ಇನ್‌ಫ್ಲೂಯೆನ್ಸರ್ ನಕಲಿ ನಗ್ನ ಫೋಟೋ ಸೃಷ್ಟಿ, ವಿಡಿಯೋ ಮೂಲಕ ಅಳಲು ತೋಡಿಕೊಂಡ ಭವಿಕಾ

Published : Apr 16, 2025, 02:41 PM ISTUpdated : Apr 16, 2025, 03:03 PM IST
ಇನ್‌ಫ್ಲೂಯೆನ್ಸರ್ ನಕಲಿ ನಗ್ನ ಫೋಟೋ ಸೃಷ್ಟಿ, ವಿಡಿಯೋ ಮೂಲಕ ಅಳಲು ತೋಡಿಕೊಂಡ ಭವಿಕಾ

ಸಾರಾಂಶ

ಫ್ಯಾಶನ್ ಇನ್‌ಫ್ಲೂಯೆನ್ಸರ್ ಭವಿಕಾ ಫೋಟೋ, ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಿಂದ ಡೌನ್ಲೋಡ್ ಮಾಡಿ ಎಐ ಮೂಲಕ ಅಶ್ಲೀಲ ಚಿತ್ರ ಸೃಷ್ಟಿಸಿ ಹರಿಬಿಡಲಾಗಿದೆ. ಘಟನೆ ಕುರಿತು ವಿಡಿಯೋ ಮೂಲಕ ಫ್ಯಾಶನ್ ಇನ್‌ಫ್ಲೂಯೆನ್ಸರ್ ಅಳಲು ತೋಡಿಕೊಂಡಿದ್ದಾರೆ.   

ಮುಂಬೈ(ಏ.16) ಖ್ಯಾತ ಫ್ಯಾಶನ್ ಇನ್‌ಫ್ಲೂಯೆನ್ಸರ್ ಭವಿಕಾ ಕಟಾರಿಯಾ ಅವರದ್ದು ಎನ್ನಲಾದ ನಕಲಿ ನಗ್ನ ಚಿತ್ರಗಳು ಇದೀಗ ವ್ಯಾಟ್ಸಾಪ್ ಸೇರಿದಂತೆ ಎಲ್ಲೆಡೆ ಹರಾಡತ್ತಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಕಲಿ ನಗ್ನ ಫೋಟೋಗಳನ್ನು ಸೃಷ್ಟಿಸಿ ಈ ವಿಕೃತಿ ಮೆರೆದಿದಿದ್ದಾರೆ. ಘಟನೆಯಿಂದ ನೊಂದುಕೊಂಡಿರುವ ಭವಿಕಾ ಕಟಾರಿಯಾ, ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ಎಐ ನಿಮ್ಮ ಜೀವನ್ನು ನಾಶ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. ಭವಿಕಾ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಇದೇ ರೀತಿ ಹಲವು ಹೆಣ್ಣುಮಕ್ಕಳು ಎದುರಿಸುತ್ತಿದ್ದರೆ, ಇದರ ವಿರುದ್ಧ ಧ್ವನಿ ಎತ್ತಬೇಕಾಗಿ ಮನವಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಂ ಫೋಟೋ ಬಳಕೆ

 ಫ್ಯಾಶನ್ ಇನ್‌ಫ್ಲುಯೆನ್ಸರ್ ಆಗ ಭಾರಿ ಜನಪ್ರಿಯತೆ ಪಡೆದಿರುವ ಭವಿಕಾ ಕಟಾರಿಯಾ ಹೆಚ್ಚು ಬೋಲ್ಡ್ ಫೋಟೋಗಳನ್ನು, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಭವಿಕಾ ಡ್ರೆಸ್ಸಿಂಗ್ ಕೂಡ ಬೋಲ್ಡ್ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಡ ಕೆಲವರು ಭವಿಕಾ ಅವರ ಇನ್‌ಸ್ಟಾಗ್ರಾಂ ಖಾತೆಯಿಂದ ಕೆಲ ಫೋಟೋ, ವಿಡಿಯೋಗಳನ್ನು ಡೌನ್ಲೋಡ್ ಮಾಡಿದ್ದಾರೆ. ಬಳಿಕ ಎಐ ಮೂಲಕ ಈ ಫೋಟೋಗಳನ್ನು ಭವಿಕಾ ಅವರ ನಗ್ನ ಚಿತ್ರಗಳಾಗಿ ಪರಿವರ್ತಿಸಲಾಗಿದೆ. ಈ ಫೋಟೋಗಳನ್ನು ವ್ಯಾಟ್ಸಾಪ್ ಮೂಲಕ ಹರಿಬಿಡಲಾಗಿದೆ.

Viral ರೇವ್ ಪಾರ್ಟಿಯಲ್ಲಿ ಕರೀನಾ ಕಪೂರ್ AI ವಿಡಿಯೋ ಬಳಸಿದ ಪುಂಡರು

ಈ ಫೋಟೋ ಕೊನೆಗೆ ಭವಿಕಾ ಕಟಾರಿಯಾ ವ್ಯಾಟ್ಸಾಪ್‌ಗೂ ತಲುಪಿದೆ. ಫೋಟೋ ನೋಡಿ ಬೆಚ್ಚಿ ಬಿದ್ದ ಭವಿಕಾ ಕಟಾರಿಯಾ ಈ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ. ತಾನು ಬೋಲ್ಡ್ ಆಗಿ ಡ್ರೆಸ್ ಧರಿಸುತ್ತೇನೆ, ಬೋಲ್ಡ್ ಆಗಿರುತ್ತೇನೆ ಎಂದು ಈ ರೀತಿ ನಗ್ನ ಫೋಟೋಗಳನ್ನು ಹಾಕುವುದಿಲ್ಲ. ಎಐ ಮೂಲಕ ನಗ್ನ ಫೋಟೋಗಳನ್ನು ಸೃಷ್ಟಿಸಿ ಹಲವರ ಜೀವನ ಹಾಳು ಮಾಡುತ್ತಿದ್ದೀರಿ ಎಂದು ಭವಿಕಾ ಹೇಳಿದ್ದಾರೆ.

