ಒಂದು ಪೀಸ್ ಬಟರ್ ಚಿಕನ್ ತಿಂದ ಬೆನ್ನಲ್ಲೇ 27ರ ಯುವಕ ಸಾವು, ಪೊಲೀಸರ ತನಿಖೆ!

By Suvarna News  |  First Published Mar 8, 2024, 8:47 PM IST

ಒಂದೇ ಒಂದು ಪೀಸ್ ಬಟರ್ ಚಿಕನ್ ತಿಂದಿದ್ದಾನೆ. ಅಷ್ಟರಲ್ಲೇ ರಿಯಾಕ್ಷನ್ ಶುರುವಾಗಿದೆ. ಆರೋಗ್ಯ ಏರುಪೇರಾಗಿದೆ. 27ರ ಹರೆಯದ ಯುವಕ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಯುವಕನ ಕುಟುಂಬಸ್ಥರು ಮಹತ್ವದ ಸೂಚನೆ ನೀಡಿದ್ದಾರೆ.
 


ಮ್ಯಾಂಚೆಸ್ಟರ್(ಮಾ.08) ಹೊಟೆಲ್‌ನಿಂದ ತನ್ನಿಷ್ಟದ ಬಟರ್ ಚಿಕನ್ ಪಾರ್ಸೆಲ್ ತಂದ ಯುವಕ ತಿಂದಿದ್ದು ಒಂದೇ ಒಂದು ಪೀಸ್ ಮಾತ್ರ. ಅಷ್ಟರಲ್ಲೇ ಯುವಕನ ಆರೋಗ್ಯ ಏರುಪೇರಾಗಿದೆ. ಕುಸಿದು ಬಿದ್ದ 27ರ ಹರೆಯದ ಯುವಕ ಮೃತಪಟ್ಟಿದ್ದಾರೆ. ಅಲರ್ಜಿ ಆರೋಗ್ಯ ಸಮಸ್ಯೆ ಹೊಂದಿದ್ದ ಯವಕನಿಗೆ ಬಟರ್ ಚಿಕ್‌ನಲ್ಲಿದ್ದ ಬಾದಾಮಿ ಹಾಗೂ ಇತರ ನಟ್ಸ್‌ಗಳಿಂದ ಅಲರ್ಜಿ ಸಮಸ್ಯೆ ಉಲ್ಭಣಗೊಂಡಿದೆ. ಕುಸಿದು ಬಿದ್ದ ಬೆನ್ನಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಈ ಘಟನೆ ನಡೆದಿದೆ. 

ಜೊಸೆಫ್ ಹಿಗ್ಗಿನ್ಸನ್ ವಿಶೇಷ ಅನಾಫಿಲ್ಯಾಕ್ಸಿಸ್ ಅನ್ನೋ ಅಲರ್ಜಿ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಈತನಿಗೆ ಕೆಲ ಆಹಾರಗಳ ಸೇವೆನೆ ನಿಷಿದ್ಧವಾಗಿತ್ತು.ಆದರೆ ಇದಕ್ಕೂ ಮೊದಲು ಹಿಗ್ಗಿನ್ಸನ್ ಇತರ ನಟ್ಸ್ ಆಹಾರಗಳನ್ನು ಸೇವನೆ ಮಾಡಿದ್ದರು. ಇದರಿಂದ ಮಾರಣಾಂತಿಕ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಹೊಟೆಲ್‌ನಿಂದ ಪಡೆದ ಬಟರ್ ಚಿಕನ್ ಪಾರ್ಸೆಲ್‌ನಲ್ಲಿ ಪದಾರ್ಥದಲ್ಲಿ ಬಳಸಿರುವ ವಸ್ತುಗಳ ಕುರಿತು ಮಾಹಿತಿ ನೀಡಲಾಗಿತ್ತು. ಇದರಲ್ಲಿ ಬಾದಾಮಿ ಸೇರಿದಂತೆ ಬೀಜಗಳ ಬಳಕೆ, ಅಲರ್ಜಿ ಪ್ರಮಾಣಗಳನ್ನು ಮುದ್ರಿಸಲಾಗಿತ್ತು. 

