
ಮುಂಬೈ(ಮಾ.19) ಅಲೀಮ್ ಹಕೀಮ್ ಹೆಸರು ಹಲವರು ತಿಳಿದಿದ್ದಾರೆ. ಸೆಲೆಬ್ರೆಟಿಗಳ ಹೇರ್ ಡ್ರೆಸ್ಸರ್ ಅಲೀಮ್ ಹಕೀಮ್ ಇಂದು ಭಾರತದದಲ್ಲಿ ಅತ್ಯಂತ ಬೇಡಿಕೆಯ ಹೇರ್ ಡ್ರೆಸ್ಸರ್ ಆಗಿ ಹೊರಹೊಮ್ಮಿದ್ದಾರೆ. ಹೇರ್ ಸ್ಟೈಲ್ ಮೂಲಕ ಭಿನ್ನ ಗೆಟಪ್ ನೀಡಬಲ್ಲ ಸಾಮರ್ಥ್ಯ ಅಲೀಮ್ ಹಕೀಮ್‌ಗೆ ಇದೆ. ಶಾರುಖ್ ಖಾನ್, ರಣಬೀರ್ ಕಪೂರ್, ರಣವೀರ್ ಸಿಂಗ್‌ನಿಂದ ಹಿಡಿದು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ ಸೆಲೆಬ್ರೆಟಿಗಳೆಲ್ಲಾ ಇದೇ ಅಲೀಮ್ ಹಕೀಮ್ ಬಳಿ ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳುತ್ತಾರೆ. ಇವರಿಗೆ ಅಲೀಮ್ ಹಕೀಮ್ ಬರೋಬ್ಬರಿ 1 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ.
ಅಲೀಮ್ ಹಕೀಮ್ ಬಳಿ ಕಟ್ಟಿಂಗ್ ಮಾಡಿಸಿಕೊಳ್ಳಲು ಸೆಲೆಬ್ರೆಟಿಗಳು ಕ್ಯೂ ನಿಲ್ಲುತ್ತಾರೆ. ಮೊದಲೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುತ್ತಾರೆ. ಜೊತೆಗೆ 1 ಲಕ್ಷ ರೂಪಾಯಿ ನೀಡುತ್ತಾರೆ. ಅಲೀಮ್ ಹಕೀಮ್ ಹೇರ್ ಸ್ಟೈಲ್ ಎಲ್ಲರನ್ನು ಚಕಿತಗೊಳಿಸುತ್ತೆ. ವಯಸ್ಸಾದವರನ್ನೂ ಹುಡುಗರಂತೆ ಮಾಡುತ್ತಾರೆ. ಸೆಲೆಬ್ರೆಟಿ ಹೇರ್ ಡ್ರೆಸ್ಸರ್ ಆಗಿರುವ ಅಲೀಮ್ ಹಕೀಮ್ ಇದೀಗ 1 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ನಿಜ. ಆದರೆ ಅಲೀಮ್ ಹಕೀಮ್ ಶುರು ಮಾಡಿದ್ದು ಕೇವಲ 20 ರೂಪಾಯಿಯಿಂದ.
ಇತ್ತೀಚೀಗೆ ಮಮರಾಝಿಗೆ ನೀಡಿದ ಸಂದರ್ಶನದಲ್ಲಿ ಅಲೀಮ್ ಹಕೀಮ್ ತನ್ನ ರೋಚಕ ಪಯಣದ ಕುರಿತು ಹೇಳಿದ್ದಾರೆ. ಕೇವಲ 20 ರೂಪಾಯಿಂದ ಹೇರ್ ಕಟ್ಟಿಂಗ್ ಆರಂಭಿಸಿದ್ದೇನೆ ಎಂದಿದ್ದಾನೆ. ಅಲೀಮ್ ಹಕೀಮ್ 9 ವರ್ಷ ವಿದ್ದಾಗ, ತಂದೆ ನಿಧನರಾಗಿದ್ದರು. ಅಲೀಮ್ ಹಕೀಮ್ ತಂದೆ ಬಾಲಿವುಡ್‌ನ ಹೀರೋಗಳಿಗೆ ಕಟ್ಟಿಂಗ್ ಮಾಡುತ್ತಿದ್ದರು. ಶೋಲೆ, ಜಂಝೀರ್, ಡಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟರಿಗೆ ಹೇರ್ ಕಟ್ಟಿಂಗ್, ಸ್ಟೈಲ್ ಮೂಲಕ ಜನಪ್ರಿಯರಾಗಿದ್ದರು.
