ಸಾಮಾನ್ಯವಾಗಿ ಹಳ್ಳಿಯ ಕಡ್ಡೆ ಅಜ್ಜಂದಿರು ಹಾಕುವ ಪಟ್ಟಾಪಟ್ಟಿ ಚಡ್ಡಿಯ ದರ ಎಷ್ಟಿರಬಹುದು? ಹೆಚ್ಚೆಂದರೆ 200 ರಿಂದ 300 ರೂಪಾಯಿಗಳು. ಆದರೆ ಆನ್‌ಲೈನ್‌ನಲ್ಲಿ ಇದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ ಹಳ್ಳಿಯ ಕಡ್ಡೆ ಅಜ್ಜಂದಿರು ಹಾಕುವ ಪಟ್ಟಾಪಟ್ಟಿ ಚಡ್ಡಿಯ ದರ ಎಷ್ಟಿರಬಹುದು? ಹೆಚ್ಚೆಂದರೆ 200 ರಿಂದ 300 ರೂಪಾಯಿಗಳು. ಆದರೆ ಆನ್‌ಲೈನ್‌ನಲ್ಲಿ ಇದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದನ್ನು ನೋಡಿ ಜನ ಶಾಕ್ ಅಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರಿ ಟ್ರೋಲ್ ಆಗ್ತಿದೆ. ಅರ್ಷದ್ ವಹೀದ್ ಎಂಬುವವರು ಟ್ವಿಟ್ಟರ್‌ನಲ್ಲಿ ಇದರ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದು ಇದಕ್ಕೆ ಇಷ್ಟೊಂದು ಬೆಲೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಹಾಗಂತ ಈ ಚಡ್ಡಿಗಳಲ್ಲಿ ಚಿನ್ನ ಬಣ್ಣದ ಚಿತ್ತಾರ ತೋರಣಗಳೇನೂ ಇಲ್ಲ. ಆದಾಗ್ಯೂ ಏಕೆ ಸಾಮಾನ್ಯ ದೈನಂದಿನ ಉಡುಗೆಗಳಂತೆ ಕಾಣುವ ಇವುಗಳಲ್ಲಿ ಅಂತಹ ವಿಶೇಷತೆಗಳೇನೂ ಕಾಣ ಸಿಗುತ್ತಿಲ್ಲ. ಆದರೆ ಬೆಲೆ ಮಾತ್ರ ತಲೆ ತಿರುಗುವಂತೆ ಮಾಡುತ್ತಿದೆ. ಇಲ್ಲಿ ಹಾಕಿರುವ ಫೋಟೋದಲ್ಲಿ ಕಾಣಿಸುವ ಚಡ್ಡಿ ಮೇಲೆ ನೀಲಿ ಮತ್ತು ಹಸಿರು ಪಟ್ಟೆಗಳು ಕೆಂಪು ಬಣ್ಣದ ಗೆರೆಗಳನ್ನು ಹೊಂದಿದೆ ಮತ್ತು ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ. ಅಲ್ಲದೆ, ಇದು ಅದೇ ಹಸಿರು ಚೆಕ್ಕರ್ ಪ್ರಿಂಟ್ ಶಾರ್ಟ್ಸ್‌ನೊಂದಿಗೂ ಲಭ್ಯವಿದೆ. ಈ ಫೋಟೋವನ್ನು ಹಂಚಿಕೊಂಡಾಗಿನಿಂದ ಸಖತ್ ಟ್ರೋಲ್ ಆಗುತ್ತಿವೆ. ಅವರ ಶರ್ಟ್‌ಗಳು ಉತ್ತಮವಾಗಿವೆ ಮತ್ತು ಡಿಸೈನರ್ ಆಗಲು ಸ್ವಲ್ಪ ಸಮಂಜಸವಾಗಿದೆ ಆದರೆ ಇವುಗಳಿಗೆ 15 ಸಾವಿರ ನೀಡುವುದು ಹುಚ್ಚುತನವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
why is this pattapatti trouser 15k?😭 pic.twitter.com/RrBSeFqd3I
— Arshad Wahid (@vettichennaiguy)
undefined
ಪ್ಯಾಟೆ ಹುಡುಗರು ಸ್ಟೈಲ್ ಸ್ಟೈಲ್ ಆದ ಫ್ಯಾಷನೇಬಲ್ ಚಡ್ಡಿಗಳನ್ನು ಹಾಕಿಕೊಂಡು ತಿರುಗಾಡಿದರೆ, ಹಳ್ಳಿಯ ಕಡೆಗಳಲ್ಲಿ ವಯಸ್ಸಾದವರು ಇಂತಹ ಪಟ್ಟಾಪಟ್ಟಿ ಚಡ್ಡಿಗಳನ್ನು ಹಾಕಿಕೊಂಡು ಇದೇ ನಮ್ಮ ಟ್ರೆಡ್ಮಾರ್ಕ್ ಎಂಬಂತೆ ತಿರುಗಾಡುತ್ತಿರುತ್ತಾರೆ. ಆದರೆ ಇವರು ತಮ್ಮ ಚಡ್ಡಿಗೆ ಇಷ್ಟೊಂದು ಬೆಲೆ ಇದೆಯೇ ಎಂದು ತಿಳಿದರೆ ಗಾಬರಿಯಾಗುವುದಂತೂ ಪಕ್ಕಾ.
