ಈಗಿನ ದಿನಗಳಲ್ಲಿ ಪುರುಷರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸೋಕೆ ಶುರು ಮಾಡಿದ್ದಾರೆ. ಗಡ್ಡ, ಕೂದಲು, ಮುಖಕ್ಕೆ ಕ್ರೀಂ ಬಳಸ್ತಾರೆಯೇ ವಿನಃ ಕಾಲು, ಕೈ ಸೌಂದರ್ಯ ಮರೆಯುತ್ತಾರೆ. ಆದ್ರೆ ಪುರುಷರಿಗೂ ಇದು ಇಂಪಾರ್ಟೆಂಟ್.
ಸೌಂದರ್ಯ ಎನ್ನುವ ವಿಷ್ಯ ಬಂದಾಗ ಅನೇಕ ಪುರುಷರು ಅದನ್ನು ಮಹಿಳೆಯರಿಗೆ ಮೀಸಲಿಡ್ತಾರೆ. ಕೂದಲಿನ ಆರೈಕೆ, ಚರ್ಮದ ಆರೈಕೆ, ಪೆಡಿಕ್ಯೂರ್, ಮೆನಿಕ್ಯೂರ್ಎಲ್ಲವೂ ಮಹಿಳೆಯರಿಗೆ ಸೀಮಿತ ಎಂದುಕೊಳ್ಳುವವರೇ ಹೆಚ್ಚು. ಪುರುಷರು ಕೂಡ ಬಿಸಿಲಿನಲ್ಲಿ ಸಮಯ ಕಳೆಯುತ್ತಾರೆ. ಮಾಲಿನ್ಯದಲ್ಲಿ ಹೆಚ್ಚು ಸಮಯ ಇರುವ ಕಾರಣ ಅವರ ಚರ್ಮ ಕೂಡ ಹಾನಿಗೊಳಗಾಗಿರುತ್ತದೆ. ಬರೀ ಸುಂದರವಾಗಿ ಕಾಣೋಕೆ ಮಾತ್ರ ಕೈ ಹಾಗೂ ಕಾಲಿನ ಆರೈಕೆ ಮಾಡಬೇಕೆಂದಲ್ಲ. ಇದು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ಕೇವಲ ಮಹಿಳೆಯರಿಗೆ ಸೀಮಿತ ಎಂದುಕೊಳ್ಳುವ ಪುರುಷರು ಅದ್ರ ಮಹತ್ವ ಅರಿಯಬೇಕಿದೆ. ಇದನ್ನು ಮಾಡಿಸಿಕೊಳ್ಳೋದ್ರಿಂದ ಏನೆಲ್ಲ ಲಾಭವಿದೆ ಎಂಬುದು ಗೊತ್ತಾದ್ರೆ ನಾಳೆಯಿಂದ ನೀವೂ ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ ಗೆ ಆಸಕ್ತಿ ತೋರಿಸುತ್ತೀರಿ. ನಾವಿಂದು ಪುರುಷರು ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ ಮಾಡೋದ್ರಿಂದ ಏನು ಲಾಭ ಎಂಬುದನ್ನು ನಿಮಗೆ ಹೇಳ್ತೇವೆ.
ಪೆಡಿಕ್ಯೂರ್ (Pedicure) ಅಂದ್ರೇನು ? : ಕೆಲವರಿಗೆ ಪೆಡಿಕ್ಯೂರ್ ಅಂದ್ರೇನು ಎನ್ನುವ ಜ್ಞಾನವಿರೋದಿಲ್ಲ. ಪೆಡಿಕ್ಯೂರ್ ಪಾದಗಳಿಗೆ ನಡೆಯುವ ಆರೈಕೆಯಾಗಿದೆ. ಪಾದ, ಕಾಲಿನ ಬೆರಳು, ಉಗುರು (Nail) ಗಳ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿದೆ. ಪಾದಗಳಲ್ಲಿರುವ ಸತ್ತ ಚರ್ಮ (Skin) ವನ್ನು ಕಲ್ಲಿನಿಂದ ಉಜ್ಜು ಅದನ್ನು ಸ್ವಚ್ಚಗೊಳಿಸಲಾಗುತ್ತದೆ. ಇದ್ರಲ್ಲಿ ನಾನಾ ವಿಧಗಳಿವೆ.
ಅತೀದೊಡ್ಡ ವಿಗ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯನ್ ಮಹಿಳೆ
ಮೆನಿಕ್ಯೂರ್ : ಹಸ್ತಕ್ಕೆ ಮಾಡುವ ಆರೈಕೆಯನ್ನು ಮೆನಿಕ್ಯೂರ್ ಎಂದು ಕರೆಯಲಾಗುತ್ತದೆ. ನಿಮ್ಮ ಹಸ್ತ, ಕೈ ಬೆರಳು, ಉಗುರಿನ ಆರೈಕೆಯನ್ನು ಇಲ್ಲಿ ಮಾಡಲಾಗುತ್ತದೆ.
