ಬಾಲಿವುಡ್ ಸ್ಟಾರ್ಸ್ ಏನು ಧರಿಸ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗಿದ್ದೇ ಇದೆ. ವಿಮಾನ ನಿಲ್ದಾಣದಲ್ಲಿ ಅವರ ಲುಕ್ಸ್ ವೈರಲ್ ಆಗ್ತಿರುತ್ತದೆ. ಈಗ ರಾಣಿ ಮುಖರ್ಜಿ ಫೋಟೋ ಸುದ್ದಿ ಮಾಡಿದೆ.
ಬಾಲಿವುಡ್ ನಟಿ ರಾಣಿ ಮುಖರ್ಜಿಗೆ ೪೫ ವರ್ಷ. ನಟನೆ, ಫ್ಯಾಷನ್ ಹಾಗೂ ತಮ್ಮ ಸೌಂದರ್ಯದಿಂದ ರಾಣಿ ಮುಖರ್ಜಿ ಈಗ್ಲೂ ಯುವಜನತೆಯನ್ನು ಸೆಳೆಯುತ್ತಿರುತ್ತಾರೆ. ಮದುವೆಯಾಗಿ, ಮಕ್ಕಳಾದ್ಮೇಲೂ ರಾಣಿ ಬಣ್ಣದ ಲೋಕದಿಂದ ಹಿಂದೆ ಸರಿದಿಲ್ಲ. ರಾಣಿಗೆ ಒಂದು ಮಗಳಿದ್ದು, ಡಿಸೆಂಬರ್ ನಲ್ಲಿ ೮ನೇ ವರ್ಷಕ್ಕೆ ಕಾಲಿಡ್ತಿದ್ದಾಳೆ. ತಮ್ಮ ೧೭ನೇ ವರ್ಷದಲ್ಲೇ ಚಿತ್ರರಂಗಕ್ಕೆ ಬಂದು, ದೊಡ್ಡ ದೊಡ್ಡ ಹಿರೋಗಳ ಜೊತೆ ನಟಿಸಿ, ಹಿಟ್ ಚಿತ್ರಗಳನ್ನು ನೀಡಿದ ರಾಣಿ ಮುಖರ್ಜಿ ಈಗ ಆಗೋದು ಈಗೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆರೆಯಿಂದ ಮರೆಯಾಗದ ರಾಣಿ ಮುಖರ್ಜಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ.
ಕೆಲ ದಿನಗಳ ಹಿಂದಷ್ಟೆ ಮರ್ದಾಂಗಿ ೨ ಚಿತ್ರದಲ್ಲಿ ರಾಣಿ ಮುಖರ್ಜಿ (Rani Mukherjee) ಕಾಣಿಸಿಕೊಂಡಿದ್ದರು. ಅದಲ್ಲದೆ ಮಿಸಸ್ ಚಟರ್ಜಿ Vs ನಾರ್ವೆ ಚಿತ್ರದಲ್ಲಿ ನಟಿಸಿದ್ದು ಇದೆ ವರ್ಷ ಚಿತ್ರ ತೆರೆಕಂಡಿದೆ. ರಾಣಿ ಮುಖರ್ಜಿ ಆಗಾಗ ತಮ್ಮ ಸ್ಟೈಲ್ (style) ನಿಂದ ಸುದ್ದಿಯಲ್ಲಿರ್ತಾರೆ. ಈಗ ರಾಣಿ ಮುಖರ್ಜಿ, ವಿಮಾನ ನಿಲ್ದಾಣ (Airport) ದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ನವರಾತ್ರಿ ಹಬ್ಬಕ್ಕೆ ಬ್ರಹ್ಮಚಾರಿಣಿಯಾಗಿ ಅವತಾರವೆತ್ತಿದ ರಾಮಚಾರಿಯ ಚಾರು!
ಸಿಂಪಲ್ ಡ್ರೆಸ್ – ಗಮನ ಸೆಳೆದ ಪರ್ಸ್ : ಪೈಜಾಮ-ಟಾಪ್ ಧರಿಸಿದ್ದ ರಾಣಿ ಮುಖರ್ಜಿ ತಮ್ಮ ಪರ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಣಿ, ಆರಾಮದಾಯಕ ಬಟ್ಟೆ ಧರಿಸಿದ್ದರು. ಹಸಿರು ಬಣ್ಣದ ಕೋ-ಆರ್ಡರ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಳಗೆ ಜೋಗರ್ ಪ್ಯಾಂಟ್ ಮತ್ತು ಮೇಲೆ ಅರ್ಧ ತೋಳಿನ ಟಿ-ಶರ್ಟ್ ಧರಿಸಿದ್ದರು.
