ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿಯ ಮಾಸ್ಕುಗಳು ಮಾರ್ಕೆಟಿಗೆ ಲಗ್ಗೆ ಇಡುತ್ತಿವೆ. ಮೊದಲು ಜನ ಹೊಸ ಬಟ್ಟೆ ಖರೀದಿಸಲು ಹೇಗೆ ಹೊಸ ರೀತಿಯ ಟ್ರೆಂಡ್ ಗಳನ್ನು ನೋಡುತ್ತಿದ್ದರೋ ಹಾಗೆಯೇ ಈಗ ಮಾಸ್ಕ್‌ಗಳಲ್ಲಿಯೂ ಕೂಡ ವೆರೈಟಿ ಹುಡುಕುತ್ತಿದ್ದಾರೆ. ಇಲ್ಲಿ ಕೂಡ ಒಂದು ಹೊಸ ರೀತಿಯ ಮಾಸ್ಕ್ ಕಾಣಬಹುದಾಗಿದೆ.
ಈ ಕೊರೋನಾ (corona) ಬಂದಾಗಿನಿಂದ ಯಾರ ಮುಖದಲ್ಲಿ ನೋಡಿದರೂ ಮಾಸ್ಕ್ (Mask) ಕಂಡುಬರುತ್ತದೆ. ಇದು ಕಡ್ಡಾಯ ಕೂಡ. ಸದ್ಯಕ್ಕೆ ನಮಗೆಲ್ಲರಿಗೂ ಈ ಸಾಂಕ್ರಾಮಿಕ ರೋಗದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಎಂದರೆ ಅದು ಮಾಸ್ಕ್ ಧರಿಸುವುದು. ಇದರಿಂದಾಗಿ ರೋಗ ತಗಲುವ ಸಾಧ್ಯತೆ ಕಡಿಮೆ (less) ಇರುತ್ತದೆ.
ಸೌತ್ ಕೊರಿಯಾದ ಮಾಸ್ಕ್ ಮಾನುಫ್ಯಾಕ್ಚರಿಂಗ್ (Manufacturing) ಕಂಪೆನಿಯೊಂದು (Company) ಹೊಸದಾಗಿ ವಿಭಿನ್ನ ರೀತಿಯ ಮಾಸ್ಕ್ ಒಂದನ್ನು ತಯಾರಿಸಿದೆ. ಇದು ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ (Social media) ಇದರ ಆಕಾರ (Shape) ಹಾಗೂ ಉಪಯೋಗಗಳ ಕಾರಣದಿಂದಾಗಿ ಹೆಚ್ಚು ಜನರ ಗಮನವನ್ನು ಸೆಳೆಯುತ್ತಿದೆ.
Mask Fashion: ಮೆಡಿಕಲ್ ಮಾಸ್ಕ್ ಧರಿಸೋರೇ ಹೆಚ್ಚು ಆಕರ್ಷಕವಂತೆ!
undefined
ಮಾಸ್ಕ್
ಈಗ ಪ್ರಸ್ತುತ ನಾವು ಯಾವ ರೀತಿಯ ಮಾಸ್ಕನ್ನು ಬಳಸುತ್ತೇವೆ ಹೇಳಿ, ಮುಖ್ಯವಾಗಿ ನಮ್ಮ ಮುಖದ ಸೂಕ್ಷ್ಮ ಭಾಗವನ್ನು ಮುಚ್ಚುವ ಹಾಗೆ ಎಂದರೆ ಮೂಗು ಹಾಗೂ ಬಾಯಿಯನ್ನು ಮುಚ್ಚುವ (Cover) ಮಾಸ್ಕನ್ನು ಧರಿಸುತ್ತಿದ್ದೇವೆ. ಮಾಸ್ಕ್ ಧರಿಸುವ ಮುಖ್ಯ ಉದ್ದೇಶ ಎಂದರೆ ಸೂಕ್ಷ್ಮ ವೈರಾಣುಗಳು (Virus) ನಮ್ಮ ಮೂಗು ಹಾಗೂ ಬಾಯಿಯ ಮೂಲಕ ದೇಹದ ಒಳಕ್ಕೆ ಸೇರಿಸಿಕೊಳ್ಳಬಾರದು ಎಂಬುದು. ಉಸಿರಾಡುವಾಗ (Breathing) ಗಾಳಿಯಲ್ಲಿ ವೈರಸ್ ಇದ್ದರೆ ಅದು ಮೂಗಿನ ಮೂಲಕ ದೇಹಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ ಇದೇ ಕಾರಣಕ್ಕೆ ಮೂಗು ಹಾಗೂ ಬಾಯಿ ಎರಡು ಭಾಗಗಳು ಕವರ್ ಆಗುವ ಹಾಗೆ ಧರಿಸುತ್ತಿದ್ದೇವೆ.
