Footwear Shopping : ಚಪ್ಪಲಿ ಖರೀದಿ ಮಾಡುವಾಗ ಈ ತಪ್ಪು ಮಾಡ್ಬೇಡಿ..

By Suvarna NewsFirst Published Dec 27, 2021, 1:30 PM IST
Highlights

 ಚಪ್ಪಲಿ ಅಂಗಡಿಗೆ ಹೋದಾಗ ಕನ್ಫ್ಯೂಸ್ ಆಗೋದು ಕಾಮನ್. ಒಂದಕ್ಕಿಂತ ಒಂದು ಚಂದದ ಪಾದರಕ್ಷೆ ನಮ್ಮನ್ನು ಸೆಳೆಯುತ್ತದೆ. ಕಡಿಮೆ ಬೆಲೆಗೆ ಸುಂದರ ಚಪ್ಪಲಿ ಕಣ್ಣಿಗೆ ಬಿದ್ರೆ ಮುಗಿದೇ ಹೋಯ್ತು. ಅದು ಕಾಲಿಗೆ ಬರಲಿ,ಬಿಡಲಿ ಖರೀದಿ ಮಾಡೋದೆ.

ಹಿಂದಿನ ಕಾಲದಲ್ಲಿ ಪಾದರಕ್ಷೆ(Footwear)ಗಳು ಮನೆಯ ಹೊರಗೆ ಇಡುವಂತಹ ವಸ್ತುಗಳಾಗಿದ್ದವು. ಪಾದಗಳಿಗೆ ರಕ್ಷಣೆ ನೀಡಲು ಅನಿವಾರ್ಯ ಎಂಬ ಕಾರಣಕ್ಕೆ ಮಾತ್ರ ಅದನ್ನು ಧರಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಪಾದರಕ್ಷೆಗಳಿಗೂ ವಿಶೇಷ ಸ್ಥಾನ ಸಿಕ್ಕಿದೆ. ಫ್ಯಾಷನ್ (Fashion )ಕ್ಷೇತ್ರದಲ್ಲಿ ಪಾದರಕ್ಷೆಗಳು ಸ್ಥಾನ ಪಡೆದಿವೆ. ಕೇವಲ ಡ್ರೆಸ್,ಮೇಕಪ್ ನೋಡುವುದಿಲ್ಲ.ಚಪ್ಪಲಿ,ಶೂ ಮೇಲೂ ಕಣ್ಣು ಹೋಗುವುದರಿಂದ ಡ್ರೆಸ್ ಗೆ ತಕ್ಕಂತೆ ಪಾದರಕ್ಷೆ ಹಾಕುವುದು ಈಗ ಒಂದು ರೀತಿಯಲ್ಲಿ ಅನಿವಾರ್ಯವಾಗಿದೆ ಎಂದ್ರೆ ತಪ್ಪಾಗಲಾರದು. ಜನ ಬದಲಾದಂತೆ,ಫ್ಯಾಷನ್ ಬದಲಾದಂತೆ ಮಾರುಕಟ್ಟೆಗೆ ಬಗೆ ಬಗೆಯ ಪಾದರಕ್ಷೆಗಳು ಲಗ್ಗೆಯಿಟ್ಟಿವೆ. 