ರಾಣಿ ಮುಖರ್ಜಿ ಚಪ್ಪಲಿ ಕೂಡ ತುಂಬಾ ಸಿಂಪಲ್ ಆಗಿತ್ತು. ಸ್ಲಿಪ್ ಆನ್ ಎಸ್ಪಾಡ್ರಿಲ್ಸ್ ಅನ್ನು ರಾಣಿ ಆಯ್ಕೆ ಮಾಡಿಕೊಂಡಿದ್ದರು. ರಾಣಿ ಮುಖರ್ಜಿ ಕೈಗೆ, ಕತ್ತಿಗೆ ಯಾವುದೇ ಆಭರಣ ಹಾಕಿರಲಿಲ್ಲ. ಆದ್ರೆ ಅವರ ಕೈನಲ್ಲಿ ನೀವು ನಾಲ್ಕೈದು ಬ್ರೇಸ್ಲೈಟ್ ನೋಡ್ಬಹುದು. ತಮ್ಮ ಲುಕ್ ಗೆ ಹೊಂದುವಂತೆ ರಾಣಿ ಕಪ್ಪು ಕನ್ನಡಕ ಧರಿಸಿದ್ದರು. ತುಂಬಾ ಸಿಂಪಲ್ ಹಾಗೂ ಸೂಪರ್ ಆಗಿ ಕಾಣ್ತಿದ್ದ ರಾಣಿ ಕೈನಲ್ಲಿದ್ದ ಬ್ಯಾಗ್ ಐಷಾರಾಮಿ ಲುಕ್ ನೀಡಿತ್ತು. ಕ್ರಿಶ್ಚಿಯನ್ ಡಿಯರ್‌ನ ಬೀಜ್ ಟೋಟ್ ಬ್ಯಾಗನ್ನು ರಾಣಿ ಮುಖರ್ಜಿ ಹಿಡಿದುಕೊಂಡು ಬಂದದ್ರು. ರಾಣಿಯ ಫ್ರೆಂಚ್ ಫ್ಯಾಶನ್ ಹೌಸ್‌ನ ಈ ಪರ್ಸ್‌ನ ಬೆಲೆ ಕಡಿಮೆ ಏನಿಲ್ಲ. ಈ ಬ್ಯಾಗ್ ಬೆಲೆ 3700 ಡಾಲರ್. ಅಂದ್ರೆ ಭಾರತೀಯ ರೂಪಾಯಿಯಲ್ಲಿ 3 ಲಕ್ಷ ರೂಪಾಯಿಯಾಗುತ್ತದೆ.
ಮೈಚಳಿ ಬಿಟ್ಟು ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಬ್ಲೌಸ್ ಬಟನ್ ಹಾಕಮ್ಮಾ ಎಂದ ಫ್ಯಾನ್ಸ್!
ಹೇಮಾ ಮಾಲಿನಿ ಬರ್ತ್ ಡೇ ಪಾರ್ಟಿಗೆ ಸೀರೆಯುಟ್ಟು ಬಂದಿದ್ದ ರಾಣಿ : ಬಾಲಿವುಡ್ ನಟಿ ಹೇಮಾ ಮಾಲಿನಿ ೭೫ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಬರ್ತ್ ಡೇ ಪಾರ್ಟಿಗೆ ಸೆಲೆಬ್ರಿಟಿಗಳ ದಂಡೇ ಹರಿದುಬಂದಿತ್ತು. ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ರಾಣಿ ಸೀರೆಯುಟ್ಟು ಬಂದಿದ್ದರು. ನೀಲಿ ಬಣ್ಣದ ಛಾಯೆಯ ಸೀರೆ ಧರಿಸಿದ್ದ ರಾಣಿ, ಕಭಿ ಅಲ್ವಿದಾ ನಾ ಕೆಹನಾ ಚಿತ್ರವನ್ನು ನೆನಪು ಮಾಡಿದ್ರು.
ರಾಣಿ ಮುಖರ್ಜಿಗೆ ರೋಮ್ಯಾನ್ಸ್ ಕಲಿಸಿದ್ದು ಯಾರು? : ಇನ್ನು ರಾಣಿ ಮುಖರ್ಜಿ ರೋಮ್ಯಾಂಟಿಕ್ ನಟನೆಯಲ್ಲೂ ಹಿಂದೆ ಬಿದ್ದಿಲ್ಲ. ಇಷ್ಟು ವರ್ಷಗಳ ನಂತ್ರ ತಮಗೆ ರೋಮ್ಯಾನ್ಸ್ ಕಲಿಸಿದ್ದು ಯಾರು ಎಂಬುದನ್ನು ರಾಣಿ ಮುಖರ್ಜಿ ಹೇಳಿದ್ದಾರೆ. ರಾಣಿಗೆ ರೋಮ್ಯಾನ್ಸ್ ಕಲಿಸಿದ್ದು ಮತ್ತ್ಯಾರೂ ಅಲ್ಲ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್. ಹೌದು, ರಾಣಿ ಮುಖರ್ಜಿ ಈ ವಿಷ್ಯವನ್ನು ಹೇಳಿದ್ದಾರೆ. ನನಗೆ ರೋಮ್ಯಾನ್ಸ್ ಕಲಿಸಿದ್ದು ಶಾರುಖ್ ಖಾನ್ ಎಂದ ರಾಣಿ, ಶಾರುಖ್ ಖಾನ್ ಮಾಡುವ ರೋಮ್ಯಾನ್ಸ್ ಆಕ್ಟಿಂಗ್ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ ಎಂದು ರಾಣಿ ಹೇಳಿದ್ದಾರೆ.