
ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಬೇಸಿಗೆ ಕಾಲದಲ್ಲಿ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಬಾಧಿಸುತ್ತವೆ. ಈ ಸಮಸ್ಯೆಯನ್ನು ನಾವು ಮುಂದೂಡುವ ಹಾಗೂ ಇಲ್ಲ. ಏಕೆಂದರೆ ಮುಂದೊಂದು ದಿನ ಇದು ಹಲವಾರು ರೀತಿಯ ಸಮಸ್ಯೆಗಳನ್ನು ತರುವ ಸಾಧ್ಯತೆಯೇ ಹೆಚ್ಚು.ವಿಶೇಷವಾಗಿ ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕಿನಿಂದ ಉಂಟಾಗುವ ದೊಡ್ಡ ಸಮಸ್ಯೆ ಎಂದರೆ ಟ್ಯಾನಿಂಗ್. ಮುಖದ ಮೇಲೆ ನಿರಂತರ ಜಿಗುಟುತನ ಮತ್ತು ಬೆವರು ಹಾಗೂ ಸೂರ್ಯನ ಹಾನಿಕಾರಕ ಕಿರಣಗಳಿಂದಾಗಿ ಟ್ಯಾನಿಂಗ್ ಸಮಸ್ಯೆ ಉಂಟಾಗುತ್ತದೆ. ಈ ಟ್ಯಾನಿಂಗ್‌ನಿಂದಾಗಿ ಚರ್ಮದ ಮೇಲೆ ಕೊಳಕು ಸಂಗ್ರಹವಾಗಿ ಚರ್ಮದ ಬಣ್ಣ ಕಪ್ಪಾಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಟ್ಯಾನಿಂಗ್ ತೆಗೆದುಹಾಕಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್‌ಗಳಿಗಿಂತ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ. ಇತ್ತೀಚೆಗೆ ಟ್ಯಾನಿಂಗ್ ಸಮಸ್ಯೆಗೆ ದೇಸಿ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra)ಮನೆಮದ್ದನ್ನು ಹಂಚಿಕೊಂಡಿದ್ದಾರೆ. ಬೇಕಾದರೆ ನೀವು ಸಹ ಆ ಮನೆ ಮದ್ದನ್ನು ಬಳಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಟ್ಯಾನಿಂಗ್ ಅನ್ನು ತೊಡೆದುಹಾಕಬಹುದು. ಅಂದಹಾಗೆ ಟ್ಯಾನಿಂಗ್ ತೆಗೆದುಹಾಕಲು ಈ ಸ್ಕ್ರಬ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ತ್ವಚೆ ಹೊಳೆಯುವಂತೆ ಮಾಡುತ್ತೆ ಈ ಮಸೂರು ದಾಲ್ ಫೇಸ್ ಪ್ಯಾಕ್
ಪ್ರಿಯಾಂಕಾ ಚೋಪ್ರಾ d tan scrub
ಈ ಸ್ಕ್ರಬ್ ಮಾಡಲು ಮನೆಯಲ್ಲಿರುವ ಪದಾರ್ಥಗಳೇ ಸಾಕು. ಮೊದಲು ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ಮೊಸರು ಮಿಶ್ರಣ ಮಾಡಿ.
ಮೊಸರು ತಾಜಾ ಇರಬೇಕೆಂಬುದನ್ನು ನೆನಪಿನಲ್ಲಿಡಿ. ಈಗ ಈ ಮಿಶ್ರಣಕ್ಕೆ ಸ್ವಲ್ಪ ಹಾಲು, ನಿಂಬೆ ರಸ, ಸ್ವಲ್ಪ ಅರಿಶಿನ ಮತ್ತು ಶ್ರೀಗಂಧದ ಪುಡಿಯನ್ನು ಸೇರಿಸಿ.
ಈ ಸ್ಕ್ರಬ್ ಅನ್ನು ಚರ್ಮದ ಮೇಲೆ ಹಚ್ಚಿ ಒಣಗುವವರೆಗೆ ಬಿಡಿ. ನಂತರ ತೊಳೆಯಿರಿ. ಅದರ ಪರಿಣಾಮ ತಕ್ಷಣವೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದನ್ನು ಮುಖಕ್ಕೆ ಮಾತ್ರವಲ್ಲದೆ ಕೈ ಮತ್ತು ಕಾಲುಗಳಿಗೂ ಹಚ್ಚಬಹುದು.