ಮದುವೆ(Marriage) ಸಮಾರಂಭಕ್ಕೆ ಹೋಗಲು ಬೇರೆ ಪಾದರಕ್ಷೆ,ಜಿಮ್ ಗೆ ಬೇರೆ,ಡಾನ್ಸ್ ಗೆ ಬೇರೆ,ಸಾಮಾನ್ಯ ಓಡಾಟಕ್ಕೆ ಬೇರೆ ಹೀಗೆ ವಿವಿಧ ಚಪ್ಪಲಿಗಳು ಮನೆಯಲ್ಲಿರುತ್ತವೆ. ಅನೇಕ ಮಹಿಳೆಯರು ಡ್ರೆಸ್ ಜೊತೆ ಮ್ಯಾಚಿಂಗ್ (Matching) ಓಲೆ,ಬಳೆ ಮಾತ್ರವಲ್ಲ ಪಾದರಕ್ಷೆ ಖರೀದಿ ಮಾಡುತ್ತಾರೆ. ಮನೆ ಹೊರಗೆ ಇರ್ತಿದ್ದ ಪಾದರಕ್ಷೆಗಳು ಈಗಾಗಲೇ ವಾರ್ಡ್ರೋಬ್ (Wardrobe) ಸೇರಿಯಾಗಿವೆ. ಚಂದದ,ಇಷ್ಟವಾದ,ದುಬಾರಿಯ ಪಾದರಕ್ಷೆಗಳನ್ನು  ಬಟ್ಟೆ ಜೊತೆ ಇಡುವ ಜನರಿದ್ದಾರೆ. ಕೆಲವೊಮ್ಮೆ ನಮಗೆ ಪಾದರಕ್ಷೆ ಇಷ್ಟವಾಗಿರುತ್ತದೆ. ಬೆಲೆ ನೋಡದೆ ದುಬಾರಿ ಹಣಕೊಟ್ಟು ಅದನ್ನು ಖರೀದಿ ಕೂಡ ಮಾಡಿರುತ್ತೇವೆ. ಆದ್ರೆ ಖರೀದಿಸಿದ ನಂತ್ರ ಅದನ್ನು ಧರಿಸಲು ಒಂದಿಷ್ಟು ಸಮಸ್ಯೆ ಕಾಡುತ್ತದೆ. ಹಾಗಾಗಿ ಪಾದರಕ್ಷೆ ಖರೀದಿ ಮಾಡುವ ಮೊದಲು ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಪಾದರಕ್ಷೆ ಖರೀದಿಸುವ ಮುನ್ನ

ಸೈಜ್ (Size )ಮೇಲೆ ಮಾತ್ರ ಗಮನ : ಪಾದರಕ್ಷೆಗಳನ್ನು ಖರೀದಿಸುವಾಗ, ಮೊದಲನೆಯದಾಗಿ ಎಲ್ಲರೂ ಗಾತ್ರದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದ್ರೆ ಗಾತ್ರ ಮಾತ್ರ ನೋಡಿದರೆ ನೀವು ಉತ್ತಮವಾದ ಪಾದರಕ್ಷೆ ಖರೀದಿಸಲು ಸಾಧ್ಯವಿಲ್ಲ. ಗಾತ್ರದ ಜೊತೆ ಝಿಪ್ಪರ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ, ಲೇಸ್ ಗಳು ಬಲವಾಗಿದೆಯೇ, ಪಾದರಕ್ಷೆ ಆರಾಮದಾಯಕವಾಗಿದೆಯೇ ಅಥವಾ ಇಲ್ಲವೇ ಮುಂತಾದ ಇತರ ವಿಷಯಗಳ ಬಗ್ಗೆಯೂ ನೀವು ಗಮನ ಹರಿಸಬೇಕು.

ಯೋಚಿಸದೆ ಬೂಟು (Shoes)ಗಳನ್ನು ಖರೀದಿಸಬಾರದು : ಇದು ವಿಚಿತ್ರವೆನಿಸಬಹುದು, ಆದರೆ ಹೆಚ್ಚಿನ ಮಹಿಳೆಯರು ಯೋಚಿಸದೆ ಶೂಗಳನ್ನು ಖರೀದಿಸುತ್ತಾರೆ. ಶೂ ಎಷ್ಟು ಉದ್ದವಿದೆ. ಅದು ಸರಿಯಾಗುತ್ತದೆಯೇ ಎಂಬುದನ್ನು ನೋಡುವುದಿಲ್ಲ. ಹಾಗೆ  ಎಲ್ಲ ಸ್ನಿಕರ್ಸ್, ಸ್ಪೋರ್ಟ್ಸ್ ಗೆ ಯೋಗ್ಯವಾಗಿರುವುದಿಲ್ಲ ಎಂಬುದನ್ನು ತಿಳಿದಿರಬೇಕು. 

