ಒಂದು ಕಾಲು ಇಲ್ಲದ 38,000 ರೂ. ಜೀನ್ಸ್ ಪ್ಯಾಂಟ್ ಬಿಡುಗಡೆ ಮಾಡಿದ ಫ್ರೆಂಚ್ ಬ್ರ್ಯಾಂಡ್!

Published : Mar 09, 2025, 01:33 PM ISTUpdated : Mar 09, 2025, 01:41 PM IST
ಒಂದು ಕಾಲು ಇಲ್ಲದ 38,000 ರೂ. ಜೀನ್ಸ್ ಪ್ಯಾಂಟ್ ಬಿಡುಗಡೆ ಮಾಡಿದ ಫ್ರೆಂಚ್ ಬ್ರ್ಯಾಂಡ್!

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಒನ್ ಲೆಗ್ಡ್ ಜೀನ್ಸ್ ಟ್ರೆಂಡ್ ಸೃಷ್ಟಿಸಿದೆ. ಫ್ರೆಂಚ್ ಬ್ರ್ಯಾಂಡ್ ಕೋಪರ್ನಿ ಈ ವಿನ್ಯಾಸವನ್ನು ಪರಿಚಯಿಸಿದ್ದು, ಬೆಲೆ ದುಬಾರಿಯಾಗಿದೆ. ಆದರೆ, ಇದರ ಬಾಳಿಕೆ ಬಗ್ಗೆ ಹಲವರಿಗೆ ಅನುಮಾನಗಳಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಇದೀಗ ಒನ್ ಲೆಗ್ಡ್ ಜೀನ್ಸ್ ಟ್ರೆಂಡ್ ಸೃಷ್ಟಿಸಿದೆ. ಫ್ರೆಂಚ್ ಬ್ರ್ಯಾಂಡ್ ಕೋಪರ್ನಿ ಈ ವಿನ್ಯಾಸವನ್ನು ಪರಿಚಯಿಸಿದ್ದು, ಬೆಲೆ ಭಾರತೀಯ ಹಣದ ಮೌಲ್ಯದಲ್ಲಿ 38,000 ರೂ. ಆಗಿದ್ದು, ಅತ್ಯಂತ ದುಬಾರಿಯಾಗಿದೆ. ಆದರೆ, ಇದರ ಬಾಳಿಕೆ ಬಗ್ಗೆ ಹಲವರಿಗೆ ಅನುಮಾನಗಳಿವೆ.

ಸೋಶಿಯಲ್ ಮೀಡಿಯಾದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಶುರುವಾಗಿದೆ. ಅದೇ ಒನ್ ಲೆಗ್ಡ್ ಜೀನ್ಸ್ (one legged jeans). ಆರಂಭದಲ್ಲಿ ಇದೀಗ ಈ ಒಂದು ಕಾಲಿನ ಜೀನ್ಸ್ ಪ್ಯಾಂಟ್‌ನ ಬೆಲೆ ಸ್ವಲ್ಪ ಜಾಸ್ತಿನೇ ಇದೆ. ಆದರೆ, ಭಾರತೀಯರ ಹಣಕ್ಕೆ ಲೆಕ್ಕ ಹಾಕಿದರೆ ಇದರ ಬೆಲೆ ಬೆಚ್ಚಿ ಬೀಳುವಷ್ಟು ದುಬಾರಿ ಆಗಿದೆ. ಒಂದು ಕಾಲಿನ ಜೀನ್ಸ್ ಪ್ಯಾಂಟ್‌ಗೆ ಬರೋಬ್ಬರಿ 38,330 ರೂಪಾಯಿ (ಅಂದ್ರೆ 440 ಡಾಲರ್) ಆಗಿದೆ. ಫ್ರೆಂಚ್ ಫ್ಯಾಷನ್ ಬ್ರ್ಯಾಂಡ್ ಕೋಪರ್ನಿ ಫ್ಯಾಷನ್ ಪ್ರಿಯರಿಗಾಗಿ ಈ ಒನ್ ಲೆಗ್ಡ್ ಜೀನ್ಸ್ ತಂದಿದೆ. ಆದರೆ, ಇದು ಅಷ್ಟಾಗಿ ಯೂಸ್ ಆಗಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. ಈ ಬಟ್ಟೆ ಎಷ್ಟು ದಿನ ಬಾಳಿಕೆ ಬರುತ್ತೆ ಅಂತಾನೂ ಕೆಲವರಿಗೆ ಡೌಟ್ ಇದೆ.

