದ್ದೇನೆಂದರೆ,  ಮೊದಲು ಸ್ಟವ್​ ಆನ್​ ಮಾಡಿ ನೀರು ಹಾಕಿಕೊಳ್ಳಬೇಕು. ನೀರು ಚೆನ್ನಾಗಿ ಕುದಿಯಲು ಬಿಡಬೇಕು. ಜಜ್ಜಿರುವ ಶುಂಠಿ ಸ್ವಲ್ಪ ಜಾಸ್ತಿನೇ ಹಾಕಬೇಕು. ನಂತರ ಹಾಲನ್ನು ಹಾಕಿಕೊಳ್ಳಬೇಕು. ಅದಕ್ಕೆ ಎಷ್ಟು ಬೇಕು ಅಷ್ಟು ಬೆಲ್ಲ ಹಾಕಬೇಕು. ಹಾಲಿಗೆ ಬೆಲ್ಲ ಹಾಕಿದ ಬಳಿಕ ಒಡೆಯುವ ಚಾನ್ಸಸ್​ ಇರುತ್ತೆ. ಇದೇ  ಕಾರಣಕ್ಕೆ ಕಲಕುತ್ತಲೇ ಇರಬೇಕು. ಚೆನ್ನಾಗಿ ಕಲುಕಿದ ಮೇಲೆ  ಟೀ ಪೌಡರ್​ ಹಾಕಬೇಕು. ನಂತರ ಸೋಸಿದರೆ ಮುಗಿಯಿತು. ಇದಕ್ಕೆ ಬ್ರೆಡ್​ ಸಕತ್​ ಕಾಂಬೀನೇಷನ್​ ಎಂದು ನಟಿ ಹೇಳಿದ್ದಾರೆ.

ಅಮ್ಮ ಆದ್ಮೇಲೆ ದಪ್ಪ ಆಗ್ತಾರೆನ್ನೋ ಸೆನ್ಸೂ ಇಲ್ವೇನ್ರೀ.. ತೆಳ್ಳಗಾದ್ರೂ ಕೇಳ್ತೀರಾ... ನಟಿ ಅದಿತಿ ಪ್ರಭುದೇವ ವಿಡಿಯೋ ವೈರಲ್


ಇವರ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ. ಕೆಲವರು ತಾವು ಬೆಲ್ಲ ಹಾಕಿ ಟೀ ಮಾಡುವುದು ಹೇಗೆ ಎಂದೂ ಬರೆದಿದ್ದಾರೆ.  ಶ್ರೀಗಂಧ ಎನ್ನುವ ಫೇಸ್​ಬುಕ್​ ಖಾತೆಯಿಂದ ಹಾಲು ಒಡೆಯದೇ ಬೆಲ್ಲದ ಟೀ ಮಾಡುವ ಬಗೆಯನ್ನು ಹೇಳಲಾಗಿದೆ. ಅವರ ಪ್ರಕಾರ, ಏಲಕ್ಕಿ, ಶುಂಠಿ, ಟೀಪುಡಿ,  ನೀರು ಹಾಕಬೇಕು. ಚೆನ್ನಾಗಿ ಕುದ್ದ ಬಳಿಕ ಅದಕ್ಕೆ ಒಂದು ಲೋಟ ಹಾಲು ಹಾಕಿ ಮತ್ತೆ ಕುದಿಸಬೇಕು. ಇಳಿಸುವ ಮುನ್ನ ಬೆಲ್ಲ ಹಾಕಿ ಸೋಸಿದರೆ  ಟೀ ಒಡೆಯದು ಎಂದಿದ್ದಾರೆ. ಬೆಲ್ಲದ ಪಾಕ ಮಾಡಿ ಕೊಂಡು ಬಾಟಲಿಗೆ ಹಾಕಿ ಇಟ್ಟುಕೊಳ್ಳಬೇಕು. ಎಷ್ಟು ಬೇಕೋ ಸಿಹಿ ನೋಡೀ ಕೊಂಡು ಸೇರಿಸಿದರೆ ಯಾವುದೇ ಕಾರಣಕ್ಕೂ ಚಹ ಒಡೆಯುವುದಿಲ್ಲ ಎಂದೂ ಟಿಪ್ಸ್​ ಕೊಟ್ಟಿದ್ದಾರೆ.
 
ಹಲವರು ತಾವು ನಟಿ ಹೇಳಿದ ರೀತಿಯಲ್ಲಿ ಬೆಲ್ಲದ ಟೀ ಟ್ರೈ ಮಾಡುತ್ತೇವೆ ಎಂದಿದ್ದರೆ, ಕೆಲವರು ಬೆಲ್ಲದ ಟೀ ಆ್ಯಸಿಡಿಟಿ, ಅದಕ್ಕೆ ತುಂಬಾ ಕುಡಿಯುವುದು ಒಳ್ಳೆಯದಲ್ಲ ಎಂದಿದ್ದಾರೆ.  ಕೆಲ ದಿನಗಳ ಹಿಂದೆ ಅದಿತಿ, ಬೆಳಗಿನ ಜಾವ ಸವಿಯಬಹುದಾದ ಹೆಲ್ದಿ ಪಾನೀಯದ ಬಗ್ಗೆ ಹೇಳಿದ್ದರು.  ಈ ಪಾನೀಯವನ್ನು ಸಕ್ಕರೆ, ಬೆಲ್ಲ ಬಳಸದೇ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದರು. ಕುದಿಯುವ ನೀರಿಗೆ ಸ್ವಲ್ಪ ಚಹದ ಪುಡಿ ಹಾಕಿ. ಸಕ್ಕರೆ ಬದಲು ಸ್ಟಿವಿಯಾ ಲೀವ್ಸ್​ (stevia leaves) ಹಾಕಿದ್ದಾರೆ. ಇದು ಎಲ್ಲಾ ಅಂಗಡಿಗಳಲ್ಲಿಯೂ ಲಭ್ಯ ಎಂದಿದ್ದಾರೆ ನಟಿ. ಸ್ಟಿವಿಯಾ ಎಲೆಗಳು ಸಕ್ಕರೆಗಿಂತಲೂ ರುಚಿ ಇರುತ್ತದೆ ಎಂದಿದ್ದಾರೆ.  ಈ ಪಾನೀಯಕ್ಕೆ ಸ್ವಲ್ಪ  ಪುದಿನಾ ಎಲೆ ಹಾಕಿದರೆ ಇನ್ನೂ ಟೇಸ್ಟ್​ ಬರುತ್ತದೆ ಎಂದಿದ್ದಾರೆ. ಇದಾದ ಬಳಿಕ ಎಲ್ಲವನ್ನೂ ಒಮ್ಮೆ ಚೆನ್ನಾಗಿ ಕುದಿಸಿ ಸೋಸಿದರೆ ಮಾರ್ನಿಂಗ್​ ಡ್ರಿಂಕ್ಸ್​ ರೆಡಿ ಎಂದಿದ್ದಾರೆ.  

ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್​ ಪ್ಯಾಕ್​, ಬಾಡಿ ಮಸಾಜ್​! ನಟಿ ತಿಳಿಸಿರೋ ಟಿಪ್ಸ್​ ಕೇಳಿ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