ಬಟ್ಟೆ ಖರೀದಿಸೋದ್ರಲ್ಲಿ ಹುಡುಗ್ರೇನು ಕಮ್ಮಿಯಿಲ್ಲ. ಅವರ ಬಳಿಯೂ ಕಪಾಟು ತುಂಬುವಷ್ಟು ಬಟ್ಟೆಯಿರುತ್ತೆ. ಹುಡುಗ್ರ ಬಟ್ಟೆ ಮೇಲೆ ಹುಡುಗಿಯರು ಕಣ್ಣಿಟ್ಟಿರ್ತಾರೆ. ತಂದೆ, ಅಣ್ಣ, ಪತಿಯ ಡ್ರೆಸ್ ಇಷ್ಟವಾದ್ರೆ ಯಾಕೆ ತಡ? ನಿಮ್ಮದೆ ಸ್ಟೈಲ್ ನಲ್ಲಿ ಅದನ್ನ ಧರಿಸಿ ಎಂಜಾಯ್ ಮಾಡಿ.
ಡ್ರೆಸ್(Dress )ಯಾವುದಾದ್ರೆ ಏನು? ಯಾರದ್ದಾದರೆ ಏನು? ತೊಟ್ಟವರು ಆಕರ್ಷಕವಾಗಿ ಕಾಣ್ಬೇಕು ಅಷ್ಟೆ. ಇದೇ ರೂಲ್ಸನ್ನ ಅನೇಕ ಹುಡುಗಿಯರು ಪಾಲಿಸ್ತಾರೆ. ಮನೆ (Home)ಯಲ್ಲಿರುವಾಗ ಅವ್ರ ಡ್ರೆಸ್ ಭಿನ್ನವಾಗಿರುತ್ತೆ.ಹಿತವೆನ್ನಿಸುವ ಡ್ರೆಸ್ ಗೆ ಆದ್ಯತೆ ನೀಡುವ ಅವರು ಬಾಯ್ಸ್ (Boys )ಡ್ರೆಸ್ ಧರಿಸಲು ಇಷ್ಟಪಡ್ತಾರೆ. ತಂದೆ ಅಥವಾ ಸಹೋದರರ ಟೀ ಶರ್ಟ್,ಶರ್ಟ್ ಧರಿಸ್ತಾರೆ. ದೊಡ್ಡ ಸೈಜ್ (Size )ನ ಡ್ರೆಸ್ ಆರಾಮ ನೀಡುವ ಜೊತೆಗೆ ಇಂಥ ಡ್ರೆಸ್ ನಲ್ಲಿ ಬಹುತೇಕ ಹುಡುಗಿಯರು ಮುದ್ದು ಮುದ್ದಾಗಿ ಕಾಣ್ತಾರೆ. ಪತಿ,ತಂದೆ ಅಥವಾ ಸಹೋದರನ ಡ್ರೆಸ್ ಮನೆಯಲ್ಲಿ ಮಾತ್ರವಲ್ಲ ಹೊರಗೂ ಧರಿಸಬಹುದು.ಇದು ಹುಡುಗಿಯರಿಗೆ ಸ್ಟೈಲಿಶ್ ಲುಕ್ ನೀಡುತ್ತದೆ. ನೀವೂ ಸಹೋದರರ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಕಾಣ್ಬೇಕು,ಶಾಪಿಂಗ್ (Shopping) ಗೆ ಅದನ್ನು ಕ್ಯಾರಿ ಮಾಡ್ಬೇಕು ಅಂದುಕೊಂಡಿದ್ದರೆ ಈ ಸುದ್ದಿ ಓದಿ. ತಂದೆ, ಸಹೋದರ, ಪತಿ ಅಥವಾ ಗೆಳೆಯನ ಬಟ್ಟೆಗಳನ್ನು ಸ್ಟೈಲಿಶ್ ಆಗಿ ಹೇಗೆ ಧರಿಸೋದು ಎಂಬ ಸಲಹೆಯನ್ನು ನಾವಿಂದು ನೀಡ್ತೆವೆ.
ಪುರುಷರ ಉಡುಪಿನೊಂದಿಗೆ ನಿಮ್ಮ ಸ್ಟೈಲ್
undefined
ಎಲ್ಲರ ಅಚ್ಚುಮೆಚ್ಚಿನ ಶರ್ಟ್ (Shirts) : ಶರ್ಟ್‌ಗಳನ್ನು ಎಲ್ಲರೂ ಇಷ್ಟಪಡ್ತಾರೆ. ಹುಡುಗಿಯರ ವಾರ್ಡ್ರೋಬ್ ನಲ್ಲಿಯೂ ಸಾಕಷ್ಟು ಶರ್ಟ್ ಗಳಿರುತ್ವೆ. ಅದೇ ಶರ್ಟ್ ಧರಿಸಿ ಬೋರ್ ಆಗಿದೆ ಎನ್ನುವವರು ಪುರುಷರ ಶರ್ಟ್ ಟ್ರೈ ಮಾಡಿ. ಸಾಮಾನ್ಯ ಶರ್ಟನ್ನು ಪ್ಯಾಂಟ್ (Pants )ಅಥವಾ ಪೆನ್ಸಿಲ್ ಸ್ಕರ್ಟ್ (Skirt)ಗಳೊಂದಿಗೆ ಧರಿಸಬಹುದು.
