ಮುಖದ ಸೌಂದರ್ಯ ಮತ್ತಷ್ಟು ಹೆಚ್ಚಾಗ್ಲಿ ಅಂತಾ ಹೊಸ ಉತ್ಪನ್ನ ಬಳಸೋಕೆ ಶುರು ಮಾಡಿರ್ತೇವೆ. ಪ್ರಾಡೆಕ್ಟ್ ಬಳಸಿದ ಒಂದೇ ದಿನದಲ್ಲಿ ಇರೋ ಮುಖ ಹಾಳಾಗಿರುತ್ತೆ. ಕೆಂಪು ಕಲೆ, ತುರಿಕೆ ಸೇರಿದಂತೆ ಕೆಲ ಸಮಸ್ಯೆ ಕಾಡುತ್ತೆ. ಮತ್ತೆ ಅದೇ ಉತ್ಪನ್ನ ಬಳಸುವ ಬದಲು ಮುನ್ನೆಚ್ಚರಿಕೆ ತೆಗೆದುಕೊಂಡ್ರೆ ಬೆಸ್ಟ್.
ಚರ್ಮದ ಸೌಂದರ್ಯಕ್ಕಾಗಿ ವಿವಿಧ ಉತ್ಪನ್ನಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಉತ್ಪನ್ನಗಳು ಲಭ್ಯವಿದೆ. ಟಿವಿಗಳಲ್ಲಿ ಅನೇಕ ಜಾಹೀರಾತುಗಳನ್ನು ನೀಡಲಾಗುತ್ತದೆ. ಅಂಗಡಿಗೆ ಹೋದಾಗ್ಲೂ ಕಣ್ಣಿಗೆ ಬೀಳುವ ವೆರೈಟಿ ಸೌಂದರ್ಯ ವರ್ದಕ ಹುಡುಗಿಯರ ಗಮನ ಸೆಳೆಯುತ್ತದೆ. ಹೊಸ ಹೊಸ ಉತ್ಪನ್ನಗಳನ್ನು ಪ್ರಯೋಗಿಸಲು ಮುಂದಾಗ್ತಾರೆ. ಉತ್ಪನ್ನದ ಮೇಲೆ ಬರೆದಿರುವ ಸಂಗತಿಯನ್ನು ಓದಿ, ದುಬಾರಿ ಬೆಲೆಯಾದ್ರೂ ಅದನ್ನು ಖರೀದಿಸಿ ಮನೆಗೆ ತಂದಿರ್ತಾರೆ. ಸೌಂದರ್ಯ ವರ್ದಕಕ್ಕೆ ಬೆಲೆ ತೆರಲು ಹುಡುಗಿಯರು ಹಿಂದೇಟು ಹಾಕೋದಿಲ್ಲ ಎಂಬ ಸಂಗತಿ ನಿಮಗೆ ಗೊತ್ತು. ಮುಖ ಹೊಳಪು ಪಡೆಯಲಿ, ಸೌಂದರ್ಯ ಹೆಚ್ಚಾಗಲಿ ಎಂಬ ಉದ್ದೇಶದಿಂದ ತಂದ ಉತ್ಪನ್ನ ಹಚ್ಚಿದ ನಂತ್ರ ಆಸೆಗೆ ತಣ್ಣೀರು ಬೀಳುತ್ತದೆ. ಇರೋ ಸೌಂದರ್ಯ ಹಾಳಾಗುವುದೂ ಇದೆ. ನಮ್ಮಂತೆ ನಮ್ಮ ಚರ್ಮ ಕೂಡ ತನಗಿ ಇಷ್ಟವಿಲ್ಲದ್ದನ್ನು ಹೊರಗೆ ಹಾಕುತ್ತದೆ. ಬೇರೆ ಬೇರೆ ಲಕ್ಷಣದ ಮೂಲಕ ಈ ಉತ್ಪನ್ನ ತನಗೆ ಹೊಂದುವುದಿಲ್ಲ ಎಂಬುದನ್ನು ಚರ್ಮ ಸ್ಪಷ್ಟಪಡಿಸುತ್ತದೆ.
