ಅಬ್ಬಬ್ಬಾ..ಕಸ ಎಸೆಯೋ ಬ್ಯಾಗ್ ಇಷ್ಟೊಂದು ಕಾಸ್ಟ್ಲೀನಾ?

By Suvarna News  |  First Published Aug 7, 2022, 5:56 PM IST

ಕಸ ಎಸೆಯೋಕೆ ಸಾಮಾನ್ಯವಾಗಿ ಎಲ್ಲರೂ ಕಪ್ಪು ಬಣ್ಣದಲ್ಲಿರುವ ಸಾದಾ ಪ್ಲಾಸ್ಟಿಕ್ ಕವರ್ ಬಳಸುತ್ತಾರೆ. ಆದ್ರೆ ಇಲ್ಲೊಂದೆಡೆ ಕಸ ಎಸೆಯೋಕೆ ಅಂತಾನೆ ಕಾಸ್ಟ್ಲೀ ಬ್ಯಾಗ್ ಸಿದ್ಧಪಡಿಸಲಾಗಿದೆ. ಇದರ ಬೆಲೆ ಲಕ್ಷದಲ್ಲಿದ್ದು, ಎಲ್ಲರೂ ಹೌಹಾರುವಂತೆ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 


ಉನ್ನತ-ಮಟ್ಟದ ಐಷಾರಾಮಿ ಬ್ರಾಂಡ್‌ಗಳ ಬ್ಯಾಗ್‌ಗಳು ಮತ್ತು ಇತರ ವಸ್ತುಗಳ ಕುರಿತು ಯಾವಾಗಲೂ ಚರ್ಚಿಸಲಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಂಡ್ ಬ್ಯಾಗ್‌, ಸ್ಲಿಂಗ್ ಬ್ಯಾಗ್‌, ಕ್ಲಚಸ್ ಅಲ್ಲ ಕಸದ ಚೀಲದ ಬಗ್ಗೆ ಚರ್ಚೆಯಾಗುತ್ತಿದೆ. ಯಕಶ್ಚಿತ್‌ ಒಂದು ಕಸದ ಚೀಲದ ಬಗ್ಗೆ ಚರ್ಚೆನಾ ಅಂತ ಅಚ್ಚರಿಗೊಳ್ಬೇಡಿ. ಇದು ಅಂತಿಂಥಾ ಕಸದ ಚೀಲವಲ್ಲ. ಲಕ್ಷ ಲಕ್ಷ ಬೆಲೆಬಾಳುವ ಕಸದ ಚೀಲ. ಐಷಾರಾಮಿ ಫ್ಯಾಷನ್ ಬ್ರಾಂಡ್ ಬಾಲೆನ್ಸಿಯಾಗ ಈ ಕಸದ ಚೀಲ ತಯಾರಿಸಿದೆ. ಇದರ ಬೆಲೆ ಎಷ್ಟೂಂತ ಗೊತ್ತಾದ್ರೆ ನೀವು ಹೌಹಾರೋದು ಖಂಡಿತ.

1.4 ಲಕ್ಷ ರೂ. ಮೌಲ್ಯದ ಕಸದ ಚೀಲ
ಐಷಾರಾಮಿ ಫ್ಯಾಷನ್ ಬ್ರಾಂಡ್ ಬಾಲೆನ್ಸಿಯಾ ಈ ದುಬಾರಿ ಕಸದ ಚೀಲ (Costly trash bag)ವನ್ನು ತಯಾರಿಸಿದೆ. ಇದರ ಬೆಲೆ ಸಾವಿರದಲ್ಲಿಲ್ಲ, ಲಕ್ಷದಲ್ಲಿದೆ. ಹೌದು ಈ ಕಸದ ಬ್ಯಾಗ್ ಬೆಲೆ ಬರೋಬ್ಬರಿ 1.4 ಲಕ್ಷ ರೂ. ಕಪ್ಪು, ಬಿಳಿ, ಕೆಂಪು, ನೀಲಿ ಮತ್ತು ಹಳದಿ ಎಂಬ ಐದು ಬಣ್ಣಗಳಲ್ಲಿ ಬ್ಯಾಗ್ ಲಭ್ಯವಿದೆ. ಈ ಬ್ಯಾಗ್ ಬಿಡುಗಡೆಯಾದ ನಂತರ, ಅನೇಕ ಟ್ವಿಟರ್ ಬಳಕೆದಾರರು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social media) ಕಸದ ಚೀಲಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ಚೀಲವು ಕರುವಿನ ಚರ್ಮದಿಂದ ಮಾಡಲ್ಪಟ್ಟಿದೆ. ಮಾರ್ಚ್‌ನಲ್ಲಿ ಪ್ಯಾರಿಸ್‌ನಲ್ಲಿ 2022 ರ ರೆಡಿ-ಟು-ವೇರ್ ಸಂಗ್ರಹಣೆಯಲ್ಲಿ ಬ್ಯಾಗ್ ಕಾಣಿಸಿಕೊಂಡಿದೆ.

