ದಪ್ಪಗಿದ್ದೇವೆಂಬ ಚಿಂತೆ ಬಿಡಿ, ಆರಾಮಾಗಿ ಈ ರೀತಿ stylish dress ಧರಿಸಿ

By Suvarna NewsFirst Published Mar 26, 2022, 1:59 PM IST
Highlights

ನಾವು ಡ್ರೆಸ್ ಖರೀದಿ ಮಾಡುವಾಗ ಹಾಗೆ ಡ್ರೆಸ್ ಧರಿಸುವಾಗ ನಾಲ್ಕೈದು ಬಾರಿ ಆಲೋಚನೆ ಮಾಡ್ತೇವೆ. ಇದು ನಮಗೆ ಸೂಟ್ ಆಗುತ್ತಾ ಎಂದು ನೋಡ್ತೇವೆ. ಅದ್ರಲ್ಲೂ ದಪ್ಪಗಿರುವವರು ಅನೇಕ ಬಾರಿ ಆಲೋಚನೆ ಮಾಡಿ ಡ್ರೆಸ್ ಖರೀದಿ ಮಾಡ್ತಾರೆ. ಈ ಬೇಸಿಗೆಯಲ್ಲಿ ತೂಕ ಹೆಚ್ಚಿರುವ ಮಹಿಳೆಯರು ಹಳೆ ಸ್ಟೈಲ್ ಬಿಟ್ಟು ಹೊಸ ಫ್ಯಾಷನ್ ಟ್ರೈ ಮಾಡಿ ನೋಡಿ. 
 

ದಿನಕ್ಕೊಂದರಂತೆ ಫ್ಯಾಷನ್ (Fashion) ಬದಲಾಗ್ತಿರುತ್ತದೆ. ಜನರು ಹೊಸ ಹೊಸ ಫ್ಯಾಷನ್ ಟ್ರೈ ಮಾಡ್ತಾರೆ. ಫ್ಯಾಷನ್ ವಿಷ್ಯ ಬಂದಾಗ ಮಹಿಳೆ (Woman) ಯರು ಮುಂದಿದ್ದಾರೆ ನಿಜ. ತೆಳ್ಳಗಿರುವ ಹುಡುಗಿಯರು ತಮಗಿಷ್ಟವಾದ ಡ್ರೆಸ್ (Dress) ಧರಿಸ್ತಾರೆ. ಯಾವುದೇ ಬಟ್ಟೆ (Clothes) ತೊಟ್ಟುಕೊಂಡ್ರೂ ಅವರಿಗೆ ಅದು ಅಸಹ್ಯವಾಗಿ ಕಾಣುವುದಿಲ್ಲ. ಆದ್ರೆ ದಪ್ಪಗಿರುವ ಮಹಿಳೆಯರಿಗೆ ಹಾಗಲ್ಲ. ದಪ್ಪಗಿರುವ ಮಹಿಳೆಯರು ಬಟ್ಟೆ ಆಯ್ಕೆ ಮಾಡುವಾಗ ಹೆಚ್ಚು ಜಾಗೃತರಾಗಿರುತ್ತಾರೆ. ತೂಕ (Weight) ಹೆಚ್ಚಾಗಿದೆ ಎಂಬ ಕಾರಣಕ್ಕೆ ಅನೇಕ ಮಹಿಳೆಯರು ತಮ್ಮಿಷ್ಟದ ಬಟ್ಟೆ ಧರಿಸಲು ಹಿಂದೇಟು ಹಾಕ್ತಾರೆ. ಕೆಲವೊಂದು ಡ್ರೆಸ್ ನಲ್ಲಿ ಅವರ ದೇಹ ಸ್ಪಷ್ಟವಾಗಿ ಕಾಣುವುದ್ರಿಂದ ಅವರು ಮುಜುಗರಕ್ಕೊಳಗಾಗ್ತಾರೆ. ಸಾಮಾನ್ಯವಾಗಿ ಸೀರೆ (Saree) ಅಥವಾ ಚೂಡಿದಾರ್ ಆಯ್ಕೆ ಮಾಡಿಕೊಳ್ಳುವವರು ಈ ಬೇಸಿಗೆ (Summer) ಯಲ್ಲಿ ಸ್ವಲ್ಪ ಬೇರೆ ಡ್ರೆಸ್ ಟ್ರೈ ಮಾಡಿ. ಪಲಾಝೋ, ಕುರ್ತಾ, ಟೀ ಶರ್ಟ್ ಗಳು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತವೆ. ಇವುಗಳು ಬೇಸಿಗೆಯ ಬಿಸಿಲಿಗೆ ಸ್ವಲ್ಪ ಆರಾಮದಾಯಕವಾಗಿಯೂ ಇರುತ್ತವೆ. ದಪ್ಪಗಿದ್ದೇನೆ ಎಂಬ ಕಾರಣಕ್ಕೆ ಕೆಲ ಡ್ರೆಸ್ ನಿಂದ ನೀವೂ ದೂರವಿದ್ದರೆ ಆ ಚಿಂತೆ ಬಿಡಿ. ಇಂದು ನಾವು ಹೇಳುವ ಡ್ರೆಸ್ ಟ್ರೈ ಮಾಡಿ ನೋಡಿ. 

