ಚಿಕ್ಕಮಗಳೂರು ಜಿಲ್ಲೆಯಲ್ಲಿ ಹತ್ತು ಹಲವು ಧಾರ್ಮಿಕ ಕೇಂದ್ರಗಳಿವೆ. ಆ ಧಾರ್ಮಿಕ ಕೇಂದ್ರಗಳಿಗೆ ಐತಿಹಾಸಿಕ ಹಿನ್ನೆಲೆಯೂ ಕೂಡ ಇದೆ. ಅದರಲ್ಲೂ ಗುರುವಾರ, ಭಾನುವಾರ ಬಂತೆಂದ್ರೆ ಸಾಕು ಚಿಕ್ಕಮಗಳೂರಿನ ಹೇಮಾವತಿ ನದಿ ತಟದಲ್ಲಿ ಜನರು ಕೈಮುಗಿದು ನಿಲ್ತಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.29): ಜಿಲ್ಲೆಯಲ್ಲಿ ಹತ್ತು ಹಲವು ಧಾರ್ಮಿಕ ಕೇಂದ್ರಗಳಿವೆ. ಆ ಧಾರ್ಮಿಕ ಕೇಂದ್ರಗಳಿಗೆ ಐತಿಹಾಸಿಕ ಹಿನ್ನೆಲೆಯೂ ಕೂಡ ಇದೆ. ಅದರಲ್ಲೂ ಗುರುವಾರ, ಭಾನುವಾರ ಬಂತೆಂದ್ರೆ ಸಾಕು ಚಿಕ್ಕಮಗಳೂರಿನ ಹೇಮಾವತಿ ನದಿ ತಟದಲ್ಲಿ ಜನರು ಕೈಮುಗಿದು ನಿಲ್ತಾರೆ. ಇದು ಮಲೆನಾಡಿನ ವಿಶೇಷವಾದ ಧಾರ್ಮಿಕ ಸ್ಥಳ. ಇಲ್ಲಿ ರಾಮ, ಲಕ್ಷ್ಮಣ, ಸೀತೆಯೊಂದಿಗೆ ಆಂಜನೇಯ ನೆಲೆ ನಿಂತಿದ್ದು ದಲಿತರ ಪೂಜೆಯಂದ್ರೆ ಈ ಪುರಾಣ ಪ್ರಸಿದ್ಧರಿಗೆ ಎಲ್ಲಿಲ್ಲದ ಪ್ರೀತಿ. ಇವರನ್ನೇ ನಂಬಿರೋ ಇಲ್ಲಿನ 30ಕ್ಕೂ ಹೆಚ್ಚು ದಲಿತ ಕುಟುಂಬಗಳು ಮಾಟ, ಮಂತ್ರಕ್ಕೆ ವಿಭಿನ್ನವಾಗಿ ಬ್ರೇಕ್ ಹಾಕ್ತಿದ್ದಾರೆ. ಜನರ ಕಣ್ಣು ಬಿದ್ದು ಹಾಳಾಗಿರೋರ ಕಣ್ಣಾಸರಕ್ಕೂ ದಲಿತರ ಪೂಜೆಯೇ ರಾಮಬಾಣ.
undefined
ಮಾಟ ಮಂತ್ರಕ್ಕೆ ಇಲ್ಲಿ ಬ್ರೇಕ್: ರಾಜ್ಯದ ಹತ್ತಾರು ಜಿಲ್ಲೆಯ, ದೇಶದ ಹತ್ತಾರು ರಾಜ್ಯದ ಸಾವಿರಾರು ಜನ ಗುರುವಾರ, ಭಾನುವಾರ ಬಂತೆಂದ್ರೆ ಸಾಕು ಚಿಕ್ಕಮಗಳೂರಿನ ಹೇಮಾವತಿ ನದಿ ತಟದಲ್ಲಿ ಕೈಮುಗಿದು ನಿಲ್ತಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೇಮಾವತಿ ನದಿ ತಟದಲ್ಲಿ ಕೈಮುಗಿದು ನಿಲ್ಲುವ ಜನರು ತಮ್ಮ ಸಂಕಷ್ಟವನ್ನು ಪರಿಹರಿಸುವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಮಳೆಗಾದಲ್ಲಿ ಇಲ್ಲಿ ಹರಿಯೋ ನೀರು ಎಷ್ಟು ಅಪಾಯವೋ, ಕೆಲ ಕೆಲಸ-ಕಾರ್ಯಗಳಿಗೆ ಅಷ್ಟೆ ಪ್ರಾಶ್ತ್ಯವಾದ ಜಾಗವಿದು. ದುಷ್ಟ ಹಾಗೂ ದೈವಿ ಶಕ್ತಿಯ ಕೆಲಸಕ್ಕೆ ಹರಿಯೋ ನೀರಿಗಿಂತ ಸೂಕ್ತವಾದ ಸ್ಥಳ ಬೇರಿಲ್ಲ.
Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ
ಹರಿಯೋ ನೀರಿನ ಬಳಿ ಮಾಡೋ ಪೂಜೆ ಕೆಟ್ಟದರ ವಿರುದ್ಧ ವಿಶೇಷವಾದ ಫಲ ನೀಡುತ್ತೆ ಅನ್ನೋದು ಸಾಂಪ್ರಾದಾಯಿಕ ನಂಬಿಕೆಯಿದ್ದು. ರಾಜ್ಯ ಹಾಗೂ ದೇಶದ ಸಾವಿರಾರು ಜನರಿಗೆ ಕೆಸವಳಲು-ಕೂಡಿಗೆ ಅಂದ್ರೆ ಭಯ ಹಾಗೂ ಗೌರವ. ಎಂತಹಾ ಮಾಟ-ಮಂತ್ರ, ಕಣ್ಣಾಸರಕ್ಕೂ ಇಲ್ಲಿ ಬ್ರೇಕ್ ಹಾಕ್ತಾರೆ. ಗಾಡಿಗಳಿಗೆ ಪೂಜೆ ಮಾಡಿದ್ರೆ ಅಪಾಯವಿಲ್ಲ. ಮದುವೆಯ ಬಳಿಕ ವಧು-ವರರು ಆಸರ ತೆಗಿಸಿಕೊಂಡ್ರೆ ಒಳ್ಳೆದು. ಕಟ್ಟಿದ ಹರಕೆ ಮಿಸ್ ಆಗಲ್ಲ. ಹೇಮಾವತಿ ನದಿ ತಟದಲ್ಲಿ ದಲಿತರೇ ಮಾಡೋ ಪೂಜೆಗೆ ಜನರಲ್ಲಿ ಒಂದು ನಂಬಿಕೆ ಇದೆ. ಇಲ್ಲಿಗೆ ಬರೋರ ಸಂಖ್ಯೆಯಲ್ಲಿ ನೂತನ ವಧು-ವರರೇ ಜಾಸ್ತಿ. ಬಂದೋರಲ್ಲಿ ಸಮೃದ್ಧ ಜೀವನ ಕಂಡವರೇ ಹೆಚ್ಚು ಎನ್ನುವು ನಂಬಿಕೆ ಭಕ್ತರಲ್ಲಿದೆ.
