ಸಬ್ಯಸಾಚಿ ಡಿಸೈನ್ ಅಂದ್ರೆ ಹುಡುಗಿಯರು ಬಿಟ್ಟ ಕಣ್ಣು ಬಿಟ್ಟು ನೋಡ್ತಾರೆ. ಇಂಥ ಡಿಸೈನ್ ಬಟ್ಟೆ ಧರಿಸೋದು ಸಾಧ್ಯವಿಲ್ಲವೆನ್ನುವವರು ಅದಕ್ಕೆ ಸ್ವಲ್ಪ ಮಟ್ಟಿಗೆ ಹೋಲುವ ಸ್ಟೈಲ್ ಟ್ರೈ ಮಾಡ್ತಾರೆ. ಆಗಾಗ ಸುದ್ದಿ ಮಾಡುವ ಸಬ್ಯಸಾಚಿ ಈಗ ಮತ್ತೊಮ್ಮೆ ಚರ್ಚೆಯ ವಿಷ್ಯವಾಗಿದ್ದಾರೆ.
ಪ್ರಸಿದ್ಧ ಡಿಸೈನರ್ ಸಬ್ಯಸಾಚಿ ಮುಖರ್ಜಿ ಯಾರಿಗೆ ತಿಳಿದಿಲ್ಲ ಹೇಳಿ? ಸಬ್ಯಸಾಚಿ ಡಿಸೈನ್ ಹುಡುಗಿಯರ ಮೊದಲ ಆಯ್ಕೆ. ಪ್ರತಿ ಹುಡುಗಿಯರೂ ಜೀವನದಲ್ಲಿ ಒಮ್ಮೆಯಾದ್ರೂ ಸಬ್ಯಸಾಚಿ ವಿನ್ಯಾಸದ ಬಟ್ಟೆ ಧರಿಸಲು ಇಷ್ಟಪಡ್ತಾರೆ.
ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಅನುಷ್ಕಾ ಮುಖರ್ಜಿ ಸೇರಿದಂತೆ ಅನೇಕ ಬಾಲಿವುಡ್ ನಟಿಯರು ಸಬ್ಯಸಾಚಿ (Sabyasachi) ಡಿಸೈನ್ ಆಯ್ಕೆ ಮಾಡಿಕೊಳ್ತಾರೆ. ಬಾಲಿವುಡ್ ವಧುಗಳಿಗೆ ಸಬ್ಯಸಾಚಿ ಡಿಸೈನ್ ತುಂಬಾ ಇಷ್ಟವಾಗುತ್ತೆ. ಸಬ್ಯಸಾಚಿ ವಿನ್ಯಾಸಗೊಳಿಸಿದ ಬಟ್ಟೆ ಧರಿಸೋದು ಹಣವಂತರಿಗೆ ಮಾತ್ರ ಎಂಬ ಮಾತೂ ಆಗಾಗ ಕೇಳಿ ಬರ್ತಿರುತ್ತದೆ. ಡಿಸೈನರ್ ಜನರಿಂದ ಎಷ್ಟು ಪ್ರೀತಿ (Love) ಪಡೆದಿದ್ದಾರೋ ಅಷ್ಟೇ ವಿವಾದಗಳನ್ನೂ ಎದುರಿಸಿದ್ದಾರೆ. ಜನರು ಯಾವಾಗಲೂ ಅವರ ಸಂಗ್ರಹದಲ್ಲಿ ಕೆಲವು ತಪ್ಪುಗಳನ್ನು ಹುಡುಕುತ್ತಿರುತ್ತಾರೆ. ಸಬ್ಯಸಾಚಿ ಮುಖರ್ಜಿಗೆ ಟ್ರೋಲ್ ಆಗೋದು ಮಾಮೂಲಿಯಾಗಿದೆ. ಈಗ ಮತ್ತೊಮ್ಮೆ ಸಬ್ಯಸಾಚಿ ಟ್ರೋಲ್ ಆಗುತ್ತಿದ್ದಾರೆ.
ಅತೀದೊಡ್ಡ ವಿಗ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯನ್ ಮಹಿಳೆ
ಸಬ್ಯಸಾಚಿ ಹೊಸ ಡಿಸೈನ್ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಆದ್ರೆ ವಧುವಿನ ಬಟ್ಟೆ ವಿನ್ಯಾಸಕ್ಕೆ ಸಬ್ಯಸಾಚಿ ಸುದ್ದಿಯಾಗಿಲ್ಲ. ಅದ್ರ ಬದಲು ಅವರು ವಧುವಿನ ಡ್ರೆಸ್ ಧರಿಸಿರುವ ಮಾಡೆಲ್ ಕಾರಣಕ್ಕೆ ಚರ್ಚೆಗೆ ಬಂದಿದ್ದಾರೆ.