ಬೇಸಿಗೆಯಲ್ಲಿ ಸ್ಟೈಲಿಶ್ ಲುಕ್ ನೀಡುತ್ತೆ ಈ ಡ್ರೆಸ್  

ಪಲಾಝೋ ಪ್ಯಾಂಟ್ : ಬೇಸಿಗೆಯಲ್ಲಿ ಬಹುತೇಕರು ಜೀನ್ಸ್ ಧರಿಸಲು ಇಷ್ಟಪಡುವುದಿಲ್ಲ. ಸೆಕೆ ಹೆಚ್ಚಾಗುತ್ತೆ ಎನ್ನುವವರು ಜೀನ್ಸ್ ಸೇರಿದಂತೆ ಬಿಗಿಯಾದ ಡ್ರೆಸ್ ಧರಿಸಲು ಹಿಂದೇಟು ಹಾಕ್ತಾರೆ. ಜೀನ್ಸ್ ಬದಲು ನೀವು ಪಲಾಝೋ ಟ್ರೈ ಮಾಡಬಹುದು. ಪಲಾಝೋ ಈಗಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಪಲಾಝೋ ಮೇಲೆ ಎಲ್ಲ ರೀತಿಯ ಟಾಪ್ ಧರಿಸಬಹುದು. ನೀವು ಬಯಸಿದ್ರೆ ಪಲಾಝೋ ಪ್ಯಾಂಟ್ ಮತ್ತು ದೊಡ್ಡ ಗಾತ್ರದ ಟೀ ಶರ್ಟ್  ಧರಿಸಬಹುದು. ಇದು ಪ್ಯಾಷನ್ ಜೊತೆಗೆ ಆರಾಮದಾಯಕವೆನ್ನಿಸುತ್ತದೆ. ನೀವು ಪಲಾಝೋ ಜೊತೆ ಕ್ರಾಪ್ ಟಾಪ್ ಕೂಡ ಧರಿಸಬಹುದು. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಪಲಾಝೋದಲ್ಲಿ ನಿಮ್ಮ ದೇಹದ ಆಕಾರ ಸ್ಪಷ್ಟವಾಗಿ ಕಾಣುವುದಿಲ್ಲ. ಹಾಗಾಗಿ ನೀವು ಆರಾಮವಾಗಿ ಇದನ್ನು ಧರಿಸಬಹುದು.

ಎದೆಹಾಲಿನ ಆಭರಣ ಮಾರಿ ಈಕೆ ಸಂಪಾದಿಸ್ತಿರೋದು ಕೋಟಿ ಕೋಟಿ..!

