Fashion
ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಊರ್ವಶಿ ರೌಟೆಲಾ ವಿಭಿನ್ನ ಬಟ್ಟೆ ಹಾಗೂ ನಕ್ಲೆಸ್ ಮೂಲಕ ಎಲ್ಲರ ಗಮನಸೆಳೆದಿದ್ದರು. ಉತ್ಸವದಲ್ಲಿ ಮೊದಲ ಬಾರಿಗೆ ಊರ್ವಶಿ ಪಿಂಕ್ ಕಲರ್ ಗೌನ್‌ನಲ್ಲಿ ಮಿಂಚಿದ್ದರು.
ಆದರೆ ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಆಕೆಯ ಕುತ್ತಿಗೆಯಲ್ಲಿದ್ದ ಮೊಸಳೆ ವಿನ್ಯಾಸದ ನೆಕ್ಲೇಸ್ ಹಾಗೂ ಅದೇ ತರಹದ ಕಿವಿಯೋಲೆ. ನೆಕ್ಲೇಸ್ ಬೆಲೆ 200 ಕೋಟಿ ರೂ.ಗಿಂತ ಹೆಚ್ಚು ಎನ್ನುವ ವಿಚಾರ ಹಾಟ್ ಟಾಪಿಕ್ ಆಗಿದೆ.
ಅರುಂಧತಿ ದೆ ಸೇತ್ ಎಂಬ ಜ್ಯುವೆಲ್ಲರಿ ಎಕ್ಸ್‌ಫರ್ಟ್ ಊವರ್ಶಿ ತೊಟ್ಟಿದ್ದ ನೆಕ್ಲೆಸ್ ಬಗ್ಗೆ ಕಾಮೆಂಟ್ ಮಾಡಿದ್ದರು. 'ನೆಕ್ಲೇಸ್ ಕೇವಲ ಕಾರ್ಟಿಯರ್ ಮೊಸಳೆ ನೆಕ್‌ಪೀಸ್‌ನ ನಕಲು, ಒರಿಜಿನಲ್ ಬೇರೆ' ಎಂದು ಬರೆದುಕೊಂಡಿದ್ದರು.
'ಫಿಲ್ಮ್ ಫೆಸ್ಟಿವಲ್‌ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವಾಗ ಐತಿಹಾಸಿಕ ಮಾದರಿಯನ್ನು ಕೆಟ್ಟದಾಗಿ ಕಾಪಿ ಮಾಡಿದ್ದು ಎಷ್ಟು ಸರಿ? ಇದರ ಬದಲಿಗೆ ಆಕೆ ಬೇರೆ ಧರಿಸಬಹುದಿತ್ತು' ಎಂದು ಸಹ ಪೋಸ್ಟ್ ಮಾಡಿದ್ದರು.
ಊರ್ವಶಿ ತಂಡದಿಂದ ಸ್ಪಷ್ಟನೆ ಸಿಕ್ಕಿದೆ. 'ಊರ್ವಶಿ ಧರಿಸಿರುವ ನೆಕ್ಲೆಸ್ ಬೆಲೆ 200 ಕೋಟಿ ರೂಪಾಯಿ. ಅದನ್ನು ಊರ್ವಶಿ ಧರಿಸಿದ ಬಳಿಕ ಅದರ 276 ಕೋಟಿ ರೂಪಾಯಿ ಆಗಿದೆ' ಎಂದಿದ್ದಾರೆ.
ಊರ್ವಶಿ ತೊಟ್ಟಿದ್ದ ಮೊಸಳೆ ವಿನ್ಯಾಸದ ನೆಕ್ಲೆಸ್ ಬೆಲೆ 270 ಕೋಟಿ ರೂ. ಎನ್ನುತ್ತಿದ್ದಂತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇದು ನಿಜ ಎಂದು ನಂಬುವುದು ಕಷ್ಟ ಎಂದಿದ್ದಾರೆ.
ಮೊಸಳೆ ನೆಕ್ಲೇಸ್‌ನ ವಿನ್ಯಾಸವು 1975ರಷ್ಟು ಹಿಂದಿನದ್ದು. ಮೆಕ್ಸಿಕನ್ ತಾರೆ ಮಾರಿಯಾ ಫೆಲಿಕ್ಸ್ ತನ್ನ ಮುದ್ದಿನ ಮರಿ ಮೊಸಳೆಯೊಂದಿಗೆ ಐಷಾರಾಮಿ ಬ್ರಾಂಡ್‌ನ ಪ್ಯಾರಿಸ್ ಅಂಗಡಿಗೆ ಹೋದಾಗ ಮೊಸಳೆ ಮುಖದ ಹಾರ ಕೇಳಿದ್ದರು.
ವಾಯ್ಲಾ ಕಾರ್ಟಿಯರ್ ಈ ವಿಶೇಷ ವಿನ್ಯಾಸದ ನೆಕ್ಲೇಸ್ ವಿನ್ಯಾಸಗೊಳಿಸಿದ್ದು ಊರ್ವಶಿಗೂ ಮುನ್ನ ಈ ವಿನ್ಯಾಸದ ನೆಕ್ಲೆಸ್ ಅನ್ನು 2006ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಇಟಾಲಿಯನ್ ನಟಿ ಮೋನಿಕಾ ಬೆಲ್ಲುಸಿ ಧರಿಸಿದ್ದರು.