Food In Fashion: ಸ್ಯಾಂಡ್‌ವಿಚ್‌ನ್ನೇ ಚಪ್ಪಲಿ ಮಾಡ್ಕೊಂಡ್ರು !

By Suvarna News  |  First Published Jan 28, 2022, 10:41 AM IST

ಫ್ಯಾಷನ್ (Fashion)ಲೋಕಾನೇ ಹಾಗೇ. ಅಲ್ಲಿ ಏನು ಬೇಕಾದ್ರೂ ಟ್ರೆಂಡ್ (Trend) ಆಗ್ಬೋದು. ಹರಿದ ಬಟ್ಟೆ, ಪೇಪರ್ ಡ್ರೆಸ್ ಎಲ್ಲಾನೂ ಇಲ್ಲಿ ಫ್ಯಾಶನ್ನೇ. ಅದೆಲ್ಲಾ ಇರ್ಲಿ, ಆದ್ರೆ ತಿನ್ನೋ ಫುಡ್ (Food), ಫ್ಯಾಶನ್ ಆದ್ರೆ ಹೇಗಿರುತ್ತೆ. ಹೌದೂರೀ. ಇಲ್ಲೊಬ್ರು ಸ್ಯಾಂಡ್‌ವಿಚ್‌ (Sandwich)ನ್ನೇ ಚಪ್ಪಲಿ ಮಾಡ್ಕೊಂಡಿದ್ದಾರೆ.
 


ಫ್ಯಾಷನ್  (Fashion) ಹಾಗೂ ಫುಡ್ (Food) ಟ್ರೆಂಡ್ ಆಗಿಂದಾಗೆ ಬದಲಾಗ್ತಾನೇ ಇರುತ್ತೆ. ಫ್ಯಾಷನ್ ಲೋಕದಲ್ಲಿ ಹೊಸ ಹೊಸ ರೀತಿಯ ದಿರಿಸುಗಳು, ಹೇರ್ ಸ್ಟೈಲ್, ಮೇಕಪ್, ಫೂಟ್ ವೇರ್‌ (Footwear)ಗಳು ಬರ್ತಿರುತ್ತವೆ. ಹರಿದ ಪ್ಯಾಂಟ್‌ಗಳು, ದೊಗಲೆ ಅಂಗಿಗಳು, ಕಲರ್ ಕಲರ್ ಶೂ, ಚಿತ್ರವಿಚಿತ್ರ ಹೇರ್ ಸ್ಟೈಲ್ ನೆಟ್ಟಿಗರನ್ನು ದಂಗಾಗಿಸುತ್ತದೆ. ಹಾಗೆಯೇ ಫುಡ್ ಟ್ರೆಂಡ್ ಸಹ ದಿನವೂ ಬದಲಾಗುತ್ತಿರುತ್ತದೆ. ಹಿಂದಿನಿಂದಲೂ ತಯಾರಿಸಿಕೊಂಡು ಬರುತ್ತಿರುವ ಆಹಾರಗಳಲ್ಲದೆ ಇತ್ತೀಚಿನ ದಿನಗಳಲ್ಲಿ ಫುಡ್ ಎಕ್ಸಮರಿಮೆಂಟ್ ಸಹ ಮಾಡಲಾಗುತ್ತದೆ. ಹಿಂದಿನಿಂದಲೂ ತಯಾರಿಸಿಕೊಂಡು ಬರುತ್ತಿರುವ ಆಹಾರಕ್ಕೆ ಹೊಸ ಟಚ್ ಕೊಡುವುದು, ಎರಡು ಡಿಫರೆಂಟ್ ಆಹಾರಗಳನ್ನು ಮಿಕ್ಸ್ ಮಾಡಿ ಹೊಸ ರೆಸಿಪಿ ಟ್ರೈ ಮಾಡುವುದು ಹೀಗೆ ಹೊಸ ಆಹಾರವನ್ನು ತಯಾರಿಸಲಾಗುತ್ತದೆ.

ಅದೆಲ್ಲಾ ಬಿಡಿ, ಇಲ್ಲಾಗಿರೋದು ಫ್ಯಾಷನ್ ಹಾಗೂ ಫುಡ್ ಟ್ರೆಂಡ್ ಎರಡೂ ಅಲ್ಲ. ಬದಲಾಗಿ, ಫುಡ್ ಇನ್ ಫ್ಯಾಶನ್ ಅನ್ನೋ ಕಾನ್ಸೆಪ್ಟ್. ಹೌದು, ಫುಡ್ ಆಂಡ್ ಫ್ಯಾಷನ್ ಅನ್ನು ಮಿಕ್ಸ್ ಮಾಡೋಕೆ ಹೋಗಿ ಇಲ್ಲೊಬ್ರು, ಸ್ಯಾಂಡ್‌ವಿಚ್‌ನ್ನೇ ಚಪ್ಪಲಿ ಮಾಡ್ಕೊಂಡಿದ್ದಾರೆ. ಸದ್ಯ ಈ ಸ್ಯಾಂಡ್‌ವಿಚ್ (Sandwich) ಸ್ನೀಕರ್ಸ್ ಫ್ಯಾಷನ್ ಜಗತ್ತಿನಲ್ಲಿ ಲೇಟೆಸ್ಟ್ ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಈ ಫೋಟೋಗೆ ಭಿನ್ನ-ವಿಭಿನ್ನ ರೀತಿಯ ಕಾಮೆಂಟ್‌ಗಳು ಬರ್ತಿವೆ. 

Latest Videos

undefined

Viral Video: ನಿಂಬೆ ಹಣ್ಣಿನ ನೇಲ್ ಆರ್ಟ್ ಹುಡ್ಗಿ ಬಂದ್ಲು ನೋಡಿ..!

ಫ್ಯಾಷನ್ ಎಂಬುದು ವ್ಯಕ್ತಿಯ ವೈಯುಕ್ತಿಕ ಆಯ್ಕೆಯಾಗಿದೆ. ಫ್ಯಾಷನ್ ಎಂಬುದು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. ಸಂಪೂರ್ಣವಾಗಿ ಅಲ್ಲವಾದರೂ ಸ್ಪಲ್ಪ ಮಟ್ಟಿಗೆ ಫ್ಯಾಷನ್ ಎಂಬುದು ಮನುಷ್ಯನ ಗುಣ ನಡವಳಿಕೆಗಳನ್ನು ನಿರ್ಣಯಿಸುತ್ತದೆ. ಈಗಂತೂ ಹೇಗಿದ್ರೂ ಫ್ಯಾಷನ್ ಎಂಬಂತಾಗಿದೆ. ಪ್ರಿಂಟೆಂಡ್ ಟೀ ಶರ್ಟ್‌ಗಳು ಶುರುವಾದಾಗಿನಿಂದ ತಲೆಬುರುಡೆ,  ಅಸ್ಥಿಪಂಜರ, ಐಯಾಮ್ ಡೆಡ್, ಎಂದು ಬರೆದ ಚಿತ್ರವಿಚಿತ್ರ ಡ್ರೆಸ್‌ಗಳು ಸಿಗ್ತವೆ. ಫ್ಯಾಷನ್ ವ್ಯಕ್ತಿತ್ವ ಮತ್ತು ಅಭಿರುಚಿಯ ಅಭಿವ್ಯಕ್ತಿಯಾಗಿದೆ. ನೀವು ಆಹಾರಪ್ರಿಯರಾಗಿದ್ದರೆ, ನಿಮ್ಮ ಟೀ ಶರ್ಟ್‌ಗಳು ಅಥವಾ ಬ್ಯಾಗ್‌ಗಳ ಮೇಲೆ ಇರುವ ಪ್ರಿಂಟ್ ಇದನ್ನು ತೋರಿಸುತ್ತದೆ. ಮೇಕಪ್ ಬಗ್ಗೆ ಇಂಟ್ರೆಸ್ಟ್ ಇದ್ದೋರು ಅದೇ ರೀತಿಯ ಟೀ ಶರ್ಟ್ ಹಾಕಿ ಖುಷಿ ಪಡ್ತಾರೆ. ಹಾಗೆ ಸಿದ್ಧಗೊಂಡಿರೋದೆ ಸ್ಯಾಂಡ್‌ವಿಚ್ ಸ್ನೀಕರ್ಸ್.

ಸ್ಯಾಂಡ್‌ವಿಚ್ ಸ್ನೀಕರ್ಸ್ ಹೇಗಿದೆ ?
ಸ್ಯಾಂದ್‌ವಿಚ್ ಸಾಮಾನ್ಯವಾಗಿ ಬೆಳಗ್ಗೆ, ಸಂಜೆಯ ಟೀ ಜತೆ ಬೆಸ್ಟ್ ಸ್ನ್ಯಾಕ್ಸ್. ಬ್ರೆಡ್, ಟೊಮೆಟೋ, ಕ್ಯಾರೆಟ್ ಸೇರಿದಂತೆ ಇತರ ತರಕಾರಿಗಳನ್ನು ಸೇರಿಸಿ ಇದನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಹೆಚ್ಚು ರುಚಿಯನ್ನು ಸೇರಿಸಲು ಚೀಸ್, ಕೆಚಪ್‌ನ್ನು ಸಹ ಬಳಸುತ್ತಾರೆ. ತವಾದಲ್ಲಿ ಬೇಯಿಸಿ ಅಥವಾ ಫ್ರೈ ಮಾಡಿ ಹೀಗೆ ವಿವಿಧ ರೀತಿಯಲ್ಲಿ ಸ್ಯಾಂಡ್ ವಿಚ್‌ನ್ನು ತಯಾರಿಸುತ್ತಾರೆ. ಸದ್ಯ ಎಲ್ಲೆಡೆ ಟ್ರೆಂಡ್ ಆಗ್ತಿರೋದು ಥೇಟ್ ಸ್ಯಾಂಡ್ ವಿಚ್‌ನಂತೆಯೇ ಕಾಣೋ ಸ್ನೀಕರ್ಸ್ (Sneakers). 

Saree in Winter: ಚಳಿಗಾಲದಲ್ಲಿ ವಿಭಿನ್ನವಾಗಿ ಸೀರೆ ಧರಿಸಿ ಟ್ರೆಂಡಿಯಾಗಿ ಕಾಣಿ

ಡಾಲ್ಸ್ ಕಿಲ್ ಎಂಬ ಜನಪ್ರಿಯ ಅಮೇರಿಕನ್ ಬ್ರಾಂಡ್‌ ಈ ಸ್ಯಾಂಡ್‌ವಿಚ್ ಸ್ನೀಕರ್‌ಗಳನ್ನು ಸಿದ್ಧಪಡಿಸಿದೆ. ನಿಜವಾದ ಸ್ಯಾಂಡ್ ವಿಚ್‌ನ್ನು ತಯಾರಿಸುವ ಹಾಗೆಯೇ ಈ ಸ್ಯಾಂಡ್ ವಿಚ್‌ನಲ್ಲೂ ಟೊಮೇಟೋ (Tomato), ಈರುಳ್ಳಿ ಎಲ್ಲಾ ಇವೆ. ಈ ಸ್ಯಾಂಡ್ ವಿಚ್ ಸ್ನೀಕರ್ಸ್ ಬೆಲೆ 7,329 ರೂ.ಗಳಾಗಿವೆ. ಸ್ಯಾಂಡ್‌ವಿಚ್ ಸ್ನೀಕರ್‌ಗಳು ಗಾಢ ಹಳದಿ ಬಣ್ಣದ ಹೊರಮೈ ಆವರಣವನ್ನು ಹೊಂದಿದ್ದು, ಇದರ ಮಧ್ಯದಲ್ಲಿ ಟೊಮೇಟೋ, ಈರುಳ್ಳಿ ಇತರ ಮಿಶ್ರಣವನ್ನು ನೋಡಬಹುದು. ನಂತರ ಶೂ ಲೇಸ್‌ನಂತೆಯೂ ಡಿಸೈನ್ ಮಾಡಿ ಚೆರಿ ಹಣ್ಣಿನಿಂದ ಅಲಂಕರಿಸಲಾಗಿದೆ.

ಸ್ಯಾಂಡ್‌ವಿಚ್ ಸ್ನೀಕರ್ಸ್ ಬಗ್ಗೆ ಹಲವು ರೀತಿಯ ಕಾಮೆಂಟ್‌ಗಳು ಬಂದಿವೆ. ಹಲವರು ಇದನ್ನು ನೋಡಿ ವಾವ್ ಅಂದರೆ, ಇನ್ನು ಕೆಲವರು ಆಹಾರದಲ್ಲೂ ಇದೆಂಥಾ ಹುಚ್ಚಾಟವ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು, ಫುಡ್ಡೀಗಳಿಗೆ ಹೇಳಿ ಮಾಡಿಸಿದ ಸ್ನೀಕರ್ಸ್ ಎಂದು ಖುಷಿಪಟ್ಟಿದ್ದಾರೆ.

click me!