ಉರ್ಫಿ ಮೇಲ್‌ ವರ್ಷನ್‌! ಮಹಿಳೆಯರ ಒಳಉಡುಪು ಧರಿಸಿ ಫುಟ್‌ಪಾತ್‌ನಲ್ಲಿ ಯುವಕನ ವಾಕ್‌

Published : May 26, 2023, 02:05 PM ISTUpdated : May 26, 2023, 02:12 PM IST
ಉರ್ಫಿ ಮೇಲ್‌ ವರ್ಷನ್‌! ಮಹಿಳೆಯರ ಒಳಉಡುಪು ಧರಿಸಿ ಫುಟ್‌ಪಾತ್‌ನಲ್ಲಿ ಯುವಕನ ವಾಕ್‌

ಸಾರಾಂಶ

ಬಟ್ಟೆಯಿರೋದೆ ಮಾನ ಮುಚ್ಚೋಕೆ. ಆದ್ರೆ ಇತ್ತೀಚಿಗೆ ಫ್ಯಾಷನ್ ಹೆಸರಲ್ಲಿ ಬಟ್ಟೆ ಅನ್ನೋದು ದೇಹದಲ್ಲಿ ಹೆಸರಿಗೆ ಮಾತ್ರ ಎಂಬಂತೆ ಇರುತ್ತದೆ. ಟ್ರೆಂಡ್ ಅನ್ನೋ ಹೆಸರಲ್ಲಿ ಅರ್ಧಂಬರ್ಧ ಬಟ್ಟೆಯುಟ್ಟು ಜನ್ರು ರೋಡಿಗಿಳಿಯೋದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಬ್ಬ ಯುವಕ ಮಹಿಳೆಯರ ಒಳಉಡುಪು ಧರಿಸಿ ಫುಟ್‌ಪಾತ್‌ನಲ್ಲಿ ಓಡಾಡಿದ್ದಾನೆ.

ವಿಚಿತ್ರ ಡ್ರೆಸ್ಸಿಂಗ್ ಸೆನ್ಸ್​ನಿಂದ ನಟಿ ಉರ್ಫಿ ಜಾವೇದ್ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ. ಉರ್ಫಿ ಜಾವೇದ್​ ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಕೆಲವೊಮ್ಮೆ ಆಕೆ ಬಾತ್‌ಟವೆಲ್‌, ಇನ್ನು ಕೆಲವೊಮ್ಮೆ ಒಳಉಡುಪು ಧರಿಸಿಕೊಂಡು ರಸ್ತೆಗಿಳಿಯೋದಿದೆ. ಇನ್ನು ಕೆಲವೊಮ್ಮೆ ದೇಹದ ಮೇಲೆ ನಾಮಕಾವಸ್ಥೆಗಷ್ಟೇ ಟ್ರಾನ್ಸಪರೆಂಟ್ ಬಟ್ಟೆಯಿರುತ್ತದೆ. ಯಾವಾಗ್ಲೂ ಉರ್ಫಿ ಜಾವೇದ್‌ನ್ನು ಈ ರೀತಿಯ ಅವತಾರದಲ್ಲಿ ನೋಡಿರ್ತೀರಾ. ಆದ್ರೆ ಇತ್ತೀಚಿಗೆ ದೆಹಲಿಯಲ್ಲಿ ಯುವಕನೊಬ್ಬ ಹೀಗೆ ಮಹಿಳೆಯರ ಉಡುಪು ಧರಿಸಿ ರೋಡಿಗಿಳಿದಿದ್ದಾನೆ.

ಇತ್ತೀಚೆಗೆ, ದೆಹಲಿ ಮೆಟ್ರೋದಲ್ಲಿ ಹುಡುಗಿ (Girl)ಯೊಬ್ಬಳು  ಒಳ ಉಡುಪು(Undergarments) ಮತ್ತು ವಿಲಕ್ಷಣವಾದ ಬಟ್ಟೆ ಧರಿಸಿ ಪ್ರಯಾಣಿಸಿದ್ದಳು. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿತ್ತು. ಈ ಘಟನೆಯು ಮಿಶ್ರ ವಿಮರ್ಶೆಗಳನ್ನು ಪಡೆದಿತ್ತು. ಹೆಚ್ಚಿನ ಜನರು ಹುಡುಗಿ ಇಂಥಾ ವಿಚಿತ್ರ ಡ್ರೆಸ್ ಧರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸದ್ಯ ಯುವಕ (Youth)ನೊಬ್ಬ ಮಹಿಳೆಯರ ಒಳಉಡುಪು ಧರಿಸಿಕೊಂಡು ಫುಟ್‌ಪಾತ್‌ನಲ್ಲಿ ನಡೀತಿರೋ ವೀಡಿಯೋ ವೈರಲ್ ಆಗ್ತಿದೆ. 

