ಛೇ..ಛೇ... ಗೋಣಿಚೀಲನ ಕಾಲು ಒರೆಸಲು ಬಳಸ್ತಿದ್ದೀರಾ? ಈ ವಿಡಿಯೋ ನೋಡಿದ್ರೆ ಹೊಟ್ಟೆ ಉರಿದುಕೊಳ್ತೀರಾ!

ಗೋಣಿಚೀಲವನ್ನು ಬಳಸಿ ಬೀಸಾಕುವುದು, ಕಾಲು ಒರೆಸಲು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ವೈರಲ್​ ವಿಡಿಯೋ ನೋಡಿದ್ರೆ ನೀವು ಹೊಟ್ಟೆ ಉರಿದುಕೊಳ್ಳುವುದು ಗ್ಯಾರೆಂಟಿ. ಅಂಥದ್ದೇನಿದೆ ನೋಡಿ
 

Viral Video Palazzo Pants Made of Jute Priced at Rs 60000 Netizens react to bizarre fashion suc

ಫ್ಯಾಷನ್​ ಎನ್ನುವುದು ಕ್ಷಣ ಕ್ಷಣಕ್ಕೂ ಬದಲಾಗುವ ವಿಷಯವೇ. ಶತಮಾನಗಳ ಹಿಂದಿನ ವೇಷಭೂಷಣಗಳು ಮತ್ತೆ ಬಂದು ಅದು ಮಾಡರ್ನ್​ ಎನ್ನಿಸಿಕೊಳ್ಳುವುದು ಒಂದೆಡೆಯಾದರೆ, ವಿದೇಶಗಳಿಂದ ಎರವಲು ಪಡೆಯುವ ವೇಷಗಳು ಇನ್ನೊಂದೆಡೆ, ಇವೆಲ್ಲಕ್ಕಿಂತಲೂ ಮಿಗಿಲಾಗಿ ಅಯ್ಯಬ್ಬಾ ಇದಾ.... ಎಂದು ಮೂಗು ಮುರಿಯುವ ಘಟನೆಗಳೂ ಫ್ಯಾಷನ್​ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂದಹಾಗೆ ಗೋಣಿಚೀಲ ಎಲ್ಲರಿಗೂ ತಿಳಿದದ್ದೇ. ಅಕ್ಕಿ, ರಾಗಿ, ಬೆಳೆ ಹೀಗೆ ಮನೆಗೆ ಬೇಕಾಗುವ ಸಾಮಾಗ್ರಿಗಳನ್ನು ತುಂಬಿಸಿ ಇಡಲು ಗೋಣಿಚೀಲದ ಬಳಕೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗೋಣಿಚೀಲನವನ್ನು ಕಾಲು ಒರೆಸಲು ಹಾಕುವುದೇ ಹೆಚ್ಚು. ಅದರಲ್ಲಿಯೂ ಮಳೆಗಾಲದಲ್ಲಿ ಇದು ಹೆಚ್ಚಿನ ಮನೆಗಳಲ್ಲಿ ಕಾಣಸಿಗುತ್ತವೆ, ಕಾಲು ಒರೆಸಲು ಬಗೆಬಗೆಯ ಮ್ಯಾಟ್​ಗಳು ಬಂದಿದ್ದರೂ, ಗೋಣಿಚೀಲ ಕಾಲು ಒರೆಸುವುದಕ್ಕೆ ಹಾಕುವುದು ಹೆಚ್ಚು. 
 
ಆದರೆ ಇಲ್ಲಿ ವೈರಲ್​ ಆಗಿರುವ ವಿಡಿಯೋ ನೋಡಿದ್ರೆ ಖಂಡಿತ ನೀವು ಹಾಗೆ ಮಾಡಲಾರಿರಿ. ಏಕೆಂದ್ರೆ ಇಲ್ಲಿ ಗೋಣಿಚೀಲವನ್ನು ಎರಡು ಭಾಗ ಮಾಡಿ ಕಾಲು ಹೊಕ್ಕಿಸುವಂತೆ ಮಾಡಿ ಅದಕ್ಕೊಂದು ಲಾಡಿ ಕಟ್ಟಿ ಷೋರೂಮ್​ನಲ್ಲಿ ಇರಿಸಿದ್ದಾರೆ. ಅಂದರೆ ಈ ಚೀಲ ಪ್ಯಾಂಟ್​ ರೂಪ ಪಡೆದಿದೆ. ಅದರ ಬೆಲೆ ಎಷ್ಟು ಊಹಿಸಬಲ್ಲಿರಾ? ಖಂಡಿತಾ ನಿಮ್ಮಿಂದ ಸಾಧ್ಯವಿಲ್ಲ ಬಿಡಿ. ಅಬ್ಬಬ್ಬಾ ಎಂದ್ರೆ ಒಂದೋ, ಎರಡೋ ಸಾವಿರ ಹೇಳ್ಬೋದು ನೀವು. 5-10 ಸಾವಿರ ಅಂದ್ರೂ ಅದು ತಪ್ಪು. ಈ ಗೋಣಿಚೀಲದ ಪ್ಯಾಂಟ್​ ಬೆಲೆ ಬರೋಬ್ಬರಿ 60 ಸಾವಿರ ರೂಪಾಯಿ! ನಂಬಲು ಆಗ್ತಿಲ್ಲ ಅಲ್ವಾ? ಈ ವಿಡಿಯೋದಲ್ಲಿ ಅದರ ಬೆಲೆಯನ್ನೂ ತೋರಿಸಲಾಗಿದೆ ನೋಡಿ!  