Tap to resize

Latest Videos

ಅಬ್ಬಬ್ಬಾ..ದಿಂಬಿನ ಬೆಲೆ ಭರ್ತಿ 45 ಲಕ್ಷ ರೂ; ವಿಶ್ವದ ದುಬಾರಿ ಪಿಲ್ಲೋದಲ್ಲಿ ಅಂಥದ್ದೇನಿದೆ ?

 
 
 
 
 
 
 
 
 
 
 
 
 
 
 

A post shared by HIGHSNOBIETY (@highsnobiety)

ವಿಶ್ವದ ಅತ್ಯಂತ ದುಬಾರಿ ಕಸದ ಚೀಲವನ್ನು ರಚಿಸುವ ಅವಕಾಶವನ್ನು ಕಳೆದುಕೊಳ್ಳಲಾಗುವುದಿಲ್ಲ. ಏಕೆಂದರೆ ಯಾರು ಫ್ಯಾಷನ್ ಅನ್ನು ಇಷ್ಟಪಡುವುದಿಲ್ಲ ಎಂದು ಬಾಲೆನ್ಸಿಯಾಗದ ಸೃಜನಶೀಲ ನಿರ್ದೇಶಕಿ ಡೆಮ್ನಾ ಗ್ವಾಸಾಲಿಯಾ ತಿಳಿಸಿದ್ದಾರೆ. ಬ್ಯಾಗ್‌ನ ಚಿತ್ರಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಕಸಕ್ಕಾಗಿ ಇಷ್ಟು ದುಬಾರಿ ಬ್ಯಾಗ್ ಗಳನ್ನು ಖರೀದಿಸುವವರಿದ್ದಾರೆಯೇ ಎಂದು ಪೋಸ್ಟ್ ಕೆಳಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗಿದೆ. ಇಂಟರ್ನೆಟ್ ಬಳಕೆದಾರರು ಕಸದ ಚೀಲಗಳ ಬೆಲೆಯ ಬಗ್ಗೆ ಆಕ್ಷೇಪವೆರತ್ತಿದ್ದಾರೆ. ಅದೇ ಸಮಯದಲ್ಲಿ, ಅನೇಕ ಹಾಸ್ಯಾಸ್ಪದ ಮೀಮ್‌ಗಳು ಮತ್ತು ಜೋಕ್‌ಗಳನ್ನೂ ಹಂಚಿಕೊಳ್ಳಲಾಗುತ್ತಿದೆ.

ಅಸ್ಸಾಂ ಚಹಾದ ವಿಶ್ವ ದಾಖಲೆ, ವಿಶೇಷ ಸಾವಯವ ಟೀ ಕೆಜಿಗೆ 1 ಲಕ್ಷ ರೂ.ನಂತೆ ಮಾರಾಟ !

ಆನ್‌ಲೈನ್‌ನಲ್ಲಿ ಸದ್ಯ ಬ್ಯಾಗ್‌ಗಳ ಫೋಟೋ ವೈರಲ್ ಆಗಿದೆ. 'Balenciaga's Fall 2022 ready-to-wear collection'ಸೆಕ್ಷನ್‌ನಲ್ಲಿ  ಕಾಣಿಸಿಕೊಂಡಿದ್ದವು. ಅಲ್ಲಿ ಮಾಡೆಲ್‌ಗಳು ತಮ್ಮ ಕೈಯಲ್ಲಿ ಅವುಗಳನ್ನು ಸಾಗಿಸುತ್ತಿರುವುದನ್ನು ನೋಡಬಹುದು. ಈ ಚೀಲದ ಮುಂಭಾಗವು ಬಾಲೆನ್ಸಿಯಾಗ ಲೋಗೋವನ್ನು ಹೊಂದಿದೆ. ಇದಕ್ಕೂ ಮುನ್ನ ಬಾಲೆನ್ಸಿಯಾ 48 ಸಾವಿರದ ತಮ್ಮ ಶೂಗಳನ್ನು ಬಿಡುಗಡೆ ಮಾಡಿದಾಗ ಗಮನ ಸೆಳೆದಿತ್ತು. ನಂತರ ಶೂ ವಿನ್ಯಾಸದ ಬಗ್ಗೆ ಹಲವು ಟೀಕೆ ವ್ಯಕ್ತವಾಗಿತ್ತು.

click me!