
ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿರುವ ಉದ್ಯಮಿ ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಭಾವಿ ಸೊಸೆ ರಾಧಿಕಾ ಮರ್ಚಂಟ್ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ಒಂದೇ ಹ್ಯಾಂಡ್ಬ್ಯಾಗ್ (handbag) ಹೊತ್ತಿರುವುದನ್ನು ಕಾಣಬಹುದು. ವಿಶೇಷವೆಂದರೆ ಈ ಬ್ಯಾಗ್ ಬೆಲೆ 21 ಲಕ್ಷ ಎಂದು ಹೇಳಲಾಗುತ್ತಿದೆ. ಇಶಾ ಮತ್ತು ರಾಧಿಕಾ ಒಟ್ಟಿಗೆ ಆಗಮಿಸಿದ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ಇತ್ತೀಚೆಗೆ ನಡೆದ 'ದಿ ಡಿಯರ್ ಫಾಲ್ 2023' ಕಾರ್ಯಕ್ರಮದ ಚಿತ್ರಗಳು. ಈ ವೇಳೆ ಇಬ್ಬರೂ ಹೊತ್ತೊಯ್ದ ಹ್ಯಾಂಡ್ ಬ್ಯಾಗ್ ಡಿಯರ್ ಕಂಪನಿಯದ್ದಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ರಾಧಿಕಾ (Radhika Merchant) ಕೆನೆ ಬಣ್ಣದ ಹಾಲ್ಟರ್ ಡ್ರಾಪ್ ಸ್ಲೀವ್ ಡ್ರೆಸ್ ಧರಿಸಿರುವುದು ವೈರಲ್ ಆಗುತ್ತಿರುವ ಚಿತ್ರಗಳಲ್ಲಿ ಕಂಡುಬರುತ್ತದೆ. ಡೈಮಂಡ್ ಸ್ಟಡ್‌ಗಳು ಅವರ ನೋಟಕ್ಕೆ ಮೋಡಿ ನೀಡುತ್ತಿದ್ದವು. ಮತ್ತೊಂದೆಡೆ, ಇಶಾ ಅಂಬಾನಿ ಹಳದಿ ಹೂವಿನ ಉಡುಪಿನಲ್ಲಿ ಕ್ಯಾಶುಯಲ್ ಲುಕ್ ಧರಿಸಿದ್ದರು. ಇಬ್ಬರೂ ಡಿಯರ್ ಕಂಪನಿಯ ಮಿನಿ ಅಲಿಗೇಟರ್ ಸ್ಕಿನ್ ಹ್ಯಾಂಡ್ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿದ್ದರು, ಇದರ ಬೆಲೆ US $ 25, 500, ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 21 ಲಕ್ಷ 6 ಸಾವಿರ ರೂಪಾಯಿಗಳು. ಇದು ತುಂಬಾ ದೊಡ್ಡ ಬೆಲೆಯಾಗಿದ್ದು, ಸಣ್ಣ ಪಟ್ಟಣದಲ್ಲಿ ಒಂದು ಫ್ಲ್ಯಾಟ್ ಸುಲಭವಾಗಿ ಖರೀದಿಸಬಹುದು.
IPL 2023: ಮುಂಬೈ ಇಂಡಿಯನ್ಸ್ ಮಾಲೀಕತ್ವದಿಂದ ನೀತಾ, ಮುಕೇಶ್ ಅಂಬಾನಿ ಆದಾಯವೆಷ್ಟು?