ಪುರುಷರಿಗೆ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡುವುದ್ರಿಂದ ಆಗುವ ಲಾಭವೇನು? :
ಕೈ ಕಾಲಿನ ಕೊಳೆ ಹೋಗಲಾಡಿಸಲು ಸಹಕಾರಿ : ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡೋದ್ರಿಂದ ಕಾಲು ಹಾಗೂ ಕೈ ಬೆರಳುಗಳು ಮತ್ತು ಕಾಲ್ಬೆರಳುಗಳ ಧ್ಯೆ ಸಂಗ್ರಹವಾಗಿರುವ ಕೊಳೆಯನ್ನು ತೆಗೆದುಹಾಕಬಹುದು. ಕೈ ಮತ್ತು ಕಾಲುಗಳಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಬಹುದು. ನೀವು ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ ಮಾಡಿಸೋದ್ರಿಂದ ನಿಮ್ಮ ಕೈ ಮತ್ತು ಕಾಲುಗಳಲ್ಲಿ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಿನ ಅಪಾಯ ತಡೆಯಬಹುದು.
ಈ ಸಬ್ಯಸಾಚಿ ಡಿಸೈನರ್ ವೇರ್ ಧರಿಸಿದರೆ ವಧು ಹಿಂಗಾಗ್ತಾಳಾ? ಪೋಸ್ಟ್ ವೈರಲ್
ಉಗುರಿನ ಆರೋಗ್ಯಕ್ಕೆ ಒಳ್ಳೆಯದು : ಕೆಲ ಕಾರಣಕ್ಕೆ ಉಗುರು ಮುರಿದಿರುತ್ತದೆ. ಅದ್ರಿಂದ ಸೋಂಕು ಕಾಡುವ ಸಂಭವವಿರುತ್ತದೆ. ಈ ಸಂದರ್ಭದಲ್ಲಿ ನೀವು ಪೆನಿಸ್ಯೂರ್ ಅಥವಾ ಪೆಡಿಕ್ಯೂರ್ ಮಾಡಿಸಿಕೊಂಡ್ರೆ ಉಗುರಿನಲ್ಲಿರುವ ಬ್ಯಾಕ್ಟೀರಿಯಾ ತೆಗೆಯಬಹುದು. ಸೋಂಕಾಗದಂತೆ ಕೈಯನ್ನು ರಕ್ಷಿಸಿಕೊಳ್ಳಬಹುದು. ಕೆಲವರು ಉಗುರನ್ನು ನಿಯಮಿತವಾಗಿ ಟ್ರಿಮ್ ಮಾಡೋದಿಲ್ಲ. ಇದ್ರಿಂದಲೂ ಸೋಂಕಿನ ಅಪಾಯವಿರುತ್ತದೆ. ನೀವು ನಿಯಮಿತವಾಗಿ ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ ಮಾಡೋದ್ರಿಂದ ಉಗುರನ್ನು ಸರಿಯಾಗಿ ಕತ್ತರಿಸಿ ಅದಕ್ಕೆ ಆರೈಕೆ ಮಾಡಬಹುದು.
ಪಾದಗಳ ದುರ್ವಾಸನೆಯಿಂದ ಮುಕ್ತಿ : ಪುರುಷರು ಕಚೇರಿಯಲ್ಲಿ ಬೂಟ್ ಧರಿಸೋದು ಹೆಚ್ಚು. ದಿನದ ಹೆಚ್ಚಿನ ಸಮಯ ಬೂಟ್ ಧರಿಸಿದ್ರೆ ಶೂ ಮಾತ್ರವಲ್ಲ ಪಾದಗಳಿಂದಲೂ ವಾಸನೆ ಬರಲು ಶುರುವಾಗುತ್ತದೆ. ಪಾದಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯಬಹುದು. ಚರ್ಮ ಸಂಬಂಧಿ ಖಾಯಿಲೆ ನಿಮ್ಮನ್ನು ಕಾಡಬಹುದು. ನೀವು ಪೆಡಿಕ್ಯೂರ್ ಮಾಡಿದ್ರೆ ಪಾದದ ಬ್ಯಾಕ್ಟೀರಿಯಾ ಸಾಯುವುದಲ್ಲದೆ ವಾಸನೆಯಿಂದ ಮುಕ್ತಿ ಪಡೆಯಬಹುದು.
ಕಡಿಮೆಯಾಗುತ್ತೆ ಒತ್ತಡ : ಬಿಸಿ ನೀರಿನಲ್ಲಿ ನಿಮ್ಮ ಪಾದಗಳನ್ನು ಸ್ವಲ್ಪ ಸಮಯ ಇಟ್ಟುಕೊಂಡ್ರೆ ನಿಮ್ಮ ದೇಹ ರಿಲ್ಯಾಕ್ಸ್ ಆಗುತ್ತದೆ. ಪಾದಗಳಿಗೆ ಮಸಾಜ್ ಸಿಗೋದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಪೆಡಿಕ್ಯೂರ್ ಮಾಡೋದ್ರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ.
ಚರ್ಮದ ಹೊಳಪು ಹೆಚ್ಚಳ : ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡೋದ್ರಿಂದ ಚರ್ಮದ ಮೇಲಿರುವ ಸತ್ತ ಚರ್ಮ ನಾಶವಾಗುತ್ತದೆ. ಹಾಗೆಯೇ ಕಪ್ಪು ಕಲೆಗಳು ಕಡಿಮೆಯಾಗಿ, ಚರ್ಮ ಹೊಳೆಯಲು ಶುರುವಾಗುತ್ತದೆ. ನೀವು ಮನೆಯಲ್ಲಿಯೇ ಆರಾಮವಾಗಿ ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್ ಮಾಡಿಕೊಳ್ಳಬಹುದು.