ಆದರೆ ದಿಢೀರ್ ತಂದೆಯ ನಿಧನ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿತ್ತು. ಕಾರಣ ತಂದೆ ನಿಧನರಾದಾಗ ಅವರ ಖಾತೆಯಲ್ಲಿ 13ರೂಪಾಯಿ ಇತ್ತು ಎಂದು ಅಲೀಮ್ ಹಕೀಮ್ ಹೇಳಿದ್ದಾರೆ. ಹೀಗಾಗಿ ಮನೆಯ ಜವಾಬ್ದಾರಿ ನಿರ್ವಹಿಸಲು ಹೇರ್ ಕಟ್ಟಿಂಗ್ ದಾರಿ ಹಿಡಿದೆ. ಮೊದಲ ಹೇರ್ ಕಟ್ಟಿಂಗ್‌ಗೆ 20 ರೂಪಾಯಿ ನಿಗದಿ ಮಾಡಿ ಶುರು ಮಾಡಿದ್ದೆ ಎಂದ ಅಲೀಮ್ ಹಕೀಮ್ ಹೇಳಿದ್ದಾರೆ.
ಹೇರ್ ಕಟ್ಟಿಂಗ್ ಹಾಗೂ ಶಾಂಪೂ ಬಳಲಿ ಶುಚಿಗೊಳಿಸಲು 30 ರೂಪಾಯಿ ಚಾರ್ಜ್ ಮಾಡಿದ್ದರು. ಬಳಿಕ ನಿಧಾನವಾಗಿ ಹೇರ್ ಕಟ್ಟಿಂಗ್ ಶಾಪ್‌ಗೆ ಎಸಿ ಅಳವಡಿಸಿ 50 ರಿಂದ 75 ರೂಪಾಯಿ ಚಾರ್ಜ್ ಮಾಡಿದ್ದರು. ಬಳಿಕ ಹಂತ ಹಂತವಾಗಿ ಬಾಲಿವುಡ್‌ನಲ್ಲಿ ದೈತ್ಯ ಹೇರ್ ಡ್ರೆಸ್ಸರ್ ಆಗಿ ಬೆಳೆದು ನಿಂತರು. ತಮಿಳು, ಮಲೆಯಾಳಂ, ತೆಲುಗು ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲೂ ಹೇರ್ ಡ್ರೆಸ್ಸರ್ ಆಗಿ ಕೆಲಸ ಮಾಡಿದ್ದಾರೆ.
ಅಲೀಮ್ ಹಕೀಮ್ ಟೀಂ ಇಂಡಿಯಾದ ಹಲವು ಕ್ರಿಕೆಟಿಗರ ಹೇರ್ ಕಟ್ಟಿಂಗ್ ಮಾಡಿದ್ದಾರೆ. ಎಂಎಸ್ ಧೋನಿ ಪ್ರತಿ ಸರಣಿ, ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಹೊಸ ಹೊಸ ಹೇರ್ ಸ್ಟೈಲ್ ಮೂಲಕ ಕಾಣಿಸಿಕೊಳ್ಳುತ್ತಿದ್ದರು. ಇದರ ಹಿಂದೆ ಇರುವುದು ಅದೇ ಅಲೀಮ್ ಹಕೀಮ್. ಇನ್ನು ವಿರಾಟ್ ಕೊಹ್ಲಿ ಕೂಡ ಹಲವು ಬಾರಿ ಅಲೀಮ್ ಹಕೀಮ್ ಬಳಿ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.