ಟಿಕ್ ಟಾಕ್‌ನಲ್ಲಿ 16 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 7 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಸ್ಟಿ ಸಾರಾ, ಈ ಒಂದೇ ಕಾಲಿನ ಜೀನ್ಸ್‌ನ್ನು ಸೋಶಿಯಲ್ ಮೀಡಿಯಾಗೆ ಪರಿಚಯಿಸಿದ್ದಾರೆ. 'ಇಂಟರ್ನೆಟ್‌ನಲ್ಲೇ ಅತಿ ಹೆಚ್ಚು ಚರ್ಚೆಯಾದ ಜೀನ್ಸ್' ಅಂತ ಜೀನ್ಸ್‌ಗೆ ಹೆಸರಿಟ್ಟಿದ್ದಾರೆ. ಕ್ರಿಸ್ಟಿ ಜೀನ್ಸ್ ಬಗ್ಗೆ ಹೇಳುತ್ತಿದ್ದಾಗ ಆಕೆಯ ಗಂಡ ಜೀನ್ಸ್ ವಿರುದ್ಧ ಮಾತನಾಡಿದ್ದಾರೆ. ಇದನ್ನು ಯಾರೂ ಹಾಕಿಕೊಳ್ಳಲ್ಲ ಅಂತ ಅವರಿಗೆ ಗ್ಯಾರಂಟಿ ಇದೆ. ತುಂಬಾ ಜನ ಕ್ರಿಸ್ಟಿ ಗಂಡನ ಮಾತಿಗೆ ಸಪೋರ್ಟ್ ಮಾಡಿದ್ದಾರೆ. ಇದು ವಿಚಿತ್ರವಾಗಿದೆ, ಹಾಸ್ಯಾಸ್ಪದವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್‌ನಲ್ಲಿ BMW ಕಾರು ನಿಲ್ಲಿಸಿ ಮೂತ್ರ ವಿಸರ್ಜಿಸಿದ ಯುವಕ; ವಿಡಿಯೋ ವೈರಲ್ ಬೆನ್ನಲ್ಲೇ ಅರೆಸ್ಟ್!

ರುಪಾಲ್ಸ್ ಡ್ರ್ಯಾಗ್ ರೇಸ್, ಕ್ವೀರ್ ಐ ಫಾರ್ ದಿ ಸ್ಟ್ರೈಟ್ ಗೈ ಮೂಲಕ ಫೇಮಸ್ ಆದ ಎಮ್ಮಿ ಅವಾರ್ಡ್ ವಿನ್ನರ್ ಸ್ಟೈಲಿಸ್ಟ್ ಕಾರ್ಸನ್ ಕ್ರೆಸ್ಲಿ ಕೂಡ ಇದೇ ಅಭಿಪ್ರಾಯ ಪಟ್ಟಿದ್ದಾರೆ. ಆ ಜೀನ್ಸ್‌ನಲ್ಲಿ ನಿಲ್ಲೋಕೆ ಒಂದು ಕಾಲು ಕೂಡ ಇರಲ್ಲ ಅಂತ ಕಾರ್ಸನ್ ನ್ಯೂಯಾರ್ಕ್ ಪೋಸ್ಟ್‌ಗೆ ಹೇಳಿದ್ದಾರೆ. ಆದ್ರೆ ಫ್ರೆಂಚ್ ಬ್ರ್ಯಾಂಡ್ ಕೋಪರ್ನಿ 'ಒನ್-ಲೆಗ್ ಡೆನಿಮ್ ಟ್ರೌಸರ್' ಹೆಸರಲ್ಲಿ ಡೆನಿಮ್ ಪೀಸ್‌ನ ಎಲ್ಲಾ ಸೈಜ್‌ನಲ್ಲೂ ಮಾರ್ಕೆಟ್‌ಗೆ ತಂದು ಮಾರಾಟ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಬಂದರೂ ಈ ತರಹದ ಅರ್ಧಂಬರ್ಧ ಬಟ್ಟೆಗಳಿಗೆ ಫ್ಯಾಷನ್ ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸ್‌: ವೈರಲ್ ವೀಡಿಯೋ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಕಪ್ಪಾದ ಹಳೆ ಬೆಳ್ಳಿ ಆಭರಣಗಳನ್ನು ಹೊಸದರಂತೆ ಮಾಡುವ ಟಿಪ್ಸ್