ಫಿಲ್ಟರ್ ಕಾಫಿ ಪ್ರೇಮಿಗಳಿಗೆ ಗುಡ್ ನ್ಯೂಸ್… ವಿಶ್ವದ ಬೆಸ್ಟ್ ಕಾಫಿ ಲೀಸ್ಟ್ ನಲ್ಲಿ ಸೆಕೆಂಡ್ Rank

By Suvarna News  |  First Published Mar 8, 2024, 11:59 AM IST

ಕಾಫಿ ರುಚಿಯೇ ಅಂತಹದ್ದು. ಅದ್ರ ಘಮ ಕೂಡ ಸುತ್ತಲಿನ ಜನರನ್ನು ಸೆಳೆಯುತ್ತೆ. ಅದ್ರಲ್ಲೂ ಫಿಲ್ಟರ್ ಕಾಫಿ ಹೀರುತ್ತಿದ್ದರೆ ಮೈಂಡ್ ರಿಲ್ಯಾಕ್ಸ್ ಆದ ಅನುಭವವಾಗುತ್ತದೆ. ಈ ದಕ್ಷಿಣ ಭಾರತದ ಕಾಫಿ ಈಗ ಸುದ್ದಿ ಮಾಡಿದೆ. 
 


ಅನೇಕರ ಬೆಳಗು ಕಾಫಿ ಇಲ್ಲದೆ ಆಗೋದಿಲ್ಲ ಎಂದ್ರೂ ತಪ್ಪಿಲ್ಲ. ಕಾಫಿ ಪ್ರೇಮಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಬೆಳಿಗ್ಗೆ ಹಾಸಿಗೆಯಲ್ಲೇ ಬೆಡ್ ಕಾಫಿ ಸೇವನೆ ಮಾಡುವ ಜನರು ದಿನದಲ್ಲಿ ನಾಲ್ಕೈದು ಕಪ್ ಕಾಫಿ ಕುಡಿದಿರುತ್ತಾರೆ. ಇದನ್ನು ರಿಪ್ರೆಶ್ಮೆಂಟ್ ಪಾನೀಯ ಎಂದು ಜನರು ಭಾವಿಸ್ತಾರೆ. ಸುಸ್ತಾದಾಗ, ಕೆಲಸದ ಒತ್ತಡ ಹೆಚ್ಚಿದ್ದಾಗ ಒಂದು ಕಪ್ ಕಾಫಿ ಸೇವನೆ ಮಾಡಿ ಪ್ರೆಶ್ ಆಗುವವರ ಸಂಖ್ಯೆ ಹೆಚ್ಚಿದೆ. 

ಪ್ರಪಂಚದಾದ್ಯಂತ ಪ್ರತಿದಿನ 2.25 ಶತಕೋಟಿ ಕಪ್ ಕಾಫಿ (Café) ಯನ್ನು ಸೇವಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.  ಇದ್ರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಭಾರತೀಯ (Indian) ರು ಪ್ರತಿದಿನ ಕನಿಷ್ಠ ಒಂದು ಕಪ್ ಕಾಫಿ ಕುಡಿಯುತ್ತಾರೆ. ಜನರು ತಮ್ಮ ರುಚಿಗೆ ತಕ್ಕಂತೆ ಕಾಫಿ ಸೇವನೆ ಮಾಡ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಕಾಫಿ ಇಷ್ಟವಾಗುತ್ತದೆ. ನೀವು ಫಿಲ್ಟರ್ (Filter) ಕಾಫಿ ಪ್ರೇಮಿಗಳಾಗಿದ್ದರೆ ನಿಮಗೊಂದು ಖುಷಿ ಸುದ್ದಿ ಇದೆ. ನಿಮ್ಮಿಷ್ಟದ ಫಿಲ್ಟರ್ ಕಾಫಿ 38 ವಿಧದ ಕಾಫಿಯ ಲೀಸ್ಟ್ ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

Latest Videos

undefined

ಸಿಕ್ಕಾಪಟ್ಟೆ ರಾಗಿ ತಿಂತೀರಾ? ಈ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಹುಷಾರ್!

