Trending News : ಕೂದಲಿಗೆ ಬಣ್ಣ ಹಚ್ತಿದ್ದಂತೆ ಸೌಂದರ್ಯ ಕಂಡು ನಕ್ಕು ನಕ್ಕು ಸುಸ್ತಾದ ಅಜ್ಜಿ

By Suvarna News  |  First Published Apr 20, 2023, 5:53 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಖುಷಿ ನೀಡುತ್ತವೆ. ಈ ಅಜ್ಜಿ ವಿಡಿಯೋ ಕೂಡ ನಮ್ಮ ಮುಖದಲ್ಲಿ ನಗು ಮೂಡಿಸುತ್ತದೆ. ತಮಾಷೆಯಾಗಿರುವ ಈ ವಿಡಿಯೋದಲ್ಲಿ ಅಜ್ಜಿ ಮುಗ್ದತೆಯನ್ನು ನಾವು ಕಾಣಬಹುದು.
 


ಈಗ ವಯಸ್ಸಾಗ್ಲಿ ಬಿಡಲಿ ಜನರ ಕೂದಲು ಬೆಳ್ಳಗಾಗುತ್ತೆ. ಬೆಳ್ಳಗಾದ ಕೂದಲನ್ನು ಮುಚ್ಚಿಡೋಕೆ ಇಲ್ಲ ಫ್ಯಾಷನ್ ಹೆಸರಿನಲ್ಲಿ ಜನರು ಕಲರ್ ಮಾಡಿಸಿಕೊಳ್ತಾರೆ. ಈ ಅಜ್ಜಿಗೂ ತನ್ನ ಬಿಳಿ ಕೂದಲ್ಲನ್ನು ನೋಡಿ ಬೋರ್ ಆಗಿದೆ. ಹಾಗಾಗಿ ಬಿಳಿ ಕೂದಲಿಗೆ ಕಲರ್ ಮಾಡಿಸಿಕೊಳ್ಳಲು ಪಾರ್ಲರ್ ಗೆ ಬಂದಿದ್ದಾಳೆ. ಆಕೆ ಕನ್ನಡಿ ಮುಂದೆ ಕುಳಿತು ನೀಡಿದ ರಿಯಾಕ್ಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲ ಅಜ್ಜಿ (Grandmother) ಯರನ್ನು ನೋಡೋಕೆ ಖುಷಿಯಾಗುತ್ತೆ. ಅವರ ಉತ್ಸಾಹ ಯುವಕರನ್ನು ನಾಚಿಸುವಂತಿರುತ್ತದೆ. ಸದಾ ನಗ್ತಾ ತಮ್ಮ ವೃದ್ಧಾಪ್ಯ (Old Age) ವನ್ನು ಎಂಜಾಯ್ ಮಾಡುವ ಅಜ್ಜಿಯಂದಿರುವ ಫ್ಯಾಷನ್ ವಿಷ್ಯದಲ್ಲೂ ಹಿಂದೆ ಬಿದ್ದಿರುವುದಿಲ್ಲ. ಈಗಿನ ದಿನಗಳಲ್ಲಿ ಕೆಲ ಅಜ್ಜಿಯರ ಸಾಧನೆ, ಫ್ಯಾಷನ್ ಸುದ್ದಿಯಾಗ್ತಿರುತ್ತದೆ. ವೃದ್ಧಾಪ್ಯದಲ್ಲಿ ಪರೀಕ್ಷೆ ಬರೆದ ಅಜ್ಜಿ ಇರಬಹುದು, ಮ್ಯಾರಥಾನದ ನಲ್ಲಿ ಪಾಲ್ಗೊಂಡ ಅಜ್ಜಿ ಇರಬಹುದು. ಇಲ್ಲ ಫ್ಯಾಷನ್ ಮ್ಯಾಗ್ನಿಸ್ ಗಳಲ್ಲಿ ಮುಖಪುಟದಲ್ಲಿ ಜಾಗ ಪಡೆದ ಅಜ್ಜಿಯಂದಿರರಿರಬಹುದು, ಲೈಫ್ ಸಾಕು ಎನ್ನುವ ಈಗಿನ ಯುವಕರಿಗೆ ಇವರು ಸ್ಪೂರ್ತಿಯ ಸೆಲೆಯಾಗ್ತಿದ್ದಾರೆ. ಈಗ ವೈರಲ್ ಆಗಿರುವ ಅಜ್ಜಿ ಪ್ರತಿಕ್ರಿಯೆ ಹಾಗೂ ಆಕೆ ನಗು ನಮ್ಮ ನೋವನ್ನು ಮರೆಸುತ್ತದೆ. ಆಕೆಯ ಮುಗ್ದ ನಗು ಮಗುವಿನ ನಗುವನ್ನು ಹೋಲ್ತಿದ್ದು, ಎಂಥ ಸ್ಟ್ರೆಸ್ ನಲ್ಲಿರುವವರ ಮುಖದಲ್ಲೂ ಒಮ್ಮೆ ನಗು ಮೂಡೋದೆ ಇರದು.  ಬಿಳಿ ಕೂದಲಿನಿಂದ ಬೇಸತ್ತ ಅಜ್ಜಿ ಪಾರ್ಲರ್ (Parlor) ಗೆ ಬಂದು ಬಣ್ಣ ಬಳಿಯಲು ಹೇಳಿದ್ದಾರೆ. ಪಾರ್ಲರ್ ಸಿಬ್ಬಂದಿ ಬಣ್ಣ ಹಚ್ಚುತ್ತಿದ್ದಂತೆ ಕನ್ನಡ ಮುಂದೆ ಕುಳಿತ ಅಜ್ಜಿ ಉತ್ಸಾಹದ ಚಿಲುಮೆಯಾಗಿದ್ದಾರೆ. ಅಜ್ಜಿ ನೋಡಿದ ಸಿಬ್ಬಂದಿ (Staff) ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Tap to resize

