Ramp ಮೇಲೆ ಮಾಡೆಲ್ ಉಗ್ರ ರೂಪ.. ಗ್ಯಾಲರಿಯಲ್ಲಿ ಕೂತ ಅತಿಥಿ ಮೇಲೆ ಹಲ್ಲೆ.. ವಿಡಿಯೋ ವೈರಲ್

By Suvarna News  |  First Published Feb 1, 2022, 3:51 PM IST
  • Ramp ಮೇಲೆ ವಿಲಕ್ಷಣವಾಗಿ ವರ್ತಿಸಿದ ಮಾಡೆಲ್
  • ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹಲ್ಲೆ
  • ನ್ಯೂಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಘಟನೆ

ನ್ಯೂಯಾರ್ಕ್‌(ಜ.1): ಫ್ಯಾಷನ್ ಶೋ ಎಂದರೆ ಸಮಚಿತ್ತತೆ, ಸೊಬಗು, ವೈಭವದ ಜೊತೆಗೆ ರೂಪದರ್ಶಿಗಳ ವೈಯಾರದ ನಡಿಗೆ ನೆನಪಿಗೆ ಬರುವುದು. ಆದರೆ ಇಲ್ಲೊಂದು ಕಡೆ ಫ್ಯಾಷನ್‌ ಶೋಗೆ ಕ್ಯಾಟ್‌ವಾಕ್ ಮಾಡುತ್ತಾ Ramp ಮೇಲೆ ನಡೆದು ಬಂದ ರೂಪದರ್ಶಿ ವ್ಯತಿರಿಕ್ತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ  Ramp ಮೇಲೆ ನಡೆದು ಬಂದ ರೂಪದರ್ಶಿ ಅರ್ಧದಲ್ಲೇ ತಿರುಗಿ ನಿಂತು ತನ್ನ ಕೈಯಲ್ಲಿದ್ದ ಕೋಟ್‌ನಿಂದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ಹೊಡೆಯುತ್ತಿರುವ ದೃಶ್ಯವಿದೆ.  ಕಳೆದ ವರ್ಷ ಈ ಘಟನೆ ನಡೆದಿದ್ದರೂ, ಡಿಸೈನರ್ ಕ್ರಿಶ್ಚಿಯನ್ ಕೋವನ್ ಇತ್ತೀಚೆಗೆ ಅದನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram)ನಲ್ಲಿ ಪೋಸ್ಟ್ ಮಾಡಿದ ನಂತರ ವೀಡಿಯೊ ವೈರಲ್ ಆಗಿದೆ.

ಟಿಕ್‌ಟಾಕ್‌ನಲ್ಲಿ ಮೊದಲು ವೈರಲ್‌ ಆದ ವಿಡಿಯೋ ಈಗ ಎಲ್ಲಾ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದ್ದು,  ಈ ವೀಡಿಯೊದಲ್ಲಿ, ಮಾಡೆಲ್  ಲ್ಯಾವೆಂಡರ್ ಮತ್ತು ಕಪ್ಪು ಸ್ಕರ್ಟ್ ಸೆಟ್‌ನಲ್ಲಿ ಬರುತ್ತಿದ್ದು, ಕೈಯಲ್ಲಿಉಣ್ಣೆಯಿಂದ ನಿರ್ಮಿತವಾದ ಉದ್ದನೆಯ ಕೋಟ್ ಅನ್ನು ಹಿಡಿದಿದ್ದಾಳೆ. ಗಂಭೀರವಾದ ಮಾದಕ ನಡಿಗೆಯೊಂದಿಗೆ ಬರುತ್ತಿರುವ ಆಕೆ Ramp ಮೇಲೆಯೇ ಹಠಾತ್ತನೆ ತಿರುಗಿ ನಿಲ್ಲುತ್ತಾಳೆ. ಮತ್ತು ಗ್ಯಾಲರಿಯ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಅತಿಥಿಯನ್ನು ತನ್ನ ಕೋಟ್‌ನಿಂದ ಹೊಡೆಯುತ್ತಾಳೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by CHRISTIAN COWAN (@christiancowan)

 

