ಪ್ರಧಾನಿ ಅಮೆರಿಕಾ ಭೇಟಿಗೂ ಮುನ್ನ 'ಮೋದಿ ಜೀ ಥಾಲಿ' ಶುರು ಮಾಡಿದ ನ್ಯೂಜೆರ್ಸಿ ರೆಸ್ಟೋರೆಂಟ್

By Anusha Kb  |  First Published Jun 12, 2023, 11:46 AM IST

ಪ್ರಧಾನಿ ನರೇಂದ್ರ ಮೋದಿ ಈ ತೀಮಗಳ ಕೊನೆಗೆ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಕ್ಕೂ ಮೊದಲು  ನ್ಯೂಜೆರ್ಸಿ ಮೂಲದ ರೆಸ್ಟೋರೆಂಟ್ ಒಂದು ಮೋದಿ ಹೆಸರಲ್ಲಿ  ಆಹಾರವನ್ನು ಸಿದ್ಧಪಡಿಸಿದೆ.


ನ್ಯೂಜೆರ್ಸಿ: ಪ್ರಧಾನಿ ನರೇಂದ್ರ ಮೋದಿ ಈ ತೀಮಗಳ ಕೊನೆಗೆ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಕ್ಕೂ ಮೊದಲು  ನ್ಯೂಜೆರ್ಸಿ ಮೂಲದ ರೆಸ್ಟೋರೆಂಟ್ ಒಂದು ಮೋದಿ ಹೆಸರಲ್ಲಿ  ಆಹಾರವನ್ನು ಸಿದ್ಧಪಡಿಸಿದೆ. ಇದಕ್ಕೆ 'ಮೋದಿ ಜೀ ಥಾಲಿ' ಎಂದು ಹೆಸರಿಟ್ಟಿದೆ. ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಅಮೆರಿಕಾ ಎಲ್ಲ ಸಿದ್ಧತೆಯನ್ನು ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಗೆ ಕೆಂಪು ರತ್ನಗಂಬಳಿಯ ಸ್ವಾಗತಕ್ಕೆ ಅಮೆರಿಕಾದ ಸಿದ್ಧವಾಗಿದೆ.  ಇತ್ತ ಅಮೆರಿಕಾ ಅಧಿಕೃತವಾಗಿ ಈ ಎಲ್ಲಾ ಸಿದ್ಧತೆ ನಡೆಸಿದ್ದರೆ ಅತ್ತ ಅಮೆರಿಕಾದ ನ್ಯೂಜೆರ್ಸಿಯ ಹೊಟೇಲೊಂದು ಮೋದಿಗೆ 'ಥಾಲಿ' ಮೂಲಕ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ. 

ನೀವು ಹೊಟೇಲ್‌ ಮೆನುಗಳಲ್ಲಿ ದಕ್ಷಿಣ ಭಾರತದ (South Indian Thali) ಥಾಲಿ ಉತ್ತರ ಭಾರತದ ಥಾಲಿ ಎಂಬುದನ್ನು ನೋಡಿರಬಹುದು. ಅದರ ರುಚಿಯನ್ನು ಸವಿದಿರಬಹುದು. ಆದರೆ ಇದೇ ರೀತಿ ಈಗ ಅಮೆರಿಕಾದ ಹೊಟೇಲ್ ಮೋದಿ ಗೌರವಾರ್ಥವಾಗಿ ಪ್ರಧಾನಿ ಮೋದಿ ಅವರ ಹೆಸರಲ್ಲಿ 'ಮೋದಿ ಜೀ ಥಾಲಿ' ಎಂದು ಊಟ ಸಿದ್ಧಪಡಿಸಿದ್ದು, ಈ ಆಹಾರವನ್ನು ಹೊಟೇಲ್‌ನ ಬಾಣಸಿಗ ಶ್ರೀಪಾದ್ ಕುಲಕರ್ಣಿ (SriPad Kulkarni) ಎಂಬುವವರು ಸಿದ್ಧಪಡಿಸಿದ್ದಾರೆ. ಖಿಚಡಿ, ರಸಗುಲ್ಲಾ, ಸಾರ್ಸನ್ ಕಾ ಸಾಗ್, ಕಾಶ್ಮೀರಿ ದಮ್ ಆಲೂ, ಇಡ್ಲಿ, ಧೋಕ್ಲಾ, ಚಾಂಚ್ ಮತ್ತು ಪಾಪಡ್‌ನಂತಹ ಸಾಂಪ್ರದಾಯಿಕ ಭಾರತೀಯ ಭಕ್ಷ್ಯಗಳನ್ನು ಒಳಗೊಂಡಿದೆ.

Tap to resize

Latest Videos

ಮೋದಿ ಜನ್ಮದಿನಕ್ಕೆ 56 ಖಾದ್ಯದ ವಿಶೇಷ ಥಾಲಿ, ತಿಂದು ಮುಗಿಸುವವರಿಗೆ 8.5 ಲಕ್ಷ ರೂ.

