ಅಬ್ಬಬ್ಬಾ ಈ 73ರ ಅಜ್ಜಿ ಗ್ಲಾಮರ್ ಲುಕ್ ಗೆ ನೆಟ್ಟಿಗರು ಫಿದಾ

Published : Jan 10, 2024, 04:20 PM IST
ಅಬ್ಬಬ್ಬಾ ಈ 73ರ ಅಜ್ಜಿ ಗ್ಲಾಮರ್ ಲುಕ್ ಗೆ ನೆಟ್ಟಿಗರು ಫಿದಾ

ಸಾರಾಂಶ

ವಯಸ್ಸು ನಿಲ್ಲೋದಿಲ್ಲ. ವಯಸ್ಸಾಯ್ತು ಅಂತಾ ನಾವು ನಿಂತ್ರೆ ಸಾಧನೆ ಮಾಡೋಕೆ, ಖುಷಿ ಅನುಭವಿಸೋಕೆ ಸಾಧ್ಯವಿಲ್ಲ. ಹೇಗೆ ಇರಿ, ಎಲ್ಲೇ ಇರಿ ಇದ್ದಷ್ಟು ದಿನ ಜೀವನವನ್ನು ಎಂಜಾಯ್ ಮಾಡಿ ಎನ್ನುತ್ತಾಳೆ ಈ ಅಜ್ಜಿ.   

ಬದುಕಿನಲ್ಲಿ ಇಳಿ ವಯಸ್ಸು ಬಂದಂತೆ ರಾಮಾ ಕೃಷ್ಣಾ ಎನ್ನುತ್ತಾ ಮನೆಯಲ್ಲೇ ಇರಬೇಕು ಅನ್ನೋದು ಅನೇಕ ಮಂದಿ ವಯಸ್ಸಾದವರ ಅನುಭವದ ಮಾತು. ಮನೆಯಲ್ಲಿ ಮೊಮ್ಮಮ್ಮಕ್ಕಳನ್ನು ಆಡಿಸುತ್ತಾ, ದೇವರ ಧ್ಯಾನದಲ್ಲಿ ಕಾಲಕಳೆಯುವವರೇ ಹೆಚ್ಚು ಮಂದಿ. ವಯಸ್ಸಾದಂತೆ ಕುಂದುವ ಶಕ್ತಿ, ಉತ್ಸಾಹಗಳು ಇದಕ್ಕೆ ಕಾರಣವಿರಬಹುದು.

ಲಿನೆ ಜೆಕಿಸ್ (Lynne Zekis) ಎಂಬ 73 ವರ್ಷದ ಮಹಿಳೆ ಎಲ್ಲ ವೃದ್ಧರಂತಲ್ಲ. ಈಕೆ ತನ್ನ ಇಳಿವಯಸ್ಸಿನಲ್ಲೂ ಇನ್ನಿಲ್ಲದ ಉತ್ಸಾಹವನ್ನು ಹೊಂದಿದ್ದಾಳೆ. ಈಕೆ ಸಾಂಪ್ರದಾಯಿಕ ಅಜ್ಜಿಯರಿಗಿಂತ ಭಿನ್ನವಾಗಿದ್ದಾಳೆ. ಈ ಅಜ್ಜಿಯ ಗ್ಲಾಮರ್ (Glamorous) ಲುಕ್ ಯಾವ ಯುವತಿಯರಿಗೂ ಕಡಿಮೆಯಿಲ್ಲ. ಕಾಲು ನೋವು, ಸೊಂಟ ನೋವು, ಖಾಯಿಲೆ ಎಂದು ಕೂರುವ ವಯಸ್ಸಿನಲ್ಲಿ ಈ ಅಜ್ಜಿ ಮಿನಿ ಸ್ಕರ್ಟ್ ಧರಿಸಿ ಪಬ್, ಕ್ಲಬ್ ಗಳನ್ನು ಸುತ್ತುತ್ತಿದ್ದಾಳೆ. ಈ ಅಜ್ಜಿಯ ಜೀವನಶೈಲಿಯನ್ನು ನೋಡಿದ ಜನ ಬೆರಗಾಗಿರುವುದಂತೂ ನಿಜ.

ಸಂಪ್ರದಾಯ ಕುಟುಂಬದ ಟಾಲಿವುಡ್‌ ಚೆಲುವೆ ದಕ್ಷಾ ನಗರ್ಕರ್ !

ಅಜ್ಜಿಯ ಸೌಂದರ್ಯಕ್ಕೆ ಮಾರುಹೋದ ನೆಟ್ಟಿಗರು : ಈಗಿನ ದಿನದಲ್ಲಿ ವಯಸ್ಸನ್ನು ಮರೆಮಾಚಲು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಬೆಳ್ಳಗಾದ ಕೂದಲಿಗೆ ಬಣ್ಣ ಹಾಕುತ್ತಾರೆ, ಮುಖಕ್ಕೆ ಅನೇಕ ರೀತಿಯ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅನೇಕ ರೀತಿಯ ಸೌಂದರ್ಯ ವರ್ಧಕಗಳು, ಸರ್ಜರಿಗಳು ಕೂಡ ಇವೆ. ಆದರೆ ಇದ್ಯಾವುದರ ಹಂಗಿಲ್ಲದೇ ಸಹಜ ಸೌಂದರ್ಯ ಹೊಂದಿರುವವರು ತೀರ ವಿರಳ. ಅಂತವರಲ್ಲಿ ಲೆನೆ ಜೆಕಿಸ್ ಕೂಡ ಒಬ್ಬಳು.