Latest Videos

ಹೊಸ ಲುಕ್‌ನಲ್ಲಿ ಸಾನ್ಯಾ ಅಯ್ಯರ್ : ಬೇಜಾರ್ ಮಾಡ್ಕೊಂಡ ಹುಡುಗ್ರು

@GoodNewsCorres1 ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ತಮಾಷೆಯ ಈ ವಿಡಿಯೋಕ್ಕೆ ನಗದಿರಲು ಪ್ರಯತ್ನಿಸಿ ಎಂದು ಶೀರ್ಷಿಕೆ ನೀಡಲಾಗಿದೆ. ಪ್ರತಿ ಬಾರಿ ನಾನು ಅಜ್ಜು ಕೂದಲಿಗೆ ಬೇರೆ ಬಣ್ಣ ಹಚ್ಚಿದಾಗ್ಲೂ ಅವರು ನಗ್ತಿದ್ದರು ಎಂದು ಬರೆಯಲಾಗಿದೆ.

ಅಜ್ಜಿ ಮೊದಲು ಕನ್ನಡಿ ಮುಂದೆ ಸಿದ್ಧವಾಗಿ ಕುಳಿತುಕೊಳ್ತಾರೆ. ಉತ್ಸಾಹದಿಂದ ನಾನು ರೆಡಿ ಎನ್ನುತ್ತಾರೆ. ಅದಾದ್ಮೇಲೆ ಅಜ್ಜಿಯ ಕೂದಲಿಗೆ ಹಳದಿ ಬಣ್ಣವನ್ನು ಸ್ವಲ್ಪ ಭಾಗಕ್ಕೆ ಹಚ್ಚಲಾಗುತ್ತದೆ. ಅದನ್ನು ನೋಡಿದ ಅಜ್ಜಿ ನಗ್ತಾರೆ. ನಂತ್ರ ಹಸಿರು ಬಣ್ಣವನ್ನು ಬಳಿಯಲಾಗುತ್ತದೆ. ಕೂದಲಿಗೆ ಬಳಿದ ಹಸಿರು ಬಣ್ಣ ನೋಡಿ ಅಜ್ಜಿ ಜೋರಾಗಿ ನಗ್ತಾರೆ. ಅಜ್ಜಿ ನಗು ನೋಡಿ ಕೇಶ ವಿನ್ಯಾಸಕಿಯರಿಗೂ ನಗು ಬರುತ್ತದೆ. ಎಲ್ಲರೂ ನಗುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅಜ್ಜಿ ಕೂದಲಿಗೆ ವೆರೈಟಿ ಬಣ್ಣವನ್ನು ಕೇಶ ವಿನ್ಯಾಸಕಿ ಹಚ್ಚಿದ ನಂತ್ರ ಅಜ್ಜಿಗೆ ನಗು ಹಿಡಿದಿಡೋದು ಕಷ್ಟವಾಗುತ್ತದೆ. ಕನ್ನಡಿಯಲ್ಲಿ ತನ್ನ ಮುಖ ನೋಡಿ ಅಜ್ಜಿ ಸಿಕ್ಕಾಪಟ್ಟೆ ನಗ್ತಾರೆ. ಕಾಮನಬಿಲ್ಲಿನಂತೆ ಕಾಣುವ ಅಜ್ಜಿ ಕೂದಲ ಅಜ್ಜಿ ಸೌಂದರ್ಯವನ್ನು ಹೆಚ್ಚಿಸಿದೆ. ವಿಡಿಯೋ ಕೊನೆಯಲ್ಲಿ ಸಂಭ್ರಮಿಸುವ ಅಜ್ಜಿ ಥ್ಯಾಂಕ್ಯೂ ಅನ್ನೋದನ್ನು ಕೇಳಬಹುದು.  

Men Beauty : ಪೆಡಿಕ್ಯೂರ್ ಮೆನಿಕ್ಯೂರ್ ಪುರುಷರೂ ಆಗಾಗ ಮಾಡಿಸಿಕೊಂಡರೆ ಒಳ್ಳೆಯದು!

ಟ್ವಿಟರ್ ನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿದ ಜನರೂ ನಗ್ತಿದ್ದಾರೆ. 50 ಸಾವಿರಕ್ಕೂ ಹೆಚ್ಚು ಬಾರಿ ಈ ತಮಾಷೆಯ ವೀಡಿಯೊವನ್ನು ನೋಡಲಾಗಿದೆ. 1 ಸಾವಿರಕ್ಕೂ ಹೆಚ್ಚು ಜನರು ಅದನ್ನು ಲೈಕ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರು ಅಜ್ಜಿಯ ಹೊಸ ಹೇರ್ ಸ್ಟೈಲ್ ಅನ್ನು ಇಷ್ಟಪಡುತ್ತಿದ್ದಾರೆ.  

ಅಜ್ಜಿ ಚೆನ್ನಾಗಿ ಕಾಣುತ್ತಿದ್ದಾಳೆ ಎಂದು ಒಬ್ಬರು ಬರೆದ್ರೆ, ನನ್ನನ್ನು ನಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಸ್ಟೈಲ್ ಅಜ್ಜಿಗೆ ಚೆನ್ನಾಗಿ ಕಾಣುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. 
 

TRY NOT SMILING 😄👩‍🦳

"Every time I put a new color on grandma, we die laughing."

(🎥:thecolourchemist)

pic.twitter.com/6N1WqMPykn

— GoodNewsCorrespondent (@GoodNewsCorres1)
click me!