ಬಾಣಸಿಗ ಕುಲಕರ್ಣಿ ಅವರ ಪ್ರಕಾರ, ಅಲ್ಲಿ ವಾಸಿಸುವ ಅನಿವಾಸಿ ಭಾರತೀಯರ ಬೇಡಿಕೆಯಂತೆ ಈ ಥಾಲಿಯನ್ನು ಸಿದ್ಧಪಡಿಸಲಾಗಿದೆಯಂತೆ. ಇದರ ಜೊತೆಗೆ ಇದಕ್ಕೆ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಭಕ್ಷ್ಯಗಳನ್ನು ಸೇರಿಸುವ ಮೂಲಕ ಭಾರತ ಸರ್ಕಾರದ ಶಿಫಾರಸಿನಂತೆ ವಿಶ್ವಸಂಸ್ಥೆಯಿಂದ 2023 ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯದ ವರ್ಷವೆಂದು ಘೋಷಿಸಿದ್ದರ ಗೌರವಾರ್ಥವಾಗಿಯೂ ಈ ಥಾಲಿ ಸಿದ್ಧಪಡಿಸಲಾಗಿದೆ ಎಂದು ಕುಲಕರ್ಣಿ ಹೇಳಿದ್ದಾರೆ. ಇದರ ಜೊತೆಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಗೌರವಾರ್ಥ ಮತ್ತೊಂದು ವಿಶೇಷ ಥಾಲಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ರೆಸ್ಟೋರೆಂಟ್ ಮಾಲೀಕರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ. 

ನಾವು ಈ ಥಾಲಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಯೋಜನೆ ರೂಪಿಸಿದ್ದೇವೆ. ಇದು ಜನಪ್ರಿಯತೆ ಗಳಿಸಲಿದೆ ಎಂಬ ಬಗ್ಗೆ ನಾನು ತುಂಬಾ ಸಕಾರಾತ್ಮಕವಾಗಿದ್ದೇನೆ. ಇದು ಯಶಸ್ವಿಯಾದ ನಂತರ ನಾನು ಡಾ. ಜೈಶಂಕರ್ (Jai Shankar) ಅವರ ಹೆಸರಲ್ಲಿ ಥಾಲಿಯನ್ನು ಪ್ರಾರಂಭಿಸಲು ಮುಂದಾಗಿದ್ದೇನೆ. ಏಕೆಂದರೆ ಅವರು ಸಹ ಭಾರತೀಯ ಅಮೆರಿಕನ್ ಸಮುದಾಯದಲ್ಲಿ ರಾಕ್‌ಸ್ಟಾರ್ ಆಕರ್ಷಣೆಯನ್ನು ಹೊಂದಿದ್ದಾರೆ ಎಂದು ಹೊಟೇಲ್ ಮಾಲೀಕರು ಹೇಳಿದ್ದಾರೆ.  ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹಾರ ತಯಾರಿಸಿ ಗೌರವ ಅರ್ಪಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ಅವರ ಜನ್ಮದಿನಕ್ಕೂ ಮೊದಲು, ದೆಹಲಿ ಮೂಲದ ರೆಸ್ಟೋರೆಂಟ್ ಒಂದು '56 ಇಂಚಿನ ಮೋದಿ ಜಿ ಥಾಲಿ' ಎಂಬ ಥಾಲಿಯನ್ನು ಸಿದ್ಧಪಡಿಸಿ ಬಡಿಸಿತ್ತು.

ವಾವ್‌ ಏನ್‌ ಟೇಸ್ಟ್‌..ಥೈಲ್ಯಾಂಡ್ ಬ್ಲಾಗರ್ ಸೌತ್ ಇಂಡಿಯನ್ ಫುಡ್‌ಗೆ ಫಿದಾ

ಈ ತಿಂಗಳು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ (Jill Biden) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಅಮೆರಿಕಾಗೆ ತೆರಳಲಿದ್ದಾರೆ. ಜೂನ್ 21 ರಿಂದ ಪ್ರಾರಂಭವಾಗುವ ಅವರ ನಾಲ್ಕು ದಿನಗಳ ಭೇಟಿಯಲ್ಲಿ, ಅಮೆರಿಕಾ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಜೂನ್ 22 ರಂದು ಪ್ರಧಾನಿ ಮೋದಿಯವರಿಗೆ ವಿಶೇಷ ಆತಿಥ್ಯ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರ ಯುಎಸ್ ಭೇಟಿಗೆ ವಾರ ಮೊದಲು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ (Jake Sullivan) ಜೂನ್ 13 ರಂದು ನಾಳೆ ಎರಡು ದಿನಗಳ ಭೇಟಿಗಾಗಿ ದೆಹಲಿಗೆ ಆಗಮಿಸಲಿದ್ದು, ಪ್ರಧಾನಿ ಭೇಟಿ ವೇಳೆ ನಡೆಸುವ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

| A New Jersey-based restaurant launches 'Modi Ji' Thali for PM Narendra Modi's upcoming State Visit to the US. Restaurant owner Shripad Kulkarni gives details on the Thali. pic.twitter.com/XpOEtx9EDg

— ANI (@ANI)

 

click me!