ವಿಶ್ವ ಸುಂದರಿ ಸ್ಪರ್ಧಿಯನ್ನೂ ಬಿಡಲಿಲ್ಲ ಗರ್ಭಕಂಠದ ಕ್ಯಾನ್ಸರ್‌: 26ಕ್ಕೆ ಬದುಕಿಗೆ ಗುಡ್‌ಬೈ ಹೇಳಿದ ಶೇರಿಕಾ ಡಿ

By Anusha Kb  |  First Published Oct 16, 2023, 4:00 PM IST

ಉರುಗ್ವೆಯ ಮಾಜಿ ವಿಶ್ವ ಸುಂದರಿ ಸ್ಪರ್ಧಿ, ಮಾಡೆಲ್‌ ಶೆರಿಕಾ ಡಿ ಅರ್ಮಾಸ್‌ ಅವರು ಮಾರಕ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. 2015 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಶೆರಿಕಾ ಡಿ ಅರ್ಮಾಸ್‌ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು.


ಉರುಗ್ವೆ;  ಉರುಗ್ವೆಯ ಮಾಜಿ ವಿಶ್ವ ಸುಂದರಿ ಸ್ಪರ್ಧಿ, ಮಾಡೆಲ್‌ ಶೆರಿಕಾ ಡಿ ಅರ್ಮಾಸ್‌ ಅವರು ಮಾರಕ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. 2015 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಶೆರಿಕಾ ಡಿ ಅರ್ಮಾಸ್‌ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು.  ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಆಕ್ಟೋಬರ್ 13 ರಂದು ಉಸಿರು ಚೆಲ್ಲಿದ್ದಾರೆ. ಕ್ಯಾನ್ಸರ್‌ ಹಿನ್ನೆಲೆಯಲ್ಲಿ ಅವರು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು ಎಂದು ನ್ಯೂಯಾರ್ಕ್‌ ಪೋಸ್ಟ್ ವರದಿ ಮಾಡಿದೆ. 

ಇಷ್ಟು ಚಿಕ್ಕ ವಯಸ್ಸಿಗೆ ಕ್ಯಾನ್ಸರ್‌ಗೆ ತುತ್ತಾಗಿ  ಹಠಾತ್ ಸಾವು ಕಂಡ  ಶೆರಿಕಾ ಡಿ ಅರ್ಮಾಸ್ ಅವರ ಅಗಲಿಕೆ ಉರುಗ್ವೆ ಮಾತ್ರವಲ್ಲದೇ ಇಡೀ ಜಗತ್ತನ್ನು ಆಘಾತಕ್ಕೆ ದೂಡಿದೆ.  ಶೆರಿಕಾ ನಿಧನದ ಬಗ್ಗೆ ಅವರ ಸೋದರ ಮೈಕ್ ಡಿ ಅರ್ಮಾಸ್ ಅವರು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಶ್ರದ್ಧಾಂಜಲಿ ಸೂಚಿಸಿದ್ದಾರೆ. ಎತ್ತರದಲ್ಲಿ ಹಾರಾಡು ನನ್ನ ಪ್ರೀತಿಯ ಪುಟ್ಟ ಸೋದರಿ ಯಾವಾಗಲೂ ಹಾಗೂ ಎಂದೆಂದಿಗೂ ಎಂದು  ಅವರು ಬರೆದಿದ್ದಾರೆ.  ಹಾಗೆಯೇ 2022ರ ಮಿಸ್‌ ಉರುಗ್ವೆ ಕರ್ಲಾ ರೊಮೆರೋ ಕೂಡ ಶೆರಿಕಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, ಈ  ಜಗತ್ತಿನಿಂದ ಬೇಗ ಹೊರಟರು, ನಾನು ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಅವರು ಹೇಳಿದ್ದಾರೆ. 