ಯಾವುದೇ ಸೌಂದರ್ಯ ವರ್ದಕ ಖರೀದಿ ವೇಳೆ ನೀವು ಯಾವ ರೀತಿಯ ಚರ್ಮವನ್ನು ಹೊಂದಿದ್ದೀರಿ ಮತ್ತು ಯಾವುದು ನಿಮಗೆ ಸರಿಹೊಂದುತ್ತದೆ ಮತ್ತು ಯಾವುದು ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ಬಳಸುತ್ತಿರುವ ಉತ್ಪನ್ನವು ಚರ್ಮಕ್ಕೆ ಹೊಂದಿಕೆಯಾಗದಿದ್ದರೆ, ಅದು ನಿಮಗೆ ಸಮಸ್ಯೆಯಾಗಬಹುದು. ಕೆಲ ಸಂಕೇತದ ಮೂಲಕ ಉತ್ಪನ್ನ ನಿಮಗೆ ಹೊಂದಿಕೆಯಾಗ್ತಿಲ್ಲ ಎಂಬುದನ್ನು ನೀವು ಪತ್ತೆ ಮಾಡ್ಬಹುದು.
ಒಣ ಚರ್ಮ (Dry Skin) : ನೀವು ಖರೀದಿಸಿದ ಸ್ಕಿನ್ ಕೇರ್ (Care) ಪ್ರಾಡಕ್ಟ್ ನಿಮ್ಮ ತ್ವಚೆಗೆ ಸರಿಯಾಗಿಲ್ಲದಿದ್ದರೆ ತ್ವಚೆ ಹೆಚ್ಚು ಒಣಗಬಹುದು. ಉದಾಹರಣೆಗೆ ನೀವು ಖರೀದಿಸಿದ ಉತ್ಪನ್ನವು ಹೆಚ್ಚು ಆಮ್ಲ ಆಧಾರಿತವಾಗಿದ್ದರೆ ಚರ್ಮವು ಹೆಚ್ಚು ಒಣಗಲು ಪ್ರಾರಂಭಿಸುತ್ತದೆ.
ಚರ್ಮದ ದದ್ದುಗಳು : ಹೊಸ ಸ್ಕಿನ್ ಕೇರ್ ಉತ್ಪನ್ನವನ್ನು ಅನ್ವಯಿಸಲು ಪ್ರಾರಂಭಿಸಿದ ತಕ್ಷಣ ಕೆಲವೊಮ್ಮೆ ದದ್ದುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅದು ನಿಮ್ಮ ಚರ್ಮಕ್ಕೆ ಸರಿಹೊಂದುವುದಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಿ. ಆ ಹೊಸ ಉತ್ಪನ್ನವನ್ನು ಸಂಪೂರ್ಣವಾಗಿ ಬಳಸುವುದನ್ನು ನಿಲ್ಲಿಸಬೇಕು. ನಿಮ್ಮ ಚರ್ಮವು ಸಾಮಾನ್ಯ ಸ್ಥಿತಿಗೆ ಮರಳಲು ಅವಕಾಶವನ್ನು ನೀಡಬೇಕು. ದದ್ದು ಹೆಚ್ಚಾಗಿದ್ದರೆ ಅಥವಾ ತುಂಬಾ ಸಮಯ ತೆಗೆದುಕೊಳ್ತಿದ್ದರೆ ಆದಷ್ಟು ಬೇಗ ವೈದ್ಯ (doctor) ರನ್ನು ಭೇಟಿಯಾಗುವುದು ಒಳ್ಳೆಯದು.
