2021ರ ಭುವನ ಸುಂದರಿ ಪಟ್ಟವನ್ನು ಗೆದ್ದ ನಂತರ ಹರ್ನಾಝ್ ಸಂಧು(Harnaaz Sandhu) ಸುದ್ದಿಯಲ್ಲಿದ್ದಾರೆ. ಇಸ್ರೇಲ್‌ನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಭುವನ ಸುಂದರಿ(Miss Universe 2021) ಸ್ಪರ್ಧೆಯಲ್ಲಿ ಹರ್ನಾಝ್ 38 ಕೋಟಿ ಬೆಲೆ ಬಾಳುವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಬರೋಬ್ಬರಿ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟವನ್ನು ಭಾರತಕ್ಕೆ(India) ತಂದ ಕೀರ್ತಿ ಹರ್ನಾಝ್‌ಗೆ ಸಲ್ಲುತ್ತದೆ. ಹಾಗಾಗಿಯೇ ಇದು ಭಾರತೀಯರಿಗೆ ಭಾವುಕ ಕ್ಷಣವಾಗಿತ್ತು. ಕಿರೀಟ ಗೆದ್ದ ಮೂರನೇ ಭಾರತೀಯಳು ಹರ್ನಾಝ್. ಈ ಹಿಂದೆ ಸುಶ್ಮಿತಾ ಸೆನ್ 1994 ಹಾಗೂ ಲಾರಾ ದತ್ತಾ 2000ದಲ್ಲಿ ಕಿರೀಟ ಗೆದ್ದಿದ್ದರು.
ಇತ್ತೀಚೆಗೆ ಸಂದರ್ಶನದಲ್ಲಿ ಹರ್ನಾಜ್ ಸಂಧು ತನ್ನ ಬಾಲಿವುಡ್ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಮಿಸ್ ಯೂನಿವರ್ಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಅತಿಥೇಯ ಸ್ಟೀವ್ ಹಾರ್ವೆ ಕೇಳಿದ ಹೆಚ್ಚು ಟೀಕೆಗೊಳಗಾದ ಪ್ರಶ್ನೆಯ ಬಗ್ಗೆಯೂ ಮಾತನಾಡಿದ್ದಾರೆ. ಸುಶ್ಮಿಆ ಸೇನ್ ಹಾಗೂ ಲಾರಾ ದತ್ತಾ ಅವರು ನಮ್ಮೆಲ್ಲರನ್ನು ಎಷ್ಟು ಸುಂದರವಾಗಿ ಹಾರೈಸಿದ್ದಾರೆಂದು ನಾವೆಲ್ಲರೂ ನೋಡಿದ್ದೇವೆ. ಸಹಜವಾಗಿ, ನಾವು ಶೀಘ್ರದಲ್ಲೇ ಅವರನ್ನು ಭೇಟಿಯಾಗುತ್ತೇವೆ. ಏಕೆಂದರೆ ನಾವೆಲ್ಲರೂ ನಮ್ಮ ನಮ್ಮ ಕೆಲಸದಲ್ಲಿ ನಿರತರಾಗಿದ್ದೇವೆ. ಕೋವಿಡ್ ಇದೆ. ನಾನು ಈಗಷ್ಟೇ ಕ್ವಾರಂಟೈನ್‌ನಿಂದ ಹೊರಬಂದೆ ಎಂದಿದ್ದಾರೆ ಹರ್ನಾಝ್.
undefined
Miss Universe 2021: ಹರ್ನಾಝ್ ಮುಡಿಗೇರಿದ ಕಿರೀಟದ ಬೆಲೆ ಒಂದೆರಡು ಕೋಟಿಯಲ್ಲ
ನೀವು ಪವರ್‌ಫುಲ್ ಶ್ರೀಮಂತ, ವಯಸ್ಸಾದ ವ್ಯಕ್ತಿಯನ್ನು ಡೇಟ್ ಮಾಡುತ್ತೀರೋ ಅಥವಾ ಕಷ್ಟಪಡುತ್ತಿರುವ ಯುವಕನನ್ನೋ ಎಂದಾಗ ಹರ್ನಾಝ್ ನಾನು ಹೋರಾಟ ಮಾಡುವ, ಸ್ಟ್ರಗಲ್ ಮಾಡುವ ಯುವಕನೊಂದಿಗೆ ಡೇಟ್ ಮಾಡಲು ಬಯಸುತ್ತೇನೆ. ಕಾರಣ ನಾನೇ ಕಷ್ಟ ಪಟ್ಟಿದ್ದೇನೆ. ಮತ್ತು ಕಷ್ಟಪಡುತ್ತೇನೆ. ಒಬ್ಬ ವ್ಯಕ್ತಿಯಾಗಿ, ಹೋರಾಟ ಮಾಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಆಗ ಮಾತ್ರ ನಾವು ನಮ್ಮ ಸಾಧನೆಗಳನ್ನು ಗೌರವಿಸಬಹುದು ಎಂದಿದ್ದಾರೆ.