ಅಂದಹಾಗೆ, ಇಶಾ ಅಂಬಾನಿ (Isha Ambani) ಮತ್ತು ರಾಧಿಕಾ ಮರ್ಚೆಂಟ್ ಇಬ್ಬರೂ ಐಷಾರಾಮಿ ಜೀವನವನ್ನು ಬಯಸುತ್ತಾರೆ. ಇಶಾ ಈ ಹಿಂದೆಯೂ ಲಕ್ಷ ರೂಪಾಯಿ ಮೌಲ್ಯದ ಕೈಚೀಲದೊಂದಿಗೆ ಕಾಣಿಸಿಕೊಂಡಿದ್ದರು. ಈ ಹಿಂದೆ, ತಮ್ಮ ವಿಶೇಷ ಸ್ನೇಹಿತೆ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದಲ್ಲಿ, ಅವರು ಸುಮಾರು 31 ಲಕ್ಷ ರೂಪಾಯಿ ಮೌಲ್ಯದ ಕೆಲ್ಲಿ ಮಿನಿ ಸೆಲ್ಲರ್ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದರು. ಇದನ್ನು ಗುಲಾಬಿ ಎಪಿಸಮ್ ಲೆದರ್‌ನಿಂದ ಮಾಡಲಾಗಿತ್ತು. ಮತ್ತೊಂದೆಡೆ, ರಾಧಿಕಾ ಬಗ್ಗೆ ಮಾತನಾಡುವುದಾದರೆ, ಮಾರ್ಚ್‌ನಲ್ಲಿ, ಸಂದೀಪ್ ಖೋಸ್ಲಾ ಅವರ ಸಂಗ್ರಹದ ಲಾಂಚ್ ಪಾರ್ಟಿಯಲ್ಲಿ, ಅವರು ಬಬಲ್ಗಮ್ ಪಿಂಕ್ ಕೆಲ್ಲಿ ಮಿನಿ ಅಲಿಗೇಟರ್ ಲೆದರ್ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡರು, ಇದರ ಬೆಲೆ ಸುಮಾರು 48 ಲಕ್ಷ ರೂಪಾಯಿಗಳದ್ದು.
ಅಂದಹಾಗೆ, ರಾಧಿಕಾ ಮರ್ಚೆಂಟ್ ಮತ್ತು ಇಶಾ ಅಂಬಾನಿ ಸಹೋದರ ಅನಂತ್ ಅಂಬಾನಿ (Ananth Ambani) ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ ಕಾರ್ಯಕ್ರಮ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ ಜಿ ದೇವಸ್ಥಾನದಲ್ಲಿ ನಡೆದಿದೆ. ಇನ್ನು ಅನಂತ್ ಮತ್ತು ರಾಧಿಕಾ ಲವ್ ಬಗ್ಗೆ ಹಲವು ಊಹಾಪೋಹಗಳು ಇದ್ದವು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. 2018ರಲ್ಲಿ ಅನಂತ್ ಮತ್ತು ರಾಧಿಕಾ ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡುತ್ತಿರುವ ಫೋಟೋ ವೈರಲ್ ಆಗಿದ್ದವು. ನಂತರ ನಿಶ್ಚಿತಾರ್ಥ ನೆರವೇರಿಸಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಇಬ್ಬರ ಮದುವೆ ದಿನಾಂಕದ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಆದರೆ ಇದೇ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಂದ ಹಾಗೆ, ರಾಧಿಕಾ ಮರ್ಚೆಂಟ್, ಎನ್‌ಕೋರ್ ಹೆಲ್ತ್ ಕೇರ್ ಸಿಇಒ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಗೆ ಈಗ 28ರ ಹರೆಯ. ರಾಧಿಕಾ ಭರತನಾಟ್ಯ ಡ್ಯಾನ್ಸರ್ ಆಗಿದ್ದಾರೆ. ಶ್ರೀ ನಿಭಾ ಆರ್ಟ್ಸ್‌ನ ಗುರು ಭಾವನಾ ಠಾಕರ್ ಅವರಿಂದ ಭರತನಾಟ್ಯ ಕಲಿತಿದ್ದಾರೆ.
Beauty Tips: ಅಂಬಾನಿ ಫ್ಯಾಮಿಲಿಯ ಬೆಡಗಿಯರು ಮೇಕಪ್ ಹೇಗ್ ಮಾಡ್ತಾರೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.