ಉದ್ದ ಶರ್ಟ್ ಹೀಗೆ ಧರಿಸಿ : ನಿಮ್ಮ ಬಳಿ ಪುರುಷರ ಉದ್ದ ಶರ್ಟ್ ಇದ್ದರೆ ಅದನ್ನು ಸ್ಟೈಲಿಶ್ (Stylish) ಆಗಿ ಧರಿಸಬಹುದು. ಉದ್ದದ ಶರ್ಟ್ ನಿಮ್ಮ ಮೊಣಕಾಲಿಗಿಂತ ಸ್ವಲ್ಪ ಮೇಲೆ ಬರ್ತಿದ್ದರೆ ಇದಕ್ಕೆ ಸೂಪರ್ ಲುಕ್ ನೀಡಬಹುದು. ಈ ಶರ್ಟ್ ಕೆಳಗೆ ನೀವು ಶಾರ್ಟ್ಸ್ (Shorts )ಅಥವಾ ಹಾಟ್ ಪ್ಯಾಂಟ್ ಧರಿಸಬಹುದು. ಶರ್ಟ್ ಇನ್ನೂ ಸ್ವಲ್ಪ ಉದ್ದವಿದ್ದರೆ ನೀವು ಒನ್ ಪೀಸ್ ಡ್ರೆಸ್ (One Piece Dress )ಮಾಡಬಹುದು. ಅದಕ್ಕೆ ಬೆಲ್ಟ್ ಹಾಕಬೇಕಾಗುತ್ತದೆ. ಚಳಿಗಾಲವಾದರೆ ಲೆಗ್ ವಾರ್ಮರ್ (Leg Warmer )ಗಳನ್ನೂ ಧರಿಸಬಹುದು.
ಶರ್ಟ್ ಜೊತೆ ಸ್ಕರ್ಟ್ : ಸ್ಕರ್ಟ್ನೊಂದಿಗೆ ಶರ್ಟ್ ಧರಿಸಬಹುದು. ಇದು ಕೂಡ ಆಕರ್ಷಕವಾಗಿರುತ್ತದೆ. ಶರ್ಟ್ ಹಾಗೂ ಸ್ಕರ್ಟ್ ಬಣ್ಣದ ಕಾಂಬಿನೇಷನ್ ಮೇಲೆ ಗಮನ ಹರಿಸಬೇಕಾಗುತ್ತದೆ. ಚಳಿಗಾಲದಲ್ಲಿ ಶರ್ಟ್ ಮತ್ತು ಸ್ಕರ್ಟ್ ಧರಿಸುವ ತೀರ್ಮಾನಕ್ಕೆ ಬಂದಿದ್ದರೆ ಕ್ರಾಪ್ ಸ್ವೆಟರ್ (Crop Sweater )ಧರಿಸಿ ನಿಮ್ಮ ಲುಕ್ ಮತ್ತಷ್ಟು ಆಕರ್ಷಕಗೊಳಿಸಬಹುದು.
Footwear Shopping : ಚಪ್ಪಲಿ ಖರೀದಿ ಮಾಡುವಾಗ ಈ ತಪ್ಪು ಮಾಡ್ಬೇಡಿ..
ಡೆನಿಮ್ ಶರ್ಟ್ ಹೀಗೆ ಧರಿಸಿ : ನೀವು ಪುರುಷರ ಡೆನಿಮ್ ಶರ್ಟ್ ಅನ್ನು ಹೊಂದಿದ್ದರೆ, ನೀವು ಅದನ್ನು ಜಾಕೆಟ್ ಶೈಲಿಯಲ್ಲಿ ಧರಿಸಬಹುದು. ಸರಳವಾದ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ನೊಂದಿಗೆ ಡೆನಿಮ್ ಶರ್ಟ್ ಆಕರ್ಷಕ ನೋಟವನ್ನು ನೀಡುತ್ತದೆ. ನೀವು ಟೀ ಶರ್ಟ್ ಮೇಲೆ ಹುಡುಗರ ಡೆನಿಮ್ ಶರ್ಟ್ ಹಾಕಬಹುದು.
Old Fashion: ಹಳೆಯ, ಹರಿದ ಸ್ವೆಟರ್‌ಗೆ ನೀಡಿ ನ್ಯೂ ಲುಕ್
ಡೆನಿಮ್ ಶರ್ಟ್‌ನೊಂದಿಗೆ ಮಿಡಿ : ಹೆಚ್ಚು ಸಡಿಲವಾದ ಡೆನಿಮ್ ಶರ್ಟ್ ಹೊಂದಿದ್ದರೆ, ನೀವು ಅದನ್ನು ಒನ್ ಪೀಸ್ ಅಥವಾ ಮಿಡಿಯಾಗಿ ಧರಿಸಬಹುದು. ಬೆಲ್ಟ್ ಸೇರಿಸುವ ಮೂಲಕ ಸ್ಟೈಲಿಶ್ ಆಗಿ ಕಾಣಬಹುದು.
ಬ್ಲೇಜರ್ (Blazer )ಹೀಗೆ ಧರಿಸಿ : ಪುರುಷರ ಬ್ಲೇಜರ್ ಅನ್ನು ಟೈಟ್ಸ್ ಅಥವಾ ಡೆನಿಮ್‌ಗಳೊಂದಿಗೆ ಧರಿಸುವ ಮೂಲಕ ಸ್ಮಾರ್ಟ್ ಲುಕ್ ಪಡೆಯಬಹುದು. ಈ ದಿನಗಳಲ್ಲಿ ದೊಡ್ಡ ಸೈಜ್ ನ ಬ್ಲೇಜರ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಈ ಡ್ರೆಸ್ ಜೊತೆ ಹೀಲ್ಸ್ ಅಥವಾ ಬೂಟುಗಳನ್ನು ಕೂಡ ಧರಿಸಬಹುದು.