Fashion

ಫ್ಯಾಶನ್‌

ತ್ರಿಪುರಾದ ವ್ಯಕ್ತಿಯೊಬ್ಬ ಪ್ರಕೃತಿಯಿಂದ ಸಿಗುವ ಎಲೆ, ಹೂ, ಸೊಪ್ಪು ಬಳಸಿ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾನ. ಎಲೆಗಳು, ದೊಡ್ಡ ಹೂವುಗಳಿಂದ ದೇಹ ಮುಚ್ಚಿಕೊಳ್ಳುತ್ತಾನೆ.

Image credits: others

ಡಿಸೈನರ್ ರನೌತ್ ನೀಲ್

ಡಿಸೈನರ್ ರನೌತ್ ನೀಲ್ ತ್ರಿಪುರಾದ ಒಂದು ಸಣ್ಣ ಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಹಾಟ್ ಕೌಚರ್ ಅನ್ನು ರಚಿಸುತ್ತಿದ್ದಾನೆ. ಇವನ ಅಸಲಿ ಹೆಸರು ಸರ್ಬಜಿತ್ ಕೌರ್. 

Image credits: others

ಹೂವಿನ ಡ್ರೆಸ್‌

ಲ್ಯಾವೆಂಡರ್‌ ಕಲರ್‌ನ ವಾಟರ್‌ ಲಿಲ್ಲಿ ಹೂವಿನಿಂದ ಅತ್ಯಾಕರ್ಷಕ ಗೌನ್ ಸಿದ್ಧಪಡಿಸಿದ್ದಾನೆ. ರನೌತ್ ನೀಲ್ ಪ್ರಸಿದ್ಧ ಖ್ಯಾತನಾಮರ ಬಟ್ಟೆಗಳನ್ನು ಮರುಸೃಷ್ಟಿಸಲು ಸಹ ಪ್ರಸಿದ್ಧನಾಗಿದ್ದಾನೆ.

Image credits: others

ಎಲೆ, ಹೂಗಳ ಬಳಕೆ

ನೀಲ್ ರನೌತ್ ಒಬ್ಬನೇ ಬಟ್ಟೆಗಳನ್ನು ಡಿಸೈನ್ ಮಾಡುತ್ತಾನೆ. ಎಲೆಗಳು ಮತ್ತು ಹೂವುಗಳನ್ನು ಒಬ್ಬನೇ ಹುಡುಕುತ್ತಾನೆ. ಸ್ವತಃ ವಿನ್ಯಾಸಗೊಳಿಸಿ, ಸ್ಟಿಚ್ ಮಾಡುತ್ತಾನೆ. 

Image credits: others

ಹಾಟ್ ಪೋಸ್‌

ಕೆಲವೊಮ್ಮೆ ಕುಟುಂಬ ಸದಸ್ಯರ ಸಹಾಯದಿಂದ. ವಿಭಿನ್ನ ರಚನೆಗಳಲ್ಲಿ ಸಹ ಬಟ್ಟೆ ಸಿದ್ಧಪಡಿಸುತ್ತಾನೆ. ವೃತ್ತಿಪರ ಮಾದರಿಯ ಕೌಶಲ್ಯದೊಂದಿಗೆ ಪೋಸ್ ನೀಡುತ್ತಾನೆ.

Image credits: others

ಡಿಫರೆಂಟ್ ಡ್ರೆಸ್

ದಿಶಾ ಪಟಾನಿ, ಕಂಗನಾ ರನೌತ್, ಮತ್ತು ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರಂತಹ ಖ್ಯಾತನಾಮರು ನೀಲ್ ರನೌತ್  ಸೃಜನಶೀಲತೆಯನ್ನು ಶ್ಲಾಘಿಸಿದ್ದಾರೆ.  

Image credits: others

ಹೂವಿನ ಸ್ಕರ್ಟ್‌

ಕಲರ್‌ಫುಲ್‌ ಹೂವುಗಳಿಂದ ನೀಲ್ ರನೌತ್‌ ಬಟ್ಟೆ ಡಿಸೈನ್ ಮಾಡುವ ಕಾರಣ ಇವು ನೋಡಲು ಆಕರ್ಷಕವಾಗಿರುತ್ತವೆ. ಮೆರೂನ್ ಬಣ್ಣದ ಹೂವಿನ ಸ್ಕರ್ಟ್‌, ಟಾಪ್‌ ಗಮನ ಸೆಳೆಯುತ್ತದೆ.

Image credits: others

ಸೊಪ್ಪಿನ ಗೌನ್

ನೀಲ್‌ ಸರಳವಾದ ಸಂಪನ್ಮೂಲಗಳೊಂದಿಗೆ ಬಟ್ಟೆ ಡಿಸೈನ್ ಮಾಡಿರುವುದು ವಿಶೇಷವಾಗಿದೆ.ಸೊಪ್ಪುಗಳಿಂದ ತಯಾರಿಸಿರುವ ಗೌನ್ ಡಿಫರೆಂಟ್ ಆಗಿ ಗಮನ ಸೆಳೆಯುತ್ತದೆ.

Image credits: others
Find Next One