Amazon Prime Day Sale:ಮತ್ತೆ ಬಂದಿದೆ ಆನ್ ಲೈನ್ ಶಾಪಿಂಗ್ ಹಬ್ಬ; ಅಮೆಜಾನ್ ಪ್ರೈಮ್ ಡೇ ಯಾವಾಗ?
ಪ್ಲಾಸ್ಟಿಕ್ ಬಕೆಟ್‌ಗೆ 25 ಸಾವಿರ
ಕೆಲ ದಿನಗಳ ಹಿಂದೆ ಅಮೆಜಾನ್‌ನಲ್ಲಿ ಸಾಮಾನ್ಯ ಪ್ಲಾಸ್ಟಿಕ್ ಬಕೆಟ್‌ವೊಂದಕ್ಕೆ ಬರೋಬ್ಬರಿ 25,999 ರೂಪಾಯಿ ಬೆಲೆ ನಿಗದಿಪಡಿಸುವ ಮೂಲಕ ಇದೇ ರೀತಿ ಚರ್ಚೆಗೆ ಗ್ರಾಸವಾಗಿತ್ತು. ಅಮೇಜಾನ್ ವೆಬ್ ಸೈಟ್ ನಲ್ಲಿ ವ್ಯಕ್ತಿಯೊಬ್ಬರು ಹೀಗೆ ಸರ್ಚ್ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಬಕೆಟ್ ಹಾಗೂ ಪ್ಲಾಸ್ಟಿಕ್ ಮಗ್ ಕಂಡಿವೆ. ಅವುಗಳ ರೇಟ್ ಕಂಡು ಜನರು ಹೌಹಾರಿದ್ದಾರೆ.
ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್ ಸೆಟ್ ಆಫ್ 1 ಎಂಬ ಶೀರ್ಷಿಕೆಯ ಐಟಂ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ( e-commerce website ) ಅಮೇಜಾನ್ ನಲ್ಲಿ ದಾಖಲೆಯ ₹ 25,999 ಗೆ ಮಾರಾಟಕ್ಕೆ ಇಡಲಾಗಿತ್ತು. ಇನ್ನೂ ವಿಚಿತ್ರವಾದ ಸಂಗತಿಯೆಂದರೆ, ಈ ಬಕೆಟ್ ನ ಮೂಲ ಬೆಲೆ 35, 990 ರೂಪಾಯಿ. ಗ್ರಾಹಕರಿಗೆ ಶೇ. 28ರ ರಿಯಾಯಿತಿಯಲ್ಲಿ 25,999 ರೂಪಾಯಿಗೆ ಸಿಗು
ಆನ್‌ಲೈನಲ್ಲಿ ಲೆದರ್ ಚೇರ್ ಬುಕ್ ಮಾಡಿದ ಮಹಿಳೆಗೆ ಬಂತು ರಕ್ತದ ಸೀಸೆ
ಈ ಫೋಟೋವನ್ನು @vivekraju93 ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅಮೆಜಾನ್‌ನಲ್ಲಿ ಇದನ್ನು ಈಗ ತಾನೆ ನೋಡಿದೆ ಮತ್ತು ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ. ಇನ್ನು @shubhi1011 ಎನ್ನುವ ಟ್ವಿಟರ್ ಬಳಕೆದಾರರು, ಚಿತ್ರವನ್ನು ಹಂಚಿಕೊಂಡಿದ್ದು, ಅಚ್ಚರಿಯ ಸಂಗತಿ ಏನೆಂದರೆ, ಕೇವಲ 1 ಬಕೆಟ್ ಮಾತ್ರವೇ ಸ್ಟಾಕ್ ನಲ್ಲಿ ಇದೆ ಎಂದು ಬರೆದುಕೊಂಡಿದ್ದರು.