ರಿಷಬ್ ಪಂತ್‌ ತಂಗಿ ಮದುವೆಯಲ್ಲಿ ಸಾಕ್ಷಿ ಧೋನಿ ಆಭರಣದ ಮೇಲೆ ಬಿತ್ತು ನೆಟ್ಟಿಗರ ಕಣ್ಣು, ಅಂಥದ್ದೇನಿದೆ ಸ್ಪೆಷಲ್‌!

Published : Mar 14, 2025, 02:28 PM ISTUpdated : Mar 14, 2025, 02:34 PM IST
ರಿಷಬ್ ಪಂತ್‌ ತಂಗಿ ಮದುವೆಯಲ್ಲಿ ಸಾಕ್ಷಿ ಧೋನಿ ಆಭರಣದ ಮೇಲೆ ಬಿತ್ತು ನೆಟ್ಟಿಗರ ಕಣ್ಣು, ಅಂಥದ್ದೇನಿದೆ ಸ್ಪೆಷಲ್‌!

ಸಾರಾಂಶ

ಸಾಕ್ಷಿ ಧೋನಿ ರಿಷಬ್‌ ಪಂತ್‌ ಅವರ ಸಹೋದರಿ ಮದುವೆಯಲ್ಲಿ 15 ವರ್ಷಗಳ ಹಿಂದೆ ತಮ್ಮ ಮದುವೆಯಲ್ಲಿ ಧರಿಸಿದ್ದ ಆಭರಣವನ್ನೇ ಧರಿಸಿ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸಾಕ್ಷಿ ಹಳೆಯ ಆಭರಣಗಳ ಟ್ರೆಂಡ್‌ ಹುಟ್ಟುಹಾಕಿದ್ದಾರೆ.

ಮ್ಮ ಆಕರ್ಷಕ ಸ್ಟೈಲ್‌ನ ಕಾರಣದಿಂದಾಗಿ ಟೀಮ್‌ ಇಮಡಿಯಾ ಮಾಜಿ ಕ್ಯಾಪ್ಟನ್‌ ಎಂಎಸ್‌ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಸುದ್ದಿಯಲ್ಲಿರುತ್ತಾರೆ. ಕಂಫರ್ಟ್‌ ಆಗಿರುವ ಡ್ರೆಸ್‌ಅನ್ನು ಧರಿಸಲು ಅವರು ಇಷ್ಟಪಡುತ್ತಾರೆ. ಇತ್ತಿಚೆಗೆ ನಡೆದ ಟೀಮ್‌ ಇಂಡಿಯಾ ಕ್ರಿಕೆಟಿಗ ರಿಷಬ್‌ ಪಂತ್‌ ಅವರ ಸಹೋದರಿ ಸಾಕ್ಷಿ ಪಂತ್‌ ಅವರ ಮದುವೆಯಲ್ಲಿ ಸಾಕ್ಷಿ ಧೋನಿ ಹಾಗೂ ಎಂಎಸ್‌ ಧೋನಿ ಇಬ್ಬರೂ ಭಾಗವಹಿಸಿದ್ದರು. ಈ ಬಾರಿಯೂ ಅವರು ಅತ್ಯಂತ ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದರು. ಎಂದಿನಂತೆ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡ ಅವರಲ್ಲಿ ಹೆಚ್ಚಿನವರು ಗಮನಿಸಿದ್ದು, ಆಕೆ ಧರಿಸಿದ್ದ ಆಭರಣ. ಹೌದು ಮದುವೆಯಲ್ಲಿ ಸಾಕ್ಷಿ ಧೋನಿ ಧರಿಸಿದ್ದ ಆಭರಣದ ಮೇಲೆ ಎಲ್ಲರ ಕಣ್ಣು ಬಿದ್ದಿದೆ. 

ಅದಕ್ಕೆ ಕಾರಣವೂ ಇದೆ. ಸಾಕ್ಷಿ ಧೋನಿ 15 ವರ್ಷಗಳ ಹಿಂದೆ ತಮ್ಮ ಮದುವೆಯಲ್ಲಿ ಧರಿಸಿದ್ದ ಆಭರಣವನ್ನೇ ಮತ್ತೊಮ್ಮೆ ಧರಿಸಿದ್ದರು. ಅದರೊಂದಿಗೆ ಟೈಮ್‌ಲೆಸ್‌ ಆಭರಣಗಳು ಎಂದಿಗೂ ಓಲ್ಡ್‌ ಆಗೋದಿಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಮಾರ್ಚ್‌ 12 ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ರಿಷಬ್‌ ಪಂತ್‌ ಸಹೋದರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದರಲ್ಲಿ ಕುಟುಂಬದ ಆಪ್ತರು ಹಾಗೂ ಸ್ನೇಹಿತರಷ್ಟೇ ಭಾಗವಹಿಸಿದ್ದರು.  ಅತಿಥಿಗಳಲ್ಲಿ ಎಂಎಸ್ ಧೋನಿ ಮತ್ತು ಸಾಕ್ಷಿ ಕೂಡ ಇದ್ದರು, ಅವರು ತಮ್ಮ ಸೊಗಸಾದ ಡ್ರೆಸ್‌ನೊಂದಿಗೆ ಗಮನ ಸೆಳೆದರು. ಸದಾ ಸ್ಟೈಲಿಶ್ ಆಗಿರುವ ಸಾಕ್ಷಿ ಮದುವೆಯ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರು, ತಮ್ಮ ಅದ್ಭುತ ಫ್ಯಾಷನ್ ಪ್ರಜ್ಞೆಯನ್ನು ಪ್ರದರ್ಶಿಸಿದರು.