ಬಾಡಿ ಶೇವಿಂಗ್​ ಹೇಗೆ ಮಾಡ್ಬೇಕು? ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ ನಟಿ ಅದಿತಿ ಪ್ರಭುದೇವ

Latest Videos

ಇದಾಗಲೇ ಗೋಣಿಚೀಲವನ್ನು ತೊಟ್ಟು ಬಾಲಿವುಡ್​ ನಟಿ, ಉರ್ಫಿ ಜಾವೇದ್​ ಕಾಣಿಸಿಕೊಂಡಿದ್ದರು. ಆಗ ಇದರ ಬೆಲೆ ಯಾರೂ ಊಹಿಸಿರಲಿಲ್ಲ. ಆದರೆ ಈ ವಿಡಿಯೋ ವೈರಲ್​ ಆದ ಮೇಲೆ ಗೊತ್ತಾಗಿದ್ದು ಬಹುಶಃ ಆ ನಟಿ ತೊಟ್ಟ ಬಟ್ಟೆಗೂ ಇಷ್ಟೇ ಬೆಲೆ ಇದ್ದಿರಲಿಕ್ಕೆ ಸಾಕು ಎಂದು.   ಸದ್ಯ ಈ ಗೋಣಿಚೀಲದ ಪಲಾಝೋ ಪ್ಯಾಂಟ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗ್ತಿದೆ.  ಸಾಮಾನ್ಯವಾಗಿ ಬಟ್ಟೆಯ ಪಲಾಝೋ ಪ್ಯಾಂಟ್‌ನ ಬೆಲೆ ಅಬ್ಬಬ್ಬಾ ಎಂದರೆ ಎರಡು ಸಾವಿರ ರೂ. ವರೆಗೂ ಇರುತ್ತದೆ. ಆದರೆ ಈ ಗೋಣಿಚೀಲದ ಪ್ಯಾಂಟ್‌ನ ಬೆಲೆ 60 ಸಾವಿರ ರೂಪಾಯಿ!
 
ಒಟ್ಟಿನಲ್ಲಿ,  ಮನೆಯಲ್ಲಿ ಬೇಳೆ ಕಾಳುಗಳನ್ನು  ಸುರಕ್ಷಿತವಾಗಿಡಲು, ಮ್ಯಾಟ್‌ನಂತೆ ಕಾಲು ಒರೆಸಲು ಬಳವ ಗೋಣಿಚೀಲಕ್ಕೂ ಈಗ ಟೈಮ್​ ಬಂದಿದೆ ಅಂತಾಯ್ತು.  ದೊಡ್ಡ ದೊಡ್ಡ ಡಿಸೈನರ್ ಗಳು ಹಳೆಯ ಗೋಣಿಚೀಲಗಳಿಂದ ಪೈಜಾಮಾದಂತಹ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಹೊಸ ಟ್ರೆಂಡ್ ಆಗಿದೆ. ಪೈಜಾಮಗಳು ಈಗ ಆಧುನಿಕ ಕಾಲದಲ್ಲಿ ಪಲಾಝೋ ಹೆಸರಿನಿಂದ ಟ್ರೆಂಡ್ ಆಗುತ್ತಿದೆ. ರಮ್ಯಾ ಶೆಟ್ಟಿ ಎನ್ನುವವರನ್ನು ಇದನ್ನು ಶೇರ್​ ಮಾಡಿಕೊಂಡಿದ್ದಾರೆ. 

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ
 

vuukle one pixel image
click me!