ಅತ್ಯಂತ ದುಬಾರಿ ಕಿರೀಟ
ಮೊದಲನೆಯದಾಗಿ ಹರ್ನಾಜ್ ಅವರ ಮುಡಿಗೇರಿದ ಕಿರೀಟವು ಬಹುತೇಕ 37 ಕೋಟಿ ಬೆಲೆ ಬಾಳುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಕಿರೀಟವಾಗಿದೆ. ಆದರೂ ಮುಂದಿನ ವಿಶ್ವ ಸುಂದರಿ ಘೋಷಣೆಯಾಗುವವರೆಗೆ ಮಾತ್ರ ಕಿರೀಟವನ್ನು ಹಿಡಿದಿಟ್ಟುಕೊಳ್ಳಲು ಹರ್ನಾಝ್‌ಗೆ ಅನುಮತಿ ಇದೆ.
ಈ ವರ್ಷದ ವಿಶ್ವ ಸುಂದರಿ ಕಿರೀಟವನ್ನು ಮೌವಾದ್ ವಿನ್ಯಾಸಗೊಳಿಸಿದ್ದಾರೆ. ಇದನ್ನು ಪವರ್ ಆಫ್ ಯೂನಿಟಿ ಕ್ರೌನ್ ಎಂದು ಕರೆಯಲಾಗುತ್ತದೆ. ಮೌವಾದ್ ಕಿರೀಟವನ್ನು 18-ಕ್ಯಾರಟ್ ಚಿನ್ನದಿಂದ ತಯಾರಿಸಲಾಗುತ್ತದೆ. 1,725 ಬಿಳಿ ವಜ್ರಗಳು ಮತ್ತು 3 ಗೋಲ್ಡನ್ ಕ್ಯಾನರಿ ವಜ್ರಗಳೊಂದಿಗೆ ಕೈಯಿಂದ ಹೊಂದಿಸಲಾಗಿದೆ. ರತ್ನಗಳನ್ನು ದಳಗಳು, ಎಲೆಗಳು ಮತ್ತು ಬಳ್ಳಿಗಳ ಸಂಕೀರ್ಣ ಮಾದರಿಗಳಲ್ಲಿ ಹೊಂದಿಸಲಾಗಿದೆ, ಏಳು ಖಂಡಗಳಾದ್ಯಂತ ಸಮುದಾಯಗಳನ್ನು ಪ್ರತಿನಿಧಿಸುತ್ತದೆ.
ಕೃಷಿ ಕುಟುಂಬದ ಹಿನ್ನೆಲೆ
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕೊಹಾಲಿ ಗ್ರಾಮದಲ್ಲಿ ಜನಿಸಿದ ಹರ್ನಾಜ್ ಕೌರ್ ಸಂಧು ಇಂದು ಇಡೀ ಜಗತ್ತಿಗೆ ಪರಿಚಿತರಾಗಿದ್ದಾರೆ, ಸಿಖ್ ಕುಟುಂಬದಲ್ಲಿ ಜನಿಸಿದ ಹರ್ನಾಜ್ ಅವರ ಇಡೀ ಕುಟುಂಬವು ಕೃಷಿಯೊಂದಿಗೆ ಸಂಬಂಧ ಹೊಂದಿದೆ. ನಾನು ಯಾವಾಗಲೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಎಂದು ಕರೆಯುವುದನ್ನು ಕೇಳಲು ಬಯಸಿದ್ದೆ. ಈಗ ಅದು ನಡೆಯುತ್ತಿದೆ. ವಿಶ್ವ ವೇದಿಕೆಯಲ್ಲಿ ನನ್ನ ದೇಶದ 1.3 ಶತಕೋಟಿ ಜನರನ್ನು ಪ್ರತಿನಿಧಿಸುವ ಅವಕಾಶವನ್ನು ನಾನು ಪಡೆದುಕೊಂಡಿದ್ದೇನೆ. ನಾನು ಪಡೆದ ಅವಕಾಶಗಳಿಗಾಗಿ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.
ಮಿಸ್ ಯೂನಿವರ್ಸ್ ಕಿರೀಟವನ್ನು 1994ರಲ್ಲಿ ಭಾರತಕ್ಕಾಗಿ ಮೊದಲ ಬಾರಿಗೆ ಸುಶ್ಮಿತಾ ಸೇನ್ (Sushmita Sen) ಗೆದ್ದಿದ್ದರು. ಅವರ ನಂತರ ಲಾರಾ ದತ್ತಾ 2000 ರಲ್ಲಿ ಮಿಸ್ ಯೂನಿವರ್ಸ್ (Lara Dutta) ಆದರು. ಈ ಕಿರೀಟ ಭಾರತಕ್ಕೆ ಬಂದಿರುವುದು ಇದು ಮೂರನೇ ಬಾರಿ.