ನೀತಾ ಅಂಬಾನಿಯ ಈ ಸ್ಯಾರಿ ಮಾತ್ರ ಸಿಂಪಲ್; ಕಿವಿಯೋಲೆ, ವಾಚ್, ಬ್ಲೌಸ್ ಎಲ್ಲವೂ ದುಬಾರಿ

Published : Mar 09, 2025, 04:27 PM ISTUpdated : Mar 09, 2025, 05:05 PM IST
ನೀತಾ ಅಂಬಾನಿಯ ಈ ಸ್ಯಾರಿ ಮಾತ್ರ ಸಿಂಪಲ್; ಕಿವಿಯೋಲೆ, ವಾಚ್, ಬ್ಲೌಸ್ ಎಲ್ಲವೂ ದುಬಾರಿ

ಸಾರಾಂಶ

ಕಾರ್ಯಕ್ರಮವೊಂದಕ್ಕೆ ನೀತಾ ಅಂಬಾನಿ ಸರಳ ಸೀರೆಯುಟ್ಟು ಹಾಜರಾಗಿದ್ದರು. ನೀತಾ ಅಂಬಾನಿಯ ಸಿಂಪಲ್ ಸೀರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಅಚ್ಚರಿ ಮಾಹಿತಿ ಹೊರಬಿದ್ದಿದೆ. ನೀತಾ ಅಂಬಾನಿ ಸಿಂಪಲ್ ಸೀರೆಗೆ ಧರಿಸಿದ್ದ ಬ್ಲೌಸ್,ವಾಚ್, ಕಿವಿಯೋಲೆ ಬೆಲೆ ಎಷ್ಟು ಗೊತ್ತಾ?

ಮುಂಬೈ(ಮಾ.09) ನೀತಾ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಮಹಿಳೆ. ನೀತಾ ಅಂಬಾನಿಯ ಲೈಫ್ ಸ್ಟೈಲ್ ಕೂಡ ಹಾಗೇ ಇದೆ. ಪತಿ ಮುಕೇಶ್ ಅಂಬಾನಿಗೆ ಹೋಲಿಸಿದರೆ ನೀತಾ ಅಂಬಾನಿಯ ಫ್ಯಾಶನ್, ಜ್ಯುವೆಲ್ಲರಿ ಎಲ್ಲವೂ ಬಲು ದುಬಾರಿ. ಆದರೆ ಇತ್ತೀಚೆಗೆ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟ್ರಾ(NMACC) ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅತ್ಯಂತ ಸರಳ ಸೀರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ನೀತಾ ಅಂಬಾನಿಯನ್ನು ದೂರದಿಂದ ನೋಡಿದ ಎಲ್ಲರೂ ಇಷ್ಟು ಶ್ರೀಮಂತ ಮಹಿಳೆ ಇಷ್ಟು ಸಿಂಪಲ್ ಆಗಿ ಬಂದಿದ್ದಾರೆ ಎಂದು ಎಲ್ಲರು ಮಾತನಾಡಿಕೊಂಡಿದ್ದರು. ಆದರೆ ನೀತಾ ಅಂಬಾನಿ ಹತ್ತಿರ ಬರುತ್ತಿದ್ದಂತೆ ನೀತಾ ಅಂಬಾನಿ ಧರಿಸಿದ್ದ ಸೀರೆ ಮಾತ್ರ ಸಿಂಪಲ್, ಆಭರಣ, ವಾಚ್, ವ್ಯಾನಿಟಿ ಬ್ಯಾಗ್ ಸೇರಿದಂತೆ ಎಲ್ಲವೂ ಅತ್ಯಂತ ದುಬಾರಿ.