ಲಿನೆ ಜೆಕಿಸ್ ನೋಡಿದ ಯಾರೂ ಅವಳಿಗೆ ಅಷ್ಟು ವರ್ಷವಾಗಿರಬಹುದೆಂದು ಊಹಿಸುವುದಿಲ್ಲ. ಯುವಕರು ಕೂಡ ಅವಳ ಫಿಟ್ನೆಸ್ (Fitness) ನೋಡಿ ಮೆಚ್ಚಿಕೊಳ್ಳುವಂತಿದೆ. ಜೆಕಿಸ್ ತನ್ನ ಕೂದಲಿಗೆ ಬಣ್ಣ ಹಾಕದೇ ಇದ್ದರೂ ಅವಳ ಸಹಜ ಸೌಂದರ್ಯ(Natural Beauty) ಎದ್ದು ಕಾಣುತ್ತದೆ. ಇತ್ತೀಚೆಗೆ ಲಿನೆ, ಸ್ಪೇನ್ ಗೆ ಹೋಗಿದ್ದಳು. ಅಲ್ಲಿ ಅವಳು ರಾತ್ರಿ 1.30ಕ್ಕೆ ಕ್ಲಬಿಂಗ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. 73ರ ಅಜ್ಜಿ ಲೆನೆ ಅವಳ ಪೋಸ್ಟ್ ಅನ್ನು ಬಹಳ ಜನರು ಮೆಚ್ಚಿಕೊಂಡಿದ್ದಾರೆ. ಅವಳು ಕ್ಲಬ್ ನಲ್ಲಿರುವ ಫೋಟೋಗಳನ್ನು ನೋಡಿ ಅವಳ ಎನರ್ಜಿಯ ಬಗ್ಗೆ ಹೊಗಳಿದ್ದಾರೆ. ಹಾಗೇ ಈ ವಯಸ್ಸಿನಲ್ಲಿ ನಿಮಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತೆ ಎಂದು ಕೂಡ ಪ್ರಶ್ನೆ ಕೇಳಿದ್ದಾರೆ.

ಅಜ್ಜಿಯ ಸೌಂದರ್ಯದ (Beauty Secrets) ಗುಟ್ಟು ಇಲ್ಲಿದೆ ನೋಡಿ : ಸೋಷಿಯಲ್ ಮೀಡಿಯಾದಲ್ಲಿ (Social Media) ಲಿನೆ ಜೆಕಿಸ್ ಅವಳ ಫೋಟೋಗಳನ್ನು ನೋಡಿದವರು ಈ ವಯಸ್ಸಿನಲ್ಲಿ ಇಷ್ಟೊಂದು ಫಿಟ್ನೆಸ್ ಹೇಗಿರಲು ಸಾಧ್ಯ ಎಂದು ಆಶ್ಚರ್ಯದಿಂದ ಕೇಳುತ್ತಾರೆ. ಹಾಗೇ ನಿಮ್ಮ ಚರ್ಮ ಮತ್ತು ಫಿಗರ್ ನ ರಹಸ್ಯವೇನು ಎಂದು ಕೂಡ ಅವಳನ್ನು ಪ್ರಶ್ನಿಸುತ್ತಾರೆ. ನೆಟ್ಟಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಿನೆ ಮೊದಲನೆಯದಾಗಿ ನಾನು ಲಿಂಫ್ಯಾಟಿಕ್ ಡ್ರೈನೆಜ್ ಮಸಾಜ್ (Massage) ಮಾಡಿಸಿಕೊಳ್ಳುತ್ತೇನೆ. ಇದು ದೇಹದಿಂದ ಊತವನ್ನು ತೆಗೆದುಹಾಕಲು ಸಹಕಾರಿಯಾಗಿದೆ. ಈ ಮಸಾಜ್ ಸ್ತನ ಕ್ಯಾನ್ಸರ್ ರೋಗಿಗಳಿಗೂ ಬಹಳ ಉಪಕಾರಿಯಾಗಿದೆ. ಎರಡನೆಯದಾಗಿ ನಾನು ಗುವಾ ಶಾ ಎನ್ನುವ ಬ್ಯೂಟಿ ಪ್ರೊಡಕ್ಟ್ ಬಳಕೆ ಮಾಡುತ್ತೇನೆ. ಇದು ಚೀನಾದವರ ಸೌಂದರ್ಯವರ್ಧಕ ಉತ್ಪನ್ನವಾಗಿದೆ. ಇದು ಚರ್ಮ ಹೊಳೆಯುವಂತೆ ಮಾಡುತ್ತದೆ ಮತ್ತು ಮುಖದ ಸೌಂದರ್ಯವನ್ನು ಕಾಪಾಡುತ್ತದೆ ಎಂದು ಲಿನೆ ತನ್ನ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾಳೆ. 

ಬಿಳಿ ಸೀರೆಲೀ ಏಂಜಲ್‌ನಂತೆ ಮಿಂಚಿದ ಇಶಿತಾ : ಗಂಡನ ಫೋಟೋ ಯಾಕೆ ಹಾಕಲ್ಲ ಎಂದ ಫ್ಯಾನ್ಸ್

ಲಿನೆ ವಯಸ್ಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ನಮಗೆ ವಯಸ್ಸಾಯಿತು, ನಮ್ಮ ಬಳಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಯಾವಾಗಲೂ ನಕಾರಾತ್ಮಕ ವಿಚಾರ (Negative Thoughts) ಮಾಡುವವರಿಗೆ ಮತ್ತು ವಯಸ್ಸಾಗ್ತಿದ್ದಂತೆ ಜೀವನದಲ್ಲಿ ಉತ್ಸಾಹ ಕಳೆದುಕೊಂಡು ಬಂಧಿಯಾಗುವ ಜನರು ಲಿನೆ ನೋಡಿ ಕಲಿಯೋದು ಬಹಳಷ್ಟಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?