1952ರಲ್ಲಿ ಮಿಸ್ ಯೂನಿವರ್ಸ್​ ಸ್ಪರ್ಧಿಸಿದ್ದ ಭಾರತದ ಮೊದಲ ಮಹಿಳೆ ಇಂದ್ರಾಣಿ ರೆಹಮಾನ್​ ರೋಚಕ ಕಥೆ ಕೇಳಿ...

15ನೇ ವಯಸ್ಸಿನಲ್ಲಿಯೇ ಮುಸ್ಲಿಂ ಯುವಕನನ್ನು ಮದುವೆಯಾಗಿ, ಮಗುವಾದ ಮೇಲೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ  ಇಂದ್ರಾಣಿ ರೆಹಮಾನ್​ ರೋಚಕ ಕಥೆ ಕೇಳಿ... 
 

Indrani Rahman was all of 22 when she represented India at the first ever Miss Universe Pageant in 1952 suc

ಸೌಂದರ್ಯ ಸ್ಪರ್ಧೆಗಳು ಎಂದರೆ, ಅಲ್ಲಿ ಅಶ್ಲೀಲತೆಯೇ ಹೆಚ್ಚಾಗಿರುತ್ತದೆ, ಬಿಕಿನಿ ತೊಟ್ಟು ದೇಹ ಪ್ರದರ್ಶನ ಮಾಡಿ ಎಲ್ಲ ಅಂಗಾಂಗಗಳನ್ನು ತೋರಿಸುವುದು ಕಡ್ಡಾಯ ಎನ್ನುವ ಗಂಭೀರ ಆರೋಪದಿಂದಾಗಿಯೇ ಈ 21ನೇ ಶತಮಾನದಲ್ಲಿಯೂ ಈ ಸ್ಪರ್ಧೆಯ ಬಗ್ಗೆ ಮೂಗುಮುರಿಯುವವರು ಕಾಣಸಿಗುತ್ತಾರೆ. ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ದೇಹದ ಸೌಂದರ್ಯ ಮಾತ್ರವಲ್ಲದೇ ಸ್ಪರ್ಧಾಳುಗಳ ಆಂತರಿಕ ಸೌಂದರ್ಯ, ಬುದ್ಧಿವಂತಿಕೆ, ಜಾಣ್ಮೆ ಎಲ್ಲವುಗಳನ್ನೂ ನೋಡಲಾಗುತ್ತದೆ ಎಂದು ಹೇಳಿದರೂ, ಸುಂದರಿಯರ ಬಾಹ್ಯ ಸೌಂದರ್ಯ ನೋಡಲು ಬಿಕಿನಿ ಧರಿಸುವುದು ಕಡ್ಡಾಯವಾಗಿದೆ! ಸ್ಪರ್ಧಿಗಳ ಮೈಮಾಟ ಹೇಗಿದೆ, ಯಾವ ಭಾಗ ಹೇಗಿದೆ, ಎಷ್ಟು ಅಳತೆ ಇದೆ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲು ಟು ಪೀಸ್​ ಧರಿಸುವುದು ಕಡ್ಡಾಯವಾಗಿದೆ. ಆದರೆ ಬಿಕಿನಿ ಧರಿಸಲ್ಲ ಎನ್ನುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿ ಕೊನೆಗೆ  ಮಿಸ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದ ಏಕೈಕ ನಟಿಯಾಗಿದ್ದವರು  ಪ್ರಿಯಾಂಕಾ ಚೋಪ್ರಾ!   

