ಸೌಂದರ್ಯ ವರ್ದಕಕ್ಕೆ ಸಂಬಂಧಿಸಿದಂತೆ ಅನೇಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಯಸ್ಸು ಮುಚ್ಚಿಟ್ಟು, ಯಂಗ್ ಆಗಿ ಕಾಣಬಯಸುವ ಜನರು ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕ್ತಾರೆ. ಈಗ ಅಚ್ಚರಿಯಾಗುವ ವಸ್ತುವೊಂದನ್ನು ತಮ್ಮ ಮುಖಕ್ಕೆ ಬಳಸ್ತಿದ್ದಾರೆ.
ಮಹಿಳೆಯರು ಸೌಂದರ್ಯಕ್ಕೆ ಅತಿ ಹೆಚ್ಚು ಮಹತ್ವ ನೀಡ್ತಾರೆ. ಹಿಂದಿನಿಂದಲೂ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳಲು ನಾನಾ ಪ್ರಯತ್ನ ಮಾಡ್ತಿದ್ದರು. ಈಗಿನ ಮಹಿಳೆಯರು ಸ್ವಲ್ಪ ಮುಂದಿದ್ದಾರೆ. ಶಸ್ತ್ರಚಿಕಿತ್ಸೆ ಸೇರಿದಂತೆ ಅಪಾಯಕಾರಿ ಕೆಲಸಕ್ಕೆ ಕೈ ಹಾಕ್ತಿದ್ದಾರೆ. ತೂಕ ಇಳಿಕೆ ಸೇರಿದಂತೆ ಮುಖದ ಆಕಾರ ಬದಲಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇನ್ಮೊಂದು ಕಡೆ ಬ್ಯೂಟಿ ಪಾರ್ಲರ್ ಗೆ ಹೋಗಿ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಹಿಳೆಯರು ಹಣ ಸುರಿಯುತ್ತಿದ್ದಾರೆ. ನೈಸರ್ಗಿಕ ವಸ್ತುಗಳನ್ನು ಉಪಯೋಗಿಸುತ್ತಿರುವವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ.
ಫಿಟ್ನೆಸ್ (Fitness), ಝಿರೋ ಫಿಗರ್, ಹೊಳೆಯುವ ಮೈ ಬಣ್ಣ, ಚೆಂದದ ಕೂದಲು ಪಡೆಯೋದು ಮಹಿಳೆಯರ ಉದ್ದೇಶ. ಬರೀ ಮುಖದ ಸೌಂದರ್ಯ (Beauty) ಮಾತ್ರವಲ್ಲ, ಸೊಂಟ, ಹೊಟ್ಟೆ, ಕಾಲು, ಪಾದ ಸೇರಿದಂತೆ ದೇಹದ ಎಲ್ಲ ಭಾಗಗಳ ಅಂದ ಹೆಚ್ಚಿಸಿಕೊಳ್ಳಲು ಏನು ಬೇಕಾದ್ರೂ ಮಾಡೋಕೆ ಈಗಿನ ಮಹಿಳೆಯರು ಸಿದ್ಧ.
ತೂಕ ಇಳಿಕೆ ಸರ್ಜರಿ ನಂತ್ರ ಇನ್ಸ್ಟಾ ಪ್ರಭಾವಿತೆಗೆ ಹೃದಯಾಘಾತ! ಸಾವಿಗೆ ಕಾರಣವಾಯ್ತಾ ಸೋರಿಯಾಸಿಸ್ ?
ವಯಸ್ಸನ್ನು ಮುಚ್ಚಿಡಲು ನಾನಾ ಪ್ರಯತ್ನ ನಡೆಯುತ್ತಿರುತ್ತದೆ. ಮುಖದ ಸುಕ್ಕನ್ನು ಕಡಿಮೆ ಮಾಡಿ, ಚರ್ಮ ಹೊಳೆಯುವಂತೆ ಮಾಡುವ ವಿಧಾನಗಳಿಗೆ ಈಗ ಮತ್ತೊಂದು ವಿಧಾನವೊಂದು ಸೇರ್ಪಡೆಯಾಗಿದೆ. ಈಗಿನ ದಿನಗಳಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗಿದೆ. ಅದೇ ಸಾಲ್ಮನ್ ಮೀನಿ (Salmon Fish) ನ ವೀರ್ಯ. ಇದು ಕೋರಿಯಾದಲ್ಲಿ ಬಳಕೆಯಲ್ಲಿರುವ ಚಿಕಿತ್ಸೆ.
