Asianet Suvarna News Asianet Suvarna News

Mask Fashion: ಮೆಡಿಕಲ್ ಮಾಸ್ಕ್ ಧರಿಸೋರೇ ಹೆಚ್ಚು ಆಕರ್ಷಕವಂತೆ!

ಜನರಲ್ಲಿ ಮಾಸ್ಕ್‌ ಕ್ರೇಜ್‌ ಹೆಚ್ಚಾಗಿದೆ. ಡ್ರೆಸ್‌ ಗೆ ತಕ್ಕಂತೆ ಮ್ಯಾಚ್‌ ಮಾಡುವ ಪರಿಪಾಠ ಬೆಳೆದಿದೆ. ದುಬಾರಿ ಹಾಗೂ ವಿಧವಿಧದ ಬೇರೆ ಯಾವುದೇ ರೀತಿಯ ಮಾಸ್ಕ್‌ ಗಳಿಗಿಂತ ಸರ್ಜಿಕಲ್‌ ಅಥವಾ ಮೆಡಿಕಲ್‌ ಮಾಸ್ಕ್‌ ವ್ಯಕ್ತಿಯನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

 

Wearing surgical masks make you look more beautiful
Author
Bangalore, First Published Jan 25, 2022, 4:55 PM IST

ಕಳೆದ ಎರಡು ವರ್ಷಗಳಿಂದ ವಿಶ್ವದಲ್ಲಿ ಹೊಸದೊಂದು ಮಾರುಕಟ್ಟೆ (Market) ನಿರ್ಮಾಣವಾಗಿದೆ. ಅದು ಬೇರೇನೂ ಅಲ್ಲ. ಕಳೆದ ಎರಡು ವರ್ಷಗಳಿಂದ ನಮ್ಮ ದೈನಂದಿನ ಜೀವನದ ಭಾಗವಾಗಿರುವ ಮಾಸ್ಕ್‌ (Mask) ಗಳದ್ದು. ಇಂದಿನ ದಿನಗಳಲ್ಲಿ ಯಾವುದೇ ಅಂಗಡಿಗಳಿಗೆ ಹೋದರೂ ಥರಥರದ ವಿವಿಧ ಬಣ್ಣದ ಮಾಸ್ಕ್‌ ಗಳು ಗಮನ ಸೆಳೆಯುತ್ತವೆ. ಅಷ್ಟೇ ಏಕೆ? ಬಟ್ಟೆಗೆ ತಕ್ಕಂತೆ ಮ್ಯಾಚ್‌ ಮಾಡುವುದು ಸಹ ಸದ್ಯದ ಟ್ರೆಂಡ್ (Trend). ಇನ್ನು, ಮದುವೆ ಸೀರೆಗೂ ಮ್ಯಾಚ್‌ (Match) ಆಗುವಂತೆ ರೇಷ್ಮೆಯ ಮಾಸ್ಕ್‌ ಧರಿಸಿದ, ಧರಿಸುವ ಹೆಣ್ಣುಮಕ್ಕಳೂ ಇದ್ದಾರೆ. ಹೀಗಾಗಿ, ಇತ್ತೀಚೆಗೆ ಮಾಸ್ಕ್‌ ಗಳ ಕ್ರೇಜೂ (Craze) ನಿಧಾನವಾಗಿ ಬೆಳೆದಿದೆ. ಪರಿಣಾಮವಾಗಿ, ಆಭರಣ ವ್ಯಾಪಾರಿಯೊಬ್ಬರು ಚಿನ್ನದ ಮಾಸ್ಕ್‌ ಅನ್ನೇ ಸೃಷ್ಟಿಸಿದ್ದೂ ಇದೆ.