ಜೀನ್ಸ್ ಜೊತೆ ಕುರ್ತಾ : ನೀವು ಸಾಂಪ್ರದಾಯಿಕ ಉಡುಪು ಧರಿಸಲು ಬಯಸಿದ್ರೆ ಅಥವಾ ಅದಕ್ಕೆ ಪಾಶ್ಚಿಮಾತ್ಯ ಟಚ್ ನೀಡಲು ಆಲೋಚನೆ ಮಾಡ್ತಿದ್ದರೆ ಜೀನ್ಸ್ ಜೊತೆಗೆ ಕುರ್ತಿ ಧರಿಸುವುದು ಉತ್ತಮ ಆಯ್ಕೆಯಾಗಿದೆ. ಬೇಸಿಗೆ ಕಾಲದಲ್ಲಿ, ನಿಮ್ಮ ವಾರ್ಡ್‌ರೋಬ್‌ಗೆ ಹತ್ತಿ ಅಥವಾ ಲಿನಿನ್ ಕುರ್ತಿಯನ್ನು ಸೇರಿಸಿ ಮತ್ತು ಅದನ್ನು ಜೀನ್ಸ್ ನೊಂದಿಗೆ ಧರಿಸಿ. ಜೀನ್ಸ್ ಮೇಲೆ ಶಾರ್ಟ್ ಕುರ್ತಾಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಕಾಟನ್ ಬಟ್ಟೆಗಳು ಬೇಸಿಗೆಯಲ್ಲಿ ನಿಮಗೆ ಆರಾಮವೆನ್ನಿಸುತ್ತವೆ.

ಶಾರ್ಟ್ ಡ್ರೆಸ್ : ಬೇಸಿಗೆಯಲ್ಲಿ ಬಟ್ಟೆ ಸಡಿಲವಾಗಿರಬೇಕು. ಹಾಗೆ ಆರಾಮದಾಯಕವಾಗಿರಬೇಕು. ನೀವು ಮಾಡರ್ನ್ ಮತ್ತು ಕ್ಲಾಸಿ ಲುಕ್ ಎರಡನ್ನೂ ಬಯಸಿದರೆ, ಬೇಸಿಗೆಯಲ್ಲಿ ನೀವು ಶಾರ್ಟ್ ಡ್ರೆಸ್ ಸಹ ಧರಿಸಬಹುದು. ಅನೇಕ ವಿನ್ಯಾಸದ ಶಾರ್ಟ್ ಡ್ರೆಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗೆ ಕನ್ಫರ್ಟ್ ಎನ್ನಿಸುವ ಉದ್ದದ ಡ್ರೆಸ್ ನೀವು ಧರಿಸಬಹುದು. 

Wedding Albumನಲ್ಲಿ ನಿಮ್ಮ ಲುಕ್ ಸಖತ್ತಾಗಿರ್ಬೇಕು ಅಂದ್ರೆ ಹೀಗ್ಮಾಡಿ..

ಜಂಪ್ಸೂಟ್ : ನೀವು ವೆಸ್ಟರ್ನ್ ವೇರ್‌ನಲ್ಲಿ ಜಂಪ್ಸೂಟ್ ಅನ್ನು ಸಹ ಸೇರಿಸಬಹುದು. ಇದು ತುಂಬಾ ಆರಾಮದಾಯಕ ಮತ್ತು ಸೊಗಸಾದ ಲುಕ್ ನೀಡುತ್ತದೆ. ಹೀಲ್ಸ್ ಅಥವಾ ಶೂ ಸೇರಿದಂತೆ ನಿಮಗೆ ಕನ್ಫರ್ಟ್ ಆಗುವ ಯಾವುದೇ ಚಪ್ಪಲಿಯನ್ನಿ ಇದ್ರ ಜೊತೆ ನೀವು ಧರಿಸಬಹುದು. ಜಂಪ್ಸೂಟ್, ಡೇ ಔಟಿಂಗ್ ಮತ್ತು ಡಿನ್ನರ್ ಡೇಟ್‌ನಲ್ಲಿ ಪರಿಪೂರ್ಣ ಲುಕ್ ನೀಡುತ್ತದೆ.     

click me!