ಸಾಲ್ಮನ್ ಮೀನನ ವೀರ್ಯದ ಫೇಶಿಯಲ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಕಳೆದ ಕೆಲವು ತಿಂಗಳಿಂದ ಈ ಕುರಿತು ಚರ್ಚೆ ನಡೆಯುತ್ತಿದೆ. ಹಾಲಿವುಡ್ ತಾರೆ ಜೆನ್ನಿಫರ್ ಅನಿಸ್ಟನ್ ಅವರಂತಹ ಪ್ರಸಿದ್ಧ ತಾರೆಯರು ಇದನ್ನು ಇಷ್ಟಪಡೋದಾಗಿ ಹೇಳಿದ್ದಾರೆ. ಇದು ಚರ್ಮಕ್ಕೆ ನೀಡುವ ಚಿಕಿತ್ಸೆಯಾಗಿದೆ. ಸಾಲ್ಮನ್ ಮೀನಿನ ವೀರ್ಯದಿಂದ ಪಡೆದ ವಸ್ತುವನ್ನು ಸಣ್ಣ ಸೂಜಿಯ ಸಹಾಯದಿಂದ ಮುಖದ ಮೇಲೆ ಅನ್ವಯಿಸಲಾಗುತ್ತದೆ. ಈ ಉತ್ಪನ್ನವು ವೀರ್ಯದ ಒಂದು ಭಾಗವಾಗಿದೆ. ಇದನ್ನು ಸ್ವಚ್ಛಗೊಳಿಸಿದ ನಂತರ ಬಳಸಲಾಗುತ್ತದೆ.
ಹೊಸ ರಕ್ತ ಮತ್ತು ಪೋಷಕಾಂಶಗಳನ್ನು ಉತ್ತೇಜಿಸಲು ಕಣ್ಣುಗಳ ಸುತ್ತಲಿನ ಚರ್ಮಕ್ಕೆ ಇಂಜೆಕ್ಷನ್ ಅನ್ನು ಅನ್ವಯಿಸಲಾಗುತ್ತದೆ. ಈ ಕಾರಣದಿಂದಾಗಿ, ಚರ್ಮದ ಬಿಗಿತ ಮತ್ತು ದಪ್ಪ, ಮೊಡವೆ, ಕೆಂಪು ಮತ್ತು ಊತದಂತಹ ಮುಖದಲ್ಲಿ ಸುಧಾರಣೆ ಕಂಡು ಬರುತ್ತದೆ.
ತಜ್ಞರು ಇದನ್ನು ನೈಸರ್ಗಿಕ ಎಂದಿದ್ದಾರೆ. ಸಾಲ್ಮನ್ ಸ್ಪರ್ಮ್ ಫೇಶಿಯಲ್‌ನ ಒಂದು ಸೆಷನ್‌ನ ಬೆಲೆ 275 ಪೌಂಡ್‌ಗಳು ಅಂದ್ರೆ ಸುಮಾರು 28 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಎರಡು ಮೂರು ಬಾರಿ ಚಿಕಿತ್ಸೆ ತೆಗೆದುಕೊಳ್ಳಬೇಕು.
ಸಾಲ್ಮನ್ ಮೀನಿನ ಡಿಎನ್‌ಎ ಚರ್ಮದ ಕೋಶಗಳನ್ನು ಪುನರುತ್ಪಾದಿಸುತ್ತದೆ ಮತ್ತು ಪ್ರತಿಯಾಗಿ ಮೊಡವೆಗಳ ಗಾಯಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ, ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಚರ್ಮದ ಟೋನ್ ಅನ್ನು ಹೊಳಪುಗೊಳಿಸುತ್ತದೆ ಮತ್ತು ವಿನ್ಯಾಸವನ್ನು ಸುಗಮಗೊಳಿಸುತ್ತದೆ.
ಸಾಲ್ಮನ್ ವೀರ್ಯ ಕೆಲಸ ಮಾಡುತ್ತಾ? : 2017 ರಲ್ಲಿ ಈ ಬಗ್ಗೆ ಅಧ್ಯಯನವೊಂದು ನಡೆದಿತ್ತು. ಅಧ್ಯಯನದ ವರದಿಯಲ್ಲಿ, ಸಾಲ್ಮನ್ ವೀರ್ಯವು ಸೆಲ್ಯುಲಾರ್ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದಿತ್ತು. ಸಾಲ್ಮನ್ ವೀರ್ಯದಲ್ಲಿ ಕಂಡುಬರುವ ಪ್ರೋಟೀನ್‌ಗಳು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ನಡೆಸಿದ ತಂಡ ಹೇಳಿತ್ತು. ಇನ್ನು 2016 ರಲ್ಲಿ ಇಲಿಗಳ ಮೇಲೆ ನಡೆಸಿದ ಒಂದು ಅಧ್ಯಯನವೂ, ಸಾಲ್ಮನ್ ವೀರ್ಯ ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಗಾಯಗಳನ್ನು ಗುಣಪಡಿಸಲು ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ. ಸಾಲ್ಮನ್ ಮೀನಿನ ವೀರ್ಯವನ್ನು ಚರ್ಮದ ಅಂದ ಹೆಚ್ಚಿಸಲು ಮಾತ್ರವಲ್ಲ ಹಾನಿಗೊಳಗಾದ ಯಕೃತ್ತುಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ.