ಫ್ಯಾಷನ್, ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಇಲ್ಲಿ ಉಪಯೋಗಕ್ಕೆ ಬಾರದ ಕಸದಿಂದಲೂ ಅದ್ಭುತ ಡ್ರೆಸ್ ಸಿದ್ಧವಾಗುತ್ತದೆ. ಹಾಗೆಯೇ ಸದ್ಯ ಸಿಲ್ವರ್ ಕಲರ್‌ನ ಹರಿದ ಜೀನ್ಸ್ ಪೋಟೋ ಹೆಚ್ಚು ಸುದ್ದಿಯಲ್ಲಿದೆ. ಇದೆಷ್ಟು ಕಾಸ್ಟ್ಲೀಯಾಗಿದೆ ಎಂದ್ರೆ ಈ ದುಡ್ಡಲ್ಲಿ ಐಫೋನ್ ಖರೀದಿಸ್ಬೋದು ಅಂತಿದ್ದಾರೆ ಜನ್ರು
ಫ್ಯಾಷನ್ ಎಂಬುದು ಆಗಾಗ ಬದಲಾಗುತ್ತಲೇ ಇರುತ್ತದೆ. ಹಿಂದೆಯೆಲ್ಲಾ ಡಿಫರೆಂಟ್ ಡಿಸೈನರ್ ಬಟ್ಟೆಗಳು ಫ್ಯಾಷನ್ ಎಂದು ಕರೆಯಲ್ಪಡುತ್ತಿದ್ದವು. ಆದರೆ ಈಗ ಏನು ಮಾಡಿದರೂ ಫ್ಯಾಷನ್ ಎಂಬಂತಾಗಿದೆ. ಹರಿದ ಜೀನ್ಸ್‌ಗಳು, ತೋಳು ಹರಿದ ಟಾಪ್‌ಗಳು, ಟ್ರಾನ್ಸ್‌ಪರೆಂಟ್ ಸೀರೆ ಎಲ್ಲವೂ ಟ್ರೆಂಡೀ ಟ್ರೆಂಡೀ ಎಂದೇ ಕರೆಯಲ್ಪಡುತ್ತವೆ. ಮಾತ್ರವಲ್ಲ ಫ್ಯಾಷನ್ ಹೆಸರಲ್ಲಿ ಚಿತ್ರ-ವಿಚಿತ್ರ ಡ್ರೆಸ್‌ಗಳು ಮಾರುಕಟ್ಟೆಗೆ ಬರೋದನ್ನು ನಾವು ನೋಡಬಹುದು. ಹಾಗೆಯೇ ಇಲ್ಲೊಂದೆಡೆ ಎಲ್ಲರೂ ಇದೂ ಒಂದು ಬಟ್ಟೇನಾ ಅನ್ನುವಂಥಾ ಡ್ರೆಸ್ ಮಾರುಕಟ್ಟೆಗೆ ಬಂದಿದೆ. ಇದರ ಬೆಲೆಯೂ ಅಬ್ಬಬ್ಬಾ ಅನ್ನುವಂತಿದೆ.
ಫ್ಯಾಷನ್ ಪ್ರವೃತ್ತಿಗಳು ಬದಲಾಗುತ್ತಲೇ ಇರುತ್ತವೆ. ಹೊಸದು ಮಾರುಕಟ್ಟೆಗೆ ಬಂದ ತಕ್ಷಣ, ದೊಡ್ಡ ವಿನ್ಯಾಸಕರು ಅದರ ಮೇಲೆ ತಮ್ಮ ಟ್ಯಾಗ್ ಅನ್ನು ಹಾಕುತ್ತಾರೆ. ಸೆಲೆಬ್ರಿಟಿಗಳು ಅದನ್ನು ಧರಿಸಲು ಪ್ರಾರಂಭಿಸುತ್ತಾರೆ ಮತ್ತು ಹೊಸ ಟ್ರೆಂಡ್ ಅನ್ನು ಪ್ರಚಾರ ಮಾಡುತ್ತಾರೆ, ಅದು ನಂತರ ಎಲ್ಲರ ಮೆಚ್ಚಿನ ಆಗುತ್ತದೆ. ನಂತರ ಪ್ರತಿಯೊಬ್ಬರೂ ಇತ್ತೀಚಿನ ಶೈಲಿಯೊಂದಿಗೆ ಟ್ಯೂನ್ ಆಗಿ ಉಳಿಯಲು ಅದನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಇತ್ತೀಚೆಗಷ್ಟೇ ಹೊಸ ಟ್ರೆಂಡಿಂಗ್ ಔಟ್ ಫಿಟ್ ಮಾರುಕಟ್ಟೆಗೆ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಫ್ಯಾಶನ್ ಡ್ರೆಸ್‌ನ ಬೆಲೆ ಕೂಡ ಬೆಚ್ಚಿ ಬೀಳುವಂತಿದೆ. ಇದು ಸಿಲ್ವರ್ ಕಲರ್‌ನ ಒಂದು ರಿಪ್ಡ್ ಜೀನ್ಸ್ ಆಗಿದ್ದು, ಅಲ್ಲಲ್ಲಿ ಪ್ಯಾಚ್ಡ್ ವರ್ಕ್ ಮಾಡಲಾಗಿದೆ.