NMACC ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಕಾಫಿ ಬಣ್ಣದ ಪ್ಲೈನ್ ಸೀರೆ ಉಟ್ಟಿದ್ದರು. ಮಿನುಗು ಬಾರ್ಡರ್‌ನಿಂದ ಕೂಡಿದ್ದ ಈ ಸೀರೆಗೆ ನೀತಾ ಅಂಬಾನಿ ಮುಕ್ಕಾಲು ತೋಳಿನ ಬ್ಲೌಸ್ ಧರಿಸಿದ್ದರು. ಈ ಬ್ಲೌಸ್ ಮಿನುಗುವ ಎಂಬ್ರಾಯಿಡರಿ ಸೇರಿದಂತೆ ಕೆಲ ಅತ್ಯಾಕರ್ಷಕ ಡಿಸೈನ್ ಬಳಕೆ ಮಾಡಲಾಗಿದೆ. ನೀತಾ ಅಂಬಾನಿ ಸಿಂಪಲ್ ಸೀರೆ ಜೊತೆಗೆ ಕೊರಳಿಗೆ ನೆಕ್ಲೇಸ್ ಸೇರಿದಂತೆ ಯಾವುದೇ ಆಭರಣ ಧರಿಸಿಲ್ಲ. ಆದರೆ ಅತೀ ದುಬಾರಿ ಕಿವಿಯೋಲೆ ಧರಿಸಿದ್ದಾರೆ. ಇದು ಡೈಮಂಡ್ ಕಿವಿಯೋಲೆ. 

ಮುಕೇಶ್ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಅತ್ಯಂತ ದುಬಾರಿ ಕಿವಿಯೋಲೆ ಧರಿಸಿದ್ದರು. ಇದರ ಬೆಲೆ ಸರಿಸುಮಾರು 5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟೇ ಅಲ್ಲ ನೀತಾ ಅಂಬಾನಿ ಧರಿಸಿದ್ದ ವಾಚ್ ಕೂಡ ಅತೀ ದುಬಾರಿ. ಪಟೇಕ್ ಫಿಲಿಪ್ ಬ್ರ್ಯಾಂಡ್ ವಾಚ್ ಧರಿಸಿದ್ದ ನೀತಾ ಅಂಬಾನಿ ಕಾರ್ಯಕ್ರಮದಲ್ಲಿ ಮಿಂಚಿದ್ದರು. ಇದರ ಬೆಲೆ 3.72 ಕೋಟಿ ರೂಪಾಯಿ.

 

 

ನೀತಾ ಅಂಬಾನಿಯ ಸಿಂಪಲ್ ಆದರೆ ಎಲಿಗೆಂಟ್ ಲುಕ್ ಇದೀಗ ಬಾರಿ ವೈರಲ್ ಆಗುತ್ತಿದೆ. ಮೊದಲ ನೋಟದಲ್ಲಿ ಸಿಂಪಲ್ ಆಗಿ ಕಂಡರೂ ಧರಿಸಿದ್ದ ಪ್ರತಿಯೊಂದು ವಸ್ತುಗಳು ಕೋಟಿ ಕೋಟಿ ರೂಪಾಯಿ ಬೆಲೆಬಾಳುತ್ತಿದೆ. ಸೀರೆ, ಅದಕ್ಕೆ ತಕ್ಕಂತೆ ಬ್ಲೌಸ್ ಡಿಸೈನ್, ಅದಕ್ಕೆ ತಕ್ಕಂತೆ ಡೈಮಂಡ್ ಕಿವಿಯೋಲೆ, ಹೊಂದಿಕೆಯಾಗುವವಂತೆ ಡೈಮಂಡ್ ವಾಚ್ ಧರಿಸಿದ್ದಾರೆ. ಇನ್ನು ಮೇಕಅಪ್, ಲಿಪ್‌ಸ್ಟಿಕ್ ಕೂಡ ಎಲ್ಲೂ ಸಹಜ ಸೌಂದರ್ಯಕ್ಕೆ ಧಕ್ಕೆಯಾಗುವಂತಿಲ್ಲ.  ಇದೇ ಕಾರಣಕ್ಕೆ ನೀತಾ ಅಂಬಾನಿ ಫ್ಯಾಶನ್ ಟೇಸ್ಟ್ ಹಲವರಿಗೆ ಇಷ್ಟವಾಗುತ್ತೆ.

ಶ್ರೀಮಂತ ಬಿಲ್‌ಗೇಟ್ಸ್- ನಟ ರಣಬೀರ್ ಕಪೂರ್‌, ಯಾರ ಜತೆ ಡಿನ್ನರ್‌ಗೆ ನೀತಾ ಅಂಬಾನಿ ಒಪ್ಪಿದ್ರು ನೋಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಕಪ್ಪಾದ ಹಳೆ ಬೆಳ್ಳಿ ಆಭರಣಗಳನ್ನು ಹೊಸದರಂತೆ ಮಾಡುವ ಟಿಪ್ಸ್