ಉರ್ಫಿ ಜಾವೇದ್​ ಮೈಯಲ್ಲಿ ಬಟ್ಟೇನೆ ಇಲ್ಲ, ಯಾಕಮ್ಮಾ ಮೈಗೆ ಸೆಗಣಿ ಮೆತ್ತಿಕೊಂಡಿದ್ದೀ ಎಂದ ನೆಟ್ಟಿಗರು!

ಮಹಿಳೆಯರ ಒಳಉಡುಪು ಧರಿಸಿ ಫುಟ್‌ಪಾತ್‌ನಲ್ಲಿ ವಾಕ್‌
ಪ್ರತಿದಿನ ನಾವು ಇಂಟರ್‌ನೆಟ್‌ನಲ್ಲಿ ಇಂಥಾ ವಿಭಿನ್ನ ವಿಲಕ್ಷಣ ವೀಡಿಯೊಗಳನ್ನು ನೋಡುತ್ತೇವೆ. ಎಷ್ಟು ವಿಚಿತ್ರವಾಗಿ, ಹುಚ್ಚು ಹುಚ್ಚಾಗಿ ವರ್ತಿಸುತ್ತಾರೆ ಎಂದುದ ಜನರು ಇಂಥಾ ವೀಡಿಯೋ ನೋಡಿ ಅಂದುಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾಗಳು ಹೆಚ್ಚು ವ್ಯಾಪಕವಾಗಿರುವ ಈ ಯುಗದಲ್ಲಿ, ಯುವಕರು ಜನಪ್ರಿಯತೆಯನ್ನು (Famous) ಗಳಿಸಲು ಮತ್ತು ಅನುಯಾಯಿಗಳು, ವೀಕ್ಷಣೆಗಳು (Views) ಮತ್ತು ಲೈಕ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವಿಭಿನ್ನ ವಿಲಕ್ಷಣ ವಿಧಾನಗಳನ್ನು ಅನುಸರಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆಕ್ಷೇಪಾರ್ಹ ವರ್ತನೆಯ ಸಂದರ್ಭದಲ್ಲಿ ಇತರ ಕೆಲವರು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾರೆ. ಇದು ವೈರಲ್ ಆಗಲು ಕಾರಣವಾಗುತ್ತದೆ. ಹಾಗೆಯೇ ಯುವಕ ಮಹಿಳೆಯರ ಬ್ರಾ ಮತ್ತು ಪ್ಯಾಂಟೀ ಧರಿಸಿ ಓಡಾಡಿದ್ದಾನೆ. 

ವೀಡಿಯೋದಲ್ಲಿ, ಮಹಿಳೆಯರ ಒಳ ಉಡುಪುಗಳನ್ನು ಧರಿಸಿ ಯುವಕನೊಬ್ಬ ಫುಟ್‌ಪಾತ್‌ನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಮೇಲಾಗಿ ಯುವಕ, ಯುವತಿಯಂತೆ ಕಾಣಲು ತಲೆಗೆ ಉದ್ದನೆಯ ವಿಗ್ ಕೂಡ ಹಾಕಿಕೊಂಡಿದ್ದಾನೆ. ಕೈಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಫುಟ್‌ಪಾತ್‌ನಲ್ಲಿ ಸಾಮಾನ್ಯವಾಗಿ ನಡೆಯುತ್ತಾನೆ. ಅಮಿತಾಭ್ ಚೌಧರಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!

ವೀಡಿಯೋಗೆ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚಾಗಿವೆ. ಒಬ್ಬ ಬಳಕೆದಾರರು 'ದೆಹಲಿಯ ಬಿಸಿಲು' ಎಂದು ಬರೆದಿದ್ದಾರೆ. ಮತ್ತೊಬ್ಬರು  'ಈತ ಯಾವುದೇ ಗಲ್ಲಿ ರಸ್ತೆಗಳಿಗೆ ಹೋದರೆ ಬೀದಿ ನಾಯಿಗಳು ಅವನ ಹಿಂದೆ ಓಡೋದು ಖಂಡಿತ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು (User), 'ಇದು ಉರ್ಫಿ ಜಾವೇದ್ ಮೇಲ್ ವರ್ಷನ್‌' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು 'ವೈರಲ್ ಆಗಬೇಕು ಅನ್ನೋ ಆಸೆಯಲ್ಲಿ ಇಂಥಾ ಅಸಭ್ಯ ವರ್ತನೆ ಸರಿಯಲ್ಲ' ಎಂದಿದ್ದಾರೆ. ಅದೇನೆ ಇರ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಆಗಬೇಕು ಅನ್ನೋ ಭರದಲ್ಲಿ ಜನರು ಸಂಸ್ಕೃತಿಯನ್ನು ಮರೆತು. ವಿಚಿತ್ರವಾಗಿ ಡ್ರೆಸ್ (Weird dress) ಧರಿಸುತ್ತಿರುವುದು ವಿಪರ್ಯಾಸವೇ ಸರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!