ಈಗಲೂ ಈ ಮನಸ್ಥಿತಿ ಇರುವಾಗ 1952ರಲ್ಲಿ ಯಾವ ಮನಸ್ಥಿತಿ ಇದ್ದಿರಬಹುದು ಎಂದು ಊಹಿಸುವುದು ಕಷ್ಟ. ಆದರೆ ಆ ಸಂದರ್ಭದಲ್ಲಿಯೇ ಮಿಸ್​ ಯೂನಿವರ್ಸ್​ ಸ್ಪರ್ಧೆಗೆ ಹೋಗಿ, ಅಲ್ಲಿ ತುಂಡುಬಟ್ಟೆಯನ್ನೂ ಧರಿಸಿ,  ಗಟ್ಟಿಗಿತ್ತಿ ಎನ್ನುವ ಬಿರುದು ಪಡೆದ ಮಹಿಳೆಯ ಬಗ್ಗೆ ಇಲ್ಲಿ ತಿಳಿಸುತ್ತಿದ್ದೇವೆ. ಮಗುವಾದ ಮೇಲೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ವಿವಾದವನ್ನೂ ಸೃಷ್ಟಿಸಿದವರು ಇವರು. 1952ರಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ 22 ನೇ ವಯಸ್ಸಿನ ಇಂದ್ರಾಣಿ ರೆಹಮಾನ್, ಭಾರತದ ಮೊದಲ ಮಹಿಳೆ ಎಂದು ಎನ್ನಿಸಿಕೊಂಡಿದ್ದಾರೆ.  ಆ ಸಮಯದಲ್ಲಿ ಅವರಿಗೆ ಮದುವೆಯೂ ಆಗಿ ಮಕ್ಕಳೂ ಆಗಿದ್ದರು. ಅದ್ಭುತ ಸೌಂದರ್ಯವತಿ ಎನ್ನಿಸಿಕೊಂಡಿದ್ದರು. 15 ನೇ ವಯಸ್ಸಿನಲ್ಲಿ ವಾಸ್ತುಶಿಲ್ಪಿ ಹಬೀಬ್ ರೆಹಮಾನ್ ಅವರನ್ನು ವಿವಾಹವಾದ ರೆಹಮಾನ್, ಭರತ ನಾಟ್ಯ, ಕೂಚಿಪುಡಿ, ಕಥಕ್ಕಳಿ ಮತ್ತು ಒಡಿಸ್ಸಿಯಲ್ಲಿ ಪಾರಂಗತರಾಗಿದ್ದರು. ಅಮೆರಿಕನ್ ಮೂಲದ ತಮ್ಮ ತಾಯಿ ಎಸ್ತರ್ ಲುಯೆಲ್ಲಾ ಶೆರ್ಮನ್ ಅವರ ಹೆಜ್ಜೆಗಳನ್ನು ಅನುಸರಿಸಿ ಅವರು ನೃತ್ಯ ಜಗತ್ತಿಗೆ ಪ್ರವೇಶಿಸಿದರು. 

Latest Videos

ಬಿಕಿನಿ ಧರಿಸಲು ಹಿಂದೇಟು ಹಾಕಿ ಮಿಸ್​ ವರ್ಲ್ಡ್​ ಗೆದ್ದ ಏಕೈಕ ಬಾಲಿವುಡ್​ ನಟಿ ಈಕೆ: ಅಮ್ಮ ಹೇಳಿದ ಸ್ಟೋರಿ ಕೇಳಿ...

