ಬಹುತೇಕರಿಗೆ ತೂಕ ಇಳಿಕೆ ಅನಿವಾರ್ಯವಾದ್ರೆ ಕೆಲವೇ ಕೆಲವು ಮಂದಿಗೆ ತೂಕ ಏರಿಕೆ ಅಗತ್ಯವಿದೆ. ಎಷ್ಟೇ ಮಾಡಿದ್ರೂ ತೂಕ ಹೆಚ್ಚಾಗಲ್ಲ ಎನ್ನುವವರು ಅಡುಗೆ ಮನೆಯಲ್ಲಿರುವ ವಸ್ತು ಸೇವನೆ ಮಾಡಿ ದಪ್ಪವಾಗ್ಬಹುದು.
ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆ ಹೊಂದಿರುವವರಿಗೆ ತೂಕ ಇಳಿಸಿಕೊಳ್ಳುವುದು ದೊಡ್ಡ ಸಮಸ್ಯೆಯೋ ಹಾಗೆಯೇ ವಿಪರೀತವಾಗಿ ತೆಳ್ಳಗಿರುವ ಮಹಿಳೆಯರೂ ಕೂಡ ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ. ತೂಕ ಹೆಚ್ಚಿಸಿಕೊಳ್ಳಲು ಅವರು ಎಷ್ಟೇ ಹರಸಾಹಸಪಟ್ಟರೂ ದಪ್ಪಗಾಗುವುದೇ ಇಲ್ಲ.
ಅನೇಕ ಯುವತಿಯರು ಇಂದು ತೆಳ್ಳನೆಯ ಮೈಕಟ್ಟಿನ ಕಾರಣ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಕೆಲವರ ಶರೀರ (Body) ಯಾವುದೇ ರೀತಿಯ ಆಹಾರ (Food), ಔಷಧಗಳಿಂದಲೂ ದಪ್ಪಗಾಗುವುದಿಲ್ಲ. ವೈದ್ಯರು ಹೇಳುವ ಪ್ರಕಾರ, ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಡಯಟ್ (Diet) ನಲ್ಲಿ ತುಪ್ಪ ಮತ್ತು ಬೆಲ್ಲವನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ತುಪ್ಪ ನಿಮ್ಮ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಆದರೆ ಇದನ್ನು ಸರಿಯಾದ ವಿಧಾನದಲ್ಲಿ ಸೇವನೆ ಮಾಡಬೇಕು. ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವ ಹೆಣ್ಣುಮಕ್ಕಳಿಗಾಗಿ ಕೆಲವು ಮನೆಮದ್ದು ಇಲ್ಲಿದೆ.
ನೀವ್ ಪಕ್ಕಾ ದೇಸಿ ಆಹಾರ ಅಂದ್ಕೊಂಡಿರೋ ಈ ಫುಡ್ ಎಲ್ಲಾ ಇಂಡಿಯನ್ ಅಲ್ಲ
ತೂಕ ಹೆಚ್ಚಿಸುವ ಮನೆಮದ್ದು :
ಬೇಕಾಗುವ ಸಾಮಗ್ರಿ
• ಕೆಮಿಕಲ್ ನಿಂದ ಮುಕ್ತವಾದ ಬೆಲ್ಲ 1 ಚಮಚ (4-5 ಗ್ರಾಂ)
• ಹಸುವಿನ ತುಪ್ಪ 1 ಚಮಚ
ಈ ಮನೆ ಮದ್ದನ್ನು ಸೇವಿಸುವ ವಿಧಾನ
• ಬೆಲ್ಲ ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಸೇರಿಸಿ ತಿನ್ನಬೇಕು.
• ಊಟ ಮಾಡುವ ಸಮಯದಲ್ಲಿ ಅಥವಾ ಊಟವಾದ ನಂತರ ಈ ಮಿಶ್ರಣವನ್ನು ಸೇವಿಸುವುದು ಉತ್ತಮ.
• 2 ವಾರಗಳ ನಂತರ ನೀವು ಮಿಶ್ರಣದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.
• ಈ ಮನೆ ಮದ್ದು ನಿಮ್ಮ ತೂಕವನ್ನು ಹೆಚ್ಚಿಸುವುದರ ಜೊತೆಗೆ ನಿಮಗೆ ತಕ್ಷಣವೇ ಶಕ್ತಿಯನ್ನು ಕೊಡುತ್ತೆ.