ಹಠಾತ್ ಕೋಪಿಸಿಕೊಂಡಂತೆ ವರ್ತಿಸಿದ ಆಕೆ ಕೆಲವೇ ಸೆಕೆಂಡುಗಳಲ್ಲಿ ತನಗೇನು ಆಗಿಲ್ಲ ಎಂಬಂತೆ ತಿರುಗಿ ತನ್ನ ಮಾದಕ ನಡಿಗೆಯನ್ನು ಮುಂದುವರೆಸುತ್ತಾಳೆ. ಕಳೆದ ವರ್ಷ ಈ ಘಟನೆ ನಡೆದಿದ್ದರೂ, ಡಿಸೈನರ್ ಕ್ರಿಶ್ಚಿಯನ್ ಕೋವನ್ ( Christian Cowan)ಇತ್ತೀಚೆಗೆ ಅದನ್ನು Instagram ನಲ್ಲಿ ಪೋಸ್ಟ್ ಮಾಡಿದ ನಂತರ ವೀಡಿಯೊ ವೈರಲ್ ಆಗಿದೆ. ಈ ವೈರಲ್‌ ವಿಡಿಯೋದಲ್ಲಿಕ್ಯಾಟ್‌ವಾಕ್‌ ಮಾಡುತ್ತಿರುವ ರೂಪದರ್ಶಿಯನ್ನು  ಥಿಯೋಡೋರಾ ಕ್ವಿನ್ಲಿವಾನ್ (Theodora Quinlivan) ಎಂದು ಗುರುತಿಸಲಾಗಿದೆ. ಕೋಪದ ಜಗತ್ತಿನಲ್ಲಿ ಟೆಡ್ಡಿ ಟೆಡ್ಡಿಕ್ವಿನ್ಲಿವಾನ್ ಎಂದು ಬರೆದು  ಮಾಡೆಲ್ ಥಿಯೋಡೋರಾ ಕ್ವಿನ್ಲಿವಾನ್ ಅವರಿಗೆ ಟ್ಯಾಗ್ ಮಾಡಿ ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. 

ಸೆಲ್ಫಿಗಾಗಿ ಪ್ರಾಣ ಕಳೆದು ಕೊಂಡ ಹಾಂಗ್ ಕಾಂಗ್ ಮಾಡೆಲ್!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಕೋವನ್ ಅವರ, ರೆಡಿ-ಟು-ವೇರ್ ಬೇಸಿಗೆಯ ವಸ್ತ್ರ ಸಂಗ್ರಹಗಳ ಪ್ರದರ್ಶನ-2022ರ (Spring 2022 collection) ಸಂದರ್ಭದಲ್ಲಿ ಈ  ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಅದಾಗ್ಯೂ ಫೆಬ್ರವರಿ 11 ರಂದು ಪ್ರಾರಂಭವಾಗಲಿರುವ ಮುಂಬರುವ ನ್ಯೂಯಾರ್ಕ್ ಫ್ಯಾಶನ್ ವೀಕ್‌ಗಾಗಿ ಡಿಸೈನರ್ ತಯಾರಿ ನಡೆಸುತ್ತಿರುವಾಗ ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. 

ಮಾರ್ಜಾಲ ನಡಿಗೆಯಲ್ಲಿ ಮೌಂಟ್'ಕಾರ್ಮೆಲ್ ಬೆಡಗಿಯರು

ಅದಾಗ್ಯೂ ಮಾಡೆಲ್‌ನ ಈ ವರ್ತನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಬಹುಶಃ ಯೋಜಿತ ಸ್ಟಂಟ್ ಎಂದು ಹಲವರು ಊಹಿಸುತ್ತಿದ್ದಾರೆ ಮತ್ತು ಇತರರು ಘಟನೆ ನಡೆದ ಸಮಯದಲ್ಲಿ ಅದು ವೈರಲ್ ಆಗಲಿಲ್ಲವೇಕೆ ಎಂದು ಆಶ್ಚರ್ಯಪಟ್ಟರು. ಈ ಮಧ್ಯೆ ಮಾಡೆಲ್‌ ಆ ಜಾಕೆಟ್‌ನಿಂದ ನನ್ನನ್ನು ಹೊಡೆಯುವುದು ಪೂರ್ಣ ಫ್ಯಾಷನ್ ರೀಸೆಟ್ ಆಗಿತ್ತು  ಎಂದು ಹೊಡೆಸಿಕೊಂಡವರು ಈ ವಿಡಿಯೋದ ಕೆಳಗೆ ಕಾಮೆಂಟ್‌ ಮಾಡಿದ್ದಾರೆ. ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ 2 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದಾರೆ. 

ವರ್ಷಗಳ ಹಿಂದೆ ಡಿಸೈನರ್ ರೋಹಿತ್ ಬಾಲ್ ಅವರ ಫ್ಯಾಷನ್ ಶೋಗೆ ಬೀದಿ ನಾಯಿಯೊಂದು ನುಗ್ಗಿ Ramp ಮೇಲೆ ರಾಜನಂತೆ ಓಡಾಡಿದ ವಿಡಿಯೋವೊಂದು ವೈರಲ್‌ ಆಗಿತ್ತು. ಬ್ಲೇಂಡರ್ ಪ್ರೈಡ್ ಹಮ್ಮಿಕೊಂಡಿದ್ದ ಫ್ಯಾಷನ್ ಶೋದಲ್ಲಿ ಮಾಡಲ್‌ಗಳು ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಎಲ್ಲಿಂದಲೋ ಬಂದ ನಾಯಿ ಅವರ ರ‍್ಯಾಂಪ್‌ ಮೇಲೆ ಹಿಂದೆ ಮುಂದೆ ಸುಳಿದಾಡಿ ನೋಡುಗರು ನಗುವಂತೆ ಮಾಡಿತ್ತು.

click me!