Tattoo ಕಾರಣಕ್ಕೆ ಟಾಯ್ಲೆಟ್ ತೊಳೆಯೋ ಕೆಲಸವೂ ಸಿಗ್ತಿಲ್ಲ, ಆದ್ರೂ ಹುಚ್ಚು ಬಿಟ್ಟಿಲ್ಲ
ಸಿಲ್ವರ್ ಬಣ್ಣದ ಪ್ಯಾಚ್ಡ್ ಜೀನ್ಸ್ ಫೋಟೋ ವೈರಲ್
ಇತ್ತೀಚಿನ ದಿನಗಳಲ್ಲಿ ಈ ಸಿಲ್ವರ್ ಬಣ್ಣದ ಪ್ಯಾಚ್ಡ್ ಜೀನ್ಸ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದು ಲೇಟೆಸ್ಟ್ ಫ್ಯಾಷನ್ ಎಂದು ಜನರ ಹೇಳುತ್ತಿದ್ದಾರೆ. ಸಂಪೂರ್ಣವಾಗಿ ಹರಿದಿರುವ ಈ ಜೀನ್ಸ್ ಬೆಲೆ ಮಾತ್ರ ಅಬ್ಬಬ್ಬಾ ಅನ್ನುವಂತಿದೆ. ಅಲ್ಲಲಲ್ಲಿ ಹರಿದು ಪ್ಯಾಚ್ ವರ್ಕ್ ಮಾಡಿರೋ ಈ ಜೀನ್ಸ್‌ನ ಬೆಲೆ ಭರ್ತಿ 52999 ಆಗಿದೆ. ಇದನ್ನು ಕೊಳ್ಳೋಕೆ ಡಿಸ್ಕೌಂಟ್ ಸಹ ಇದೆ. 30% ರಿಯಾಯಿತಿಯಲ್ಲಿ ಇದು ಕಡಿಮೆ ಬೆಲೆಗೆ ಬರುತ್ತದೆ. ಅಂದರೆ 37099 ರೂ.ಗೆ ನೀವಿದನ್ನು ಖರೀದಿಸಬಹುದು.
ಸದ್ಯ ಹರಿದ ಜೀನ್ಸ್‌ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿಸ್ಕೌಂಟ್ ಹಾಕಿದ ಬಳಿಕವೂ ಹರಿದ ಜೀನ್ಸ್‌ನ ಬೆಲೆ ಹೆಚ್ಚೇ ಇದೆ. ಈ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಬಹುದು. ಟ್ಯಾಬ್ಲೆಟ್ ಅಥವಾ ಸಣ್ಣ ಲ್ಯಾಪ್‌ಟಾಪ್ ಕೂಡ ಈ ಬೆಲೆಯಲ್ಲಿ ಬರಬಹುದು. ಮತ್ಯಾಕೆ ಈ ಜೀನ್ಸ್‌ಗೆ ಇಷ್ಟು ಹಣವನ್ನು ವ್ಯರ್ಥ ಮಾಡುತ್ತೀರಿ? ಆದರೆ ನೀವು ಫ್ಯಾಷನ್ ಪ್ರಿಯರಾಗಿದ್ದರೆ ಈ ಜೀನ್ಸ್ ಖರೀದಿಸಬಹುದು.
ಹೂವು, ಸೊಪ್ಪುಗಳೇ ಬಟ್ಟೆ, ಉರ್ಫಿಯನ್ನೂ ಮೀರಿಸುವಂತಿದ್ದಾನೆ ಈ ಮೇಲ್ ಮಾಡೆಲ್!
ಗೋಣಿಚೀಲಿಂದ ಮಾಡಿದ ಪಲಾಝೋ ಬೆಲೆ 60,000 ರೂ.
ಇಂತಹ ಜೀನ್ಸ್‌ಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಇದೇ ಮೊದಲೇನಲ್ಲ, ಈ ಮೊದಲು ಗೋಣಿಚೀಲದಿಂದ ಮಾಡಿದ ಪ್ಯಾಂಟ್ ಕೂಡ ವೈರಲ್ ಆಗಿತ್ತು. ಇವರ ಬೆಲೆ 60,000 ರೂ. ಇದ್ದಿದ್ದು ನೋಡಿ ಜನರು ಬೆಚ್ಚಿಬಿದ್ದಿದ್ದರು. ನಾವು ದಿನನಿತ್ದ ಮನೆಯಲ್ಲಿ ಗೋಧಿ ಮತ್ತು ಅಕ್ಕಿ ಇಡಲು ಬಳಸುವ ಗೋಣಿಚೀಲಗಳನ್ನು ಡ್ರೆಸ್ ಮಾಡಲು ಬಳಸಲಾಗಿತ್ತು. ಗೋಣಿಚೀಲದ ಪಲಾಝೋ ಪ್ಯಾಂಟ್‌ನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿತ್ತು ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಸಾಮಾನ್ಯವಾಗಿ ಪಲಾಝೋ ಪ್ಯಾಂಟ್‌ನ ಬೆಲೆ ನೂರರಿಂದ ಆರಂಭವಾಗಿ ಎರಡು ಸಾವಿರ ರೂ. ವರೆಗೂ ಇರುತ್ತದೆ. ಆದರೆ ಈ ಗೋಣಿಚೀಲದ ಪ್ಯಾಂಟ್‌ನ ಬೆಲೆ ಭರ್ತಿ 60,000 ರೂ. ಆಗಿತ್ತು.