ಆಕೆಯ ತಂದೆ ರಾಮಲಾಲ್ ಬಾಜಪೈ, ಮಹಾರಾಷ್ಟ್ರದ ನಾಗಪುರದವರಾಗಿದ್ದು, ರಸಾಯನಶಾಸ್ತ್ರಜ್ಞರಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಇಲ್ಲಿ ಅವರು ಅಮೆರಿಕ ಮೂಲದ ಎಸ್ತರ್ ಲುಯೆಲ್ಲಾ ಶೆರ್ಮನ್ ಅವರನ್ನು ಭೇಟಿಯಾಗಿ ವಿವಾಹವಾದರು. 1893 ರಲ್ಲಿ ಮಿಚಿಗನ್‌ನ ಪೆಟೋಸ್ಕಿಯಲ್ಲಿ ಜನಿಸಿದ ಎಸ್ತರ್ (ಮರಣ 1982), ಮದುವೆಯಾದ ನಂತರ ಹಿಂದೂ ಧರ್ಮವನ್ನು ಸ್ವೀಕರಿಸಿ 'ರಾಗಿಣಿ ದೇವಿ' ಎಂಬ ಹೆಸರನ್ನು ಪಡೆದರು. ಇವರಿಗೆ ಹುಟ್ಟಿದವರು, ಇಂದ್ರಾಣಿ. ಬಳಿಕ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರು. ಇಂದ್ರಾಣಿ ಅವರು, ಅತಿ ಗಣ್ಯರು ಎನ್ನಿಸಿಕೊಂಡಿದ್ದ ಜಾನ್ ಎಫ್. ಕೆನಡಿ ಮತ್ತು ಜವಾಹರಲಾಲ್ ನೆಹರು ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳ ಎದುರು ಪ್ರದರ್ಶನ ನೀಡಿದವರು ಇಂದ್ರಾಣಿ.  ನಂತರ ಪಶ್ಚಿಮದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಜನಪ್ರಿಯಗೊಳಿಸಿದವರು ಇವರು.  ರಾಣಿ ಎಲಿಜಬೆತ್ II ಮತ್ತು ಚಕ್ರವರ್ತಿ ಹೈಲೆ ಸೆಲಾಸಿ ಸೇರಿದಂತೆ ಇತರರ ಎದುರೂ ಪ್ರದರ್ಶನ ನೀಡಿ ವಿಶ್ವಪ್ರಸಿದ್ಧರೂ ಆಗಿದ್ದವರು.  ಸೌಂದರ್ಯ ಸ್ಪರ್ಧೆಯ ಈಗ ಪ್ರಸಿದ್ಧವಾಗಿರುವ ಈಜುಡುಗೆ ಸುತ್ತಿನಲ್ಲಿ ರೆಹಮಾನ್ ತಮ್ಮ ಕೂದಲಿನಲ್ಲಿ ಬಿಂದಿ ಮತ್ತು ಗಜ್ರಾ ಧರಿಸಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು.  ಇದು ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸಿತ್ತು.  

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ, ಅವರಿಗೆ  ಪ್ರಪಂಚದಾದ್ಯಂತ ನೃತ್ಯ ಪ್ರದರ್ಶನಕ್ಕೆ ಅವಕಾಶ ಹುಡುಕಿ ಬಂದವು.  1961 ರಲ್ಲಿ ಅವರು ಏಷ್ಯಾ ಸೊಸೈಟಿ ಪ್ರವಾಸದ ಭಾಗವಾದ ಮೊದಲ ನರ್ತಕಿಯಾದರು. 1976 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್‌ನ ಪ್ರತಿಷ್ಠಿತ ಜ್ಯೂಲಿಯಾರ್ಡ್ ಶಾಲೆಯ ನೃತ್ಯ ವಿಭಾಗದಲ್ಲಿ ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ರೆಹಮಾನ್, ತಮ್ಮ ಸಮೃದ್ಧ ನೃತ್ಯ ವೃತ್ತಿಜೀವನದಲ್ಲಿ 1969 ರಲ್ಲಿ ಪದ್ಮಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ತಾರಕನಾಥ್ ದಾಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದರು - ಅವರದು ಒಂದು ಅದ್ಭುತ ಜೀವನ ಪ್ರಯಾಣವಾಗಿದ್ದು, ಅವರನ್ನು ಪ್ರಪಂಚದಾದ್ಯಂತ ಕರೆದೊಯ್ಯುತ್ತದೆ.  ಇವರು 1999ರಲ್ಲಿ, 68ನೇ ವಯಸ್ಸಿನಲ್ಲಿ ನಿಧನರಾದರು. 

ಶಾರುಖ್​ ಪುತ್ರಿ ಸೇರಿದಂತೆ ಎಲ್ಲರೂ ಬಿಚ್ಚಿ ಬಿಚ್ಚಿ ತೋರಿಸಿದ್ರೆ , ಮುಚ್ಚಿಕೊಂಡಾಕೆ ಒಬ್ಬಳೇ ನಟಿ: ವಿಡಿಯೋಗೆ ಸಕತ್​ ಕಮೆಂಟ್​

 

vuukle one pixel image
click me!