ಒಂದೇ ಕಾಲಿನ ಪರೀಕ್ಷೆ : ಇದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಪಾದರಕ್ಷೆ ಅಂಗಡಿಗೆ ಹೋದಾಗ ಒಂದು ಕಾಲಿಗೆ ಚಪ್ಪಲಿ ಹಾಕಿ ನೋಡ್ತೆವೆ. ಗಾತ್ರ ಸರಿಯಿದೆ,ಚೆನ್ನಾಗಿ ಕಾಣ್ತಿದೆ ಎಂದ್ರೆ ತಕ್ಷಣ ಖರೀದಿ ಮಾಡಿಬಿಡ್ತೆವೆ. ಅದು ತಪ್ಪು. ಎರಡೂ ಕಾಲುಗಳು ನೂರಕ್ಕೆ ನೂರರಷ್ಟು ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಎರಡೂ ಕಾಲಿಗೆ ಹಾಕಿ ನೋಡಬೇಕು. ಯಾಕೆಂದ್ರೆ ಒಂದು ಕಾಲಿಗೆ ಸರಿಯಾದ ಚಪ್ಪಲಿ,ಇನ್ನೊಂದು ಕಾಲಿಗೆ ಸಡಿಲವಾಗಬಹುದು ಅಥವಾ ಬಿಗಿಯಾಗಬಹುದು.

Health Tips : ವಯಸ್ಸೇ ಆಗದಂತೆ ಕಾಣಲು ಏನ್ಮಾಡಬೇಕು.. ಸರಳ ಸೂತ್ರಗಳು!

ಸಂಜೆ ಚಪ್ಪಲಿ ಖರೀದಿ ಮಾಡಿ : ಸಾಧ್ಯವಾದಷ್ಟು ಸಂಜೆ ಪಾದರಕ್ಷೆಗಳನ್ನು ಖರೀದಿಸುವುದು ಒಳ್ಳೆಯದು. ಏಕೆಂದರೆ ಕೆಲವರಿಗೆ ಸಂಜೆಯಾದಂತೆ ಪಾದ ಊದಿಕೊಳ್ಳುತ್ತದೆ. ಬೆಳಿಗ್ಗೆ ಪಾದಕ್ಕೆ ಸರಿಯಾಗಿದೆ ಎಂಬ ಕಾರಣಕ್ಕೆ ಖರೀದಿಸಿದ ಚಪ್ಪಲಿ ಸಂಜೆ ಬಿಗಿಯಾಗಬಹುದು. ಊತದ ಸಮಸ್ಯೆಯಿರುವವರು ಚಪ್ಪಲಿಯನ್ನು ಸಂಜೆ ಖರೀದಿಸುವುದು ಯೋಗ್ಯ.

ಹೊಸ ಶೂ ಖರೀದಿ ಮೊದಲು : ಹೊಸ ಶೂ ಖರೀದಿ ಮಾಡುವಾಗ ನಿಮ್ಮ ಕಾಲಿನ ಬೆರಳಿನಿಂದ ಅರ್ಧ ಇಂಚು ಶೂನಲ್ಲಿ ಜಾಗವಿರುವಂತೆ ನೋಡಿಕೊಳ್ಳಿ. ಹಾಗೆ ಹೊಸ ಶೂ ಖರೀದಿಸಿದ ಕೆಲ ದಿನಗಳವರೆಗೆ ಬಹಳ ಸಮಯ ಶೂ ಧರಿಸಬೇಡಿ. ಕಾಲಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. 

Winter Sex: ಶವರ್ ಸೆಕ್ಸ್ ಮಾಡಿದ್ರೆ ಚಳಿಗಾಲದಲ್ಲೂ ಬೆಚ್ಚಗಿರಬಹುದು

ಹೈ ಹೀಲ್ಡ್ : ಹೈ ಹೀಲ್ಡ್ ಈಗ ಫ್ಯಾಷನ್. ಇದು ಮಹಿಳೆ ಕಾಲಿನ ಅಂದವನ್ನು ಹೆಚ್ಚಿಸುತ್ತದೆ. ಕೆಲ ಮಹಿಳೆಯರಿಗೆ ಹೈ ಹೀಲ್ಡ್ ಧರಿಸಿ ಅಭ್ಯಾಸವಿರುವುದಿಲ್ಲ. ಹಾಗಿದ್ದೂ ಚೂಪಾದ ಹೈ ಹೀಲ್ಡ್  ಖರೀದಿ ಮಾಡಿ ಪರದಾಡುತ್ತಾರೆ. ಮೊದಲು ಚಿಕ್ಕ ಚಿಕ್ಕ ಹೀಲ್ಡ್  ಧರಿಸಿ ಪ್ರ್ಯಾಕ್ಟೀಸ್ ಮಾಡಿಕೊಳ್ಳಿ. 

click me!