Healthy Food : ಶರೀರ ಕೂಲ್ ಆಗಿರಬೇಕಂದ್ರೆ ಈ ಜ್ಯೂಸ್ ಕುಡಿರಿ
ತುಪ್ಪದ ಪ್ರಯೋಜನಗಳು : ತುಪ್ಪವನ್ನು ಸಿಹಿ ಖಾದ್ಯ ಹಾಗೂ ಕೆಲವು ಅಡಿಗೆಗಳಲ್ಲಿ ಬಳಸುವ ರೂಢಿ ನಮ್ಮಲ್ಲಿದೆ. ಎಲ್ಲರ ಮನೆಯಲ್ಲೂ ಸರ್ವೇಸಾಮಾನ್ಯವಾಗಿರುವ ತುಪ್ಪ, ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸುತ್ತದೆ. ತುಪ್ಪ ಸಿಹಿಯಾಗಿಯೂ ಇರುತ್ತದೆ. ತುಪ್ಪದಲ್ಲಿ ದೇಹವನ್ನು ತಂಪುಮಾಡುವ ಅಂಶವಿರುತ್ತದೆ. ಇದು ವಾತ, ಪಿತ್ತಗಳನ್ನು ಕೂಡ ಕಡಿಮೆಗೊಳಿಸುತ್ತದೆ. ಊಟದ ಜೊತೆಗೂ ಕೆಲವರು ತುಪ್ಪವನ್ನು ಸೇವಿಸುತ್ತಾರೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ತುಪ್ಪ ಅಂಗಾಂಶಗಳಿಗೂ ಪೋಷಣೆಯನ್ನು ಒದಗಿಸುತ್ತದೆ. ನಿರಂತರವಾಗಿ ತುಪ್ಪವನ್ನು ಸೇವಿಸುವುದರಿಂದ ಸ್ನಾಯುಗಳು ಬಲಿಷ್ಠವಾಗುತ್ತವೆ. ತುಪ್ಪದ ಸೇವನೆಯಿಂದ ಕೂದಲು, ಚರ್ಮ, ಫಲವತ್ತತೆ, ರೋಗ ನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಅನೇಕ ಮಂದಿ ಪುಟ್ಟ ಮಕ್ಕಳ ತಲೆಗೆ ಹಾಗೂ ತ್ವಚೆಗಳಿಗೆ ತುಪ್ಪವನ್ನು ಸವರುತ್ತಾರೆ. ಗಾಯಕ್ಕೆ ತುಪ್ಪವನ್ನು ಹಚ್ಚುವವರಿದ್ದಾರೆ. ತುಪ್ಪ ಗಾಯವನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ.
ಯಾವ ರೀತಿಯ ತುಪ್ಪವನ್ನು ಬಳಸಬೇಕು? : ಚಯಾಪಚಯ ಕ್ರಿಯೆ ಚೆನ್ನಾಗಿರುವ ಮಹಿಳೆಯರು ತೂಕವನ್ನು ಹೆಚ್ಚಿಸಿಕೊಳ್ಳಲು ಎಮ್ಮೆಯ ತುಪ್ಪವನ್ನು ಸೇವಿಸಬಹುದು. ಚಯಾಪಚಯ ಕ್ರಿಯೆಯ ಸಮಸ್ಯೆ ಎದುರಿಸುತ್ತಿರುವವರು ಎ2 ದೇಸಿ ಹಸುವಿನ ತುಪ್ಪವನ್ನು ಸೇವಿಸಬಹುದು. ಎ2 ಎಂಬುದು ದೇಸಿ ಹಸುವಿನ ಹಾಲಿನಲ್ಲಿರುವ ಒಂದು ಪ್ರೋಟೀನ್ ಆಗಿದ್ದು, ಇದರಲ್ಲಿ ಎಮಿನೋ ಎಸಿಡ್ ಹೆಚ್ಚಿರುತ್ತದೆ. ತಾಯಿಯ ಎದೆ ಹಾಲಿನಲ್ಲಿ ಕೂಡ ಈ ಅಂಶವನ್ನು ಕಾಣಬಹುದಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಬೆಲ್ಲದ ಪ್ರಯೋಜನಗಳು : ಬೆಲ್ಲವು ಆರೋಗ್ಯಕರ ಸಿಹಿಯಾಗಿದ್ದು, ಬಿಳಿ ಸಕ್ಕರೆಗಿಂತ ಬಹಳ ಒಳ್ಳೆಯದಾಗಿದೆ. ತಿನ್ನಲು ಸಿಹಿ ಎನಿಸುವ ಬೆಲ್ಲ ವಾತ ಮತ್ತು ಪಿತ್ತಗಳನ್ನು ಸಮತೋಲನದಲ್ಲಿಡುತ್ತದೆ. ಬೆಲ್ಲ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಿಹಿ ತಿನ್ನಬೇಕೆನ್ನುವ ಹಂಬಲವನ್ನು ಇದು ದೂರಮಾಡುತ್ತದೆ. ಬೆಲ್ಲವನ್ನು ಶುಂಠಿ ಮತ್ತು ಕಾಳುಮೆಣಸಿನ ಜೊತೆ ಸೇವಿಸಿದರೆ ಶೀತ ಗುಣಮುಖವಾಗುತ್ತದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ಕೊಡುತ್ತದೆ. ಬೆಲ್ಲವನ್ನು ಒಂದು ವರ್ಷದ ತನಕವೂ ಶೇಖರಿಸಿಟ್ಟು ಸೇವಿಸಬಹುದಾಗಿದೆ.