ಆದರೆ, ಎಷ್ಟೇ ದುಬಾರಿ ಬೆಲೆಯ ಮಾಸ್ಕ್‌ ಧರಿಸಿದರೂ ಮೆಡಿಕಲ್‌ ಮಾಸ್ಕ್‌ (Medical Mask) ಧರಿಸಿದಾಗ ಕಂಡುಬರುವ ಆಕರ್ಷಣೆ (Attractiveness) ಇರುವುದಿಲ್ಲ. ರೇಷ್ಮೆಯ ಮಾಸ್ಕ್‌ ಧರಿಸಿದರೂ ಮೆಡಿಕಲ್‌ ಮಾಸ್ಕ್‌ ಧರಿಸಿದಾಗಿನ ಆಕರ್ಷಣೆಯೇ ಬೇರೆ. ಅಚ್ಚರಿಯಾಗುತ್ತಿದೆಯೇ? ದುಬಾರಿ ಮಾಸ್ಕ್‌ ಗಳ ಎದುರು ಕಡಿಮೆ ಬೆಲೆಯ ಮೆಡಿಕಲ್‌ ಮಾಸ್ಕ್ ಗಳನ್ನು ಕೇಳುವವರ್ಯಾರು ಎನ್ನಬೇಡಿ. ಬೇರೆ ಸಾಮಾನ್ಯ ಮಾಸ್ಕ್‌ ಗಳಿಗಿಂತ ಮೆಡಿಕಲ್‌ ಮಾಸ್ಕ್‌ ಗಳನ್ನು ಧರಿಸುವವರು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಾರೆ ಎಂದು ಇತ್ತೀಚಿನ ಅಧ್ಯಯನ(Study)ವೊಂದು ಹೇಳಿದೆ.  

ಎಲ್ಲದರಲ್ಲೂ ಸೌಂದರ್ಯ(Beauty)ವನ್ನು ಹುಡುಕುವುದು ಮಾನವ ಸಹಜ ಗುಣ. ಮಾಸ್ಕ್‌ ಗಳೂ ಇದಕ್ಕೆ ಹೊರತಲ್ಲ. ಹೀಗಾಗಿ, ಯಾವ ರೀತಿಯ ಮಾಸ್ಕ್‌ ಧರಿಸಿದರೆ ಮನುಷ್ಯರು ಆಕರ್ಷಕವಾಗಿ ಕಾಣಿಸುತ್ತಾರೆ ಎನ್ನುವ ಕುರಿತು ಅಧ್ಯಯನವೊಂದನ್ನು ಇತ್ತೀಚೆಗೆ ನಡೆಸಲಾಗಿತ್ತು. ಅದರಲ್ಲಿ ಮೆಡಿಕಲ್‌ ಮಾಸ್ಕ್‌ ಟಾಪ್‌ ಸ್ಥಾನ ಗಳಿಸಿದೆ.

ಕಾಗ್ನಿಟಿವ್‌ ರಿಸರ್ಚ್‌ ಜರ್ನಲ್‌ (Cognitive Research Journal) ಎನ್ನುವ ನಿಯತಕಾಲಿಕದಲ್ಲಿ “ಬಿಯಾಂಡ್‌ ದ ಬ್ಯೂಟಿ ಆಫ್‌ ಅಕ್ಲುಷನ್ (Beyond The Beauty of Acclusion)…ʼ ಎನ್ನುವ ಲೇಖನ ಪ್ರಕಟವಾಗಿದ್ದು, ಅದರಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ನಮ್ಮ ಮುಖ ಮಾಸ್ಕ್‌ ಅಡಿ ಮುಚ್ಚಿಕೊಂಡಿದ್ದರೂ ಸಹ ಮೆಡಿಕಲ್‌ ಮಾಸ್ಕ್‌ ಧರಿಸಿದ್ದಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಬೇರೆ ಯಾವುದೇ ರೀತಿಯ ಮಾಸ್ಕ್‌ ಗಿಂತ ಮೆಡಿಕಲ್‌ ಮಾಸ್ಕ್‌ ಧರಿಸಿದಾಗ ನಮ್ಮ ಮುಖ, ಹಣೆ, ಕಿವಿ, ಕತ್ತಿನ ಭಾಗಗಳೆಲ್ಲ ಸುಂದರವಾಗಿ ಗೋಚರಿಸುತ್ತವೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಇನ್ನೂ ಅಚ್ಚರಿಯೆಂದರೆ, ಮಾಸ್ಕ್‌ ಧರಿಸದೇ ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚಿನ ಆಕರ್ಷಣೆ ಮೆಡಿಕಲ್‌ ಮಾಸ್ಕ್‌ ಧರಿಸಿದಾಗ ಕಂಡುಬರುತ್ತದೆ ಎಂದು ಹೇಳಲಾಗಿದೆ.