ಮಾಸ್ಕ್‌ನಿಂದ ಆಗುವ ತೊಂದರೆಗಳು (Problem)
ಮಾಸ್ಕ್ ಧರಿಸುವುದರಿಂದ ಕೆಲವು ತೊಂದರೆಗಳನ್ನು ಕೂಡ ಎದುರಿಸಬೇಕಾಗಿ ಬರಬಹುದು. ಉದಾಹರಣೆಗೆ (Example) ನೀರು ಕುಡಿಯುವಾಗ ಅಥವಾ ಏನನ್ನಾದರೂ ಆಹಾರವನ್ನು (Food) ಸೇವಿಸುವಾಗ ಇಲ್ಲವೇ ಮಾತನಾಡುವಾಗ (Talking) ಸ್ವಲ್ಪ ಅಡೆತಡೆ ಉಂಟಾಗುತ್ತದೆ. ಇನ್ನು ಪದೇಪದೇ ಧರಿಸಿರುವ ಮಾಸ್ಕನ್ನು ಬಾಯಿಯಿಂದ ಹೊರ ತೆಗೆಯುವುದು ಮತ್ತೆ ಹಾಕಿಕೊಳ್ಳುವುದು ಹೀಗೆ ಮಾಡುವುದರಿಂದ ಕಿರಿಕಿರಿ (Irritations) ಉಂಟಾಗುತ್ತದೆ. ಜೊತೆಗೆ ಕೈನಿಂದಲೇ ಮಾಸ್ಕಿಗೆ ವೈರಾಣುಗಳು ಸೇರಿಕೊಂಡು ಅದು ದೇಹಕ್ಕೆ ಸೇರುವ ಅಪಾಯ ಕೂಡಾ ಇದೆ.
ಕೋಸ್ಕ್ (Kosk)
ಆದರೆ ಇದೀಗ ಸುದ್ದಿ ಮಾಡುತ್ತಿರುವ ಈ ಹೊಸ ಮಾಸ್ಕ್ ಹೇಗಿದೆ ಎಂದರೆ ಮೊದಲು ಪ್ರಾರಂಭದ ದಿನದಲ್ಲಿ ಇದು ಕೂಡ ಬೇರೆ ಮಾಸ್ಕ್ ರೀತಿಯಲ್ಲಿ ಮೂಗು ಹಾಗೂ ಬಾಯಿ ಎರಡನ್ನೂ ಕೂಡ ಮುಚ್ಚುತ್ತಿತ್ತು. ಆದರೆ ಇದೀಗ ಇದನ್ನು ಮಡಚಿಕೊಂಡು (Fold) ಧರಿಸಬಹುದಾಗಿದೆ. ಇದನ್ನು ಕೋಸ್ಕ್ ಎಂದು ಕರೆಯುಲಾಗುತ್ತದೆ. ಇದು ಮೂಗನ್ನು ಮಾತ್ರ ಕವರ್ ಮಾಡುತ್ತದೆ. ಹಾಗಾಗಿ ನೀವು ಯಾವುದೇ ಆಹಾರ ಪದಾರ್ಥವನ್ನು ತಿನ್ನಲು ಅಥವಾ ಕುಡಿಯಲು ಸುಲಭವಾಗುತ್ತದೆ. ಪದೇ ಪದೇ ಮಾಸ್ಕ್ ಕೆಳಗಿಳಿಸುವ ಅಗತ್ಯವಿರುವುದಿಲ್ಲ.
Fashion Tips : ಕುಳ್ಳಗಿದ್ದೀರಾ? ಡ್ರೆಸ್ಸಿಂಗ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡ್ಕೊಂಡ್ರೆ ಹೈಟ್ ಕಾಣುತ್ತೆ
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್
ಯಾವುದೇ ಹೊಸ ರೀತಿಯ ಟ್ರೆಂಡ್ ಪ್ರಾರಂಭವಾದರೂ ಅದನ್ನು ನಾವು ಕೂಡ ಒಮ್ಮೆ ಪ್ರಯತ್ನಿಸಬೇಕು(Trial) ಎಂದು ಹೇಳುವ ಜನರೇ ಹೆಚ್ಚು. ಇನ್ನು ನೀವು ಈ ಮಾಸ್ಕ್ ಖರೀದಿಸಬೇಕು( Purchase) ಅಂದರೆ ಇದು ಈಗ ಕೆಲವು ಆನ್ಲೈನ್ ವೆಬ್ಸೈಟ್ಗಳಲ್ಲಿ ಖರೀದಿಸಬಹುದು. ಇದನ್ನು KF80 ಎಂದು ಕೂಡ ಹೇಳಲಾಗುತ್ತದೆ. ಇಲ್ಲಿ K ಎಂದರೆ ಕೋರಿಯನ್ ಹಾಗೂ F ಎಂದರೆ ಫಿಲ್ಟರ್ ಎಂದರ್ಥ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಹರಿದಾಡುತ್ತಿದೆ ಹಲವಾರು ಜನರು ಧರಿಸಿರುವ ಫೋಟೋಗಳನ್ನು (Photo) ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.