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟು: ಸ್ಟಾರ್‌ಬಕ್ಸ್‌ನ ಎಲ್ಲಾ ರೆಸಿಪಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟ ಮಾಜಿ ಉದ್ಯೋಗಿ

Tap to resize

Latest Videos

ಹಾಗೆಯೇ 2021ರ ಮಿಸ್ ಉರುಗ್ವೆ (Uruguay) ಆಗಿದ್ದ ಲೋಲಾ ಡಿ ಲಾಸ್ ಸ್ಯಾಂಟೋಸ್ ಕೂಡ ಶೆರಿಕಾ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ, ಕೇವಲ ನೀವು ನೀಡಿದ ಬೆಂಬಲಕ್ಕಾಗಿ ಮಾತ್ರವಲ್ಲ, ನೀವು ನಾನು ಎತ್ತರಕ್ಕೆ ಬೆಳೆಯುವುದನ್ನು ಬಯಸಿದ್ದೀರಿ ಪ್ರೀತಿ , ಸ್ನೇಹ ಹಂಚಿದ್ದೀರಿ ನೀವು ಸದಾ ನಮ್ಮ ಹೃದಯಲ್ಲಿರುವಿರಿ ಎಂದು  ಲೋಲಾ ಡಿ ಪ್ರತಿಕ್ರಿಯಿಸಿದ್ದಾರೆ. 2015ರಲ್ಲಿ ಚೀನಾದಲ್ಲಿ ಆಯೋಜಿಸಿದ್ದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಇವರು ಭಾಗವಹಿಸಿದ್ದರು. ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 18 ರ ಹರೆಯದ ಏಕೈಕ ಯುವತಿ ಎನಿಸಿದ್ದರು.

ಆ ಸಮಯದಲ್ಲಿ ನೆಟ್‌ಉರುಗ್ವೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಯಾವಾಗಲೂ ಮಾಡೆಲ್ ಆಗಲು ಬಯಸುತ್ತೇನೆ,  ಬ್ಯೂಟಿ ಮಾಡೆಲ್, ಜಾಹೀರಾತು ಮಾಡೆಲ್ ಅಥವಾ ಕ್ಯಾಟ್‌ವಾಕ್ ಮಾಡೆಲ್ ಹೀಗೆ ಯಾವುದೇ ಇರಲಿ  ಫ್ಯಾಷನ್‌ಗೆ (Fashion) ಸಂಬಂಧಿಸಿದ ಎಲ್ಲವನ್ನೂ ನಾನು ಇಷ್ಟಪಡುತ್ತೇನೆ ಎಂದಿದ್ದರು.  ಈ ಅನುಭವ ಸವಾಲುಗಳಿಂದ ತುಂಬಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದರು. 

ವೈರಲ್ ವೀಡಿಯೋ : ಚಿಲ್ಲರೆ ನಾಣ್ಯಗಳನ್ನೇ ನೀಡಿ ಐಫೋನ್ 15 ಖರೀದಿಸಿದ ಭಿಕ್ಷುಕ...!

ಮಾಡೆಲಿಂಗ್ ಜೊತೆ ಜೊತೆಗೆ ಕಾಸ್ಮೆಟಿಕ್ ಉದ್ಯಮವನ್ನು ಆರಂಭಿಸಿದ ಅವರು  ಕೂದಲು ಮತ್ತು ವೈಯಕ್ತಿಕ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಆರಂಭಿಸಿದ್ದರು. ಇದರ ಜೊತೆ ಜೊತೆಗೆ ಪೆರೆಜ್ ಸ್ಕ್ರೆಮಿನಿ ಫೌಂಡೇಶನ್‌ ಎಂಬ ಸಂಸ್ಥೆಗೆ ಕೆಲಸ ಮಾಡುತ್ತಿದ್ದರು. ಇದು ಕ್ಯಾನ್ಸರ್ ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಸಂಸ್ಥೆಯಾಗಿದೆ.   ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ  ಕಂಡು ಬರುವ ನಾಲ್ಕನೇ ಮಾರಕ ಕ್ಯಾನ್ಸರ್ ಆಗಿದೆ.  2018 ರಲ್ಲಿ ಅಂದಾಜು 570,000 ಮಹಿಳೆಯರು ವಿಶ್ವಾದ್ಯಂತ ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗಿದ್ದು,  ಸುಮಾರು 311,000 ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. 

click me!