ಹೇಮಾವತಿ ನದಿಯೊಂದಿಗೆ ಸೇರಿ ಜನರ ಕಷ್ಟ-ನೋವುಗಳಿಗೆ ಮುಕ್ತಿ?: ಇಲ್ಲಿಗೆ ಬಂದು ಪೂಜೆ ಮಾಡಿಸಿ ಕರ್ಪೂರ ಹಚ್ಚಿ ಕೈಮುಗಿದ್ರೆ ಕಷ್ಟಗಳು ಕರ್ಪೂರದಂತೆಯೇ ಕರಗುತ್ವೆ. ನದಿ ದಡದಲ್ಲೇ ಮರಳಿನ ಗುಡ್ಡೆ ಮಾಡಿ, ಪತ್ರೆ ಹಾಗೂ ಕಾಡು ಜಾತಿಯ ಹೂಗಳು, ಮೊಟ್ಟೆ, ನಿಂಬೆಹಣ್ಣು, ಅರಿಶಿನ ಕುಂಕುಮ, ಅರಿಶಿನ-ಕುಂಕುಮದ ಅಕ್ಕಿ, ಮಣ್ಣಿನ ಮಡಕೆ, ಬಣ್ಣದ ಮಂಡಕ್ಕಿ, ವಿಳ್ಳೆದೆಲೆ, ಬಾಳೆಹಣ್ಣು, ಅಡಿಕೆ, ತೆಂಗಿನ ಕಾಯಿಗಳಿಂದ ವಿಶೇಷವಾದ ಪೂಜೆ ಮಾಡ್ತಾರೆ. ಮಾಟ-ಮಂತ್ರಕ್ಕೆ ತಡೆ ಹೊಡೆಯಲು ಇಲ್ಲಿ ಕೆಲವೊಮ್ಮೆ ಪ್ರಾಣಿ ಬಲಿಯನ್ನು ಕೊಡ್ತಾರೆ. ಪೂಜೆಯ ಮುನ್ನ ಮೊಟ್ಟೆ, ಅಕ್ಕಿ ತುಂಬಿದ ಮಡಕೆ, ನಿಂಬೆಹಣ್ಣನ್ನ ಬಂದವರಿಗೆ ಮಂತ್ರಿಸಿ ಅದೇ ತಟದಲ್ಲಿ ಹೊಡೆದು ಹಾಕ್ತಾರೆ.
Chikkamagaluru: ಮಲೆನಾಡ ಕುವರಿಗೆ ರಾಜ್ಯಮಟ್ಟದ ಚಾಂಪಿಯನ್ ಕಿರೀಟ
ಇಲ್ಲಿನ ಪೂಜೆಗೆ ರಾಜ್ಯ, ಹೊರರಾಜ್ಯದಲ್ಲೂ ವಿಶೇಷವಾದ ಸ್ಥಾನವಿದೆ. ಹರಕೆ ಕಟ್ಟಿದ ಭಕ್ತರು ಮುಂದಿನ ವರ್ಷ ಬಂದು ತಮ್ಮ ಹರಕೆ ತೀರಿಸಿ ಹೋಗ್ತಾರೆ. ರಾಜ್ಯದ ಎಲ್ಲಾ ಭಾಗದ ಜನ ಹಾಗೂ ಕೇರಳ, ಆಂಧ್ರ, ತಮಿಳುನಾಡು ಸೇರಿದಂತೆ ಹೊರ ರಾಜ್ಯದ ಸಾಕಷ್ಟು ಜನ ಇಲ್ಲಿಗೆ ಭಕ್ತರು.ಒಟ್ಟಾರೆ, ಆಧುನಿಕತೆ ಎಷ್ಟೆ ಮುಂದುವರೆದ್ರು ಜನ ಮಾತ್ರ ಮಾಟ ಮಂತ್ರದಂತಹಾ ದುಷ್ಕಂತ್ಯಗಳಿಗೆ ಹೆದರಿ ಎಲ್ಲೆಲ್ಲಿಂದಲೋ ಬಂದು ತಮ್ಮ ಕಷ್ಟವನ್ನ ಕಡಿಮೆ ಮಾಡಿಕೊಳ್ತಿದ್ದಾರೆ. ಮಾಟ, ಮಂತ್ರ, ವಾಮಾಚಾರದಂತಹಾ ದುಷ್ಟಶಕ್ತಿಗಳು ಇದ್ಯೋ-ಇಲ್ವೋ ಗೊತ್ತಿಲ್ಲ. ಆದ್ರೆ, ಗುಡ್ಡದ ಒಡಲಿಂದ ಹರಿಯೋ ಕಡಿದಾಳು ಹಳ್ಳ ಹೇಮಾವತಿ ನದಿಯೊಂದಿಗೆ ಸೇರಿ ಜನರ ಕಷ್ಟ-ನೋವುಗಳಿಗೆ ಮುಕ್ತಿ ಹಾಡ್ತಿದೆ.