ನಿಮ್ಮ ಹಣೆ ಬರಹ ಬದಲಿಸುತ್ತಾ ಹಸಿರು ನೇಲ್ ಪಾಲಿಶ್?
ಸ್ಕ್ರಬ್ ನಲ್ಲಿ ಬಳಸುವ ಕಡಲೆ ಹಿಟ್ಟು ಎಕ್ಸ್‌ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ. ಇನ್ನು ಹಾಲು ಮತ್ತು ಮೊಸರಿನ ಬಗ್ಗೆ ಹೇಳುವುದಾದರೆ, ಅವು ಚರ್ಮವನ್ನು ತೇವಗೊಳಿಸುವ ಕೆಲಸ ಮಾಡುತ್ತವೆ. ನಿಂಬೆಹಣ್ಣು ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಟ್ಯಾನಿಂಗ್ ಅನ್ನು ಮಸುಕಾಗಿಸುವ ಕೆಲಸ ಮಾಡುತ್ತದೆ. ಹಾಗೆಯೇ ಶ್ರೀಗಂಧ ಮತ್ತು ಅರಿಶಿನವು ಚರ್ಮವನ್ನು ಕಾಂತಿಯುತಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ.
ಟ್ಯಾನಿಂಗ್ ತೊಡೆದುಹಾಕಲು ಇತರ ಮನೆಮದ್ದುಗಳು
ಸೂರ್ಯನಿಂದ ಉಂಟಾಗುವ ಟ್ಯಾನಿಂಗ್ ಅನ್ನು ಕಡಿಮೆ ಮಾಡಲು ಕೆಲವು ಇತರ ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು.
* ಮೊಸರು ಮತ್ತು ಅರಿಶಿನವನ್ನು ಬೆರೆಸಿ ತ್ವಚೆಯ ಮೇಲೆ ಹಚ್ಚಿದರೆ ಟ್ಯಾನಿಂಗ್ ಕಡಿಮೆಯಾಗುತ್ತದೆ.
* ಆಲೂಗಡ್ಡೆ ರಸವನ್ನು ಚರ್ಮದ ಮೇಲೆ ಹಚ್ಚುವುದರಿಂದ ಅದರ ಬ್ಲೀಚಿಂಗ್ ಗುಣಲಕ್ಷಣಗಳಿಂದಾಗಿ ಟ್ಯಾನಿಂಗ್ ಅನ್ನು ಮಸುಕಾಗಿಸಲು ಸಹಾಯ ಮಾಡುತ್ತದೆ. ಆಲೂಗಡ್ಡೆ ರಸವನ್ನು ತ್ವಚೆಯ ಮೇಲೆ 15 ರಿಂದ 20 ನಿಮಿಷಗಳ ಕಾಲ ಹಚ್ಚಬಹುದು.
* ಟೊಮೆಟೊ ರಸವು ಟ್ಯಾನಿಂಗ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಚರ್ಮದ ಮೇಲೆ ಟೊಮೆಟೊ ರಸವನ್ನು ಹಚ್ಚುವುದರಿಂದ ಟ್ಯಾನಿಂಗ್ ಕಡಿಮೆ ಮಾಡುತ್ತದೆ.
* ಸೌತೆಕಾಯಿ ರಸವು ತೇವಾಂಶಕ್ಕೆ ಹೆಚ್ಚು ಪ್ರಸಿದ್ಧಿಯಾಗಿದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಟ್ಯಾನಿಂಗ್ ನಿವಾರಣೆಯಾಗುತ್ತದೆ.
* ಓಟ್ ಮೀಲ್ ಅನ್ನು ಮಜ್ಜಿಗೆಯಲ್ಲಿ ನೆನೆಸಿ, ನಂತರ ತಯಾರಿಸಿದ ಪೇಸ್ಟ್ ಅನ್ನು ಸ್ಕ್ರಬ್ ಆಗಿ ಬಳಸಿ ಟ್ಯಾನಿಂಗ್ ತೆಗೆದುಹಾಕಿ. ಇದು ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಚರ್ಮದ ಕೋಶಗಳನ್ನು ಸಹ ತೆಗೆದುಹಾಕುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.