Tap to resize

Latest Videos

undefined

ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್ ತಿಂದು ರಕ್ತ ಕಕ್ಕಿದ ಐವರು, ಹೊಟೆಲ್ ಮ್ಯಾನೇಜರ್ ಅರೆಸ್ಟ್!

ಈ ಹಿಂದೆ ಇದೇ ರೀತಿ ಬಟರ್ ಚಿಕನ್ ಸೇರಿದಂತೆ ಇತರ ಖಾದ್ಯಗಳನ್ನು ಸೇವಿಸಿದ್ದರು. ಈ ವೇಳೆ ಸಮಸ್ಯೆ ಎದುರಾಗಿರಲಿಲ್ಲ. ಹೀಗಾಗಿ ಮತ್ತೆ ಬಟರ್ ಚಿಕನ್ ಸೇವಿಸಿದ್ದಾರೆ. ಒಂದೇ ಒಂದು ಬಟರ್ ಚಿಕನ್ ಪೀಸ್ ತಿಂದ ಬೆನ್ನಲ್ಲೇ ಅಲರ್ಜಿ ರಿಯಾಕ್ಷನ್ ಆಗಿದೆ. ಕುಸಿದು ಬಿದ್ದ ಹಿಗ್ಗಿನ್ಸನ್‌ಗೆ ಹೃದಯಾಘಾತವಾಗಿದೆ. ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಹಿಗ್ಗಿನ್ಸನ್ ಆರೋಗ್ಯ ಸಮಸ್ಯೆ ಕುರಿತು ವೈದ್ಯರು ಕೆಲ ಮಾಹಿತಿ ನೀಡಿದ್ದಾರೆ. ಅನಾಫಿಲ್ಯಾಕ್ಸಿಸ್ ಅನ್ನೋ ಅಲರ್ಜಿ ಸಮಸ್ಯೆ ಅತ್ಯಂತ ಮಾರಣಾಂತಿಕ ಎಂದಿದ್ದಾರೆ. ವಿಶೇಷವಾಗಿ ಆಹಾರ ಸೇವೆನೆಯಲ್ಲಿ ಅತೀ ಸೂಕ್ಷ್ಮವಾಗಿರಬೇಕು. ನಿಯಮತಿ ಹಾಗೂ ನಿಗದಿತ ಆಹಾರ ಬಿಟ್ಟು ಮತ್ತೇನು ಸೇವಿಸುವಂತಿಲ್ಲ. ಕೊಂಚ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಹೇಳಿದ್ದಾರೆ.

ಅತಿಯಾದ ಪ್ರೋಟೀನ್ ಸೇವನೆಯಿಂದ ಹೆಚ್ಚುತ್ತೆ ಹೃದ್ರೋಗದ ಅಪಾಯ; ಅಧ್ಯಯನ

ಜೊಸೆಫ್ ಹಿಗ್ಗಿನ್ಸನ್ ಕುಟುಂಬಸ್ಥರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಿಗ್ಗಿನ್ಸನ್ ಸಾವಿನ ನೋವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲರ್ಜಿ ಸಮಸ್ಯೆ ಕುರಿತು ಚಿಕಿತ್ಸೆ ಪಡೆದಿದ್ದ. ಕೇವಲ ಆಹಾರ ತೆಗೆದುಕೊಳ್ಳುವಾಗ ಮಾತ್ರ ಎಚ್ಚರವಿದ್ದರೆ ಸಾಕು. ಹಿಗ್ಗಿನ್ಸನ್ ಅಲರ್ಜಿ ಆರೋಗ್ಯ ಸಮಸ್ಯೆಯಿಂದ ನಿಧಾನವಾಗಿ ಹೊರಬರುತ್ತಿದ್ದ. ಇದರ ನಡುವೆ ದುರಂತ ನಡೆದಿದೆ. ಅಲರ್ಜಿ ಸಮಸ್ಯೆ ಇದ್ದವರು ಯಾವತ್ತೂ ನಿರ್ಲಕ್ಷಿಸಬೇಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

click me!