 

 

ವಿಡಿಯೋ ಮೂಲಕ ಭವಿಕಾ ಮನವಿ

ಈ ರೀತಿ ಫೋಟೋಗಳನ್ನು ನಿಮ್ಮ ಕುಟುಂಬಸ್ಥರಲ್ಲಿ ಯಾರಾದರೊಬ್ಬರಿಗೆ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತದೆ? ಎಐ ಬಳಸಿಕೊಂಡು ಹೆಣ್ಣುಮಕ್ಕಳ ನಕಲಿ ಫೋಟೋಗಳನ್ನು ಸೃಷ್ಟಿಸುವುದು, ಅವರ ಕರಿಯರ್ ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಭವಿಕಾ ಕಟಾರಿಯಾ ಪ್ರಶ್ನಿಸಿದ್ದಾರೆ. ಈ ರೀತಿ ನನಗೆ ಎರಡನೇ ಬಾರಿ ಆಗುತ್ತಿದೆ. ಮೊದಲ ಬಾರಿ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಷ್ಟೇ ಅಲ್ಲ ಈ ಫೋಟೋ ಸೃಷ್ಟಿಸಿದವರು ಯಾರು ಅನ್ನೋದು ಗೊತ್ತಿಲ್ಲ. ಇದೀಗ 2ನೇ ಬಾರಿಯೂ ಮತ್ತೆ ನಕಲಿ ಫೋಟೋ ಸೃಷ್ಟಿಸಲಾಗಿದೆ. ಇದುವರೆಗೆ ದೂರು ನೀಡಿಲ್ಲ. ಕಾರಣ ಈ ಫೋಟೋ ಸೃಷ್ಟಿಸಿದ್ದ ಯಾರು ಅನ್ನೋದು ಗೊತ್ತಿಲ್ಲ ಎಂದು ಭವಿಕಾ ಕಟಾರಿಯಾ ಹೇಳಿದ್ದಾರೆ.

ಬೋಲ್ಡ್ ಆಗಿ ಭವಿಕಾ ಕಟಾರಿಯಾ ವಿಡಿಯೋದಲ್ಲಿ ಮಾತನಾಡಿದ್ದಾರೆ. ಕೆಲ ಆಕ್ಷೇಪಾರ್ಹ ಪದಗಳನ್ನು ಬಳಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಹಲವು ಹೆಣ್ಣುಮಕ್ಕಳು ಈ ರೀತಿ ನಕಲಿ ಫೋಟೋ, ವಿಡಿಯೋ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ವಿರುದ್ಧ  ಮಾತನಾಡಿದರೆ ಎಲ್ಲಿ ಫೋಟೋ ಸೋಶಿಯಲ್ ಮೀಡಯಾದಲ್ಲಿ ಲೀಕ್ ಮಾಡುತ್ತಾರೋ ಅನ್ನೋ ಭಯ, ಮಾತನಾಡಿ ಎಲ್ಲರಿಗೂ ತಿಳಿದರೆ, ಅವರ ಭವಿಷ್ಯಕ್ಕೆ ಎದುರಾಗುವ ಅಪಾಯ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೆಣ್ಣುಮಕ್ಕಳು ಮಾತನಾಡಲು ಹಿಂಜರಿಯುತ್ತಾರೆ. ಆದರೆ ನಾನು ಮಾತನಾಡುತ್ತಿದ್ದೇನೆ. ಇದರ ವಿರುದ್ಧ ಮಾತನಾಡಲೇಬೇಕಾದ ಅನಿವಾರ್ಯ ಬಂದಿದೆ ಎಂದು ಭವಿಕಾ ಕಟಾರಿಯಾ ಹೇಳಿದ್ದಾರೆ.

ಈ ರೀತಿ ನಕಲಿ ಫೋಟೋಗಳನ್ನು ಸೃಷ್ಟಿಸುವ ಎಐ ಆ್ಯಪ್‌ಗಳನ್ನು, ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕು ಎಂದು ಭವಿಕಾ ಕಟಾರಿಯಾ ಹೇಳಿದ್ದಾರೆ. ಭವಿಕಾ ಕಟಾರಿಯಾ ವಿಡಿಯೋಗೆ ಹಲವರು ಧನಿಗೂಡಿಸಿದ್ದಾರೆ. ಹಲವರು ಇದರ ವಿರುದ್ದ ದೂರು ನೀಡಲು ಸೂಚಿಸಿದ್ದಾರೆ. ಮತ್ತೆ ಕೆಲವರು ನಿಮ್ಮ ಜೊತೆಗೆ ನಾವಿದ್ದೇನೆ, ಕಾನೂನು ಹೋರಾಟ ಆರಂಭಿಸಲು ಸೂಚಿಸಿದ್ದಾರೆ.

ಮೋದಿ, ಸಚಿನ್, ಕಾಮತ್;ಎಲ್ಲರೂ ಘಿಬ್ಲಿ ಇಮೇಜ್ ಹಿಂದೆ ಓಡಿದ ಕಾರಣ ಮೊದಲ ಬಾರಿ ChatGPT ಡೌನ್
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?