ಕೋವಿಡ್-‌೧೯ ಆರಂಭವಾದಾಗಿನಿಂದ ಫೇಸ್‌ ಮಾಸ್ಕ್‌ ಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಮೊದಮೊದಲು ಸಾಮಾನ್ಯ ಜನ ಕರ್ಚೀಫ್‌ ಸುತ್ತಿಕೊಳ್ಳುವುದು ಕಂಡುಬರುತ್ತಿತ್ತು. ಬರಬರುತ್ತ ವಿಭಿನ್ನ ಅಭಿರುಚಿ ಬೆಳೆಯಿತು. ಈ ನಡುವೆ ಎಲ್ಲರಿಗೂ ಸುಲಭವಾಗಿ ದಕ್ಕಿದ್ದು ಮೆಡಿಕಲ್‌ ಮಾಸ್ಕ್‌ ಗಳು. ಆಸ್ಪತ್ರೆ, ಕಚೇರಿ ಸೇರಿದಂತೆ ಹಲವೆಡೆ ಇದನ್ನು ಉಚಿತವಾಗಿ ಹಂಚಿದ ಸಂದರ್ಭಗಳೂ ಇದ್ದವು. ಇದೀಗ, ಮೆಡಿಕಲ್‌ ಮಾಸ್ಕ್‌ ವ್ಯಕ್ತಿಯನ್ನು ಅತ್ಯಾಕರ್ಷಕವಾಗಿ ಬಿಂಬಿಸುವಲ್ಲಿ ಮುಂಚೂಣಿಯಲ್ಲಿವೆ.

Health benefits: ಕಾಫಿ, ಟೀ ಕುಡಿಯೋದ್ರಿಂದ ಸ್ಟ್ರೋಕ್ ಅಪಾಯ ಕಡಿಮೆ

ಈ ಅಧ್ಯಯನದಲ್ಲಿ ಮೂರು ರೀತಿಯ ಪುರುಷರನ್ನು ಬಳಸಿಕೊಳ್ಳಲಾಗಿತ್ತು. ಒಂದನೆಯ ವಿಭಾಗದಲ್ಲಿ ಸರ್ಜಿಕಲ್‌ ಮಾಸ್ಕ್‌ ಧರಿಸಿದವರು, ಎರಡರಲ್ಲಿ ಮಾಸ್ಕ್‌ ಇಲ್ಲದೆ ಹಾಗೇ ಇರುವವರು, ಮೂರರಲ್ಲಿ ಸಾಮಾನ್ಯ ಮಾಸ್ಕ್‌ ಧರಿಸಿದವರು ಇದ್ದರು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಮೊದಲ ವಿಭಾಗದ ಪುರುಷರನ್ನು ಹೆಚ್ಚು ಆಕರ್ಷಕ ಎಂದು ಪರಿಗಣಿಸಿದರು.

ಸಹಜವಾಗಿ ಹೆಚ್ಚು ಆಕರ್ಷಕವಾಗಿಲ್ಲದಿರುವವರು ಸಹ ಮೆಡಿಕಲ್‌ ಮಾಸ್ಕ್‌ ಧರಿಸಿದಾಗ ಹೆಚ್ಚು ಆಕರ್ಷಕವಾಗಿ ಕಂಡುಬರುತ್ತಾರೆ ಎಂದೂ ಹೇಳಲಾಗಿದೆ.

Kitchen Hacks: ಕರಿದ ಎಣ್ಣೆಯನ್ನು ಈ ರೀತಿ ಕ್ಲೀನ್ ಮಾಡಿದ್ರೆ ಮತ್ತೆ ಬಳಸ್ಬೋದು

ಕೋವಿಡ್-‌೧೯ ಮುಂಚೆಯೇ ಜಪಾನ್‌ (Japan) ದೇಶದ ಕಾರ್ಡಿಫ್‌ ವಿಶ್ವವಿದ್ಯಾಲಯ (Cardiff University) ಇನ್ನೊಂದು ಕುತೂಹಲಕಾರಿ ಅಧ್ಯಯನವೊಂದನ್ನು ನಡೆಸಿತ್ತು. ಅದರ ಪ್ರಕಾರ, ಮಾಸ್ಕ್‌ ಧರಿಸಿದಾಗ ಮಹಿಳೆಯರ (Women) ಆಕರ್ಷಣೆ ಹೆಚ್ಚುತ್ತದೆ. ಮಾಸ್ಕ್‌ ಧರಿಸಿದಾಗ ಮುಖದ ಮೊಡವೆ (Acne) ಕಾಣಿಸದೇ ಇರುವುದು ಇದಕ್ಕೆ ಕಾರಣ ಎಂದು ಹೇಳಿತ್ತು.

Follow Us:
Download App:
  • android
  • ios