ಫಿಲ್ಟರ್ ಕಾಫಿ ಪ್ರೇಮಿಗಳಿಗೆ ಖುಷಿ ಸುದ್ದಿ :  ಟೇಸ್ಟ್ ಅಟ್ಲಾಸ್ ವಿಶ್ವದ ಅತ್ಯಂತ ಜನಪ್ರಿಯ ಕಾಫಿ ಪಾನೀಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಫಿಲ್ಟರ್ ಕಾಫಿ ಸೇರಿದೆ. ಇದನ್ನು ದಕ್ಷಿಣ ಭಾರತೀಯ ಕಾಫಿ ಎಂದೂ ಕರೆಯುತ್ತಾರೆ. ಈ ಪಟ್ಟಿಯಲ್ಲಿ ಕ್ಯೂಬಾದ ಕ್ಯೂಬನ್ ಎಸ್ಪ್ರೆಸೊ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಭಾರತದ ಫಿಲ್ಟರ್ ಕಾಫಿ ಎರಡನೇ ಸ್ಥಾನದಲ್ಲಿದೆ. ಗ್ರೀಸ್ ನ ಎಸ್ಪ್ರೆಸೊ ಫ್ರೆಡೊ ಮೂರನೇ ಸ್ಥಾನದಲ್ಲಿದೆ. ಇನ್ನು ಇಟಲಿಯ ಕ್ಯಾಪುಸಿನೊ  ನಾಲ್ಕನೇ ಸ್ಥಾನದಲ್ಲಿದ್ದರೆ, ಟರ್ಕಿಯ, ಟರ್ಕಿಶ್ ಕಾಫಿ, ಇಟಲಿಯ ರಿಸ್ಟ್ರೆಟ್ಟೊ ಕಾಫಿ ಐದು ಮತ್ತು ಆರನೇ ಸ್ಥಾನದಲ್ಲಿದೆ. ಏಳನೇ ಸ್ಥಾನದಲ್ಲಿ ಗ್ರೀಸ್ ನ ಫ್ರಾಪ್ಪೆ ಇದ್ದರೆ, ಎಂಟನೇ ಸ್ಥಾನದಲ್ಲಿ ಜರ್ಮನಿಯ ಇಸ್ಕಾಫಿ ಕಾಫಿ ಇದೆ. ಇನ್ನು ಪಟ್ಟಿಯ ಹತ್ತನೇ ಸ್ಥಾನದಲ್ಲಿ ವಿಯೆಟ್ನಾಂನ ವಿಯೆಟ್ನಾಮೀಸ್ ಐಸ್ಡ್ ಕಾಫಿ ಇದೆ. 

ಫಿಲ್ಟರ್ ಕಾಫಿ ತಯಾರಿಸುವ ವಿಧಾನ : ಭಾರತದಲ್ಲಿ ಕೂಡ ಅನೇಕ ರೀತಿಯಲ್ಲಿ ಕಾಫಿ ತಯಾರಿಸಲಾಗುತ್ತದೆ. ಈಗ ಕಾಫಿ ತಯಾರಿಸೋದು ಬಹಳ ಸುಲಭ. ಕಾಫಿ ಪುಡಿಗೆ ಹಾಲು, ಸಕ್ಕರೆ ಬೆರೆಸಿದ್ರೆ ಅರೆ ಕ್ಷಣದಲ್ಲಿ ಕಾಫಿ ಸಿದ್ಧವಾಗುತ್ತದೆ. ಆದ್ರೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಫಿಲ್ಟರ್ ಕಾಫಿ ತಯಾರಿಸುವ ವಿಧಾನ ಸ್ವಲ್ಪ ಭಿನ್ನವಾಗಿದೆ. ಇದಕ್ಕಾಗಿಯೇ ವಿಶೇಷ ಮೇಕರ್ ಬರುತ್ತದೆ. ನೀವು ಫಿಲ್ಟರ್ ಕಾಫಿ ಮೇಕರ್ ಹೊಂದಿದ್ದರೆ ಅದನ್ನು ಮಾಡಬಹುದು. ಮೊದಲು ಮೇಕರ್ ಗೆ ಒಂದರಿಂದ ಎರಡು ಕಪ್ ಕಾಫಿ ಪುಡಿಯನ್ನು ಹಾಕಬೇಕು. ಅದ್ರ ಮೇಲೆ ಒಂದು ಪ್ರೆಸ್ಸಿಂಗ್ ಬರುತ್ತದೆ. ಅದನ್ನು ಹಾಕಿ, ಬಿಸಿ ನೀರನ್ನು ಹಾಕಿ ಮುಚ್ಚಳ ಮುಚ್ಚಬೇಕು. ಫಿಲ್ಟರ್ ಕಾಫಿ ಮೇಕರ್ ಕೆಳ ಭಾಗದಲ್ಲಿ ಇನ್ನೊಂದು ಪಾತ್ರೆಯಿದ್ದು, ಅದರೊಳಗೆ ಫಿಲ್ಟರ್ ಆದ ಕಾಫಿ ಡಿಕಾಕ್ಷನ್ ನಿಮಗೆ ಸಿಗುತ್ತದೆ. ಈ ಕಾಫಿ ಡಿಕಾಕ್ಷನ್ ಗೆ ನೀವು ಹಾಲು ಮತ್ತು ಸಕ್ಕರೆಯನ್ನು ಹಾಕಿ ಕುಡಿಯಬೇಕು.  

ಮಹಿಳಾ ದಿನಾಚರಣೆ 2024; ತುಂಬಾ ಬ್ಯುಸಿನಾ? ಸಮಯ ಉಳಿಸಲು ಇಲ್ಲಿದೆ 6 ಕುಕಿಂಗ್ ಟಿಪ್ಸ್

ವಿಶ್ವದಲ್ಲಿ ಕಾಫಿಯನ್ನು ಅವರದೇ ಶೈಲಿಯಲ್ಲಿ ತಯಾರಿಸುತ್ತಾರೆ. ಅವುಗಳು ತಮ್ಮದೆ ರುಚಿಯನ್ನು ಹೊಂದಿವೆ. ಕಾಫಿಯಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ. ಇದರ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ಆದ್ರೆ ಕಾಫಿ ಪ್ರೇಮಿಗಳಿಗೆ ಕಾಫಿ ಬಿಟ್ಟಿರಲು ಸಾಧ್ಯವಿಲ್ಲ. ದಿನಕ್ಕೆ ಎರಡು ಬಾರಿಯಾದ್ರೂ ಅವರು ಕಾಫಿ ಸೇವನೆ ಮಾಡ್ತಾರೆ. 

click me!