ಕೆಂಪು ತೇಪೆ : ನೀವು ಬಳಸುತ್ತಿರುವುದು ಚರ್ಮಕ್ಕೆ ಸೂಕ್ತವಾದ ಉತ್ಪನ್ನವಲ್ಲದಿದ್ದರೆ ನಿಮ್ಮ ಚರ್ಮದ ಮೇಲೆ ತೇಪೆಗಳು ಕಾಣಿಸಿಕೊಳ್ಳುತ್ತವೆ. ಚರ್ಮವು ಹೊಸ ಉತ್ಪನ್ನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಇದು ಸಂಭವಿಸುತ್ತದೆ. ಯಾವುದೇ ಕ್ರೀಮ್, ಲೋಷನ್, ಫೇಸ್ ವಾಶ್ ಅಥವಾ ಇತರ ಸೌಂದರ್ಯವರ್ಧಕಗಳನ್ನು ಅನ್ವಯಿಸಿದ ನಂತರ ಚರ್ಮದ ಮೇಲೆ ದದ್ದು ಅಥವಾ ಪ್ಯಾಚ್ ರಚನೆಯಾಗುವುದನ್ನು ನೀವು ಗಮನಿಸಿದರೆ ತಕ್ಷಣ ಆ ಉತ್ಪನ್ನ ಅನ್ವಯಿಸುವುದನ್ನು ಬಿಡುವುದು ಒಳ್ಳೆಯದು.
ಹೇಗೂ ಮಳೆಗಾಲ, ಸ್ನಾನ ಸ್ಕಿಪ್ ಮಾಡಿದರೆ ನಡೆಯುತ್ತೆ ಅಂದ್ಕೋಬೇಡಿ!
ಮುಖ ಮತ್ತು ಕಣ್ಣುಗಳ ಊತ : ನಿಮ್ಮ ಚರ್ಮದ ಮೇಲೆ ಪ್ರತಿಕ್ರಿಯಿಸುವ ಉತ್ಪನ್ನವಿದ್ದರೆ ನಿಮ್ಮ ಮುಖ ಊದಿಕೊಳ್ಳುವುದನ್ನು ನೀವು ಕಾಣ್ತೀರಿ. ಈ ಊತಗಳು ಕೆನ್ನೆಗಳಲ್ಲಿ ಅಥವಾ ಕಣ್ಣುಗಳ ಸುತ್ತಲೂ ಕಂಡುಬರಬಹುದು. ಇದು ಸಂಭವಿಸಿದಲ್ಲಿ, ತಕ್ಷಣವೇ ಉತ್ಪನ್ನವನ್ನು ಬಳಸುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ.
ಕೂದಲು ಹೆಲ್ದಿ, ಶೈನ್ ಆಗಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ
ಎಣ್ಣೆಯುಕ್ತ ಚರ್ಮ : ನಿಮ್ಮ ತ್ವಚೆಯು ಸಾಮಾನ್ಯಕ್ಕಿಂತ ಎಣ್ಣೆಯುಕ್ತವಾಗಿರುವಾಗಲೂ ಜಾಗರೂಕರಾಗಿರಿ. ಸಾಮಾನ್ಯವಾಗಿ ಚರ್ಮವು ತಪ್ಪಾದ ಅಥವಾ ಸೂಕ್ತವಲ್ಲದ ಉತ್ಪನ್ನದ ಕಾರಣದಿಂದಾಗಿ ಅಸಹಜವಾಗಿ ವರ್ತಿಸುತ್ತದೆ. ನೀವು ಬಳಸುತ್ತಿರುವ ಉತ್ಪನ್ನವು ಚರ್ಮಕ್ಕೆ ಸೂಕ್ತವಲ್ಲ ಎಂಬುದಕ್ಕೆ ಇದು ಸಂಕೇತವಾಗಿದೆ. ಹಾಗಾಗಿ ಈ ಮೇಲಿನ ಯಾವುದೇ ಲಕ್ಷಣ ಹೊಸ ಉತ್ಪನ್ನ ಬಳಸುವಾಗ ಕಂಡು ಬಂದ್ರೆ ತಕ್ಷಣ ಬಳಕೆಯನ್ನು ನಿಲ್ಲಿಸಿ.