ಕೆಲ ದಿನಗಳ ಹಿಂದೆ ಸಬ್ಯಸಾಚಿ ಹೊಸ ಡಿಸೈನ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ವಧು ಹೆರಿಟೇಜ್ ಜ್ಯುವೆಲ್ಲರಿ ಜೊತೆಗೆ ಝರಿ ಕಸೂತಿ ಆರ್ಗನ್ಜಾ ಸೀರೆ, ರೇಷ್ಮೆ ಬ್ಲೌಸ್ ಧರಿಸಿರುವುದನ್ನು ಕಾಣಬಹುದು. ಚಿನ್ನದ ಬಳೆಗಳು, ದೊಡ್ಡ ಮಾಂಗ್ ಟಿಕ್ಕಾ, ಮ್ಯಾಚಿಂಗ್ ಕಿವಿಯೋಲೆ ಧರಿಸಿರುವ ಮಾಡೆಲ್ ಗೆ ನ್ಯೂಡ್ ಮೇಕ್ಅಪ್ ಮಾಡಲಾಗಿದೆ. ನೆಟ್ಟಿಗರಿಗೆ ಡ್ರೆಸ್ ನಲ್ಲಿ ಯಾವುದೇ ಕೊರತೆ ಕಾಣಿಸಿಲ್ಲ. ಆದ್ರೆ ವಧುವಿನ ಉದಾಸಿ ಮುಖ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಮಾಡಲ್ ಗಳಿಗೆ ತಟಸ್ಥ ಮುಖಭಾವ ಹೊಂದಿರುವಂತೆ ಸಲಹೆ ನೀಡಲಾಗುತ್ತದೆ. ಮಾಡೆಲ್ ಮುಖದ ಭಾವ, ಹೈಲೈಟ್ ಮಾಡಬೇಕಾದ ವಸ್ತುವನ್ನು ಹೈಲೈಟ್ ಮಾಡದೆ ಹೋದ್ರೆ ಎನ್ನುವ ಕಾರಣಕ್ಕೆ ಈ ಸೂಚನೆ ನೀಡಲಾಗುತ್ತದೆ. ತಟಸ್ಥ ಮುಖಭಾವ ಯಾವಾಗ್ಲೂ ಎಲ್ಲ ಬಟ್ಟೆಗೂ ಹೊಂದಿಕೆಯಾಗುತ್ತದೆ. ಇದ್ರಲ್ಲಿ ಆಂತರಿಕ ಭಾವನೆ, ಆಲೋಚನೆಗಳನ್ನು ತೋರಿಸಲಾಗುವುದಿಲ್ಲ. ಮುಖದ ಮೇಲೆ ನಗುವಾಗ್ಲಿ, ಗಂಭೀರ ಭಾವವಾಗ್ಲಿ ಇರೋದಿಲ್ಲ. ಮಾಡೆಲ್ ಗಳು ಈ ತಟಸ್ಥ ಭಾವನೆಯನ್ನು ಸ್ಟೇಜ್ ಮೇಲೆ ವ್ಯಕ್ತಪಡಿಸುತ್ತಾರೆ. ಕೆಲ ಫೋಟೋ ಶೂಟ್ ಗಳಲ್ಲಿ ನೀವು ಇದನ್ನು ನೋಡ್ಬಹುದು. ಆದ್ರೆ ಎಲ್ಲ ಕಡೆ ಇದು ಸೂಕ್ತವಾಗೋದಿಲ್ಲ.
3.5 ಕೋಟಿ ವ್ಯಯಿಸಿ ಬಾರ್ಬಿ ಡಾಲ್ ಆಗಿದ್ದಾಕೆಗೆ ಈಗ ತಿನ್ನಲು ಕೂಳಿಲ್ಲ...
ನೆಟ್ಟಿಗರ ಕಮೆಂಟ್ : ವಧುವಿನ ನಿರಾಶೆಯ ಮುಖ, ಸಬ್ಯಸಾಚಿ ವಧುವಿನ ಬಟ್ಟೆಯ ಅಂದ ಕಡಿಮೆ ಮಾಡಿದೆ ಎಂಬುದು ನೆಟ್ಟಿಗರ ಅಭಿಪ್ರಾಯ. ಸಬ್ಯಸಾಚಿ ಹಂಚಿಕೊಂಡಿರುವ ಈ ಫೋಟೋಕ್ಕೆ ಅನೇಕ ಕಮೆಂಟ್ ಬಂದಿದೆ. ಈಕೆಗೆ ಸಬ್ಯಸಾಚಿ ಡಿಸೈನ್ ಮಾಡಿರುವ ಬಟ್ಟೆ ಧರಿಸಲು ಇಷ್ಟವಿಲ್ಲ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ನನಗೆ ನಿಜವಾಗಿಯೂ ಸಬ್ಯಸಾಚಿ ಸೌಂದರ್ಯಪ್ರಜ್ಞೆ ಅರ್ಥವಾಗುತ್ತಿಲ್ಲ. ನೀವು ಜೀವನದ ಒಮ್ಮೆ ಬರುವ ಆಚರಣೆಗೆ ಸಾಂಪ್ರದಾಯಿಕ ಉಡುಗೆಯನ್ನು ಮಾರಾಟ ಮಾಡುತ್ತಿದ್ದೀರಿ ಆದ್ರೆ ಮಾಡೆಲ್‌ಗೆ ಸಂಪೂರ್ಣವಾಗಿ ದ್ವೇಷಿಸುವಂತೆ ಪೋಸ್ ನೀಡಲು ಹೇಳಿದ್ದೀರಿ ಎಂದು ಇನ್ನೊಬ್ಬ ಮಹಿಳೆ ಕಮೆಂಟ್ ಮಾಡಿದ್ದಾಳೆ.
ಮಾಡೆಲ್ ನಾಲ್ಕು ದಿನಗಳಿಂದ ಊಟ ಮಾಡಿಲ್ಲ ಎನ್ನಿಸುತ್ತೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು ದುಃಖದ ಆತ್ಮವೆಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅನಾರೋಗ್ಯ ವಧು ಎಂದು ಬರೆದಿದ್ದಾರೆ. ಸಬ್ಯಸಾಚಿ ವಧು ಏಕೆ ತುಂಬಾ ದುಃಖ ಮತ್ತು ಬೇಸರದಲ್ಲಿದ್ದಾಳೆ ಎಂದು ನನಗೆ ತಿಳಿದಿದೆ. ಅವರಿಗೆ ಅವರ ವಿನ್ಯಾಸಗಳು ಇಷ್ಟವಾಗಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.