ಮದುವೆಗಾಗಿ, ಸಾಕ್ಷಿಆಕರ್ಷಕವಾಗು ನಿಂಬೆ-ಹಸಿರು ರೇಷ್ಮೆ ಸೀರೆಯನ್ನು ಧರಿಸಿದ್ದರು. ಅದರ ಮೇಲೆ ಸ್ಕಲ್ಲೋಪ್ಡ್ ಬಾರ್ಡರ್ ಉದ್ದಕ್ಕೂ ಸಂಕೀರ್ಣವಾದ ಚಿನ್ನದ ಡೀಟೇಲಿಂಗ್‌ನಿಂದ ಅಲಂಕರಿಸಿದ್ದರು. ಅವರು ಅದನ್ನು ಅರ್ಧ ತೋಳುಗಳು ಮತ್ತು ಸೂಕ್ಷ್ಮವಾದ ಸ್ಕಲ್ಲೋಪ್-ಕುತ್ತಿಗೆ ವಿನ್ಯಾಸವನ್ನು ಹೊಂದಿರುವ ಹೊಂದಾಣಿಕೆಯ ಬ್ಲೌಸ್‌ನೊಂದಿಗೆ ಧರಿಸಿದ್ದರು. ಇದರೊಂದಿಗೆ ಅವರು ಕನ್ನಡಿ ಅಲಂಕಾರಗಳೊಂದಿಗೆ ಕೆಂಪು ಮತ್ತು ಕಿತ್ತಳೆ ಬಣ್ಣದ ದಾರದ ದುಪಟ್ಟಾವನ್ನು ಧರಿಸಿದ್ದರು, ಅದು ಅವರ ನೋಟಕ್ಕೆ ಹಬ್ಬದ ಮೋಡಿಯನ್ನು ನೀಡಿತು.

ಕ್ಯಾಪ್ಟನ್ ಕೂಲ್ ಧೋನಿಗೆ ಸ್ಟಂಪಿಂಗ್ ರೂಲ್ಸ್ ಕಲಿಸಿದ್ದೇ ಪತ್ನಿ ಸಾಕ್ಷಿಯಂತೆ!

ಇಷ್ಟೆಲ್ಲದರ ನಡುವೆ ಆಕೆಯ ಗಮನಸೆಳೆದಿದ್ದು ಅವರು ಧರಿಸಿದ್ದ ಮದುವೆಯ ಸಮಯದ ಆಭರಣದಿಂದ. ಟ್ರೆಂಡಿ ಡೈಮಂಡ್‌ ಅಥವಾ ಎಮರಾಲ್ಡ್‌ಗಳ ಬದಲು, ಸಾಕ್ಷಿ ತಮ್ಮ ಮದುವೆಯ ದಿನ ಧರಿಸಿದ್ದ ಆಭರಣವನ್ನು ಮತ್ತೊಮ್ಮೆ ಧರಿಸಲು ತೀರ್ಮಾನ ಮಾಡಿದ್ದರು. ಗೋಲ್ಡ್‌ ಚೋಕರ್‌, ಲೇಯರ್ಡ್‌ ನೆಕ್ಲೇಸ್‌ ಹಾಗೂ ಸಾಂಪ್ರದಾಯಿಕ ಚಿನ್ನದ ನತ್ತು (ಮೂಗಿನ ರಿಂಗ್‌) ಧರಿಸಿದ್ದರು. ಇದಕ್ಕೆ ತಕ್ಕುದಾದ ಜುಮುಖಿಗಳನ್ನು ಕೂಡ ಇವರು ಹಾಕಿಕೊಂಡಿದ್ದರು.

ದುರಂತ ಅಂತ್ಯ ಕಂಡ ಧೋನಿ ಫಸ್ಟ್ ಲವ್, ಸಾಕ್ಷಿಗಿಂತ ಮೊದಲು ಥಲಾ ಹೃದಯ ಕದ್ದಿದ್ದು ಯಾರು?

ಅವರ ಲುಕ್‌ಗೆ ಪೂರಕವಾಗಿ ಗುಲಾಬಿ ಬಣ್ಣದ ಬ್ಲಶ್, ಕೋರಲ್‌ ಲಿಪ್‌ಸ್ಟಿಕ್ ಮತ್ತು ಕೆಂಪು ಬಿಂದಿ ಒಳಗೊಂಡ ಮೃದುವಾದ ಮೇಕಪ್ ಇತ್ತು, ಇದು ಸಾಂಪ್ರದಾಯಿಕ ಆದರೆ ಆಧುನಿಕ ಆಕರ್ಷಣೆ ನೀಡಿತು. 2020ರ ಜುಲೈ 4 ರಂದು ಎಂಎಸ್‌ ಧೋನಿ ಹಾಗೂ ಸಾಕ್ಷಿ ಧೋನಿ ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ ನ್ಯೂ ಇಯರ್ ಪಾರ್ಟಿಗೆ 2025ರ ಟ್ರೆಂಡಿಂಗ್ ಸೀರೆ ಧರಿಸಿ ಕ್ಲಾಸಿಯಾಗಿ ಮಿಂಚಿ
ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!